ಪ್ರತಿಷ್ಠಾ ಪ್ರಾರ್ಥನೆ I
(THE ROMAN CANON)
83. V/. ಪ್ರಭು ನಿಮ್ಮೊಡನೆ ಇರಲಿ
R/. ನಿಮ್ಮಾತ್ಮದೊಡನೆಯೂ ಇರಲಿ.
V/. ನಿಮ್ಮ ಹೃನ್ಮನಗಳನ್ನು ಮೇಲಕ್ಕೆತ್ತಿರಿ
R/. ಪ್ರಭುವಿನ ಕಡೆಗೆ ಎತ್ತಿದ್ದೇವೆ
V/. ನಮ್ಮ ಪ್ರಭು ದೇವರಿಗೆ ಕೃತಜ್ಞತೆ ಸಲ್ಲಿಸೋಣ
R/. ಅದು ಯೋಗ್ಯ ಮತ್ತು ನ್ಯಾಯವಾಗಿದೆ
There
follows the Preface indicated by the rubrics, which concludes:
ಪರಿಶುದ್ಧರು, ಪರಿಶುದ್ಧರು,
ಸೇನಾಧೀಶ್ವರ ಪ್ರಭು ದೇವರು ಪರಿಶುದ್ಧರು.
ಇಹಪರಗಳು ನಿಮ್ಮ ಮಹಿಮೆಯಿಂದ ತುಂಬಿವೆ.
ಮಹೋನ್ನತದಲ್ಲಿ ಹೊಸಾನ್ನ.
ಪ್ರಭುವಿನ ನಾಮದಲ್ಲಿ ಬರುವವರು ಸ್ತುತಿಗೆ ಪಾತ್ರರು.
ಮಹೋನ್ನತದಲ್ಲಿ ಹೊಸಾನ್ನ.
84. The Priest, with
hands extended, says:
ಅತ್ಯಂತ ದಯಾಮಯ ತಂದೆಯೇ,
ಈ ಕೊಡುಗೆಗಳನ್ನೂ ಕಾಣಿಕೆಗಳನ್ನೂ
ಅಂತೆಯೇ ಈ ಪವಿತ್ರ ಹಾಗೂ ನಿಷ್ಕಳಂಕ
He joins his
hands and says
ಬಲಿವಸ್ತುಗಳನ್ನೂ ಸ್ವೀಕರಿಸಿ
He makes the Sign of the Cross once
over the bread and chalice together, saying:
X ಆಶೀರ್ವದಿಸಬೇಕೆಂದು ನಮ್ಮ ಪ್ರಭು ನಿಮ್ಮ ಪುತ್ರ
ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ವಿನಂತಿಸುತ್ತೇವೆ.
With hands extended, he continues:
ಮೊತ್ತಮೊದಲು ಇವುಗಳನ್ನು
ನಿಮ್ಮ ಪವಿತ್ರ ಕಥೋಲಿಕ ಧರ್ಮಸಭೆಗಾಗಿ ಅರ್ಪಿಸುತ್ತೇವೆ.
ಅದನ್ನು ಕಾಪಾಡಿರಿ, ಅದಕ್ಕೆ ದಾರಿ ತೋರಿಸಿರಿ.
ವಿಶ್ವದಲ್ಲೆಲ್ಲಾ ಅದಕ್ಕೆ ಶಾಂತಿಯನ್ನೂ ಐಕ್ಯತೆಯನ್ನೂ ದಯಪಾಲಿಸಿರಿ.
CAvÉAiÉÄà ¤ªÀÄä ¸ÉêÀPÀgÁzÀ
ನಮ್ಮ ವಿಶ್ವಗುರು N. ಅವರಿಗಾಗಿಯೂ
ನಮ್ಮ ಧರ್ಮಾಧ್ಯಕ್ಷ* N. ಅವರಿಗಾಗಿಯೂ
ಸತ್ಯವನ್ನು ಎತ್ತಿಹಿಡಿಯುತ್ತಾ ಪ್ರೇಷಿತ ಹಾಗೂ
ಕಥೋಲಿಕ ವಿಶ್ವಾಸವನ್ನು ಹಸ್ತಾಂತರಿಸುವ ಸರ್ವರಿಗಾಗಿಯೂ
ಇವುಗಳನ್ನು ಅರ್ಪಿಸುತ್ತೇವೆ.------------------
* Mention may be made here of the Coadjutor
Bishop, or Auxiliary Bishops, as noted in the General Instruction of the
Roman Missal, no. 149.
85. Commemoration of the Living.
ಪ್ರಭುವೇ, ನಿಮ್ಮ ಸೇವಕ ಮತ್ತು ಸೇವಕಿಯರಾದ
N.ಮತ್ತು N.ರನ್ನು ಸ್ಮರಿಸಿಕೊಳ್ಳಿರಿ.
The Priest
joins his hands and prays briefly for those for whom he intends to pray.
Then, with hands extended, he continues:
ಅಂತೆಯೇ ಇಲ್ಲಿ ನೆರೆದಿರುವ ಎಲ್ಲರನ್ನೂ ಸ್ಮರಿಸಿಕೊಳ್ಳಿರಿ.
ಇವರ ವಿಶ್ವಾಸ ಹಾಗೂ ಭಕ್ತಿ ನಿಮಗೆ ತಿಳಿದಿದೆ.
ಇವರಿಗಾಗಿ ಈ ಸ್ತುತಿಬಲಿಯನ್ನು ಅರ್ಪಿಸುತ್ತೇವೆ.
ಇವರು ತಮಗಾಗಿಯೂ ತಮ್ಮವರಿಗಾಗಿಯೂ
ಅವರ ಆತ್ಮಗಳ ರಕ್ಷಣೆ, ಭದ್ರತೆ ಹಾಗೂ ಕ್ಷೇಮಕ್ಕಾಗಿಯೂ
ಅನಂತ, ಜೀವಂತ, ಸತ್ಯವಂತ ದೇವರಾದ ನಿಮಗೆ
ತಮ್ಮ ಹರಕೆಗಳನ್ನು ಸಲ್ಲಿಸುತ್ತಾ
ಈ ಸ್ತುತಿಬಲಿಯನ್ನು ಅರ್ಪಿಸುತ್ತಿದ್ದಾರೆ.
86. within the Action.
ಅಖಿಲ ಧರ್ಮಸಭೆಯೊಂದಿಗೆ ಸೇರಿ
ನಮ್ಮ ಪ್ರಭು ಯೇಸುಕ್ರಿಸ್ತರು ನಮಗೋಸ್ಕರ
ಪರಾಧೀನ ಮಾಡಲ್ಪಟ್ಟ ಈ ದಿನವನ್ನು ಆಚರಿಸುತ್ತಾ
ಸಂತರನ್ನು, ಎಲ್ಲರಿಗಿಂತ ಮಿಗಿಲಾಗಿ,
ನಮ್ಮ ದೇವರೂ ಪ್ರಭುವೂ ಆದ ಯೇಸುಕ್ರಿಸ್ತರ ತಾಯಿಯೂ
ಮಹಿಮಾಭರಿತ ಸದಾ ಕನ್ನಿಕೆಯೂ ಆದ ಮರಿಯಮ್ಮನವರನ್ನು ಅವರು ಸನ್ಮಾನಿಸುತ್ತಾರೆ.
ಅಂತೆಯೇ, ಆಕೆಯ ಪತಿ ಸಂತ ಜೋಸೆಫರನ್ನೂ
ನಿಮ್ಮ ಪುನೀತ ಪ್ರೇಷಿತ ಹಾಗೂ ರಕ್ತಸಾಕ್ಷಿಗಳನ್ನೂ,
ಪೇತ್ರ, ಪೌಲ ಮತ್ತು ಅಂದ್ರೇಯ
(ಯಕೋಬ, ಯೊವಾನ್ನ, ತೋಮ, ಯಕೋಬ, ಫಿಲಿಪ್ಪ,
ಬಾರ್ತೊಲೊಮೇಯ, ಮತ್ತಾಯ, ಸಿಮೋನ, ತದ್ದಾಯ,
ಲೀನಸ್, ಕ್ಲೀತಸ್, ಕ್ಲೆಮೆಂಟ್, ಸಿಕ್ಸ್‌ತಸ್, ಕೊರ್ನೇಲಿಯಸ್,
ಸಿಪ್ರಿಯನ್, ಲಾರೆನ್ಸ್, ಕ್ರಿಸೋಗನಸ್, ಯೊವಾನ್ನ ಮತ್ತು ಪೌಲ,
ಕೊಸ್ಮಸ್ ಮತ್ತು ದಮಿಯಾನ್),
ಇವರನ್ನೂ, ಸಕಲ ಸಂತರನ್ನೂ ಸ್ಮರಿಸಿ ಸನ್ಮಾನಿಸುತ್ತಾರೆ.
ಇವರ ಪಣ್ಯಫಲಗಳಿಂದಲೂ ಪ್ರಾರ್ಥನೆಗಳಿಂದಲೂ
ಎಲ್ಲಾ ಸನ್ನಿವೇಶಗಳಲ್ಲಿ ನಿಮ್ಮ ಸಹಾಯ ಹಾಗೂ ಸಂರಕ್ಷಣೆಯನ್ನು
ನಮಗೆ ಅನುಗ್ರಹಿಸಿರಿ.
(ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್)
____________________
PROPER FORMS OF THE COMMUNICANTES
On the Nativity of the Lord and
throughout the Octave
ಅಖಿಲ ಧರ್ಮಸಭೆಯೊಂದಿಗೆ ಸೇರಿ
ಸದಾ ಕನ್ನಿಕೆಯಾದ ನಿಷ್ಕಳಂಕ ಮರಿಯಮ್ಮನವರು
ಲೋಕ ರಕ್ಷಕರಿಗೆ ಜನ್ಮವಿತ್ತ ಈ ಪರಮ ಪಾವನ ರಾತ್ರಿಯಲ್ಲಿ (ದಿನದಲ್ಲಿ)
ಎಲ್ಲರಿಗಿಂತ ಮಿಗಿಲಾಗಿ, ನಮ್ಮ ದೇವರೂ ಪ್ರಭುವೂ ಆದ
ಯೇಸುಕ್ರಿಸ್ತರ ತಾಯಿಯೂ ಮಹಿಮಾಭರಿತ ಸದಾ ಕನ್ನಿಕೆಯೂ ಆದ
ಮರಿಯಮ್ಮನವರನ್ನು ಅವರು ಸನ್ಮಾನಿಸುತ್ತಾರೆ. †
On the Epiphany of the Lord
ಅಖಿಲ ಧರ್ಮಸಭೆಯೊಂದಿಗೆ ಸೇರಿ
ನಿಮ್ಮ ಮಹಿಮೆಯಲ್ಲಿ ನಿಮ್ಮೊಂದಿಗೆ ಅನಂತರಾಗಿರುವ
ನಿಮ್ಮ ಏಕಮಾತ್ರ ಪುತ್ರರು ನಮ್ಮಂತೆ ಮಾನವರಾಗಿ ಪ್ರತ್ಯಕ್ಷರಾದ
ಈ ಪರಮ ಪಾವನ ದಿನವನ್ನು ಆಚರಿಸುತ್ತಾ,
ಎಲ್ಲರಿಗಿಂತ ಮಿಗಿಲಾಗಿ, ನಮ್ಮ ದೇವರೂ ಪ್ರಭುವೂ ಆದ
ಯೇಸುಕ್ರಿಸ್ತರ ತಾಯಿಯೂ ಮಹಿಮಾಭರಿತ ಸದಾ ಕನ್ನಿಕೆಯೂ ಆದ
