Thursday, 15 August 2019

ಸಾಧಾರಣ ಕಾಲದ ಹದಿನಾಲ್ಕನೆಯ ಭಾನುವಾರ


ಪ್ರವೇಶ ಶ್ಲೋಕ                                       ಕೀರ್ತ 47 : 10-11
ನಿನ್ನಚಲ ಪ್ರೀತಿಯನು ದೇವಾ ಸ್ಮರಿಸುವೆವು, ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು, ನಿನ್ನ ನಾಮದಂತೆ ನಿನ್ನ ಹೊಗಳಿಕೆ ಮುಟ್ಟುತ್ತದೆ ಜಗದ ಎಲ್ಲೆಎಲ್ಲೆಗೆ. ದೇವಾ ನೀತಿಭರಿತ ನಿನ್ನ ಆಳ್ವಿಕೆ.

ಸಭಾ ಪ್ರಾರ್ಥನೆ
ದೇವರೇ, ಪಾಪದಿಂದಾಗಿ ಕುಸಿದ ಬಿದ್ದ ವಿಶ್ವವನ್ನು
ನಿಮ್ಮ ಕುಮಾರರ ದೀನತೆಯ ಮೂಲಕ ಉನ್ನತಿಗೆತ್ತಿದಿರಿ.
ಪಾಪದ ದಾಸ್ಯದಿಂದ ನೀವು ಬಿಡುಗಡೆಮಾಡಿದ 
ನಿಮ್ಮ ವಿಶ್ವಾಸಿಗಳು ಪವಿತ್ರ ಸಂತಸದೊಡನೆ
ನಿತ್ಯಾನಂದವನ್ನು ಸೇರುವಂತೆ ದಯೆ ತೋರಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮ್ಮ ನಾಮಕ್ಕೆ ನಾವರ್ಪಿಸಿದ ಬಲಿಯು
ನಮ್ಮನ್ನು ಶುದ್ಧಗೊಳಿಸಲಿ.
ದಿನೇ ದಿನೇ ನಮ್ಮ ಬಾಳನ್ನು
ಸ್ವರ್ಗೀಯ ಜೀವನವನ್ನು ಸಮೀಪಿಸುವಂತೆ ಮಾಡಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                  ಕೀರ್ತ 33 : 9
ಸವಿದು ನೋಡು ಪ್ರಭುವಿನ ಮಾಧುರ್ಯವನು. ಆತನನು ಆಶ್ರಯಿಸಿಕೊಂಡವನು ಧನ್ಯನು.

ಅಥವಾ                                                ಮತ್ತಾ 11 : 28

ದುಡಿದು ಭಾರಹೊತ್ತು ಬಳಲಿ ಬೆಂಡಾಗಿರುವ ಸರ್ವ ಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ, ಎನ್ನುತ್ತಾರೆ ಪ್ರಭು.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಅಮೋಘ ಆಶೀರ್ವಾದಗಳಿಂದ
ತುಂಬಿದ ನಾವು ನಿಮ್ಮ ರಕ್ಷಣಾವರಗಳಿಗೆ ಬದ್ಧರಾಗಿದ್ದು
ನಿಮಗೆ ಸ್ತುತಿ ಸಲ್ಲಿಸುವುದರಲ್ಲಿ
ಎಂದೆಂದೂ ಹಿಂದೆ ಬೀಳದಿರಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment