Thursday, 15 August 2019

ಸಾಧಾರಣ ಕಾಲದ ಐದನೆಯ ಭಾನುವಾರ

ಪ್ರವೇಶ ಶ್ಲೋಕ                                          ಕೀರ್ತ 94 : 6-7
ಬನ್ನಿ ಆರಾಧಿಸೋಣ, ಬನ್ನಿ, ಬಾಗಿ ವಂದಿಸೋಣ, ನಮ್ಮನ್ನು ಸೃಜಿಸಿದ ಪ್ರಭುವಿಗೆ ಸಾಷ್ಟಾಂಗವೆರಗೋಣ, ಆತನೆಮ್ಮ ಪ್ರಭು ದೇವ.

ಸಭಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಅನವರತ ಲಾಲನೆಯಿಂದ
ನಿಮ್ಮ ಕುಟುಂಬವನ್ನು ಪಾಲಿಸಿರಿ.
ಹೀಗೆ ಸ್ವರ್ಗೀಯ ಕೃಪಾವರವನ್ನೇ ನಂಬಿರುವ ನಾವು
ನಿಮ್ಮ ಆಶ್ರಯದ ಭದ್ರತೆಯಲ್ಲಿ ಬಾಳುವಂತೆ ಕರುಣಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ,
ನಮ್ಮ ಬಲಹೀನತೆಯಲ್ಲಿ ನಮ್ಮನ್ನು ಸಲಹಲು
ಸೃಷ್ಟಿ ಸಮಸ್ತವನ್ನು ಉಂಟು ಮಾಡಿದ ನಮ್ಮ ದೇವರೇ,
ಅವೆಲ್ಲವೂ ನಮ್ಮನ್ನು ಅನಂತ ಜೀವಕ್ಕೊಯ್ಯುವ ಸಾಧನಗಳಾಗಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                  ಕೀರ್ತ 106 : 8-9
ಹೊಗಳಲಿ ಪ್ರಭುವಿನಚಲ ಪ್ರೀತಿಯನು, ಜನರಿಗೆ ಆತನೆಸಗಿದ ಅತಿಶಯಗಳನು, ಬಾಯಾರಿದವರ ಆಸೆಯನ್ನಾತ ಪೂರೈಸಿದನು ಹಸಿದವರನು ಮೃಷ್ಟಾನ್ನದಿಂದ ತೃಪ್ತಿಪಡಿಸಿದನು.

ಅಥವಾ                                                ಮತ್ತಾ 5 : 5-6
ದುಃಖಿಗಳು ಭಾಗ್ಯವಂತರು, ದೇವರು ಅವರನ್ನು ಸಂತೈಸುವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು, ದೇವರು ಅವರಿಗೆ ತೃಪ್ತಿಯನ್ನೀಯುವರು.

ಕೃತಜ್ಞತಾ ಪ್ರಾರ್ಥನೆ
ಒಂದೇ ರೊಟ್ಟಿ ಮತ್ತು ಒಂದೇ ಪಾತ್ರೆಯಲ್ಲಿ
ನಾವು ಪಾಲ್ಗೊಳ್ಳಬೇಕೆಂದು ಇಚ್ಛಿಸಿದ ದೇವರೇ,
ಕ್ರಿಸ್ತ ಪ್ರಭುವಿನಲ್ಲಿ ನಾವೆಲ್ಲರೂ ಒಂದಾಗಿ
ಬಲು ಸಂತೋಷದಿಂದ ಲೋಕ ರಕ್ಷಣೆಗಾಗಿ
ಫಲವೀಯುವಂತೆ ಮಾಡಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment