Sunday, 12 May 2019

17 ಮೇ 2017


ಬಿಳಿ/ಶುಕ್ರ/ಪಾಸ್ಖ ಕಾಲದನಾಲ್ಕನೇ ವಾರ      
1ನೇ  ವಾಚನ  -  ಪ್ರೇ.ಕಾ:  13:  26-33
26 : “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ.
27 : ಜೆರುಸಲೇಮಿನ ನಿವಾಸಿಗಳು ಮತ್ತು ಅವರ ಅಧಿಕಾರಿಗಳು ಯೇಸು ಲೋಕೋದ್ಧಾರಕನೆಂದು ಅರಿತುಕೊಳ್ಳಲಿಲ್ಲ. ಪ್ರತಿ ಸಬ್ಬತ್ದಿನ ಓದಲಾದ ಪ್ರವಾದಿಗಳ ವಾಕ್ಯಗಳನ್ನು ಅವರು ಗ್ರಹಿಸಿಕೊಳ್ಳಲಿಲ್ಲ. ಯೇಸುವಿಗೆ ಮರಣದಂಡನೆಯನ್ನು ವಿಧಿಸಿ ಪ್ರವಾದನೆಗಳು ನಿಜವಾಗಲು ಕಾರಣರಾದರು.
28 : ಮರಣದಂಡನೆ ವಿಧಿಸಲು ಯಾವ ಕಾರಣವಿಲ್ಲದಿದ್ದರೂ ಅವರನ್ನು ಕೊಲ್ಲಿಸುವಂತೆ ಪಿಲಾತನನ್ನು ಕೇಳಿಕೊಂಡರು.
29 : ಯೇಸುವನ್ನು ಕುರಿತು ಪವಿತ್ರಗ್ರಂಥ ಹೇಳುವುದೆಲ್ಲವೂ ನೆರವೇರಿದ ಮೇಲೆ ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಮಾಡಿದರು.
30 : ಆದರೆ ದೇವರು ಅವರನ್ನು ಮರಣದಿಂದ ಪುನರುತ್ಥಾನಗೊಳಿಸಿದರು.
31 : ಹೀಗೆ ಪುನರುತ್ಥಾನ ಹೊಂದಿದ ಯೇಸು, ಗಲಿಲೇಯದಿಂದ ತಮ್ಮೊಡನೆ ಜೆರುಸಲೇಮಿಗೆ ಬಂದಿದ್ದವರಿಗೆ ಕಾಣಿಸಿಕೊಂಡರು. ವ್ಯಕ್ತಿಗಳೇ ಈಗ ನಮ್ಮ ಜನರ ಮಧ್ಯೆ ಇರುವ ಯೇಸುವಿನ ಪರವಾದ ಸಾಕ್ಷಿಗಳು.
32 : ನಾವೀಗ ನಿಮಗೆ ಸಾರುವ ಶುಭಸಂದೇಶ ಇದು: ದೇವರು ಯೇಸುಸ್ವಾಮಿಯನ್ನು ಪುನರುತ್ಥಾನಗೊಳಿಸಿದ್ದಾರೆ. ಮೂಲಕ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನವನ್ನು ಅವರ ಸಂತತಿಯಾದ ನಮಗಿಂದು ಈಡೇರಿಸಿದ್ದಾರೆ.
33 : ಎರಡನೆಯ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ: ‘ನೀನೇ ನನ್ನ ಪುತ್ರ, ನಾನಿಂದು ನಿನ್ನ ಜನಕ.’
           
ಕೀರ್ತನೆ -  2:  6-11   
 ದಿನ ನಾನಿನ್ನ ಹಡೆದಿಹೆನುನೀನೆನಗೆ ಮಗನು     
6 : ಸಿಯೋನ್ ಶ್ರೀಶಿಖರದಲೇ ಅವನನು ಇರಿಸಿಹೆನು” / ಪರಿ ಕೆರಳಿ ಕಳವಳಗೊಳಿಸುವನು ಅವರನು //
7 ಕೇಳಿರೀ ದೈವಾಜ್ಞೆಯನು: ಆತನು ಎನಗಿಂತೆದನು:“ ದಿನ ನಾನಿನ್ನ ಹಡೆದಿಹೆನು: ನೀನೆನಗೆ ಮಗನು 
8 : ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು / ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತವನು //
9 : ನೀ ಬಡಿದು ಹಾಕುವೆ ಕಬ್ಬಿಣದ ಗದೆಯಿಂದವರನು / ನೀ ಒಡೆದು ಹಾಕುವೆ ಮಣ್ಣಿನ ಮಡಕೆಯಂತವರನು” //
10 : ಎಂತಲೇ ವಿವೇಕಿಗಳಾಗಿರಿ, ರಾಜರುಗಳೇ, ಬುದ್ಧಿವಾದಕೆ ಕಿವಿಗೊಡಿ, ದೇಶಾಧಿಪತಿಗಳೇ //
11 : “ಭಯಭಕುತಿಯಿಂದ ಪ್ರಭುವಿಗೆ ಸೇವೆ ಮಾಡಿರಿ / ನಡುನಡುಗುತ ಆತನ ಪಾದಪೂಜೆ ಮಾಡಿರಿ” //

ಶುಭಸಂದೇಶ -  ಯೊವಾನ್ನ  14:  1-6       
1 : ಯೇಸುಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ.
2 : ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ.
3 : ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು.
4 : ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ,” ಎಂದು ಹೇಳಿದರು.
5 : ಆಗ ತೋಮನು, “ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಿದನು.
6 : ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು.

ಚಿಂತನೆ                     

ಭವಿಷ್ಯದ ಕನಸು ಯಾರಿಗಿಲ್ಲ ಹೇಳಿ? ಎಲ್ಲರಿಗೂ ಭವಿಷ್ಯದ ಕನಸು.   ಹೀಗೆ ಯೇಸು ಸ್ವಾಮಿ ಶಿಷ್ಯರಿಗೂ ಇಂ ಭವಿಷ್ಯದ ಕನಸು ಇತ್ತು. ಕ್ರಿಸ್ತ ತನ್ನ ಸಾಮ್ರಾಜ್ಯದ ಬಗ್ಗೆ ಹೇಳಿದ್ದೆ ತಡ ಅವರು ಪ್ರಾಪಂಚಿಕ ಸಾಮ್ರಾಜ್ಯದ ಬಗ್ಗೆ ಕನಸುಕಂಡಿರಬೇಕು. ಆದರೆ ಈ ಕನಸು ತುಂಬಾ ದಿನ ಉಳಿಯುವುದಿಲ್ಲ ಅವರು ಕಂಡ ಕನಸು ಕರಗ ತೊಡಗಿತು. ಈತ ಹೇಳಿದ ಸಾಮ್ರಾಜ್ಯ ಇಲ್ಲಿಯದಲ್ಲ ಎಂದು ಅವರಿಗೆ ಮನವರಿಕೆ ಆಗತೊಡಗಿತ್ತು. ಇಂದು ಕ್ರಿಸ್ತ  ಮುಂದೆ ಆಗುವುದರ ಬಗ್ಗೆ ತಿಳಿಸುತ್ತಿದ್ದಾರೆ. ಈ ವಿಷಯ ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ರಿಸ್ತ ಮತ್ತೊಮ್ಮೆ ಸುದೀರ್ಘವಾಗಿ ಈ ಬಗ್ಗೆ ತಿಳಿಸುತ್ತಾರೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ ಎನ್ನುವುದೊಂದೇ ಇವರಿಗೆ ಜೀವ ಸಾರ್ಥಕತೆ. ಸದ್ಯ ನಮಗೆ ಪಿತನ ಆಸ್ಥಾನದಲ್ಲಿ ನಿವಾಸ ದೊರಕುವುದು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಈ ನಿವಾಸಕ್ಕೆ ಪ್ರವೇಶ ಪಡೆಯಬೇಕಾದರೆ ಕ್ರಿಸ್ತನ ಮಾರ್ಗ ಅನುಸರಿಸಬೇಕು ಆಗ ಮಾತ್ರ ಈ ಶ್ರೀನಿವಾಸದ ವಾಸ ನಮಗೆ ಪ್ರಾಪ್ತಿಯಾಗುತ್ತದೆ. ಆ ಮಾರ್ಗ ಬೇರೆ ಯಾವುದಲ್ಲ ಶಿಲುಬೆಯ ಮಾರ್ಗ. ಅದಕ್ಕೆ ಅವರು ಸಿದ್ಧರಿರಬೇಕು ಸಂತ ಯೋವಾನ್ನನೊಬ್ಬನನ್ನು ಬಿಟ್ಟರೆ ಎಲ್ಲರೂ ಕ್ರಿಸ್ತನ ಮಾರ್ಗ ಅನುಸರಿಸಿ ಯಾತನೆಯನ್ನು ಅನುಭವಿಸಿ ರಕ್ತ ಸುರಿಸಿ ಪ್ರಾಣ ಅರ್ಪಿಸುತ್ತಾರೆ ತಮ್ಮ ಶಿಷ್ಯರು. ಅದಕ್ಕೆ ಯೇಸು ಸ್ವಾಮಿ ಹೇಳಿದ್ದು ಮಾರ್ಗವು ಸತ್ಯವು ಜೀವವೂ ನಾನೇ ಎಂದು.  ನಾವು ಕೂಡ ಆ ಶ್ರೀನಿವಾಸ ಕೆ ಹೋಗುವಂತೆ  ಪ್ರಯತ್ನಿಸೋಣ.                
ಆತ್ಮಾವಲೋಕನ-                                       
1. ಯಾವ ರೀತಿಯ ಕನಸುಗಳು  ನನಗೆ    ಬೀಳುತ್ತವೆ?                                                 
2.ಯೇಸು ಮಾರ್ಗ, ಸತ್ಯ ಮತ್ತು ಜೀವವಾಗಿದ್ದಾರೆ ಅದನ್ನು ಅರಿತು ಜೀವಿಸಲು ನನ್ನಿಂದ ಸಾಧ್ಯವೇ?   

ಸಹೋ ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ                                                                                              

No comments:

Post a Comment