ಸಾಧಾರಣ ಕಾಲದ ಇಪ್ಪತ್ತೋಂದನೇ ಭಾನುವಾರ
25/ಹಸಿರು/ಭಾನು/ಸಂತ ಲೂಯಿಸ್ ಸ್ಮರಣೆ
1ನೇ ವಾಚನ 1ಯಶಾಯ 66: 18-21
ಕೀರ್ತನೆ 138:1-3, 6-8
2ವಾಚನ ಹಿಬ್ರಿ 12:5-7, 11-13
ಶುಭಸಂದೇಶ-ಲೂಕ 13: 22-3೦
1ನೇ ವಾಚನ 1ಯಶಾಯ 66: 18-21
25/ಹಸಿರು/ಭಾನು/ಸಂತ ಲೂಯಿಸ್ ಸ್ಮರಣೆ
1ನೇ ವಾಚನ 1ಯಶಾಯ 66: 18-21
ಕೀರ್ತನೆ 138:1-3, 6-8
2ವಾಚನ ಹಿಬ್ರಿ 12:5-7, 11-13
ಶುಭಸಂದೇಶ-ಲೂಕ 13: 22-3೦
1ನೇ ವಾಚನ 1ಯಶಾಯ 66: 18-21
“ಅವರ ಕೃತ್ಯಗಳೂ ಆಲೋಚನೆಗಳೂ ನನಗೆ ತಿಳಿದಿವೆ. ಸಮಸ್ತ ರಾಷ್ಟ್ರಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು. ಅವರು ಬಂದು ನನ್ನ ಮಹಿಮೆಯ ಪ್ರಕಾಶವನ್ನು ಕಾಣುವರು. ಅವರ ಮಧ್ಯೆ ಒಂದು ಸೂಚಕ ಕಾರ್ಯವನ್ನು ಮಾಡುವೆನು. ಅವರಲ್ಲಿ ಅಳಿದುಳಿದವರನ್ನು ನನ್ನ ಸುದ್ದಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ಕಾಣದೆಯೂ ಇರುವವರ ಬಳಿಗೆ ಕಳಿಸುವೆನು. ತಾರ್ಷೀಷ್, ಲಿಬಿಯಾ, ಧನುರ್ಧಾರಿಗಳಾದ ಲೂದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ದೂರದ ದ್ವೀಪನಿವಾಸಿಗಳ ಬಳಿಗೂ ಕಳಿಸುವೆನು. ಈ ಅನ್ಯಜನಾಂಗಗಳಿಗೆ ಅವರು ನನ್ನ ಮಹಿಮೆಯನ್ನು ಪ್ರಕಟಿಸುವರು. ನನಗೆ ಕಾಣಿಕೆಯಾಗಿ ಎಲ್ಲ ಜನಾಂಗಗಳಿಂದ ನಿಮ್ಮ ಸಹೋದರರನ್ನು ಕರೆದುತರುವರು. ಇಸ್ರಯೇಲರು ನನ್ನ ಆಲಯಕ್ಕೆ ಶುದ್ಧ ಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವಂತೆ, ಅವರನ್ನು ಕುದುರೆ, ತೇರು, ಪಲ್ಲಕ್ಕಿ, ಹೇಸರಗತ್ತೆ, ಒಂಟೆ, ಇವುಗಳ ಮೇಲೆ ಏರಿಸಿಕೊಂಡು ಜೆರುಸಲೇಮೆಂಬ ನನ್ನ ಪವಿತ್ರ ಪರ್ವತಕ್ಕೆ ಕರೆದುತರುವರು. ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸಿಕೊಳ್ಳುವೆನು.” ಇದು ಸರ್ವೇಶ್ವರಸ್ವಾಮಿಯ ನುಡಿ.
ಕೀರ್ತನೆ 138:1-3, 6-8
*ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು*
ಹೃದಯಪೂರ್ವಕ ವಂದನೆ ಪ್ರಭು ನಿನಗೆ
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ
ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ
ನಿನ್ನ ಪ್ರೀತಿಸತ್ಯತೆಗಳ ನಾಮ ನುಡಿಗಳ ಮಹತ್ವದ ಪ್ರಯುಕ್ತ
ಉನ್ನತವಾದರೂ ಗಮನಿಸುವನು ಪ್ರಭು ದೀನರನು
ದೂರದಿಂದಲೇ ಗುರುತಿಸುವನಾತನು ಗರ್ವಿಷ್ಟರನು
ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭು ಪ್ರಾಣವನು
ಶತ್ರುಕೋಪಕೆ ವಿರುದ್ಧವಾಗಿ ತೋರುವೆ ನೀ ಮುಷ್ಟಿಯನು
ಸಿದ್ಧಿಗೆ ತರುವೆ ನೀ ಪ್ರಭು ನನ್ನ ಕಾರ್ಯವನು
ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು
ಮರೆತುಬಿಡಬೇಡ ನಿನ್ನಯ ಕೈ ಕೃತಿಯನು
ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು
2ವಾಚನ ಹಿಬ್ರಿ 12:5-7, 11-13
ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? “ಸುಕುಮಾರಾ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು. ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; ತಮಗೆ ಮಗನೆಂದು ಬರಮಾಡಿ.” ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ? ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾವನ್ನೂ ಪ್ರತಿಫಲವಾಗಿ ಪಡೆಯುತ್ತಾರೆ. ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನು ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ. ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ. ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ.
