Thursday, 15 August 2019

ಸಾಧಾರಣ ಕಾಲದ ನಾಲ್ಕನೆಯ ಭಾನುವಾರ

ಪ್ರವೇಶ ಶ್ಲೋಕ                                            ಕೀರ್ತ 105 : 47
ಹೇ ಪ್ರಭೂ, ನಮ್ಮ ದೇವಾ, ನಮ್ಮನ್ನುದ್ಧರಿಸು. ನಾಡುನಾಡುಗಳಿಂದ ನಮ್ಮನ್ನೊಂದುಗೂಡಿಸು. ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು, ನಿನ್ನ ಸ್ತುತಿಸ್ತೋತ್ರಗಳಲಿ ಹೆಚ್ಚಳಪಡುವೆವು.

ಸಭಾ ಪ್ರಾರ್ಥನೆ
ನಮ್ಮ ಪ್ರಭು ದೇವರೇ,
ನಿಮ್ಮನ್ನು ಪೂರ್ಣ ಮನಸ್ಸಿನಿಂದ ಆರಾಧಿಸುವಂತೆಯೂ
ಸರ್ವರೊಡನೆ ಅನ್ಯೋನ್ಯ ಪ್ರೀತಿಯಿಂದ ಬಾಳುವಂತೆಯೂ ಪ್ರಸಾದಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ,
ಬಲಿಪೀಠದಲ್ಲಿ ನಾವು ಅರ್ಪಿಸುತ್ತಿರುವ
ದೀನ ಕಾಣಿಕೆಗಳನ್ನು ಸಂತುಷ್ಠರಾಗಿ ಸ್ವೀಕರಿಸಿ
ಇವು ನಮಗೆ ಆತ್ಮೋದ್ಧಾರವನ್ನು ಪಡೆದುಕೊಡುವ
ಸಂಸ್ಕಾರವನ್ನಾಗಿ ಮಾಡಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                 ಕೀರ್ತ 30 : 17-18
ಬೆಳಗಿಸಲಿ ದಾಸನನು ನಿನ್ನ ಮುಖತೇಜವು, ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು, ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು ಮಾನಭಂಗ.

ಅಥವಾ                                                ಮತ್ತಾ 5 : 3-4
ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು, ಸ್ವರ್ಗ ಸಾಮ್ರ್ರಾಜ್ಯ ಅವರದು. ವಿನಯಶೀಲರು ಭಾಗ್ಯವಂತರು ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಮಗೆ ರಕ್ಷಣೆ ತರುವ ಪ್ರಸಾದದಿಂದ ನಾವು ಬಲಗೊಂಡಿದ್ದೇವೆ
ಅನಂತ ರಕ್ಷಣೆಗಾಗಿ ನಮಗದು ನೀಡುವ ಸಹಾಯದಿಂದ
ನಮ್ಮ ವಿಶ್ವಾಸವು ದೃಢಗೊಳ್ಳಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment