ನವೆಂಬರ್ 12, 2020 ಗುರುವಾರ [ಕೆಂಪು]
ಸಂತ ಜೋಸೆಫಾತ್, ಧರ್ಮಾಧ್ಯಕ್ಷ ಮತ್ತು ರಕ್ತಸಾಕ್ಷಿ (ಸ್ಮರಣೆ)
ಮೊದಲ ವಾಚನ: ಫಿಲೆಮೋನನಿಗೆ 1: 7-20
ಕೀರ್ತನೆ 146:6-10. ಶ್ಲೋಕ.5
ಇಸ್ರಯೇಲ ಕುಲ ದೇವರು ಯಾರಿಗೆ ಉದ್ಧಾರಕನೋ ಅವನೇ ಧನ್ಯನು
ಶುಭಸಂದೇಶ: ಲೂಕ 17.20-25
==================
ಮೊದಲನೇ ವಾಚನ
ಫಿಲೆಮೋನನಿಗೆ 1: 7-20
7 : ಸಹೋದರನೇ, ನಿನ್ನ ಪ್ರೀತಿಯನ್ನು ನೆನೆದು ನಾನು ಆನಂದವನ್ನೂ ಆದರಣೆಯನ್ನೂ ಪಡೆಯುತ್ತಿದ್ದೇನೆ. ದೇವಜನರೆಲ್ಲರ ಹೃದಯಗಳನ್ನು ನೀನು ಉಲ್ಲಾಸಪಡಿಸುತ್ತಿರುವೆ.
8 : ಒನೇಸಿಮನಿಗಾಗಿ ವಿಜ್ಞಾಪನೆ ಆದಕಾರಣ, ನೀನು ಮಾಡಬೇಕಾದುದನ್ನು ಮಾಡು ಎಂದು ಆಜ್ಞಾಪಿಸಲು ಕ್ರಿಸ್ತ ಯೇಸುವಿನಲ್ಲಿ ನನಗೆ ಧೈರ್ಯ ಮತ್ತು ಅಧಿಕಾರಗಳಿವೆ.
9 : ಆದರೂ ನಿನ್ನ ಮೇಲಿರುವ ಪ್ರೀತಿಯ ನಿಮಿತ್ತ ನಾನು ನಿನ್ನಲ್ಲಿ ವಿನಂತಿಸುತ್ತೇನೆ: ವೃದ್ಧಪ್ರಾಯನೂ ಮತ್ತು ಕ್ರಿಸ್ತಯೇಸುವಿಗೋಸ್ಕರ ಈಗ ಸೆರೆಯಾಳೂ ಆಗಿರುವ ಪೌಲನೆಂಬ ನಾನು ಒನೇಸಿಮನ ಪರವಾಗಿ ನಿನ್ನಲ್ಲಿ ವಿಜ್ಞಾಪಿಸುತ್ತೇನೆ.
10 : ಇವನು ಯೇಸುವಿನಲ್ಲಿ ನನ್ನ ಸ್ವಂತ ಮಗನಂತಿದ್ದಾನೆ. ಸೆರೆಮನೆಯಲ್ಲೇ ನಾನು ಅವನನ್ನು ಆಧ್ಯಾತ್ಮಿಕವಾಗಿ ಪಡೆದೆನು.
11 : ಹಿಂದೆ ಅವನು ನಿನಗೆ ಪ್ರಯೋಜಕನಾಗಿರಲಿಲ್ಲ. ಈಗಲಾದರೋ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ.
12 ನನಗಂತೂ ಇವನು ಪ್ರಾಣದಂತಿದ್ದರೂ ಈಗ ನಿನ್ನ ಬಳಿಗೆ ಕಳುಹಿಸುತ್ತಿದ್ದೇನೆ.
13 : ಶುಭಸಂದೇಶಕ್ಕೋಸ್ಕರ ನಾನು ಸೆರೆಮನೆಯಲ್ಲಿರುವಾಗ ನಿನ್ನ ಬದಲಾಗಿ ನನಗೆ ಸಹಾಯಮಾಡಲು ಇವನನ್ನು ಇಲ್ಲಿಯೇ ಉಳಿಸಿಕೊಳ್ಳಲು ಇಷ್ಟವಿತ್ತು.
14 : ಆದರೆ ನನಗೆ ಸಹಾಯವಾಗಲೆಂದು ನಿನ್ನನ್ನು ಖಡ್ಡಾಯಪಡಿಸಲು ನನಗಂತೂ ಇಷ್ಟವಿಲ್ಲ. ನೀನಾಗಿಯೇ ನಿನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದ್ದರಿಂದ ನಿನ್ನ ಒಪ್ಪಿಗೆಯಿಲ್ಲದೆ ನಾನು ಏನನ್ನೂ ಮಾಡುತ್ತಿಲ್ಲ.
15 : ಸ್ವಲ್ಪಕಾಲ ಒನೇಸಿಮನು ನಿನ್ನಿಂದ ದೂರವಿದ್ದುದಕ್ಕೆ ಕಾರಣ ಆತನು ಸದಾಕಾಲ ನಿನ್ನವನಾಗುವುದಕ್ಕೋ ಏನೋ.
16 : ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ, ಅದಕ್ಕಿಂತಲೂ ಬಹಳ ಮೇಲಾದವನಂತೆ, ಕ್ರಿಸ್ತಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ?
17 : ಆದ್ದರಿಂದ ಕ್ರಿಸ್ತಯೇಸುವಿನಲ್ಲಿ ನಿನಗೂ ನನಗೂ ಅನ್ಯೋನ್ಯತೆ ಇದೆಯೆಂದು ನೀನು ಪರಿಗಣಿಸುವುದಾದರೆ ನನ್ನನ್ನು ಹೇಗೆ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಇವನನ್ನೂ ಸ್ವಾಗತಿಸು.
18 : ಇವನು ನಿನಗೇನಾದರೂ ಅನ್ಯಾಯ ಮಾಡಿದ್ದಾದರೆ, ಅಥವಾ ಇವನಿಂದ ನಿನಗೇನಾದರೂ ಸಲ್ಲಬೇಕಾದ ಬಾಕಿಯಿದ್ದರೆ, ಅದೆಲ್ಲವನ್ನೂ ನನ್ನ ಲೆಕ್ಕಕ್ಕೆಹಾಕು.
19 : ಅದನ್ನು ಪೌಲನೆಂಬ ನಾನೇ ಕೊಟ್ಟು ತೀರಿಸುತ್ತೇನೆ ಎಂದು ನನ್ನ ಹಸ್ತಾಕ್ಷರದಲ್ಲೇ ಬರೆದು ಕೊಡುತ್ತಿದ್ದೇನೆ. ಆದರೆ ಈಗ ನೀನು ಏನಾಗಿದ್ದೀಯೋ ಅದು ನನ್ನಿಂದಲೇ. ಹೀಗೆ ನೀನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಹೇಳಬೇಕಾಗಿಲ್ಲ.
20 : ಹೌದು, ಪ್ರಿಯ ಸಹೋದರನೇ, ಪ್ರಭುವಿನ ಹೆಸರಿನಲ್ಲಿ ಇದೊಂದು ಉಪಕಾರವನ್ನು ನನಗೆ ಮಾಡಿಕೊಡು; ಕ್ರಿಸ್ತಯೇಸುವಿನಲ್ಲಿ ನನ್ನ ಹೃದಯ ಆನಂದಿಸುವಂತೆ ಮಾಡು.
===================
ಕೀರ್ತನೆ
ಕೀರ್ತನೆ 146:6-10. ಶ್ಲೋಕ.5
ಇಸ್ರಯೇಲ ಕುಲ ದೇವರು ಯಾರಿಗೆ
ಉದ್ಧಾರಕನೋ ಅವನೇ ಧನ್ಯನು
6 : ಭೂಮ್ಯಾಕಾಶ, ಸಾಗರ,
ಚರಾಚರಗಳನು ನಿರ್ಮಿಸಿದವ ಆತನೆ /
ಕೊಟ್ಟ ವಾಗ್ದಾನಗಳನು ತಪ್ಪದೆ
ನೆರವೇರಿಸುವವ ಆತನೆ //
7 : ದೊರಕಿಸುವನು
ನ್ಯಾಯ ದಲಿತರಿಗೆ /
ಒದಗಿಸುವನು
ಆಹಾರ ಹಸಿದವರಿಗೆ /
ನೀಡುವನು ಬಿಡುಗಡೆ
ಬಂಧಿತರಿಗೆ //
8 : ಕಣ್ಣನ್ನೀಯುವನು
ಪ್ರಭು ಕುರುಡರಿಗೆ /
ಉದ್ಧಾರಕನಾ
ಪ್ರಭು ಕುಗ್ಗಿದವರಿಗೆ /
ಆತನ ಒಲವಿರುವುದು
ಸಾಧು ಸಜ್ಜನರಿಗೆ //
9 : ರಕ್ಷಿಸುವನು ಪ್ರಭು
ಪರದೇಶಿಗಳನು /
ಆದರಿಸುವನು ಅನಾಥರನು,
ವಿಧವೆಯರನು /
ನಿರ್ಮೂಲ ಮಾಡುವನು ದುರ್ಜನರ
ಮಾರ್ಗವನು //
10 : ಪ್ರಭುವೇ ಅರಸನು
ಸದಾಕಾಲಕು /
ಸಿಯೋನ್, ನಿನ್ನ ದೇವನಾಳ್ವನು
ತಲತಲಾಂತರಕು //
===================
ಶುಭಸಂದೇಶ
ಲೂಕ 17.20-25
20 : ದೇವರ ಸಾಮ್ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಕೇಳಿದಾಗ ಯೇಸುಸ್ವಾಮಿ ಪ್ರತ್ತುತ್ತರವಾಗಿ, “ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ.
