[ಹಸಿರು]
ಸಂತ
ಎಫ್ರೆಮ್
(ಐಚ್ಛಿಕ
ಸ್ಮರಣೆ)
ಮೊದಲ
ವಾಚನ:
1 ಅರಸರು
17.7-16
ಕೀರ್ತನೆ
4:1-2, 3-4, 6-7. ಶ್ಲೋಕ.
6
ಬೆಳಗಿಸಲಿ
ನಮ್ಮನ್ನು,
ಓ
ಪ್ರಭೂ,
ನಿಮ್ಮ
ಮೊಗದ
ಘನತೆ
ಶುಭಸಂದೇಶ:
ಮತ್ತಾಯ
5.13-16
ಮೊದಲ
ವಾಚನ:
1 ಅರಸರು
17.7-16
7 : ಕೆಲವು ದಿವಸಗಳಾದ ನಂತರ ನಾಡಿನಲ್ಲಿ ಮಳೆಯಿಲ್ಲದ್ದರಿಂದ ಹಳ್ಳವು ಬತ್ತಿಹೋಯಿತು.
8 : ಆಗ ಸರ್ವೇಶ್ವರ ಅವನಿಗೆ: “ನೀನು ಇಲ್ಲಿಂದ ಸಿದೋನ್ಯರ ಸರೆಪ್ತಾ ಊರಿಗೆ ಹೊರಟು ಹೋಗಿ ಅಲ್ಲಿ ವಾಸಿಸು.
9 : ನಿನ್ನನ್ನು ಪೋಷಿಸಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ,” ಎಂದರು.
10 : ಅವನು ಅಲ್ಲಿಂದ ಹೊರಟು ಸರೆಪ್ತಾದ ಊರು ಬಾಗಿಲಿನ ಸಮೀಪಕ್ಕೆ ಬಂದನು, ಸೌದೆ ಕೂಡಿಸುತ್ತಿದ್ದ ಒಬ್ಬ ವಿಧವೆಯನ್ನು ಕಂಡು ಆಕೆಯನ್ನು ಕರೆದು, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ,” ಎಂದು ಹೇಳಿದನು.
11 : ಆಕೆ ಹೋಗುತ್ತಿರುವಾಗ ಮತ್ತೆ ಆಕೆಯನ್ನು ಕರೆದು, “ನೀನು ಬರುವಾಗ ನನಗೆ ಒಂದು ತುಂಡುರೊಟ್ಟಿಯನ್ನು ಸಹ ತೆಗೆದುಕೊಂಡು ಬಾ,” ಎಂದನು.
12 : ಆಕೆ, “ನಿನ್ನ ದೇವರಾದ ಸರ್ವೇಶ್ವರನಾಣೆ, ನನ್ನ ಹತ್ತಿರ ರೊಟ್ಟಿಯಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆ, ಇವುಗಳ ಹೊರತು ಬೇರೇನೂ ಇಲ್ಲ. ಈಗ ಸೌದೆ ಆಯ್ದುಕೊಂಡು ಹೋಗಿ ನನಗೂ ನನ್ನ ಮಗನಿಗೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ,” ಎಂದು ಉತ್ತರ ಕೊಟ್ಟಳು.
13 : ಆಗ ಎಲೀಯನು, “ಹೆದರಬೇಡ, ನೀನು ಹೇಳಿದಂತೆ ಮಾಡು; ಆದರೆ ಮೊದಲು ಅದರಿಂದ ನನಗೆ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ; ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ.
14 : ಇಸ್ರಯೇಲ್ ದೇವರಾದ ಸರ್ವೇಶ್ವರ ನಿನಗೆ, “ನಾನು ನಾಡಿಗೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ, ಕುಡಿಕೆಯಲ್ಲಿರುವ ಎಣ್ಣೆ ಮುಗಿದು ಹೋಗುವುದಿಲ್ಲ,” ಎಂದು ಹೇಳುತ್ತಾರೆ ಎಂದನು.
15 : ಆಕೆ ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರಿಗೆ ಊಟಮಾಡಿದರು.
16 : ಸರ್ವೇಶ್ವರ ಎಲೀಯನ ಮುಖಾಂತರ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಕುಡಿಕೆಯಲ್ಲಿದ್ದ ಎಣ್ಣೆ ಮುಗಿದು ಹೋಗಲಿಲ್ಲ.
ಕೀರ್ತನೆ
4:1-2, 3-4, 6-7. ಶ್ಲೋಕ.