ಶುಭಸಂದೇಶ-ಲೂಕ 13: 22-3೦
ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣಮಾಡುತ್ತಿದ್ದರು. ಆಗ ಒಬ್ಬನು, “ಸ್ವಾವಿೂ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೊ?” ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, “ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವಪ್ರಯತ್ನಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು. ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, ‘ಸ್ವಾವಿೂ, ನಮಗೆ ಬಾಗಿಲು ತೆರೆಯಿರಿ,’ ಎಂದು ನೀವು ಕೇಳುವಿರಿ. ಅದಕ್ಕೆ ಅವನು, ‘ನೀವು ಎಲ್ಲಿಯವರೋ ನಾನು ಅರಿಯೆ’ ಎನ್ನುವನು. ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದ್ದೇವೆ, ಪಾನಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶಮಾಡಿದ್ದೀರಿ,’ ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, ‘ನೀವು ಎಲ್ಲಿಯವರೋ ನಾನರಿಯೆ. ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ,’ ಎಂದು ಸ್ಪಷ್ಟವಾಗಿ ನುಡಿಯುವನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲುಕಡಿತವೇನು!! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. “ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು,” ಎಂದರು.
ಚಿಂತನೆ
ಇಂದಿನ ಶುಭಸಂದೇಶದಲ್ಲಿ ರಕ್ಷಣೆಯನ್ನು ಎಷ್ಟು ಮಂದಿ ಹೊಂದುತ್ತಾರೆ ಎಂಬ ಪ್ರಶ್ನೆಗೆ ಯೇಸು ಯಾರೆಲ್ಲ ರಕ್ಷಣೆ ಹೊಂದಬಹುದು ಎಂದು ತಿಳಿಸುತ್ತಾರೆ. ಕಿರಿದಾದ ದಾರಿ ಜೀವದೆಡೆಗೂ ಹಿರಿದಾದ ದಾರಿ ವಿನಾಶದತ್ತ ಕೊಂಡೊಯ್ಯುತ್ತದೆ ಎಂದು ಸರಳವಾಗಿ ವಿವರಿಸುತ್ತಾರೆ. ಹಿಂದೆ ನಮ್ಮ ಹಳ್ಳಿಗಳಲ್ಲಿ ಮನೆಗಳು ಚಿಕ್ಕದಾದ ಬಾಗಿಲುಗಳನ್ನು ಹೊಂದಿದ್ದವು. ಮನೆ ಪ್ರವೇಶಿಸಲು ತಲೆಬಾಗಿ ನಡೆಯಬೇಕಿತ್ತು. ಮನೆಯನ್ನು ಪ್ರವೇಶಿಸುವ ವ್ಯಕ್ತಿ ತನ್ನಲ್ಲಿರುವ ಅಹಂ, ಗರ್ವ, ದೊಡ್ಡತನ, ಸ್ವಾರ್ಥವನ್ನು ತೊರೆದು ವಿನಯದಿಂದ ನಡೆಯಬೇಕು ಎಂಬುವುದು ಅವರ ತಾತ್ಪರ.
ಜೀವೋದ್ಧಾರ ಹೊಂದುವುದು ಒಂದು ಸವಾಲು, ಯೇಸುವೇ ಜೀವೋದ್ಧಾರದ ಮಹಾದ್ವಾರವಾಗಿದ್ದಾರೆ. ಪ್ರೇಷಿತರ 4:12 " ಇವರಿಂದಲ್ಲದೆ ಬೇರೆಯಾರಿಂದಲೂ ನಮಗೆ ಜೀವೊದ್ಧಾರವಿಲ್ಲ." ಮತ್ತಾಯ 7:21 - "ಬರೀ ಮಾತಲ್ಲಿ ಸ್ವಾಮಿ ಸ್ವಾಮಿ ಎನ್ನುವವರು ಸ್ವರ್ಗ ಸಾಮ್ರಾಜ್ಯ ಪ್ರವೇಶಿಸಲು ಸಾಧ್ಯವಿಲ್ಲ, ಬದಲಾಗಿ ತಂದೆಯ ಚಿತ್ತದ ಪ್ರಕಾರ ಜೀವಿಸುವವರು ಅದನ್ನು ಪ್ರವೇಶಿಸುತ್ತಾರೆ."
ಯಾವನು ಅನ್ಯಾಯದಿಂದ ಅಹಂಕಾರದಿಂದ, ಸ್ವಾರ್ಥ, ಮೋಸ, ದುರಾಚಾರದಿಂದ, ಅನೀತಿಯಿಂದ, ಕುತಂತ್ರದಿಂದ ಮೊದಲಿನಾಗಲು ಪ್ರಯತ್ನಿಸುತ್ತಾನೋ ಆತ ದೇವರ ದೃಷ್ಟಿಯಲ್ಲಿ ಕಡೆಯವನಾಗುತ್ತಾನೆ. ಕಾರಣ ದೇವರ ಸಾಮ್ರಾಜ್ಯದಲ್ಲಿ ಅನ್ಯಾಯ, ಅನೀತಿ, ಸ್ವಾರ್ಥ, ದ್ವೇಷ, ಸೇಡಿಗೆ ಸ್ಥಳವಿಲ್ಲ. ಸನ್ಮಾರ್ಗ ಮತ್ತು ದುರ್ಮಾರ್ಗ ಎರದೂ ನಮ್ಮ ಮುಂದಿದೆ ಆಯ್ಕೆ ನಮಗೆ ಬಿಟ್ಟಿದ್ದು.

No comments:
Post a Comment