21 : ‘ಇಗೋ, ಅದು ಇಲ್ಲಿದೆ ಅಥವಾ ಅಲ್ಲಿದೆ,’ ಎಂದು ಹೇಳುವಂತಿಲ್ಲ. ಏಕೆಂದರೆ, ದೇವರ ಸಾಮ್ರಾಜ್ಯವು ನಿಮ್ಮೊಳಗೇ ಇದೆ,” ಎಂದರು.
22 : ಅನಂತರ ಶಿಷ್ಯರನ್ನು ಉದ್ದೇಶಿಸಿ, “ಕಾಲ ಒಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ. ಆದರೆ ನಿಮಗದು ಲಭಿಸದು.
23 : ‘ಇಗೋ, ಇಲ್ಲಿದ್ದಾನೆ; ಅಗೋ ಅಲ್ಲಿದ್ದಾನೆ,’ ಎಂದು ಜನರು ಸುದ್ದಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ.
24 : ಆಕಾಶದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಮಿನುಗಿ ಹೊಳೆಯುವ ಮಿಂಚಿನಂತೆ ನರಪುತ್ರನು ತಾನು ಬರುವ ಕಾಲದಲ್ಲಿ ಕಾಣಿಸಿಕೊಳ್ಳುವನು.
25 : ಆದರೆ ಅದಕ್ಕೆ ಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು.
===================
ಚಿಂತನೆ
ದೇವರ ಸಾಮ್ರಾಜ್ಯ ಎಲ್ಲಿದೆ? ಅಥವಾ ಸ್ವರ್ಗ ಎಲ್ಲಿದೆ ಎಂದು ಜನರು ಮಾತನಾಡುತ್ತಾರೆ. ಸ್ವರ್ಗದಲ್ಲಿ ಮಾತ್ರ ನಾವು ಸುಖದಿಂದ ಇರಬಹುದೆಂದು ಅನೇಕರ ಎಣಿಕೆ. ಆ ಸ್ವರ್ಗ ಎನ್ನುವುದು ಆಕಾಶದಲ್ಲಿಯೂ ಇಲ್ಲ, ಹಿಮಾಲಯದಲ್ಲೂ ಇಲ್ಲ. ಅದು ಇಲ್ಲಿಯೇ ಈ ಭೂಮಿಯ ಮೇಲೆಯೇ, ನಾವಿರುವಡೆಯಲ್ಲಿಯೇ ಇದೆ, ಭೂಮಿಯ ಮೇಲೆ ನರಕವನ್ನು ನಿವಾರಣೆ ಮಾಡಿಕೊಂಡರೆ ಸ್ವರ್ಗ ಸುಖವನ್ನು ನಾವು ಇಲ್ಲಿಯೇ ಕಾಣಬಹುದು. ಸುಖ ಎನ್ನುವುದು ತನ್ನಲ್ಲಿ ಬಿಟ್ಟು ಬೇರೆ ಇನ್ನೆಲ್ಲಿಯೋ ಇದೆಯೆಂದು ತಿಳಿದುಕೊಂಡು, ಶೋಧ ಮಾಡುತ್ತಾ ಹೋದರೆ ಮನುಷ್ಯನು ದುಃಖ ಪಡುತ್ತಾನೆಯೇ ಹೊರತು ಸುಖಪಡುವುದಿಲ್ಲ. ಅದು ತನ್ನಲ್ಲಿಯೇ ಇದೆಯೆಂದು ತಿಳಿದುಕೊಂಡವನು ಬಹು ಬೇಗನೆ, ತನ್ನ ದುಃಖವನ್ನು ಕಳೆದುಕೊಂಡು ಸುಖವನ್ನು ಕಂಡುಕೊಳ್ಳುತ್ತಾನೆ.

No comments:
Post a Comment