ನವೆಂಬರ್ 15, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 33ನೇ ಭಾನುವಾರ
ಮೊದಲ ವಾಚನ: ಜ್ಞಾನೋಕ್ತಿ 31.10-13, 19-20, 30-31
ಕೀರ್ತನೆ 128:1-5. ಶ್ಲೋಕ.1
ಧನ್ಯನು ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು
ಎರಡನೇ ವಾಚನ: 1 ಥೆಸಲೋನಿಯರಿಗೆ 5.1-6
ಶುಭಸಂದೇಶ: ಮತ್ತಾಯ 25.14-30 (ಸಂಕ್ಷಿಪ್ತ)
ಮತ್ತಾಯ 25.14-30
--------------------------------
ಸಂತ ಮಹಾ ಆಲ್ಬರ್ಟ್, ಧರ್ಮಾಧ್ಯಕ್ಷ ಮತ್ತು ಧರ್ಮಸಭೆ ಪಂಡಿತ
==================
ಮೊದಲನೇ ವಾಚನ
===============
ಜ್ಞಾನೋಕ್ತಿ 31.10-13, 19-20, 30-31
10 : ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಆಕೆ ಹವಳಕ್ಕಿಂತಲೂ ಬಹು ಮೌಲ್ಯಳು.
11 : ಗಂಡನು ಆಕೆಯಲ್ಲಿ ಹೃತ್ಪೂರ್ವಕ ನಂಬಿಕೆಯಿಡುವನು; ಅವನಿಗೆ ಆದಾಯದ ಕೊರತೆ ಇರದು.
12 : ಜೀವಮಾನವಿಡೀ ಆಕೆ ಅವನಿಗೆ ಒಳ್ಳೆಯದನ್ನೆ ಮಾಡುವಳು; ಎಂದಿಗೂ ಆಕೆ ಅವನಿಗೆ ಕೇಡನ್ನು ಬಗೆಯಳು.
13 : ಉಣ್ಣೆಯನ್ನೂ ಸೆಣಬನ್ನೂ ಹುಡುಕಿ ತರುವಳು; ತನ್ನ ಕೈಗಳಿಂದಲೇ ಬಟ್ಟೆಯನ್ನು ನೇಯುವಳು.
19 : ರಾಟೆಯನ್ನು ತಾನೆ ಆಡಿಸುತ್ತಾಳೆ; ಕದಿರನ್ನು ಕೈಯಿಂದ ಹಿಡಿಯುತ್ತಾಳೆ.
20 : ಬಡವರಿಗೆ ಕೈ ಬಿಚ್ಚಿ ಕೊಡುತ್ತಾಳೆ; ದಿಕ್ಕಿಲ್ಲದವರಿಗೆ ಕೈಚಾಚಿ ನೀಡುತ್ತಾಳೆ.
30 : ಆಕರ್ಷಣೆ ನೆಚ್ಚತಕ್ಕದಲ್ಲ. ಅಲಂಕಾರ ನೆಲೆಯಾದುದಲ್ಲ; ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವಳೆ ಸ್ತುತ್ಯಾರ್ಹಳು.
31 : ಆಕೆಯ ಕೈ ಕೆಲಸಕ್ಕೆ ತಕ್ಕ ಪ್ರತಿಫಲ ಲಭಿಸಲಿ; ಆಕೆಯ ಕಾರ್ಯಗಳೇ ಆಕೆಯನ್ನು ಪುರದ್ವಾರಗಳಲ್ಲಿ ಹೊಗಳಲಿ !
===================
ಕೀರ್ತನೆ
ಕೀರ್ತನೆ 128:1-5. ಶ್ಲೋಕ.1
ಶ್ಲೋಕ: ಧನ್ಯನು ಪ್ರಭುವಿನಲ್ಲಿ
ಭಯಭಕ್ತಿಯುಳ್ಳವನು||
1 : ಧನ್ಯನು, ಪ್ರಭುವಿನಲಿ
ಭಯಭಕ್ತಿಯುಳ್ಳವನು /
ಧನ್ಯನು, ಆತನ ಮಾರ್ಗಗಳಲೇ
ನಡೆಯುವವನು //
2 : ನಿನ್ನ ಕೈಕೆಸರಾದರೆ ಬಾಯಿ
ಮೊಸರಾಗುವುದು /
ಧನ್ಯನಾಗುವೆ ನೀನು;
ನಿನಗೆ ಶುಭವಾಗುವುದು //
3 : ಇರುವಳು ನಿನ್ನ ಪತ್ನಿ ಮನೆಯಲ್ಲಿ
ಫಲಭರಿತ ದ್ರಾಕ್ಷಾಲತೆಯಂತೆ /
ಕೂರುವರು ನಿನ್ನ
ಮಕ್ಕಳು ಊಟದ
ಪಂಕ್ತಿಯಲಿ ಓಲಿವ್
ಸಸಿಗಳಂತೆ //
4 : ಹೊಂದುವನು ಅಂತಹ ಆಶೀರ್ವಾದವನು /
ಪ್ರಭುವಿನಲಿ ಭಯಭಕ್ತಿಯುಳ್ಳವನು //
5 : ಸಿಯೋನಿನಲ್ಲಿರುವ ಪ್ರಭು
ನಿನ್ನನು ಆಶೀರ್ವದಿಸಲಿ /
ಜೆರುಸಲೇಮಿನ ಏಳ್ಗೆಯನು
ಕಾಣು ಇಡೀ ಜೀವಮಾನದಲಿ //
===================
ಎರಡನೇ ವಾಚನ
1 ಥೆಸಲೋನಿಯರಿಗೆ 5.1-6
1 : ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.
2 : ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ.
3 : ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.
4 : ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು.
5 : ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ.
6 : ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.
ಶುಭಸಂದೇಶ
ಮತ್ತಾಯ 25.14-30
14 : “ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ. ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನು ಒಪ್ಪಿಸಿದ.
15 : ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು - ಹೀಗೆ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ.
16 : ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ.
17 : ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ.
18 : ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ.
19 : ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿ ಬಂದ.
20 : ಸೇವಕರಿಂದ ಲೆಕ್ಕಾಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, ‘ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ತಲೆಂತು ಸಂಪಾದಿಸಿದ್ದೇನೆ,’ ಎಂದ.
21 : ಅದಕ್ಕೆ ಆ ಧಣಿ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,’ ಎಂದ.
22 : ಎರಡು ತಲೆಂತು ಪಡೆದಿದ್ದವನೂ ಮುಂದೆ ಬಂದು, ‘ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು ಒಪ್ಪಿಸಿದರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ,’ ಎಂದ.
23 : ಧಣಿ ಅವನಿಗೂ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು,’ ಎಂದ.
24 : ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದ; ‘ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ. ನೀವು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು;
25 : ಆದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ. ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸಂದಿದೆ,’ ಎಂದ.
26 : “ಆಗ ಧಣಿ ಅವನಿಗೆ, ‘ಎಲವೋ ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿ ಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ?
27 : ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತಿದ್ದೆ’, ಎಂದ.
28 : ಅನಂತರ ಪರಿಚಾರಕರಿಗೆ, ‘ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ.
29 : ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ.