6
ಬೆಳಗಿಸಲಿ
ನಮ್ಮನ್ನು,
ಓ
ಪ್ರಭೂ,
ನಿಮ್ಮ
ಮೊಗದ
ಘನತೆ
2 : ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ ಘನತೆಯ? / ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ ಅರಸುವೆ ಹುಸಿಯ? //
3 : ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು ತಿಳಿದುಕೊ / ನಾ ಮೊರೆಯಿಟ್ಟಾಗ ಆತ ಕಿವಿಗೊಡುವನೆಂದು ಅರಿತುಕೊ //
4 : ಕೋಪಗೊಂಡರೂ ದೂರವಿರು ಪಾಪದಿಂದ / ಶಯನದಲ್ಲಿದ್ದರೂ ಧ್ಯಾನಿಸು ಹೃದಯದಿಂದ //
5 : ಅರ್ಪಿಸಿರಿ ಯೋಗ್ಯ ಬಲಿಗಳನೆ / ಇಡಿರಿ ಭರವಸೆ ಪ್ರಭುವಿನಲೆ //
7 : ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು / ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು //
8 : ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ / ಪ್ರಭು ನೀ ಕಾಯುವೆ ಎನ್ನ ಸುರಕ್ಷಿತವಾಗಿ //
ಶುಭಸಂದೇಶ:
ಮತ್ತಾಯ
5.13-16
13 :
"ಈ
ಧರೆಗೆ
ನೀವೇ
ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ."
14 :
"ಜಗತ್ತಿಗೆ
ನೀವೇ
ಜ್ಯೋತಿ.
ಬೆಟ್ಟದ
ಮೇಲಿನ
ಪಟ್ಟಣವನ್ನು
ಮುಚ್ಚಿಡಲಾಗದು.
15 : ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ.
16 : ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."
----------
----------
ಚಿಂತನೆ
“ಕ್ರಿಸ್ತನಂತೆ ವ್ಯವಸ್ಥೆಗಳ ಎಲ್ಲೆಗಳನು ಮೀರಲಿ ನಮ್ಮ ಆಲೋಚನೆ”
ಕ್ರಿಸ್ತಕೈಗೆಟುಕುವ, ಕಂಡರಿಯಬಹುದಾದ ಸಂಕೇತಗಳನ್ನು ಬಳಸಿ ಮೌಲ್ಯಯುತ ಬದುಕಿನ ಮಾರ್ಗ ತೋರಿಸಿದ ದೃಷ್ಟಾಂತ ಇಂದಿನ ಶುಭಸಂದೇಶದಲ್ಲಿದೆ. ರುಚಿಗೆಂದು ಬಳಸುವ ಉಪ್ಪು, ದೀಪಸ್ತಂಭದ ಮೇಲಿಟ್ಟ ಜ್ಯೋತಿ, ಬೆಟ್ಟದ ಮೇಲಿನ ಪಟ್ಟಣ ಇವು ಇಂದಿನ ಶುಭಸಂದೇಶದಲ್ಲಿ ಬಳಕೆಯಾಗಿರುವ ಸಂಕೇತಗಳು.
ಹಲವು ಬಾರಿ ನಾವು ವ್ಯವಸ್ಥೆಗಳನ್ನೋ, ಜೀವನದ ದಿನನಿತ್ಯದ ಪರಿಸ್ಥಿತಿಗಳನ್ನೋ, ಎದುರಿಸಲೇಬೇಕಾದ ಗೊಂದಲಗಳನ್ನೋ ಕಂಡು ಗೊಣಗುಟ್ಟುವುದುಂಟು, ಟೀಕೆ ಟಪ್ಪಣಿಗಳನ್ನೋ ನೀಡುವುದುಂಟು. ಆದರೆ ಆ ವ್ಯವಸ್ಥೆಗಳಿಂದಾಚೆಗಿನ ಬದುಕು ನಮ್ಮದಾಗಲೂಬಹುದು ಎಂದು ಆಲೋಚಿಸಿದರೆ ಕ್ರಿಸ್ತ ಹೇಳಿದ ಆ ಬೆಟ್ಟದ ಮೇಲಿನ ಪಟ್ಟಣ, ದೀಪಸ್ತಂಭದ ಮೇಲಿಟ್ಟ ಪುಟ್ಟ ದೀಪ, ರುಚಿಗೆಂದು ಬಳಸುವ ಉಪ್ಪಿನಂತೆ ನಾವಾಗಬಹುದು- ಕೆಸರಲಿ ಅರಳಿದ ತಾವರೆಯಂತೆ. ವ್ಯವಸ್ಥೆಗಳೊಳಗೇ ನಮ್ಮ ಬದುಕು ಅನಿವಾರ್ಯವಾದರೂ ಅದರಾಚೆಗಿನ ಉದಾತ್ತ ಆಲೋಚನೆಯಿಂದ ಬದುಕಿಗೆ ಅರ್ಥಕಟ್ಟೋಣ.
---------------------------------
No comments:
Post a Comment