ಕೆಂಪು / ಮಂಗಳ/ ಸಂತ ಮತ್ತೀಯ ಪ್ರೇಷಿತರ ಹಬ್ಬ
1ನೇ ವಾಚನ - ಪ್ರೇ.ಕಾ 1: 15-17,2೦-26
15 : ಸ್ವಲ್ಪ ದಿನಗಳ ನಂತರ ಸುಮಾರು ನೂರ ಇಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆಸೇರಿದ್ದರು. ಆಗ ಪೇತ್ರನು ಎದ್ದು ನಿಂತು ಹೀಗೆಂದನು:
16 : “ಪ್ರಿಯ ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮುಂದಾಳಾಗಿದ್ದವನು ಯೂದನು. ಅವನ ವಿಷಯವಾಗಿ ಪವಿತ್ರಾತ್ಮ ಅವರು ದಾವೀದನ ಮುಖಾಂತರ ಮುಂತಿಳಿಸಿದ ವಾಕ್ಯ ನೆರವೇರಲೇಬೇಕಾಗಿತ್ತು.
17 : ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದವನು, ನಾವು ಕೈಗೊಂಡಿರುವ ಸೇವೆಯಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದನು.
18 : (“ಇವನು ತನ್ನ ನೀಚ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡ. ಆದರೆ ಅದರಲ್ಲೇ ಪ್ರಾಣಕಳೆದುಕೊಂಡ. ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತುಹೋದ.
19 : ಈ ವಿಷಯ ಜೆರುಸಲೇಮಿನ ನಿವಾಸಿಗಳಿಗೆಲ್ಲಾ ತಿಳಿಯಿತು. ಆ ಜವಿೂನನ್ನು ತಮ್ಮ ಭಾಷೆಯಲ್ಲಿ ‘ಅಖೆಲ್ದಾಮ’ ಅಂದರೆ ‘ನೆತ್ತರನೆಲ’ ಎಂದು ಕರೆಯಲಾರಂಭಿಸಿದರು)
20 : ‘ಅವನ ಮನೆ ಹಾಳಾಗಲಿ, ಅದು ಪಾಳುಬೀಳಲಿ,’ ಎಂದೂ, ‘ಅವನ ಸ್ಥಾನ ಇನ್ನೊಬ್ಬನದಾಗಲಿ,’ ಎಂದೂ ಕೀರ್ತನಾಗ್ರಂಥದಲ್ಲಿ ಬರೆಯಲಾಗಿದೆ.
21 : “ಆದುದರಿಂದ
ಪ್ರಭು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಡನೆ ಸಾಕ್ಷಿಯಾಗಿರಲು ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಸೇವಾಸಂಚಾರದಲ್ಲೆಲ್ಲಾ ನಮ್ಮೊಡನೆ ಇದ್ದವನಾಗಿರಬೇಕು.
22 : ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು.”
23 : ಆಗ ಬಾರ್ನಬ ಎಂದು ಹೆಸರಿಸಲಾದ ಜೋಸೆಫ್ (ಇವನನ್ನು ಯುಸ್ತ ಎಂದೂ ಕರೆಯುತ್ತಿದ್ದರು.) ಮತ್ತು ಮತ್ತೀಯ ಎಂಬ ಇಬ್ಬರ ಹೆಸರನ್ನು ಸೂಚಿಸಲಾಯಿತು.
24 : ಅನಂತರ ಎಲ್ಲರೂ ಪ್ರಾರ್ಥನೆ ಮಾಡುತ್ತಾ, “ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತ ಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ.
25 : ಈ ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ,” ಎಂದರು.
26 ಅನಂತರ ಚೀಟುಹಾಕಿದರು. ಅದು ಮತ್ತೀಯನ ಪರವಾಗಿತ್ತು. ಅವನನ್ನು ಹನ್ನೊಂದು ಮಂದಿಯೊಡನೆ ಪ್ರೇಷಿತಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು.
ಕೀರ್ತನೆ - 113: 1-8
ಕೂರಿಸುವನಾತ ಅವರನು ಅಧಿಪತಿಗಳ ನಡುವೆ / ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ
1 : ಅಲ್ಲೆಲೂಯ
/ ಪ್ರಭುವಿನ ದಾಸರೇ, ಸ್ತುತಿಮಾಡಿ / ಪ್ರಭುವಿನ ನಾಮಸ್ತುತಿಯನು ಮಾಡಿ //
2 : ಪ್ರಭುವಿನ
ಸಿರಿನಾಮವು ಪೂಜ್ಯ / ಇಂದಿಗೂ ಎಂದೆಂದಿಗೂ ಪೂಜ್ಯ //
3 : ಪ್ರಭುವಿನಾ
ಸಿರಿನಾಮವು ಸ್ತುತ್ಯ / ಪೂರ್ವ ಪಶ್ಚಿಮದವರೆಗೂ ಸ್ತುತ್ಯ //
4 : ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ / ಆತನ ಮಹಿಮೆ ಗಗನಕ್ಕಿಂತಲೂ ಉತ್ಕøಷ್ಟ //
5 : ನಮ್ಮ ಪ್ರಭು ದೇವನಂತೆ ಯಾರು ಸಮರ್ಥ /
6 : ಇಹಪರಗಳನು
ವೀಕ್ಷಿಸಲಾತ ಶಕ್ತ //
7 : ದೀನರನು ಎಬ್ಬಿಸುವನು ಧೂಳಿನಿಂದ / ಬಡವರನು ಎತ್ತುವನು ತಿಪ್ಪೆಯಿಂದ //
8 : ಕೂರಿಸುವನಾತ
ಅವರನು ಅಧಿಪತಿಗಳ ನಡುವೆ / ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ //
9 : ಬಂಜೆಯಾದವಳನು ಮಕ್ಕಳ ತಾಯಾಗಿಸುವನು / ಆನಂದದಿಂದಾಕೆ ಬೆಳಗಿಸುವಳಾ ಮನೆಯನು //
ಶುಭಸಂದೇಶ - ಯೊವಾನ್ನ 15: 9-17
9 : ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ.
