ನವೆಂಬರ್ 11, 2020 ಬುಧವಾರ [ಬಿಳಿ]
ಟೂರ್ಸ್ನ ಸಂತ ಮಾರ್ಟಿನ್, ಧರ್ಮಾಧ್ಯಕ್ಷ (ಸ್ಮರಣೆ)
ಮೊದಲ ವಾಚನ: ತೀತ 3.1-7
ಕೀರ್ತನೆ 23:1-6. ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ?
ಶುಭಸಂದೇಶ: ಲೂಕ 17.11-19
==================
ಮೊದಲನೇ ವಾಚನ
ತೀತ 3.1-7
1 : ಕ್ರೈಸ್ತವಿಶ್ವಾಸಿಗಳ ನಡತೆ 3 ಆಳುವವರಿಗೂ ಅಧಿಕಾರಿಗಳಿಗೂ ಕ್ರೈಸ್ತ ವಿಶ್ವಾಸಿಗಳು ವಿಧೇಯರಾಗಿ ನಡೆದುಕೊಳ್ಳಬೇಕೆಂದು ಜ್ಞಾಪಕಪಡಿಸು. ಎಲ್ಲಾ ಸತ್ಕಾರ್ಯಗಳನ್ನು ಕೈಗೊಳ್ಳಲು ಅವರು ಸಿದ್ಧರಿರಬೇಕು.
2 : ಅವರು ಯಾರನ್ನೂ ದೂಷಿಸದೆ, ಯಾರೊಡನೆಯೂ ಜಗಳವಾಡದೆ, ಸಾಧುಗುಣದಿಂದ ಎಲ್ಲರೊಡನೆ ಸೌಜನ್ಯದಿಂದ ನಡೆದುಕೊಳ್ಳಲಿ.
3 : ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿತಪ್ಪಿಹೋಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು.
4 : ಹೀಗಿರುವಾಗ, ಜಗದ್ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು.
5 : ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗು ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರ ಮಾಡಿದರು.
6 : ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ.
7 : ಹೀಗೆ ದೈವಾನುಗ್ರಹದಿಂದ ನಾವು ದೇವರೊಡನೆ ಸತ್ಸಂಬಂಧವನ್ನು ಹೊಂದಿದೆವು. ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ
8 : ಹೀಗೆ ದೈವಾನುಗ್ರಹದಿಂದ ನಾವು ದೇವರೊಡನೆ ಸತ್ಸಂಬಂಧವನ್ನು ಹೊಂದಿದೆವು. ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ ಬಾಧ್ಯಸ್ಥರಾದೆವು. ಇದು ಸತ್ಯವಾದ ಮಾತು.
===================
ಕೀರ್ತನೆ
ಕೀರ್ತನೆ 23:1-6. ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ?
1 : ಪ್ರಭು ಕುರಿಗಾಹಿಯಾಗಿರಲು
ನನಗೆ /
ಕುಂದುಕೊರತೆಗಳೆಲ್ಲಿಯವು
ಎನಗೆ? //
2 : ಹಸಿರುಗಾವಲುಗಳಲೆನ್ನ
ತಂಗಿಸುವನು /
ತಿಳಿಕೊಳಗಳ ಬಳಿಗೆನ್ನ
ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು
ನನ್ನ ಪ್ರಾಣವನಾತ /
ಸನ್ಮಾರ್ಗದಲಿ ನಡೆಸುವನು
ತನ್ನ ನಾಮನಿಮಿತ್ತ //
4 : ಕಾರ್ಗತ್ತಲ ಕಣಿವೆಯಲಿ
ನಾ ನಡೆವಾಗಲು, ಅಂಜೆನು ಕೇಡಿಗೆ /
ನಿನ್ನ ಕುರಿಗೋಲು, ಊರುಗೋಲು,
ಧೈರ್ಯವನು ತರುವುದೆನಗೆ /
ಕಾಣೆನೆಂದಿಗೂ ನಾ ದಿಗಿಲನು,
ನೀನಿರಲು ನನ್ನೊಂದಿಗೆ //
5 : ಸಜ್ಜುಗೊಳಿಸುವೆ ನೀ ಶತ್ರುಗಳ
ಕಣ್ಮುಂದೆಯೆ ನನಗೌತಣವನು /
ಹಚ್ಚುವೆ ತಲೆಗೆ ತೈಲವನು,
ತುಂಬಿತುಳುಕಿಸುವೆ ಪಾನಪಾತ್ರೆಯನು //
6 : ಶುಭಶಾಂತಿಯಿಂದ ನಾ ಬಾಳುವೆ
ಜೀವಮಾನವೆಲ್ಲ /
ದೇವಮಂದಿರದಲಿ ನಾ ವಾಸಿಸುವೆ
ಚಿರಕಾಲವೆಲ್ಲ //
===================
ಶುಭಸಂದೇಶ
ಶುಭಸಂದೇಶ: ಲೂಕ 17.11-19
11 : ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು.
12 : ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಠರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು,
13 : ‘ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,’ ಎಂದು ಕೂಗಿ ಕೇಳಿಕೊಂಡರು.
14 : ಯೇಸು ಅವರನ್ನು ನೋಡಿ, “ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ,” ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು.
15 : ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು.
16 : ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು!
17 : ಆಗ ಯೇಸು, “ಹತ್ತುಮಂದಿ ಗುಣ ಹೊಂದಿದರಲ್ಲವೆ? ಮಿಕ್ಕ ಒಂಭತ್ತು ಮಂದಿ ಎಲ್ಲಿ?
18 : ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?” ಎಂದರು.
19 : ಅನಂತರ ಆ ಸಮಾರಿಯದವನಿಗೆ, “ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದು ಹೇಳಿದರು
===================
ಚಿಂತನೆ
ಕುಷ್ಟರೋಗದಿಂದ ಗುಣಹೊಂದಿದ ಸಮಾರಿಯದವನು ಯೇಸುವಿಗೆ ವಂದನೆ ಸಲ್ಲಿಸಲು ಹಿಂದಿರುಗಿದ ಯೆಹೂದ್ಯರು ಸಮಾರಿಯದವರನ್ನುಕಡೆಗಣಿಸುತ್ತಿದ್ದರು ಹಾಗೂ ಅವರೊಂದಿಗೆ ಯಾವುದೇ ಸಂಪರ್ಕವಿಡುತ್ತಿರಲಿಲ್ಲ. ಕ್ರಿ.ಪೂ 722 ಅಸ್ಸೀರಿಯದವರು ಸಮಾರಿಯದ ಮೇಲೆ ದಂಡೆತ್ತಿ ಬರುತ್ತಾರೆ. ಸಮಾರಿಯದವರನ್ನು ಸೋಲಿಸಿ ಅಲ್ಲಿ ತಮ್ಮ ಆಡಳಿತ ಪ್ರಾರಂಭಿಸುತ್ತಾರೆ. ಸಮಾರಿಯದವರು ಈ ಅನ್ಯ ರಾಷ್ಟ್ರಗಳೊಂದಿಗೆ ಸಂಬಂಧವಿರಿಸಿಕೊಂಡು, ಅವರೊಂದಿಗೆ ಮದುವೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಯೆಹೂದ್ಯರು ಸಮಾರಿಯದವರನ್ನು ಧರ್ಮಭ್ರಷ್ಟರೆಂದು ಪರಿಗಣಿಸಿದ್ದರು. ಜೆರುಸಲೇಮಿಗೆ ಹೋಗುವಾಗಲೂ ಸಮಾರಿಯದ ಮೂಲಕ ಹೋಗದೆ ಬೇರೆ ಮಾರ್ಗವಾಗಿ ಹೋಗುತ್ತಿದ್ದರು. ಸಮಾರಿಯದವರು ಕೂಡ ಯೆಹೂದ್ಯರನ್ನು ದ್ವೇಷಿಸುತ್ತಿದ್ದರು. ಜೆರುಸಲೇಮ್ ದೇವಾಲಯಕ್ಕೆ ಹೋಗದೆ ಗೆರಿಜಿûಮ್ ಬೆಟ್ಟದ ಮೇಲೆ ದೇವಾಲಯ ಕಟ್ಟಿಕೊಂಡಿದ್ದರು. ಆದರೆ ಯೇಸು ಸಮಾರಿಯದವರನ್ನು ದ್ವೇಷಿಸದೆ ಅವರೇ ಒಬ್ಬ ಸಮಾರಿಯದವರನ್ನು ಗುಣಪಡಿಸಿದರು. ತಾನು ಬಂದದ್ದು ಕಳೆದುಹೋದ ಕುರಿಗಳನ್ನು ಹುಡುಕಿಕೊಂಡು ಹಾಗೂ ಅವುಗಳ ರಕ್ಷಣೆಗಾಗಿ ಎಂಬುದನ್ನು ತಿಳಿಸುತ್ತಾರೆ.

No comments:
Post a Comment