ಮರಿಯಮ್ಮನವರನ್ನು ಅವರು ಸನ್ಮಾನಿಸುತ್ತಾರೆ. †
From the Mass of the Paschal
Vigil until the Second Sunday of Easter
ಅಖಿಲ ಧರ್ಮಸಭೆಯೊಂದಿಗೆ ಸೇರಿ
ನಮ್ಮ ಪ್ರಭು ಯೇಸುಕ್ರಿಸ್ತರು ಪುನರ್ಜೀವಂತರಾಗಿ ಎದ್ದ
ಈ ಪರಮ ಪಾವನ ರಾತ್ರಿಯಲ್ಲಿ (ದಿನದಲ್ಲಿ),
ಎಲ್ಲರಿಗಿಂತ ಮಿಗಿಲಾಗಿ, ನಮ್ಮ ದೇವರೂ ಪ್ರಭುವೂ ಆದ
ಯೇಸುಕ್ರಿಸ್ತರ ತಾಯಿಯೂ ಮಹಿಮಾಭರಿತ ಸದಾ ಕನ್ನಿಕೆಯೂ ಆದ
ಮರಿಯಮ್ಮನವರನ್ನು ಅವರು ಸನ್ಮಾನಿಸುತ್ತಾರೆ. †
On the Ascension of the Lord
ಅಖಿಲ ಧರ್ಮಸಭೆಯೊಂದಿಗೆ ಸೇರಿ
ನಿಮ್ಮ ಏಕಮಾತ್ರ ಪುತ್ರ, ನಮ್ಮ ಪ್ರಭು,
ನಮ್ಮ ದುರ್ಬಲ ಮನುಷ್ಯ ಸ್ವಭಾವದೊಂದಿಗೆ ತಾವೇ ಐಕ್ಯರಾಗಿ,
ನಿಮ್ಮ ಮಹಿಮೆಯ ಬಲಗಡೆಯಲ್ಲಿ ಆಸೀನರಾಗಿ,
ಅದನ್ನು ಉನ್ನತಿಗೇರಿಸಿದ ಈ ದಿನದಲ್ಲಿ,
ಎಲ್ಲರಿಗಿಂತ ಮಿಗಿಲಾಗಿ, ನಮ್ಮ ದೇವರೂ ಪ್ರಭುವೂ ಆದ
ಯೇಸುಕ್ರಿಸ್ತರ ತಾಯಿಯೂ ಮಹಿಮಾಭರಿತ ಸದಾ ಕನ್ನಿಕೆಯೂ ಆದ
ಮರಿಯಮ್ಮನವರನ್ನು ಅವರು ಸನ್ಮಾನಿಸುತ್ತಾರೆ. †
On Pentecost Sunday
ಅಖಿಲ ಧರ್ಮಸಭೆಯೊಂದಿಗೆ ಸೇರಿ
ಪವಿತ್ರಾತ್ಮರು ಅಗ್ನಿನಾಲಗೆಗಳ ರೂಪದಲ್ಲಿ
ಪ್ರೇಷಿತರಿಗೆ ಪ್ರತ್ಯಕ್ಷರಾದ ಪರಮ ಪಾವನ ಪಂಚದಶಮಿ ದಿನದಂದು,
ಎಲ್ಲರಿಗಿಂತ ಮಿಗಿಲಾಗಿ, ನಮ್ಮ ದೇವರೂ ಪ್ರಭುವೂ ಆದ
ಯೇಸುಕ್ರಿಸ್ತರ ತಾಯಿಯೂ ಮಹಿಮಾಭರಿತ ಸದಾ ಕನ್ನಿಕೆಯೂ ಆದ
ಮರಿಯಮ್ಮನವರನ್ನು ಅವರು ಸನ್ಮಾನಿಸುತ್ತಾರೆ. †
____________________
87. With hands extended,
the Priest continues:
ಪ್ರಭುವೇ, ನಿಮ್ಮ ಸೇವಕರೂ,
ನಿಮ್ಮ ಇಡೀ ಕುಟುಂಬವೂ ಅರ್ಪಿಸುವ
ಈ ಕಾಣಿಕೆಯನ್ನು ಪ್ರಸನ್ನರಾಗಿ ಸ್ವೀಕರಿಸಿರಿ.
ನಮ್ಮ ಬಾಳನ್ನು ನಿಮ್ಮ ಶಾಂತಿಯಲ್ಲಿ ನೆಲೆಗೊಳಿಸಿರಿ.
ಅನಂತ ದಂಡನೆಯಿಂದ ನಮ್ಮನ್ನು ಪಾರುಮಾಡಿ
ನೀವೇ ಆಯ್ದುಕೊಂಡ ಮಂದೆಯನ್ನು
ನಾವು ಸೇರುವಂತೆ ಆಜ್ಞಾಪಿಸಿರಿ.
He joins his
hands.
(ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್).
________________
From the Mass of the Paschal
Vigil until the Second Sunday of Easter
ಪ್ರಭೂ, ನಿಮ್ಮ ಸೇವಕರೂ, ನಿಮ್ಮ ಇಡೀ ಕುಟುಂಬವೂ ಅರ್ಪಿಸುವ
ಈ ಕಾಣಿಕೆಯನ್ನು ಪ್ರಸನ್ನರಾಗಿ ಸ್ವೀಕರಿಸಿರಿ.
ನೀರು ಮತ್ತು ಪವಿತ್ರಾತ್ಮರಿಂದ ನವಜೀವ ಪಡೆಯಲು
ನಿಮ್ಮ ಮೆಚ್ಚುಗೆಗೆ ಪಾತ್ರರಾದ ಇವರ ಪರವಾಗಿ ಇದನ್ನು ಅರ್ಪಿಸುತ್ತೇವೆ.
ನಮ್ಮ ಬಾಳನ್ನು ನಿಮ್ಮ ಶಾಂತಿಯಲ್ಲಿ ನೆಲೆಗೊಳಿಸಿರಿ.
ಅನಂತ ದಂಡನೆಯಿಂದ ನಮ್ಮನ್ನು ಪಾರುಮಾಡಿ
ನೀವೇ ಆಯ್ದುಕೊಂಡ ಮಂದೆಯನ್ನು
ನಾವು ಸೇರುವಂತೆ ಆಜ್ಞಾಪಿಸಿರಿ.
He joins his hands.
(ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್).
___________________
88. Holding his hands
extended over the offerings, he says:
ದೇವರೇ, ಈ ಕಾಣಿಕೆಯನ್ನು ಆಶೀರ್ವದಿಸಿ ಅನುಮೋದಿಸಿರಿ.
ಇದು ಯಥಾರ್ಥವೂ ಅಂಗೀಕೃತವೂ ಆಧ್ಯಾತ್ಮಿಕವೂ ಆಗುವಂತೆ ಮಾಡಿರಿ.
ನಮಗಿದು ನಿಮ್ಮ ಅತಿ ಪ್ರಿಯ ಪುತ್ರ
ನಮ್ಮ ಪ್ರಭು ಯೇಸುಕ್ರಿಸ್ತರ ಶರೀರ ಮತ್ತು ರಕ್ತವಾಗುವಂತೆ ಕರುಣಿಸಿರಿ.
He joins his hands.
89. In the formulas that follow, the words of the Lord should be
pronounced clearly and distinctly, as the nature of these words requires.
ಅವರು ಯಾತನೆಪಡುವುದಕ್ಕೆ ಹಿಂದಿನ ದಿನ,
He takes the
bread
and, holding it slightly raised above
the altar, continues:
ತಮ್ಮ ಪವಿತ್ರ ಹಾಗೂ ಪಜ್ಯ ಕರಗಳಲ್ಲಿ ರೊಟ್ಟಿಯನ್ನು ತೆಗೆದುಕೊಂಡು,
He raises his
eyes.
ಸ್ವರ್ಗದೆಡೆಗೆ ಕಣ್ಣೆತ್ತಿ, ತಮ್ಮ ಸರ್ವಶಕ್ತ ದೇವತಂದೆಯಾದ
ನಿಮ್ಮ ಕಡೆ ನೋಡಿ, ಕೃತಜ್ಞತೆ ಸಲ್ಲಿಸಿ,
ಆ ರೊಟ್ಟಿಯನ್ನು ಆಶೀರ್ವದಿಸಿ, ಮುರಿದು,
ತಮ್ಮ ಶಿಷ್ಯರಿಗೆ ಕೊಡುತ್ತಾ ಹೀಗೆಂದರು:
He bows
slightly.
