ನವೆಂಬರ್ 13, 2020 ಶುಕ್ರವಾರ [ಹಸಿರು]
ಮೊದಲ ವಾಚನ: 2 ಯೊವಾನ್ನ 1: 4-9
ಕೀರ್ತನೆ 119:1-2, 10-11, 17-18. ಶ್ಲೋಕ.1
ಪ್ರಭುವಿನ ಶಾಸ್ತ್ರಾನುಸಾರ ನಡೆವವರು ಧನ್ಯರು
ಶುಭಸಂದೇಶ: ಲೂಕ 17.26-37
==================
ಮೊದಲನೇ ವಾಚನ
2 ಯೊವಾನ್ನ 1: 4-9
4 : ಸತ್ಯ ಮತ್ತು ಪ್ರೀತಿ ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ.
5 : ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ.
6 : ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿ ಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತ ಮೊದಲಿನಿಂದಲೂ ಕೇಳಿರುವ ಆಜ್ಞೆ.
7 : ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯ ಆಗಿ ಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು.
8 : ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು.
9 : ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲೆಸದೆ ಅದರ ಎಲ್ಲೆವಿೂರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲೆಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ.
===================
ಕೀರ್ತನೆ
ಕೀರ್ತನೆ 119:1-2, 10-11, 17-18. ಶ್ಲೋಕ.1
ಪ್ರಭುವಿನ ಶಾಸ್ತ್ರಾನುಸಾರ
ನಡೆವವರು ಧನ್ಯರು
1 : ದೈವಾಜ್ಞೆಯಲ್ಲಿ ಅಭಿಮಾನ ಪ್ರಭುವಿನ
ಶಾಸ್ತ್ರಾನುಸಾರ ನಡೆದವರು ಧನ್ಯರು /
ದೋಷರಹಿತ ಮಾರ್ಗದಲಿ
ನಡೆವವರು ಧನ್ಯರು //
2 : ಆತನ ಕಟ್ಟಳೆಗಳನ್ನು
ಕೈಗೊಳ್ಳುವವರು ಧನ್ಯರು /
ಮನಃಪೂರ್ವಕವಾಗಿ ಆತನನು
ಅರಸುವವರು ಧನ್ಯರು //
10 : ತುಂಬುಹೃದಯದಿಂದ
ಹಂಬಲಿಸುತ್ತಿರುವೆನಯ್ಯಾ /
ನಿನ್ನಾಜ್ಞೆಯಿಂದ ನಾ ತಪ್ಪದಂತೆ
ಕಾಯಯ್ಯಾ //
11 : ನಿನಗೆ ವಿರುದ್ಧ ನಾ
ಪಾಪಮಾಡದಂತೆ /
ನಿನ್ನಾ ನುಡಿಯನು
ನನ್ನೆದೆಯಲ್ಲಿರಿಸಿದೆ //
17 : ನಿನ್ನ ನುಡಿಯ ಕೇಳಿ
ಬಾಳುವಂತೆ /
ತೋರು ದಾಸನೆನಗೆ
ಪ್ರಸನ್ನತೆ //
18 : ನಿನ್ನ ಶಾಸ್ತ್ರದ ಮಹಿಮೆಯನು
ಅರಿಯುವಂತೆ /
ನನ್ನ ಕಣ್ಗಳಿಂದ ನೀ ತೆಗೆದುಬಿಡು
ಅಂಧತೆ //
===================
ಶುಭಸಂದೇಶ
ಲೂಕ 17.26-37
26 : ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು.
27 : ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು.
28 : ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು. ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು.
29 : ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು.
30 : ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ ನಡೆಯುವುದು.
31 : “ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ.
32 : ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ!
33 : “ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ.
34 : ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು.
35 : ಒಂದೇ ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.
36 : (ಹೊಲದಲ್ಲಿದ್ದ ಇಬ್ಬರಲ್ಲಿ, ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು)” ಎಂದರು.
37 : “ಸ್ವಾವಿೂ, ಇದು ಎಲ್ಲಿ ನಡೆಯುವುದು?” ಎಂದು ಶಿಷ್ಯರು ಕೇಳಿದಾಗ, ಯೇಸು, “ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು,” ಎಂದರು.
==================
ಚಿಂತನೆ
ನೋವನ ಕಾಲದಲ್ಲಿ ಜನರು ದೇವರನ್ನು ಕಡೆಗಣಿಸಿ ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಮೈಮರೆತ್ತಿದ್ದರು. ಲೌಕಿಕ ಸುಖ ಭೋಗಗಳಲ್ಲಿ ತಲ್ಲೀನರಾಗಿದ್ದರು. ಕುಡಿಯುವುದು, ತಿನ್ನುವುದು, ಮದುವೆಯಾಗುವುದರಲ್ಲೇ ಮಗ್ನರಾಗಿದ್ದರು. ಹೀಗೆ ಲೌಕಿಕತೆಯಲ್ಲಿ ಮೈಮರೆತ್ತಿದ್ದಾಗಲೇ ಜಲಪ್ರಳಯದಿಂದ ಅವರೆಲ್ಲರೂ ನಿರ್ನಾಮವಾದರು (ಆದಿಕಾಂಡ 6:11-13). ಅಂತೆಯೇ ನರಪುತ್ರನ (ಯೇಸು) ಆಗಮನದ ಕಾಲದಲ್ಲಿ ನಡೆಯುವುದಾಗಿ ಇಂದಿನ ಶುಭಸಂದೇಶ ಎಚ್ಚರಿಸುತ್ತಿದೆ. ಲೌಕಿಕ ಸುಖ ಪಡುವುದರಲ್ಲಿ ತಪ್ಪಿಲ್ಲ, ಆದರೆ ಲೌಕಿಕ ಸುಖಭೋಗಗಳೇ ನಮ್ಮ ಜೀವನವಾಗಬಾರದು. ಆಧ್ಯಾತ್ಮಿಕ ಕಡೆಗೂ ನಾವು ಗಮನವಿಟ್ಟಿರಬೇಕು. ನೋವನು ತನ್ನ ಜನರನ್ನು ಎಚ್ಚರಿಸಿದಂತೆ ಧರ್ಮಸಭೆಯು ದೇವರನ್ನು ಸ್ವೀಕರಿಸಲು ಸದಾ ಎಚ್ಚರಿಕೆ ನೀಡುತ್ತದೆ. ಎಲ್ಲಾ ಸಮಯದಲ್ಲೂ ಕ್ರಿಸ್ತನ ಬರುವಿಕೆಗೆ ಸಿದ್ದರಿರಬೇಕಾಗಿದೆ. ಇಲ್ಲವಾದ್ದಲ್ಲಿ ಸರ್ವನಾಶ ಕಟ್ಟಿಟ್ಟ ಬುತ್ತಿ.

No comments:
Post a Comment