30 : ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು,’ ಎಂದು ಹೇಳಿದ. ಪರರ ಸೇವೆಯೇ ಪರಮಾತ್ಮನ ಸೇವೆ
===================
ಚಿಂತನೆ
ಸಾಧಾರಣ ಕಾಲದ 33ನೇ ಭಾನುವಾರ
=====================
ಪೀಠಿಕೆ
=========
ಜೀವನವು ಒಂದು ನಿರಂತರ ಹೋರಾಟವಾಗಿದೆ. ಒಳ್ಳೆಯ ಜೀವನವನ್ನು ಬದುಕಬೇಕೆನ್ನುವವರು ಪ್ರಯತ್ನ ಮಾಡಬೇಕು, ಪರಿಶ್ರಮ ಪಡಬೇಕು. ಧೈರ್ಯ ಮತ್ತು ಹುಮ್ಮಸ್ಸಿನಿಂದ ಮುನ್ನುಗ್ಗಿದರೆ ಮಾತ್ರ ಬದಲಾವಣೆ ಬರುತ್ತದೆ. ಪ್ರಗತಿ ಸಾಧ್ಯವಾಗುತ್ತದೆ. ನಮ್ಮ ಭವಿಷ್ಯವಿರುವುದು ನಮ್ಮ ಕೈಯಲ್ಲಿ. ಪ್ರತಿಯೊಂದು ಕ್ಷಣವು ಬದುಕಿದಾಗ ಮಾತ್ರ ಏಳಿಗೆ ಸಾಧ್ಯ. ನಮ್ಮ ದುಃಸ್ಥಿತಿಗೆ ಬೇರೆಯವರನ್ನಾಗಲಿ ದೇವರನ್ನಾಗಲಿ ದೂರುವ ಬದಲು ನಮ್ಮಲ್ಲಿರುವ ಪ್ರತಿಭೆಗಳತ್ತ, ಸೌಲಭ್ಯಗಳತ್ತ ಕಣ್ಣು ಹಾಯಿಸುವುದು ಉತ್ತಮ. ದೇವರು ಎಲ್ಲರಿಗೂ ಒಂದೇ ಬಗೆಯ ಕೊಡುಗೆಯನ್ನು ನೀಡುವುದಿಲ್ಲಎಂದೇ , ಅವರು ಕೊಟ್ಟಿರುವುದಕ್ಕೆ ನಾವು ನಿಷ್ಠೆ, ಪ್ರಾಮಾಣಿಕತೆ ತೋರಿಸುತ್ತೇವೆಯೇ ಎಂಬುದು ಮುಖ್ಯ. ದೇವರು ಹೆಚ್ಚು ಪ್ರತಿಭಾವಂತರಿಂದ ಹೆಚ್ಚು ಕಡಿಮೆ ಪ್ರತಿಭಾವಂತರಿಂದ ಕಡಿಮೆ ವಿವಿಧ ಬಗೆ ಪ್ರತಿಭಾವಂತರಿಂದ ಅವರವರ ಪ್ರತಿಭೆಯ ಅನುಸಾರ ನಿರೀಕ್ಷಿಸುತ್ತಾರೆ.

===========================
ಜ್ಞಾನೋಕ್ತಿಗಳ ಗ್ರಂಥವು ನೀತಿಬೋಧೆಗೆ ಸೀಮಿತವಾಗಿರದೆ ದಿನನಿತ್ಯದ ಜೀವನಕ್ಕೆ ಅನ್ವಯಿಸುವ ಮುತ್ತಿನಂತಹ ಮಾತುಗಳಿಂದ ಕೂಡಿದೆ. ಒಬ್ಬ ಒಳ್ಳೆಯ ಗೃಹಿಣಿಯ ಗುಣಗಳನ್ನು ಇಂದಿನ ವಾಚನದಲ್ಲಿ ವಿವರಿಸಲಾಗಿದೆ. ಆಕೆಯು ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನು ನಾಜೂಕಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾಳೆ ಆಕೆಯು ಮುತ್ತಿನಂತೆ ಅಮೂಲ್ಯಳು.
ಎರಡನೇ ವಾಚನ: 1 ಥೆಸಲೋನಿಯರಿಗೆ 5.1-6
=============================
ಪ್ರಭುವಿನ ಎರಡನೇ ಬರುವಿಕೆಯು ತಮ್ಮ ಜೀವಿತಾವಧಿಯಲ್ಲೇ ನಡೆಯುವುದೆಂದು ಅನೇಕರು ಭಾವಿಸಿದ್ದರು. ಹಾಗಾಗಿ ಪ್ರಭುವಿನ ಬರುವಿಕೆಗೆ ಕಾಯುತ್ತ ಕೂತಿದ್ದರು. ಪ್ರಭುವಿನ ಬರುವಿಕೆಗೆ ಎದುರು ನೋಡುತ್ತಾ ಕಾಯುವ ಬದಲು ತಮ್ಮ ವಿಶ್ವಾಸದ ಬದುಕಿನತ್ತ ಗಮನ ಹರಿಸಬೇಕೆಂದು ಸಂತ ಪೌಲರು ಇಂದಿನ ವಾಚನದಲ್ಲಿ ಕರೆ ನೀಡುತ್ತಾರೆ.
ಶುಭಸಂದೇಶ: ಮತ್ತಾಯ 25.14-30
==========================
ಈ ಸಾಮತಿಯಲ್ಲಿ ಕಾಣುವ ಯಜಮಾನನು ಬಹಳ ಸಿರಿವಂತನಾಗಿದ್ದ.ಆತನು ತನ್ನ ವಿವೇಕದ ಸಾಮರ್ಥ್ಯವನ್ನು ಅರಿತು ಅದಕ್ಕೆ ತಕ್ಕಂತೆ ತನ್ನ ಐಶ್ವರ್ಯವನ್ನು ಅಭಿವೃದ್ಧಿಪಡಿಸಲು ಯೋಚಿಸಿದ. ಮೊದಲ ಇಬ್ಬರು ಸೇವಕರು ಯಜಮಾನನ ನಿರೀಕ್ಷೆಯಂತೆ ನಿಷ್ಠೆಯನ್ನು ತೋರ್ಪಡಿಸಿದರು. ಇಲ್ಲಿ ಯಜಮಾನನ ಸ್ಥಾನದಲ್ಲಿ ಯೇಸುವೂ ಸೇವಕರ ಸ್ಥಾನದಲ್ಲಿ ಶಿಷ್ಯರೂ ಇದ್ದಾರೆ. ಯಜಮಾನನು ಯಾವಾಗ ಹಿಂತಿರುಗಿ ಬರುತ್ತಾನೆ ಅಥವಾ ಲೋಕಾಂತ್ಯ ಯಾವಾಗ ಎಂಬುದು ಯಾರಿಗೂ ಅರಿಯದು. ಲೋಕಾಂತ್ಯದಲ್ಲಿ ನಡೆಯುವ ನ್ಯಾಯ ನಿರ್ಣಯ ಎದುರಿಸಲು ಹೇಗೆ ನಾವೆಲ್ಲ ಸಿದ್ಧರಿರಬೇಕೆಂದು ಈ ಸಾಮತಿ ಎಚ್ಚರಿಸುತ್ತದೆ. ದೇವರು ನೀಡಿರುವ ಕೊಡುಗೆಗಳನ್ನೂ ಪ್ರತಿಭೆಗಳನ್ನೂ ಅವರ ಮಹಿಮೆಗಾಗಿಯೂ ಇತರರ ಒಳಿತಿಗಾಗಿಯೂ ಪ್ರಾಮಾಣಿಕತೆಯಿಂದ ಉಪಯೋಗಿಸುವವನು ಪ್ರತಿಫಲ ಪಡೆಯುತ್ತಾನೆ. ದೇವರು ನಮ್ಮಿಂದ ಅಪೇಕ್ಷಿಸುವುದು ನಮ್ಮಲ್ಲಿರುವ ಪ್ರತಿಭೆಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ಆ ಕಾರಣ ಈ ಪ್ರತಿಭೆ ಮತ್ತು ಕೊಡುಗೆಗಳನ್ನು ನೀಡಿದಾತ ಒಂದು ದಿನ ಅವುಗಳ ಲೆಕ್ಕ ಕೇಳುವನು. ಈ ಪ್ರತಿಭೆಗಳನ್ನು ಸರಿಯಾಗಿ ಉಪಯೋಗಿಸಿದರೆ ಯಜಮಾನನ ಸೌಭಾಗ್ಯದಲ್ಲಿ ಭಾಗಿಯಾಗುವ ಅವಕಾಶ ನಮಗೆ ಅಭಿಸುವುದು. ದೇವರು ನಮ್ಮಿಂದ ಲೆಕ್ಕ ಕೇಳುವ ಮುನ್ನ ಸಾಕಷ್ಟು ಸಮಯವನ್ನೂ ಅವಕಾಶವನ್ನು ನೀಡುತ್ತಾರೆ. ಇವುಗಳನ್ನು ಸರಿಯಾಗಿ ಉಪಯೋಗಿಸಿದರೆ ಪ್ರತಿಫಲ, ದುರುಪಯೋಗಪಡಿಸಿದರೆ ಶಿಕ್ಷೆ ಇದು ಕಟ್ಟಿಟ್ಟ ಬುತ್ತಿ.
=====================
ಚಿಂತನೆ – ಫಾ ಸೆಬಾಸ್ಟಿನ್,
ಬೆಂಗಳೂರು ಮಹಾಧರ್ಮಕ್ಷೇತ್ರ
======================

No comments:
Post a Comment