Sunday, 5 May 2019

8 ಮೇ 2019

ಬಿಳಿ/ಬುಧ/ಪಾಸ್ಖ ಕಾಲದ ಮೂರನೇ ವಾರ

1ನೇ  ವಾಚನ  -  ಪ್ರೇ.ಕಾ  8:  1-8
1 ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದರಿ ಹೋದರು2ಕೆಲವು ಭಕ್ತಾದಿಗಳು ಸ್ತೇಫನನನ್ನು ಸಮಾಧಿಮಾಡಿ ಅವನಿಗಾಗಿ ಅತ್ತು ಗೋಳಾಡಿದರು3ಇತ್ತ ಸೌಲನು ಧರ್ಮಸಭೆಯನ್ನು ನಾಶಪಡಿಸಲು ತೊಡಗಿದನು; ಮನೆಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಳೆದುತಂದು ಸೆರೆಮನೆಗೆ ತಳ್ಳುತ್ತಿದ್ದನು4ಸಮಾರಿಯದಲ್ಲಿ ಶುಭಸಂದೇಶ ಚದರಿ ಹೋದ ಭಕ್ತವಿಶ್ವಾಸಿಗಳು ಎಲ್ಲೆಲ್ಲೂ ಹೋಗಿ ಶುಭಸಂದೇಶವನ್ನು ಸಾರುತ್ತಿದ್ದರು5ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕನೆಂದು ಸಾರಿದನು6ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಭುತಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು7ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾಶ್ರ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು.
8ಇದರಿಂದ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.

ಕೀರ್ತನೆ  -  66:  1-7
 ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ 
1ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ /
2ಹಾಡಲಿ ಆತನ ಶ್ರೀನಾಮ ಮಹಿಮೆಗೆ //
3ನಿನ್ನ ಕಾರ್ಯಗಳೆನಿತೋ ಚೇತೋಹಾರಿ / ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ //
4ಜಗವೆಲ್ಲ ಪೂಜಿಪುದು ನಿನ್ನನು / ಪೊಗಳಿ ಮಾಳ್ಪುದು ಗುಣಗಾನವನು / ಕೀರ್ತಿಸುವುದು ನಿನ್ನ ನಾಮವನು”//
5ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ / ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ //
6ಒಣನೆಲವಾಗಿ ಮಾರ್ಪಡಿಸಿದ ಕಡಲನು / ಕಾಲು ನಡೆಯಲೇ ದಾಟಿಸಿದ ನದಿಯನು / ಇದ ನಿಮಿತ್ತ ಪಡೆಯೋಣ ಆನಂದವನು //
7ಆತನಾಳ್ವಿಕೆ ಶಕ್ತಿಯುತ, ನಿರಂತರ / ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ / ಜಂಬಕೊಚ್ಚದಿರಲಿ ದಂಗೆಕೋರ //

ಶುಭಸಂದೇಶ - ಯೊವಾನ್ನ 6: 35-4೦
35ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು36ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ37ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ38ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ39ಅವರ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು40ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ,” ಎಂದು ನುಡಿದರು.

ಚಿಂತನೆ
ಮಾನವ ಸಾಮಾನ್ಯವಾಗಿ ಸ್ವತಂತ್ರವನ್ನು ಇಷ್ಟಪಡುತ್ತಾನೆ. ಸ್ವತಂತ್ರ ಎಂದು ನನಗೆ ನಾನೇ ಸಾಟಿ ಎಂದು ಜೀವಿಸುತ್ತಾನೆ. ತನ್ನ ಏಳಿಗೆಗೆ ಮತ್ತು ವಿಕಾಸನಕ್ಕಾಗಿ ಅನೇಕ ಕನಸುಗಳನ್ನು ಕಟ್ಟಿಕೊಳ್ಳುತ್ತಾನೆ. ಆದರೆ ತನ್ನ ಆಸೆಯಾಗಲಿ ಅಥವಾ ಚಿತ್ತವಾಗಲಿ ನಡೆಯುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಅವನಿಗೆ ಸಾಧ್ಯವಿಲ್ಲ. ಬೇರೆಯವರಿಗಾಗಿ ಅಥವಾ ಬೇರೆಯವರ ಚತ್ತಕ್ಕಾಗಿ/ ಆಸೆಗಾಗಿ ದುಡಿಯುವುದು ಮತ್ತು ಕೆಲಸ ಮಾಡುವುದು ಎಂದರೆ ಕಷ್ಟದ ಕೆಲಸ. ಇಂತಹ ಕೆಲಸವನ್ನು ತಾಯಿಯ ಗರ್ಭದಿಂದ ಭೂಗರ್ಭದ ವರೆಗೆ ತಂದೆಯ ಚಿತ್ತವನ್ನು ಪಾಲಿಸಿದ ಏಕೈಕ ವ್ಯಕ್ತಿ' ಭಗವಾನ್ ಪ್ರಭು ಕ್ರಿಸ್ತ' ಹೀಗೆ ತಂದೆಯಚಿತ್ತವನ್ನು ಪಾಲಿಸುವುದರಲ್ಲಿ ನಿರುತ್ತರದ ಕ್ರೀಸ್ತರು ತನ್ನದೆಲ್ಲವನ್ನು ಬರಿದು ಮಾಡಿಕೊಳ್ಳುತ್ತಾರೆ. ಇದನ್ನೇ ನಾವು ಫಿಲಿಪ್ಪರಿಗೆ ಬರೆದ ಪತ್ರದಲ್ಲಿ 2: 6 - 11 ರಲ್ಲಿ  ನಾವು ಕಾಣುತ್ತೇವೆ. ಇದನ್ನು ಆಂಗ್ಲ ಭಾಷೆಯಲ್ಲಿ self-emptying ಎಂದು ಕರೆಯುತ್ತಾರೆ. ಇಂತಹ ಮನೋಭಾವನೆ ನಮ್ಮದಾಗಿ, ನಮ್ಮತನವನ್ನು ತ್ಯಜಿಸುವುದು ಅತಿ ಸೂಕ್ತವಾಗಿದೆ. "ನಾನು ಸ್ವರ್ಗದಿಂದ ಇಳಿದು ಬಂದದ್ದು ನನ್ನ ಇಚ್ಛೆಯಂತೆ ನಡೆಯುವುದಕ್ಕೆ ಅಲ್ಲನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ. ವಾಕ್ಯವನ್ನು ಧ್ಯಾನಿಸಿ ಅದರಂತೆ ನಡೆಯಲು ಪ್ರಯತ್ನಿಸೋಣ ಅದಕ್ಕಾಗಿ ಪ್ರಾರ್ಥಿಸೋಣ.                 

ಆತ್ಮಾವಲೋಕನ                              
1.       ನನ್ನ ಆಸೆ ಆಕಾಂಕ್ಷೆಗಳನ್ನೇ ನಂಬಿಕೊಂಡು ಜೀವಿಸುತ್ತಿದ್ದೇನೆಯೇ?                                     
2.       ತನ್ನನ್ನೇ ತಾನು ಬರಿದು ಮಾಡಿಕೊಳ್ಳುವುದು ಎಂಬುದನ್ನು ನಾವು ಕೇಳಿದ್ದೇವೆ ಆದರೆ ಅದನ್ನು ಪಾಲಿಸಲು ನಮ್ಮಿಂದ ಸಾಧ್ಯವೇ?                       
3.       ದೇವರ ಚಿತ್ರಕ್ಕೆ ತಲೆಬಾಗಿ ನಡೆಯುವ ಶಕ್ತಿ ನನ್ನಲ್ಲಿದೆಯೇ

-ಸಹೋವಿನಯ್ ಕುಮಾರ್, ಚಿಕ್ಕಮಗಳೂರು  

No comments:

Post a Comment