ಪ್ರವೇಶ ಶ್ಲೋಕ ಕೀರ್ತ 46 : 2
ಸರ್ವ ಜನಾಂಗಗಳೇ, ಚಪ್ಪಾಳೆ ಹೊಡೆಯಿರಿ. ಸವೇಶ್ವರನಿಗೆ ಜಯಜಯಘೋಷ ಮಾಡಿರಿ.
ಸಭಾ ಪ್ರಾರ್ಥನೆ
ಪ್ರಭು ದೇವರೇ, ನಿಮ್ಮ ಕೃಪಾವರದ ದತ್ತು ಸ್ವೀಕಾರದಿಂದ
ನಮ್ಮನ್ನು ನಿಮ್ಮ ಜ್ಯೋತಿಯ ಮಕ್ಕಳನ್ನಾಗಿ ನೀವು ಮಾಡಿದ್ದೀರಿ.
ಅಂಧಕಾರದ ಅಬದ್ಧ ಬೋಧನೆಗಳಿಗೆ ಸಿಲುಕದೆ
ಸತ್ಯದ ಉಜ್ವಲತೆಯಲ್ಲೇ ನಾವಿರುವಂತೆ ಕರುಣಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭು ದೇವರೇ, ನಿಮ್ಮ ದಯಾಳುತನದಿಂದ
ನಿಮ್ಮ ರಹಸ್ಯಗಳನ್ನು ಫಲಪ್ರದವಾಗುವಂತೆ ಮಾಡುತ್ತೀರಿ.
ಈ ಪವಿತ್ರ ಕಾಣಿಕೆಗಳಿಗೆ
ನಾವು ಯೋಗ್ಯರಾಗುವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 102 : 1
ಭಜಿಸು ನನ್ನ ಮನವೇ, ಭಜಿಸು ಪ್ರಭುವನು. ನನ್ನ ಅಂತರಂಗವೇ, ನೆನೆ ಆತನ ಪರಮ ಪಾವನ ನಾಮವನು.
ಅಥವಾ ಯೊವಾ 17 : 20-21
ಪಿತನೇ, ಇವರು ನಮ್ಮಲ್ಲಿ ಒಂದಾಗಿರುವಂತೆ ಪ್ರಾರ್ಥಿಸುತ್ತೇನೆ. ಹೀಗೆ ನನ್ನನ್ನು ಕಳುಹಿಸಿದವರು ನೀವೇ ಎಂದು ಲೋಕವು ವಿಶ್ವಾಸಿಸುವಂತಾಗಲಿ, ಎನ್ನುತ್ತಾರೆ ಪ್ರಭು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಾವು ಅರ್ಪಿಸಿ, ನಾವೇ ಸ್ವೀಕರಿಸಿದ
ದಿವ್ಯ ಬಲಿಯು ನಮ್ಮನ್ನು ಸಜೀವಗೊಳಿಸಲಿ.
ಕುಂದದ ಪ್ರೀತಿಯಿಂದ ನಮ್ಮನ್ನು ನಿಮ್ಮೊಡನೆ ಒಂದುಗೂಡಿಸಿ
ಅನಂತಾನಂದ ಕಾಲಕ್ಕೂ ಉಳಿಯುವ ಫಲವನ್ನು
ನಾವು ನೀಡುವಂತೆ ಮಾಡಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment