ಬಿಳಿ/ಶನಿ /ಪಾಸ್ಖ
ಕಾಲದ ಮೂರನೇ ವಾರ
1ನೇ ವಾಚನ - ಪ್ರೇ.ಕಾ 9: 31-42
31ಇಂತಿರಲು ಜುದೇಯ, ಗಲಿಲೇಯ ಮತ್ತು
ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ
ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ
ಇತ್ತು. 32ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿಕೊಡುತ್ತಾ ಲುದ್ದ ಎಂಬ ಊರಿನಲ್ಲಿ
ವಾಸವಾಗಿದ್ದ ಭಕ್ತರ ಬಳಿಗೆ ಬಂದನು. 33ಅಲ್ಲಿ ಪಾಶ್ರ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ
ಹಿಡಿದಿದ್ದ ಐನೇಯಾ ಎಂಬವನನ್ನು ಕಂಡನು. 34ಪೇತ್ರನು ಅವನಿಗೆ, “ಐನೇಯಾ, ಯೇಸುಕ್ರಿಸ್ತರು ನಿನ್ನನ್ನು
ಸ್ವಸ್ಥಪಡಿಸುತ್ತಾರೆ. ಎದ್ದು ನಿನ್ನ ಹಾಸಿಗೆಯನ್ನು
ಎತ್ತಿಡು,” ಎಂದನು, ಆ ಕ್ಷಣವೇ
ಅವನು ಎದ್ದನು. 35ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ
ಅವನನ್ನು ಕಂಡು ಪ್ರಭುವಿನ ಭಕ್ತರಾದರು.
36ಜೊಪ್ಪ ಎಂಬ ಊರಿನಲ್ಲಿ ತಬಿಥ
ಎಂಬ ಒಬ್ಬ ಭಕ್ತೆ ಇದ್ದಳು.
(ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’)
ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು. 37ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು.
ಜನರು ಅವಳ ಶವಕ್ಕೆ ಸ್ನಾನಮಾಡಿಸಿ
ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು. 38ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು
ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ”
ಎಂದು ಇಬ್ಬರ ಮುಖಾಂತರ ಹೇಳಿ
ಕಳುಹಿಸಿದರು. 39ಪೇತ್ರನು ಎದ್ದು ಅವರ ಜೊತೆಯಲ್ಲೇ
ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ
ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ
ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ,
ದೋರ್ಕಳು ಜೀವದಿಂದ ಇದ್ದಾಗ ತಮಗೆ
ಮಾಡಿಕೊಟ್ಟ ಬಟ್ಟೆ ಬರೆಗಳನ್ನು ಅವನಿಗೆ
ತೋರಿಸಿದರು. 40ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ
ಪ್ರಾರ್ಥಿಸಿದನು. ಅನಂತರ ಶವದ ಕಡೆಗೆ
ತಿರುಗಿ, “ತಬಿಥಾ, ಮೇಲಕ್ಕೇಳು,” ಎಂದನು.
ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. 41ಪೇತ್ರನು ಕೈ ನೀಡಿ ಆಕೆಯನ್ನು
ಎತ್ತಿನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು
ಅವರಿಗೆ ತೋರಿಸಿದನು.
42ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು.
ಅನೇಕರು ಪ್ರಭುವನ್ನು ವಿಶ್ವಾಸಿಸಿದರು. 43ಪೇತ್ರನು ಹಲವು ದಿನಗಳನ್ನು ಜೊಪ್ಪದಲ್ಲಿ
ಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ
ಕಳೆದನು.
ಕೀರ್ತನೆ - 116: 12-17
ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ / ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?
12ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ
/ ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?
//
13ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು
ಪ್ರಭುವಿನ ನಾಮವನು //
14ಆತನಿಗೆ ನಾ ಹೊತ್ತ ಹರಕೆಗಳನು
/ ಆತನ ಸಭೆಮುಂದೆಯೆ ತೀರಿಸುವೆನು //
15ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು
//
16ಹೇ ಪ್ರಭು, ಕರುಣಿಸು, ನಾ
ನಿನ್ನ ಕಿಂಕರನು / ನಿನ್ನ ದಾಸಿಯ ಮಗನು,
ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು
//
17ಅರ್ಪಿಸುವೆ ನಾ ನಿನಗೆ ಕೃತಜ್ಞತಾ
ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
ಶುಭಸಂದೇಶ - ಯೊವಾನ್ನ 6: 6೦-69
60ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ
ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?”
ಎಂದು ಮಾತನಾಡಿಕೊಂಡರು. 61ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು
ಯೇಸು ತಾವಾಗಿಯೇ ಅರಿತು, “ಇಷ್ಟು ಮಾತ್ರಕ್ಕೆ
ನೀವು ಕಂಗೆಡಬೇಕೆ?
62ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ
ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ? 63ಸಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ
ಏನೂ ಆಗದು. ನಾನು ನಿಮ್ಮೊಡನೆ
ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು
ತರುತ್ತವೆ. 64ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ,” ಎಂದು ಹೇಳಿದರು. (ವಿಶ್ವಾಸವಿಲ್ಲದವರು
ಯಾರು, ತಮ್ಮನ್ನು ಹಿಡಿದುಕೊಡುವ ಗುರುದ್ರೋಹಿ ಯಾರು, ಎಂದು ಯೇಸುವಿಗೆ
ಮೊದಲಿನಿಂದಲೂ ತಿಳಿದಿತ್ತು.) 65‘ಪಿತನು ಅನುಗ್ರಹಿಸಿದ ಹೊರತು ಯಾರೂ ನನ್ನ
ಬಳಿಗೆ ಬರಲಾರರು,’ ಎಂದು ನಾನು ಹೇಳಿದುದು
ಇದಕ್ಕಾಗಿಯೇ,” ಎಂದು ಯೇಸು ಮತ್ತೆ
ನುಡಿದರು. 66ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು
ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ. 67ಆಗ ಯೇಸು ಹನ್ನೆರಡು ಮಂದಿ
ಶಿಷ್ಯರಿಗೆ, “ನೀವು ಕೂಡ ಹೋಗಬೇಕೆಂದು
ಇದ್ದೀರಾ?” ಎಂದು ಕೇಳಿದರು. 68ಅದಕ್ಕೆ ಸಿಮೋನ ಪೇತ್ರನು, “ಪ್ರಭುವೇ,
ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು
ಈಯುವ ನುಡಿ ಇರುವುದು ತಮ್ಮಲ್ಲೇ. 69ತಾವೇ ದೇವರಿಂದ ಬಂದ ಪರಮಪೂಜ್ಯರು.
ಹೌದು, ಇದೇ ನಮ್ಮ ವಿಶ್ವಾಸ
ಮತ್ತು ಗ್ರಹಿಕೆ,” ಎಂದು ಹೇಳಿದನು.
ಚಿಂತನೆ
ಮಾತು ಬೆಳ್ಳಿ
ಮೌನ ಬಂಗಾರ ಎಂಬ ಗಾದೆ
ಮಾತಿದೆ. ಮೌನಕ್ಕೆ ಹೆಚ್ಚು ಮಹತ್ವ
ಕೊಡುತ್ತಿದ್ದ ಕಾಲವದು. ಆದರೆ ಈಗ
ಅದು ಬದಲಾಗಿದೆ. ಕಾದು ನಂಬಬಹುದು ಆದರೆ
ಮೌನವಾಗಿರುವ ವರನ ನಂಬಲು ಸಾಧ್ಯವಿಲ್ಲ
ಎನ್ನುತ್ತಾರೆ. ಕಾರಣ ಸದಾ ಮಾತನಾಡುವವರು,
ಬಾಯಿ ಜೋರಾಗಿ ಇರುವವರು ಮತ್ತು
ಸದಾ ಭಾಯಿ ಮಾಡುವವರ ಬಾಯಲ್ಲಿ
ಏನೂ ಉಳಿಯುವುದಿಲ್ಲ ಎಲ್ಲವನ್ನು ಹೊರಗೆ ಹಾಕುತ್ತಾರೆ ಅಥವಾ
ವ್ಯಕ್ತಪಡಿಸುತ್ತಾರೆ. ಸದಾ ತಮ್ಮ ಭಾವನೆಗಳನ್ನು
ಅದುಮಿಟ್ಟುಕೊಂಡು ಇರುವುದಕ್ಕಿಂತ ಜನರಿಗೆ ಹೇಳುವುದು ಸೂಕ್ತ
ಎನ್ನುವುದು ಒಂದು ವಾದ. ಏನೇ
ಇರಲಿ ಯೇಸು ಸ್ವಾಮಿ ಒಬ್ಬ
ಅತ್ಯಂತ ಪ್ರಭಾವಶಾಲಿ ಮಾತುಗಾರ. ಇಂದು ಜಗತ್ತಿನಲ್ಲಿ ಅನೇಕರು
ಅವರನ್ನ ಹಿಂಬಾಲಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ
ಅವರು ಮಾಡಿದ ಪವಾಡಗಳ ಬದಲಾಗಿ
ಆಡಿದ ಮಾತುಗಳಿಂದ. ಅವರ ಆಡಿದ ಮಾತು
ಎಂಥವರನ್ನೂ ಮೂಕವಿಸ್ಮಿತರನ್ನಾಗಿ ಮಾಡಿಸುತ್ತಿತ್ತು ಮತ್ತು ಅವರನ
ದ್ವೇಷಿಸುವಂತೆಯೂ ಸಹ ಮಾಡುತ್ತಿತ್ತು.
ಈ ಮಾತುಗಳಿಂದಲೇ ಅವರನ್ನು
ಅನೇಕರು ಬಿಟ್ಟು ಹೋಗುವ ಪ್ರಸಂಗವೂ
ಬಂದಿತ್ತು ಎಂಬುದು ಕಟು ಸತ್ಯ.
ಇಂತಹ ಪ್ರಮೇಯವನ್ನು ನಾವು ಇಂದು ಶುಭ
ಸಂದೇಶದಲ್ಲಿ ಕಾಣುತ್ತೇವೆ. ಶಿಷ್ಯರಲ್ಲಿ ಹಲವರು ಇವು ಕಟುವಾದ
ಮಾತುಗಳು, ಇವನನ್ನು ಯಾರು ತಾನೇ
ಕೇಳಿಯಾರು? ಎನ್ನುತ್ತಾರೆ ಹಾಗೆಯೇ ಅವರನ್ನು ತೊರೆದು
ಹೋಗುತ್ತಾರೆ. ಸ್ವಾಮಿಯ ಮಾತುಗಳು ಅಷ್ಟು
ತೀಕ್ಷ್ಣವಾಗಿ ಇರುತ್ತಿತ್ತು; ಅವರೇ ಹೇಳುತ್ತಾರೆ ಹೌದಾದರೆ
ಹೌದೆನ್ನಿ ಇಲ್ಲವಾದರೆ ಇಲ್ಲವೆನ್ನಿ ಎಂದು. ನಮ್ಮ ಮಾತುಗಳು
ಸಹ ನಮ್ಮ ಪ್ರಭುವಿನಂತಿ ನೇರ,
ದಿಟ್ಟ ಹಾಗೂ ನಿರಂತರವಾಗಲಿ.
ಆತ್ಮಾವಲೋಕನ
1. ನಾನು ಆಡುವ ಮಾತು
ಹೇಗಿದೆ?
2. ನಾನು ಮೌನಿಯೋ ಅಥವಾ
ಸದಾ ಮಾತನಾಡುವ ವ್ಯಕ್ತಿಯಯೋ?
3.
ನನ್ನ
ಮಾತಿನಲ್ಲಿ ಏಸು ಸ್ವಾಮಿ ಅಂತೆ
ನೇರ ದಿಟ್ಟ ಹಾಗೂ ನಿರಂತರ
ಗುಣಗಳಿವೆಯೇ?
-ಸಹೋ.
ವಿನಯ್ ಕುಮಾರ್, ಚಿಕ್ಕಮಗಳೂರು
No comments:
Post a Comment