10 : ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.
11 : “ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ.
12 : ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.
13 : ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ.
14 : ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು.
15 : ನಾನಿನ್ನು
ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ
ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ.
16 : ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು.
17 : ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.
ಚಿಂತನೆ
ಪ್ರೀತಿ ಅಥವಾ ಲವ್ ಎನ್ನುವ ಪದ ಕೇಳಿದರೆ ಏನೋ ಒಂದು ರೀತಿ
ರೋಮಾಂಚನ ಕೆಲವರಿಗೆ. ಇನ್ನು ಹದಿ ಹರೆಯದ ಹುಡುಗರು ಹುಡುಗಿಯರು ಪ್ರೀತಿ ಎಂದರೆ ಸಾಕು
ಹುಚ್ಚೆದ್ದು ಕುಣಿಯುತ್ತಾರೆ. ಏನೇ ಇರಲಿ, ಪ್ರೀತಿ ಎನ್ನುವ ವಿಷಯ ಒಂದು
ಇಂಟರೆಸ್ಟಿಂಗ್ ಟಾಪಿಕ್. ಇದರ ಬಗ್ಗೆ ಮಾತಾಡಿದಷ್ಟು ಅದು ಮುಗಿಯುವುದಿಲ್ಲ. ಜಗತ್ತಿಗೆ ಪ್ರೀತಿಯ
ಪಾಠವನ್ನು ಕಲಿಸಲು, ಪರ ಪ್ರೀತಿ ಮತ್ತು ದೈವ ಪ್ರೀತಿ ಎಂಬ ಎರಡು ಹೊಸ ವಿಷಯದ ಬಗ್ಗೆ ಅರ್ಥೈಸಲು
ಬಂದ ಪರಮ ಜ್ಞಾನಿ ಅಪ್ರತಿಮ ಬೋಧಕ ಪ್ರಭು ಯೇಸು. ಇವರ ಬಾಯಲ್ಲಿ ಪ್ರೀತಿಯ ಬಗ್ಗೆ ಕೇಳುವುದೆಂದರೆ
ಅದೊಂದು ವರದಾನವೇ ಸರಿ. ಇಂದಿನ ಶುಭ ಸಂದೇಶದಲ್ಲಿ ಯೇಸು ಸ್ವಾಮಿ ಪ್ರೀತಿ ಪಾಠವನ್ನು
ಮಾಡುತ್ತಿದ್ದಾರೆ. ಎಷ್ಟೋ ಸಮಸ್ಯೆಗಳಿಗೆ ಪ್ರೀತಿಗೆ ಮದ್ದು, ಪ್ರೀತಿ ಒಂದಿದ್ದರೆ ಎಲ್ಲರಲ್ಲಿ ಈ ಜಗತ್ತೇ
ಬದಲಾಗುತ್ತೆ. ಪ್ರೀತಿ ಅಂಥವರನ್ನು ಬದಲಾಯಿಸಿಬಿಡುತ್ತದೆ ಭಾವ ಬೆರೆಸಿ ಅನುಭಾವದ ಮಧ್ಯೆ ಜೀವ
ಪುಟ್ಟಿವಂತೆ ಮಾಡುತ್ತದೆ ಈ ಪ್ರೀತಿ. ಯೇಸು ಸ್ವಾಮಿ ತಮ್ಮ ಶಿಷ್ಯರಿಗೆ ನಾನು ನಿಮ್ಮನ್ನು
ಪ್ರೀತಿಸಿದ ಅಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎನ್ನುತ್ತಾರೆ. ಅವರ ಅಳತೆ ಊಹೆಗೆ
ನಿಲುಕದ್ದು, ಇತಿ ಅಳತೆಗೆ ಮೀರಿದ್ದು, ಅಂತಹ ಪ್ರೀತಿ ನಮ್ಮದಾಗುವಂತೆ ಕ್ರಿಸ್ತನ ಪ್ರೀತಿಯ
ಕರೆಗೆ ಪ್ರತಿಸ್ಪಂದಿಸುವ.
ಆತ್ಮಾವಲೋಕನ -
1. ಪ್ರೀತಿ ಎಂದರೇನು?
2. ಪ್ರೀತಿ ನನ್ನನ್ನು ಬದಲಾಯಿಸಿದೆಯೇ?
3. ಯೇಸು ಸ್ವಾಮಿ ಅಳತೆಯಲ್ಲಿ ನಾವು ಒಬ್ಬರನ್ನೊಬ್ಬರು
ಪ್ರೀತಿಸಲು ನಮ್ಮಿಂದ ಸಾಧ್ಯವೇ?
ಸಹೋ. ವಿನಯ್ ಕುಮಾರ್
I am really surprised by the quality of your constant posts.You really are a genius, I feel blessed to be a regular reader of such a blog Thanks so much
ReplyDeleteonlinekaj.com/
What is love
Mobile price bd
font copy and paste