Sunday, 12 May 2019

15 ಮೇ 2೦19


ಬಿಳಿ/ಬುಧ/ಪಾಸ್ಖ ಕಾಲದ ನಾಲ್ಕನೇ ವಾರ 
1ನೇ ವಾಚನ - ಪ್ರೇ.ಕಾ 12: 24-13: 5      
24 : ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು.
25 : ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ ಎಂದು ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು.
1 : ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೇಹಿತ ಮೆನಹೇನ ಮತ್ತು ಸೌಲ
2 : ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಕಾರ್ಯಕ್ಕಾಗಿ ವಿೂಸಲಾಗಿಡಿ,” ಎಂದರು.
3 : ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು.
4 : ಸೈಪ್ರಸ್ ದ್ವೀಪದಲ್ಲಿ ಧರ್ಮಪ್ರಚಾರ ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಾಯಾನ ಮಾಡಿದರು.
5 : ಅವರು ಸಲವಿೂಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು.


ಕೀರ್ತನೆ  67:  1-2,  4-6,  7
ನಿನ್ನ ಕೀರ್ತಿಸಲಿ ದೇವಾ, ಜನರು / ಸಂಕೀರ್ತಿಸಲಿ ಅವರೆಲ್ಲರೂ        
1 : ಹರಸು ದೇವಾ, ನಮ್ಮನಾಶೀರ್ವದಿಸು | ನಿನ್ನ ಮುಖ ಕಾಂತಿಯಿಂದೆಮ್ಮನು ಬೆಳಗಿಸು ||
2 : ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ / ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ //
3 : ನಿನ್ನ ಕೀರ್ತಿಸಲಿ ದೇವಾ, ಜನರು / ಸಂಕೀರ್ತಿಸಲಿ ಅವರೆಲ್ಲರೂ //
4 : ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ / ಆದರ್ಶನೀಡುತಿ ಜಗದ ರಾಷ್ಟ್ರಗಳಿಗೆ / ಹರ್ಷಾನಂದವಾಗಲಿ ಜನಾಂಗಗಳಿಗೆ //
5 : ನಿನ್ನ ಕೀರ್ತಿಸಲಿ ದೇವಾ, ಜನರು / ಸಂಕೀರ್ತಿಸಲಿ ಅವರೆಲ್ಲರೂ //
6 : ಇತ್ತನೆಮ್ಮ ದೇವನು ಆಶೀರ್ವಾದವನು / ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು //
7 : ನಮ್ಮೆಲ್ಲರನು ದೇವನು ಹರಸಲಿ / ಎಲ್ಲೆಡೆ ಆತನ ಭಯಭಕ್ತಿಯಿರಲಿ //

ಶುಭಸಂದೇಶ - ಯೊವಾನ್ನ 12: 44-5೦    
44 : ಯೇಸುಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು: “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ.
45 : ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ.
46 : ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ.
47 : ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆ ಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪು ಕೊಡುವುದಕ್ಕಾಗಿ ಅಲ್ಲ.
48 : ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ.
49 : ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ, ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆ ಮಾಡಿದ್ದಾರೆ.
50 : ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.”

ಚಿಂತನೆ

ಶಿಷ್ಯರಿಗೆ ಇಂದಿನ ಪಾಠ Revision / ಪುನರಾವರ್ತನೆ ಅನಿಸುತ್ತದೆ. ಹಿಂದೆ ಆಗಲೇ ಫಿಲಿಪ್ಪನು ಯೇಸು ಸ್ವಾಮಿಯೊಡನೆ ನಮಗೆ ಪಿತನನ್ನು ತೋರಿಸಿ ಸಾಕು ಎಂದು ಕೇಳಿದನು. ಅದಕ್ಕೆ ಇಂದು ಎರಡನೇ ಸಾರಿ ಅದೇ ಉತ್ತರ ನೀಡುತ್ತಿದ್ದಾರೆ ಪ್ರಭು. ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನಲ್ಲೆ ವಿಶ್ವಾಸವಿಡುತ್ತಾನೆ. ಈ ವಾಕ್ಯ ಆತನ ದೀನತೆಯನ್ನು ತೋರಿಸುತ್ತದೆ. ದೇವಪುತ್ರ ತಾನಾಗಿದ್ದರೂತ್ರಯೇಕ  ದೇವರಲ್ಲಿ ಒಬ್ಬರಾಗಿದ್ದರೂ ತನ್ನ ಬಗ್ಗೆ. ತನ್ನ ದೈವತ್ವದ ಬಗ್ಗೆ ಎಂದೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಬಲಗಡೆಯಲ್ಲಿ ಎಡಗಡೆಯಲ್ಲಿ ಕೂರುತ್ತೇನೆ ಎಂದು ಕಿತ್ತಾಟ, ಶ್ರೇಷ್ಠತೆಯ ಬಗ್ಗೆ ಕಿತ್ತಾಟ, ಕನ್ನಂಚಿನ ಮುಂದೆ ಬಿಸಿಲು ಬಿದ್ದರೂ ಅದರ ಬಗ್ಗೆ ತಿಳಿಸಿ ತಿಳಿಸಿದರು ಅವರು ಅರಿಯದೇ ಹೋದರು. ಅದಕ್ಕೆ ಇಂದಿನ Revision Class. ನಾನು, ನನ್ನದು ಎಂಬುದೆಲ್ಲವನ್ನೂ ಬಿಟ್ಟು ಯೇಸು ಸ್ವಾಮಿ ಪಿತನ ಇರುವಿಕೆಯನ್ನು ಅವರ ದೈವತ್ವವನ್ನು ಅನುಮೋದಿಸುತ್ತಾರೆ.
ಆತ್ಮಾವಲೋಕನ. -   
1. ನನಗೆ Revision classನ ಅಗತ್ಯವಿದೆಯೇ?                                    
2.   ಯೇಸು ಸ್ವಾಮಿ ಒಂದು ವೇಳೆ ಈ ತರಗತಿ ನನಗೆ ತೆಗೆದುಕೊಂಡರೆ ಯಾವ ವಿಷಯದ ಬಗ್ಗೆ ಅವರು ಬೋಧಿಸುತ್ತಾರೆ
ಸಹೋ ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ                                                                                              



No comments:

Post a Comment