ತೆಗೆದುಕೊಳ್ಳಿ,
ಇದನ್ನು ನೀವೆಲ್ಲರೂ ಭುಜಿಸಿರಿ;
ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ.
He shows the consecrated host to the people, places it again
on the paten, and genuflects in adoration.
90. After this, the Priest
continues:
ಅಂತೆಯೇ ಭೋಜನದ ಅಂತ್ಯದಲ್ಲಿ
He takes the chalice
and,
holding it slightly raised above the altar, continues:
ಅಮೂಲ್ಯ ಪಾನಪಾತ್ರೆಯನ್ನು ತಮ್ಮ ಪವಿತ್ರ ಹಾಗೂ
ಪೂಜ್ಯ ಕರಗಳಲ್ಲಿ ತೆಗೆದುಕೊಂಡು,
ಅವರು ಪನಃ ನಿಮಗೆ ಕೃತಜ್ಞತೆಯನ್ನು ಸಲ್ಲಿಸಿ,
ಅದನ್ನು ಆಶೀರ್ವದಿಸಿ, ತಮ್ಮ ಶಿಷ್ಯರಿಗೆ ಕೊಡುತ್ತಾ ಹೀಗೆಂದರು:
He bows slightly.
ತೆಗೆದುಕೊಳ್ಳಿ,
ಇದರಿಂದ ನೀವೆಲ್ಲರೂ ಪಾನಮಾಡಿರಿ.
ಇದು ಹೊಸ ಮತ್ತು ಅನಂತ ಒಡಂಬಡಿಕೆಯ ನನ್ನ ರಕ್ತದ ಪಾತ್ರೆ.
ಈ ರಕ್ತವನ್ನು ನಿಮ್ಮ ಹಾಗೂ ಅನೇಕರ
ಪಾಪ ಪರಿಹಾರಕ್ಕಾಗಿ ಸುರಿಸಲಾಗುವುದು.
ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ.
He shows the chalice to the people, places it on the
corporal, and genuflects in adoration.
91. Then He says:
ವಿಶ್ವಾಸದ ರಹಸ್ಯವಿದು
And the people
continue, acclaiming:
ಪ್ರಭುವೇ, ನೀವು ಮರಳಿ ಬರುವ ತನಕ
ನಿಮ್ಮ ಮರಣವನ್ನು ಸಾರುತ್ತೇವೆ;
ನಿಮ್ಮ ಪುನರುತ್ಥಾನವನ್ನು ನಿವೇದಿಸುತ್ತೇವೆ.
ಅಥವಾ
ಪ್ರಭುವೇ, ನಾವು ಈ ರೊಟ್ಟಿಯನ್ನು ಭುಜಿಸಿ,
ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ
ನೀವು ಮರಳಿ ಬರುವ ತನಕ
ನಿಮ್ಮ ಮರಣವನ್ನು ಸಾರುತ್ತೇವೆ.
ಅಥವಾ
ನಿಮ್ಮ ಶಿಲುಬೆ ಹಾಗೂ ಪುನರುತ್ಥಾನದ ಮೂಲಕ
ನಮ್ಮನ್ನು ವಿಮೋಚಿಸಿದ ಲೋಕರಕ್ಷಕರೇ,
ನಮ್ಮನ್ನು ರಕ್ಷಿಸಿರಿ.
92. Then the Priest,
with hands extended, says:
ಆದ್ದರಿಂದ ಪ್ರಭುವೇ, ನಿಮ್ಮ ಸೇವಕರೂ,
ನಿಮ್ಮ ಪವಿತ್ರ ಪ್ರಜೆಯೂ ಆದ ನಾವು
ನಿಮ್ಮ ಪುತ್ರ, ನಮ್ಮ ಪ್ರಭು ಕ್ರಿಸ್ತರು
ಪೂಜ್ಯ ಯಾತನೆಯನ್ನು ಅನುಭವಿಸಿ,
ಅಧೋಲೋಕದಿಂದ ಪುನರುತ್ಥಾನಗೊಂಡು
ಮಹಿಮಾಭರಿತರಾಗಿ ಸ್ವರ್ಗಾರೋಹಣವಾದುದ್ದನ್ನು ಸ್ಮರಿಸುತ್ತೇವೆ.
ನೀವಿತ್ತ ಕೊಡುಗೆ ಮತ್ತು ವರಗಳಿಂದ ಆರಿಸಿದ,
ಈ ಪರಿಶುದ್ಧ, ನಿಷ್ಕಳಂಕ ಹಾಗೂ
ಅನಂತ ಜೀವವೀವ ಪವಿತ್ರ ರೊಟ್ಟಿಯನ್ನೂ,
ನಿತ್ಯ ರಕ್ಷಣೆಯನ್ನೀಯುವ ಪಾತ್ರೆಯನ್ನೂ
ನಿಮ್ಮ ಮಹೋನ್ನತ ಸನ್ನಿಧಿಗೆ ಅರ್ಪಿಸುತ್ತೇವೆ.
93. ನಿಮ್ಮ ನೀತಿವಂತ ಸೇವಕ ಆಬೇಲನ ಕಾಣಿಕೆಗಳನ್ನೂ,
ನಮ್ಮ ಪಿತಾಮಹ ಅಬ್ರಹಾಮನ ಬಲಿಯರ್ಪಣೆಯನ್ನೂ,
ನಿಮ್ಮ ಮಹಾಯಾಜಕ ಮೆಲ್ಕಿಸೆದೆಕ್ ಅರ್ಪಿಸಿದ ಬಲಿಯನ್ನು
ನೀವು ಸ್ವೀಕರಿಸಿದಂತೆ ನಮ್ಮ ಪವಿತ್ರ ಹಾಗೂ ನಿಷ್ಕಳಂಕ ಬಲಿಯನ್ನೂ
ಪ್ರಶಾಂತಚಿತ್ತರಾಗಿ ದಯೆಯಿಂದ ಈಕ್ಷಿಸಿ ಅಂಗೀಕರಿಸಿರಿ.
94. Bowing, with hands
joined, he continues:
ಸರ್ವಶಕ್ತ ದೇವರೇ,
ನಿಮ್ಮ ದಿವ್ಯ ಸಾನಿಧ್ಯದ ಮಹೋನ್ನತ ಪೀಠಕ್ಕೆ
ಈ ಬಲಿಯನ್ನು ತನ್ನ ಕರಗಳಲ್ಲಿ ಕೊಂಡೊಯ್ಯುವಂತೆ
ನಿಮ್ಮ ಪವಿತ್ರ ದೂತನಿಗೆ ಆದೇಶಿಸಬೇಕೆಂದು
ನಿಮ್ಮನ್ನು ವಿನಯದಿಂದ ಬಿನ್ನಹಿಸುತ್ತೇವೆ.
ನಿಮ್ಮ ಪುತ್ರನ ಅತಿ ಪವಿತ್ರ ಶರೀರ ಮತ್ತು ರಕ್ತವನ್ನು
ಈ ಬಲಿಪೀಠದಿಂದ ಸ್ವೀಕರಿಸುವ ನಾವೆಲ್ಲರೂ
He stands upright and signs himself with the Sign of the Cross,
saying:
ಸ್ವರ್ಗೀಯ ಆಶೀರ್ವಾದದಿಂದಲೂ
ಕೃಪಾವರದಿಂದಲೂ ತುಂಬಿರುವಂತೆ ಮಾಡಿರಿ.
He joins his hands.
(ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್)
95. Commemoration of the Dead
With hands extended, the Priest says:
ಪ್ರಭುವೇ, ವಿಶ್ವಾಸದ ಮುದ್ರೆಯೊಂದಿಗೆ
ನಮಗಿಂತ ಮುಂಚಿತವಾಗಿ ತೆರಳಿ ಶಾಂತಿಯಲ್ಲಿ ವಿಶ್ರಮಿಸುತ್ತಿರುವ
ನಿಮ್ಮ ಸೇವಕ N./ಸೇವಕಿ N/ ರನ್ನೂ ಸ್ಮರಿಸಿಕೊಳ್ಳಿರಿ.
He joins his hands and prays briefly for
those who have died and for whom he intends to pray.
Then, with hands
extended he continues:
ಇವರಿಗೂ ಕ್ರಿಸ್ತರಲ್ಲಿ ವಿಶ್ರಮಿಸುತ್ತಿರುವ ಎಲ್ಲರಿಗೂ
ನಿಮ್ಮ ಜ್ಯೋತಿ ಹಾಗೂ ಶಾಂತಿಯ ನಿವಾಸವನ್ನು ಕರುಣಿಸಿರಿ.
He joins his hands.
(ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್)
96. He strikes his
breast with his right hand, saying:
ಪ್ರಭುವೇ, ನಿಮ್ಮ ಅಪಾರ ಕರುಣೆಯಲ್ಲಿ ಭರವಸೆಯಿಟ್ಟಿರುವ ಪಾಪಿಗಳೂ ನಿಮ್ಮ ಸೇವಕರೂ ಆಗಿರುವ
ನಮಗಾಗಿಯೂ ಬೇಡಿಕೊಳ್ಳುತ್ತೇವೆ.
And, with hands extended he continues:
ನಿಮ್ಮ ಪುನೀತ ಪ್ರೇಷಿತರೂ ರಕ್ತಸಾಕ್ಷಿಗಳೂ ಆದ
ಸ್ನಾನಿಕ ಯೊವಾನ್ನ, ಸ್ತೇಫನ, ಮತ್ತೀಯ, ಬಾರ್ನಬ
(ಇಗ್ನಾಸಿಯಸ್, ಅಲೆಕ್ಸಾಂಡರ್, ಮಾರ್ಸೆಲೀನಸ್,
ಪೀಟರ್, ಫೆಲೀಸಿತಸ್, ಪೆರ್ಪೇತುವ, ಆಗಥ,
ಲೂಸಿ, ಆಗ್ನೆಸ್, ಸಿಸೀಲಿಯ, ಅನಸ್ತಾಸಿಯ)
ಇವರ ಹಾಗೂ ಸಕಲ ಸಂತರ ಅನ್ಯೋನ್ಯತೆಯಲ್ಲಿ
ನಮಗೂ ಪಾಲನ್ನು ನೀಡಿ ಅವರ ಸಭೆಯಲ್ಲಿ
ನಮ್ಮನ್ನು ಸೇರಿಸಿಕೊಳ್ಳಬೇಕೆಂದು ವಿನಂತಿಸುತ್ತೇವೆ.
ನಮ್ಮ ಅಯೋಗ್ಯತೆಯನ್ನು ಪರಿಗಣಿಸದೆ
ನಮ್ಮನ್ನು ಕ್ಷಮಿಸಬೇಕೆಂದು
He joins his hands.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
97. And he continues:
ಇವರ ಮುಖಾಂತರವೇ
ಇವೆಲ್ಲವನ್ನೂ ಸದಾ ಸೃಷ್ಟಿಸಿ ಸಜೀವಗೊಳಿಸುತ್ತೀರಿ,
ಆಶೀರ್ವದಿಸಿ ಪಾವನಗೊಳಿಸುತ್ತೀರಿ,
ಹಿತಗೊಳಿಸಿ ಅನುಗ್ರಹಿಸುತ್ತೀರಿ.
98. He takes the chalice and the paten with the host and, elevating
both, he says:
ಇವರ ಮುಖಾಂತರವೂ
ಇವರೊಂದಿಗೂ ಇವರಲ್ಲಿಯೂ
ಸರ್ವಶಕ್ತ ತಂದೆಯಾದ ದೇವರೇ,
ಪವಿತ್ರಾತ್ಮರ ಐಕ್ಯದಲ್ಲಿ
ಸರ್ವ ಗೌರವವೂ ಮಹಿಮೆಯೂ
ಯುಗಯುಗಾಂತರಕ್ಕೂ ನಿಮಗೆ ಸಲ್ಲಲಿ.
The people acclaim:
ಆಮೆನ್.
Then follows the Communion Rite,
No comments:
Post a Comment