Thursday, 15 August 2019

ಸಾಧಾರಣ ಕಾಲದ ಹದಿನೈದನೆಯ ಭಾನುವಾರ


ಪ್ರವೇಶ ಶ್ಲೋಕ                                            ಕೀರ್ತ 16 : 15
ಸತ್ಯಸಂಧನಾದ ನಾನು ಸೇರುವೆ ನಿನ್ನ ಸಾನಿಧ್ಯವನು, ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು.

ಸಭಾ ಪ್ರಾರ್ಥನೆ
ದಾರಿ ತಪ್ಪಿ ಅಲೆಯುವವರಿಗೆ
ನಿಮ್ಮ ಸತ್ಯದ ಬೆಳಕನ್ನು ತೋರಿಸುವ ದೇವರೇ,
ಕ್ರಿಸ್ತ ವಿಶ್ವಾಸಿಗಳೆನಿಸಿಕೊಳ್ಳುವವರೆಲ್ಲರೂ
ವಿಶ್ವಾಸಕ್ಕೆ ವಿರುದ್ಧವಾದುದೆಲ್ಲವನ್ನೂ ತ್ಯಜಿಸಿ
ಅದಕ್ಕನುಗುಣವಾದುದನ್ನೇ ಪರಿಪಾಲಿಸುವಂತೆ ಕರುಣಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ಪ್ರಾರ್ಥನಾನಿರತವಾದ
ನಿಮ್ಮ ಧರ್ಮಸಭೆಯ ಕಾಣಿಕೆಗಳನ್ನು ಈಕ್ಷಿಸಿರಿ.
ನಿಮ್ಮಿಂದ ಸ್ವೀಕೃತವಾದ ಅವು
ವಿಶ್ವಾಸಿಗಳ ಪಾವನತೆಯನ್ನು ಹೆಚ್ಚಿಸಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                  ಕೀರ್ತ 83 : 4-5
ಸ್ವಾಮಿ ದೇವಾ, ಎನ್ನರಸ, ಸ್ವರ್ಗಸೇನಾಧೀಶ್ವರ, ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯ ಹತ್ತಿರ, ಪಾರಿವಾಳಕೂ ಅಲ್ಲೇ ಇದೆ ಮರಿಯಿಡಲು ಆಗರ. ನಿನ್ನ ಮಂದಿರದಲಿ ವಾಸಿಸುವವರು ಧನ್ಯರು, ನಿರಂತರವೂ ನಿನ್ನ ಗುಣಗಾನ ಮಾಡುವರವರು.

ಅಥವಾ                                                ಯೊವಾ 6 : 57
ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನೂ ಅವನಲ್ಲಿ ನೆಲೆಸಿರುತ್ತೇನೆ, ಎನ್ನತ್ತಾರೆ ಪ್ರಭು.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ದಾನಗಳನ್ನು ಪಡೆದ ನಾವು
ದಿವ್ಯ ರಹಸ್ಯವನ್ನು ಆಚರಿಸುವಾಗಲೆಲ್ಲಾ
ಅದರ ರಕ್ಷಣಾ ಪ್ರಭಾವವು ನಮ್ಮಲ್ಲಿ ವರ್ಧಿಸಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment