Sunday, 5 May 2019

7 ಮೇ 2೦19

ಬಿಳಿ/ಮಂಗಳ/ ಪಾಸ್ಖ ಕಾಲದ ಮೂರನೇ ವಾರ

1ನೇ  ವಾಚನ  -  ಪ್ರೇ.ಕಾ  7:  51-8:  1
51ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು; ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ52ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ53ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು54ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು55ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾಶ್ರ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು56ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾಶ್ರ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು57ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. 58ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು58ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು59ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು60ಅನಂತರ ಮೊಣಕಾಲೂರಿ, “ಪ್ರಭೂ, ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು

1 ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದರಿ ಹೋದರು.

ಕೀರ್ತನೆ - 31: 2-3, 5, 6, 7, 16, 2೦
ನನಗಾಧಾರ ನೀನಲ್ಲವೆನನ್ನಾತ್ಮವನು ನಿನಗೊಪ್ಪಿಸಿರುವೆ
3ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ | ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲ ||
4ವೈರಿಗಳ ಉರುಲುಬಲೆಯಿಂದೆನ್ನನು ರಕ್ಷಿಸು | ಅದರಲಿ ನಾ ಸಿಕ್ಕಿ ಬೀಳುವುದನು ತಪ್ಪಿಸು ||
5ನನಗಾಧಾರ ನೀನಲ್ಲವೆ? ನನ್ನಾತ್ಮವನು ನಿನಗೊಪ್ಪಿಸಿರುವೆ / ನಂಬಿಕಸ್ತನಾದ ದೇವನೆ, ನೀಯೆನ್ನ ಮುಕ್ತಗೊಳಿಸಿರುವೆ//
6ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ / ನಾನಾದರೋ ಪ್ರಭು, ಭರವಸೆಯಿಟ್ಟಿರುವುದು ನಿನ್ನಲ್ಲೆ //
7ಹರ್ಷಾನಂದಗೊಳ್ಳುವೆ ನೆನೆದು ನಿನ್ನ ಅನಂತ ಪ್ರೀತಿಯನು / ಈಕ್ಷಿಸಿದೆ ನೀ ಭಕ್ತನ ದೀನತೆಯನು, ಲಕ್ಷಿಸಿದೆ ಬಾಧೆಗಳನು //
8ವಿರೋಧಿಗಳ ವಶಕ್ಕೆ ಎನ್ನನು ನೀ ಬಿಟ್ಟುಬಿಡಲಿಲ್ಲ / ನಿರಾತಂಕದೆಡೆಯಲಿ ನನ್ನ ನಿಲ್ಲಿಸಿದೆಯಲ್ಲಾ //
17ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ / ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ //
21ಮುತ್ತಿಗೆಗೆ ತುತ್ತಾದ ನಗರದೊಳಿಂದೆನ್ನ / ಅಚ್ಚರಿಯಿಂದ ರಕ್ಷಿಸಿದೊಡೆಯನಿಗೆ ನಮನ //

ಶುಭಸಂದೇಶ - ಯೊವಾನ್ನ 6: 3೦-35
30ಅದಕ್ಕೆ ಜನರು, “ನಾವು ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ31ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲುಮನ್ನಾಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?” ಎಂದರು32ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ33ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು34ಅದಕ್ಕೆ ಜನರು, “ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ,” ಎಂದು ಕೇಳಿದರು35ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.

ಚಿಂತನೆ
ವಾರದ ವಾಚನಗಳು ಬರೀ ಊಟದ ಬಗ್ಗೆ, ಆಹಾರದ ಬಗ್ಗೆ ತಿಳಿಸುತ್ತವೆ. ಆಹಾರದ ಹೊಸ ದೃಷ್ಟಿಕೋನವನ್ನು ಶಿಷ್ಯರಿಗೆ ಯೇಸು ಸ್ವಾಮಿ ಹೇಳ ಹೊರಟಿದ್ದಾರೆ. ಜನರು ಇಂದು ಯೇಸು ಸ್ವಾಮಿಗೆ ನೇರವಾಗಿ  ಸೂಚಕಕಾರ್ಯವನ್ನು   ಮಾಡುವಂತೆ ತಿಳಿಸುತ್ತಾರೆ 'ಮನ್ನಾದ' ಉದಾಹರಣೆಯನ್ನು ನೀಡುತ್ತಾರೆ. ಆಗ ಯೇಸು ಸ್ವಾಮಿಗೆ ಜನರ ಭಾವನೆ ತಿಳಿದು ಮಹಾ ಹೇಳಿಕೆಯನ್ನು ಅನಾವರಣಗೊಳಿಸುತ್ತಾರೆ. "ನಾನೇ ಜೀವದಾಯಕ ರೊಟ್ಟಿ ನನ್ನ ಬಳಿ ಬರುವವನಿಗೆ ಹಸಿವೆ ಇರದು, ನನ್ನಲ್ಲಿ ವಿಶ್ವಾಸವಿರುವವನಿಗೆ ಎಂದಿಗೂ ದಣಿವಾಗದು" ಎನ್ನುತ್ತಾರೆ. ನಮಗೆಲ್ಲರಿಗೂ ಹಸಿವಾಗುವುದು ಸಹಜ ಹಸಿವು ಎಂಥದ್ದು ಎಂಬುದು ಪ್ರಶ್ನೆ. ಹಸಿವು - ಇದರಲ್ಲಿ ಅನೇಕ ಬಗೆಯ ಹಸಿವುಗಳಿವೆ 1)ದೈಹಿಕ ಹಸಿವು 2 )ಪ್ರಾಪಂಚಿಕ ಹಸಿವು 3) ಆಧ್ಯಾತ್ಮಿಕ ಹಸಿವು ದೈಹಿಕ ಹಸಿವು, ಪ್ರಾಪಂಚಿಕ ಹಸಿವಿಗೆ ಕೊನೆಯೇ ಇರದು. ಆಧ್ಯಾತ್ಮಿಕ ಹಸಿವಿನ ಬಗ್ಗೆ ನಾವು ಚಿಂತಿಸುವುದು ಒಳ್ಳೆಯದು. ಆಧ್ಯಾತ್ಮಿಕತೆ ಹಸಿವು ಎಲ್ಲರಲ್ಲಿ ಇರಬೇಕು ಇದು ಸಕಾರಾತ್ಮಕವಾದ ವಿಷಯ. ಒಬ್ಬ ವ್ಯಕ್ತಿ ವಿಕಾಸನ ಆಗಬೇಕೆಂದರೆ ಆಧ್ಯಾತ್ಮಿಕತೆಯ ಪಾತ್ರ ಮಹತ್ತರವಾದುದು. ದೇವರನ್ನು ಕಾಣುವುದು, ದೇವರ ಬಗ್ಗೆ ತಿಳಿಯುವುದು, ದೇವರ ಪ್ರಸನ್ನತೆಯನ್ನು ತನ್ನ ಜೀವನದಲ್ಲಿ ಬಯಸುವುದು ಮತ್ತು ದೇವರಿಗಾಗಿ ಹಂಬಲಿಸುವುದು ಆಧ್ಯಾತ್ಮಿಕ ಹಸಿವು. ಹಸಿವು ನಮ್ಮದಾದರೆ ಜೀವದಾಯಕ ಪ್ರಭು ಯೇಸು ನಮ್ಮ ಹಸಿವನ್ನು ತಣಿಸುತ್ತಾರೆ.

ಆತ್ಮಾವಲೋಕನ
1. ನನ್ನ ಹಸಿವು ಎಂತದ್ದು?
2. ಆಧ್ಯಾತ್ಮಿಕತೆಯ ಹಸಿವು ನನ್ನಲ್ಲಿದೆಯೇ?
3. ಜೀವದಾಯಕ ರೊಟ್ಟಿ ಯನ್ನು ಸ್ವೀಕರಿಸುವ ಆಸಕ್ತಿ ನನ್ನಲ್ಲಿದೆಯೇ?

-ಸಹೋವಿನಯ್ ಕುಮಾರ್, ಚಿಕ್ಕಮಗಳೂರು   

No comments:

Post a Comment