Sunday, 10 February 2019

ನಮ್ಮ ಬಗ್ಗೆ,




ಕನ್ನಡದಲ್ಲಿ ಕೆಲ ಹಿತೈಷಿಗಳ ಪ್ರಯತ್ನದಿಂದ ಇದೇ ಮೊದಲ ಸಲ ’ಕ್ರಿಸ್ತದನಿ’ ಬ್ಲಾಗ್ ರೂಹುತಳೆದಿದೆ. ನಮ್ಮ ಅಧ್ಯಾತ್ಮಕ್ಕೆ ಪೂರಕವಾಗಲೆಂಬ ಆಶಯದೊಂದಿಗೆ ರೂಪುಗೊಂಡಿರುವ ಈ ಕ್ರಿಸ್ತದನಿ ಬ್ಲಾಗ್‍ನಲ್ಲಿ ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳಿವೆಚಿಂತನೆಗೆ ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಹೊಳಹುಗಳಿವೆ. ಅಷ್ಟೇ ಅಲ್ಲದೆ ಜಪಸರಶಿಲುಬೆಹಾದಿಕ್ರೈಸ್ತ ಸಂತರ ಬಗೆಗಿನ ಪಕ್ಷಿನೋಟಪವಿತ್ರಬೈಬಲಿನಲ್ಲಿ ಕಂಡು ಬರುವ ವ್ಯಕ್ತಿಗಳ ಬಗೆಗಿನ ಕಿರುಪರಿಚಯಕ್ರೈಸ್ತ ಭಕ್ತಿಗೀತೆಗಳ ಲಿಂಕ್ ಇವೆಲ್ಲವೂ ಬ್ಲಾಗ್ ಒಡಲೊಳಗಿವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ಒತ್ತಾಸೆಯಾಗಲೆಂದೇ ನಮ್ಮಈ ಪ್ರಯತ್ನದ ಸದಾಶಯ. 

ಈ ಯತ್ನವು ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ಇಂತಹ ಪ್ರಯತ್ನಗಳು ಪರಿಷ್ಕಾರಗೊಳ್ಳುತ್ತಾ ಉತ್ತಮವಾಗಲು ನಿಮ್ಮ ಅನಿಸಿಕೆ, ಸಲಹೆಗಳುಉತ್ತೇಜನ ಮುಖ್ಯವೆನಿಸುತ್ತವೆ. ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮ ಸಲಹೆಗಳನ್ನು ನಮಗೆ ತಿಳಿಸಿ. ಕ್ರಿಸ್ತನ ನುಡಿಗೆ ಜೀವ ತುಂಬಲು ಇದೊಂದು ಉತ್ಕೃಷ್ಟ ದನಿಯಾಗಲೆಂದು ಯಾವಾಗಲೂ ಆಶಿಸುತ್ತೇವೆ.

ದನಿ ಮಾಧ್ಯಮ ಮನೆ
jeevadani2016@gmail.com
jeevadani2016.blogspot.com

No comments:

Post a Comment