ಪ್ರವೇಶ ಶ್ಲೋಕ ಕೀರ್ತ 95 : 1, 6
ಹೊಸಗೀತೆಯನು ಹಾಡಿರಿ ಪ್ರಭುವಿಗೆ, ವಿಶ್ವವೆಲ್ಲವು ಹಾಡಲಿ ಆತನಿಗೆ. ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲಿ, ಶಕ್ತಿ ಸೌಂದರ್ಯ ಆತನ ಗರ್ಭಗುಡಿಯಲಿ.
ಸಭಾ ಪ್ರಾರ್ಥನೆ
ಸರ್ವಶಕ್ತ ನಿತ್ಯ ದೇವರೇ,
ನಮ್ಮ ನಡೆನುಡಿಯು ನಿಮಗೆ ಮೆಚ್ಚುಗೆಯಾಗುವಂತೆ ಮಾಡಿರಿ.
ನಿಮ್ಮ ಪ್ರಿಯ ಪುತ್ರರ ಹೆಸರಿನಲ್ಲಿ
ನಾವು ಸತ್ಕ್ರಿಯಾಸಂಪನ್ನರಾಗುವ ನಮಗೆ ಭಾಗ್ಯವನ್ನು ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಮ್ಮ ಕಾಣಿಕೆಗಳನ್ನು
ಪ್ರೀತಿಯಿಂದ ಸ್ವೀಕರಿಸಿರಿ.
ಇವುಗಳನ್ನು ಪಾವನಗೊಳಿಸಿ
ಇವು ನಮಗೆ ರಕ್ಷಣೆ ತರುವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 33 : 6
ಪ್ರಭುವಿನತ್ತ ತಿರುಗಿದ ಮುಖ ಅರಳುವುದು, ಲಜ್ಜೆಯಿಂದೆಂದಿಗೂ ಕುಗ್ಗಿಹೋಗದು.
ಅಥವಾ ಯೊವಾ 8 : 12
ಪ್ರಭು ಇಂತೆನ್ನುತ್ತಾರೆ : ನಾನೇ ಜಗಜ್ಯೋತಿ. ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
ಕೃತಜ್ಞತಾ ಪ್ರಾರ್ಥನೆ
ಸರ್ವಶಕ್ತ ದೇವರೇ,
ಜೀವವೀವ ನಿಮ್ಮ ಪ್ರಸಾದವನ್ನು
ಸ್ವೀಕರಿಸಿದ ನಾವು ನಿಮ್ಮ ಸೇವೆಯಲ್ಲಿ
ಯಾವಾಗಲೂ ಹೆಮ್ಮೆ ಪಡುವಂತೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment