ಸಾಧಾರಣ ಕಾಲದ ಇಪ್ಪತ್ತೆರಡನೇ ಭಾನುವಾರ
1/ಹಸಿರು/ಭಾನು
1ನೇ ವಾಚನ - ಸಿರಾ 3: 17-2೦, 28-29
ಕೀರ್ತನೆ - 68: 3-4, 5-6, 9-1೦
2ನೇ ವಾಚನ - ಹಿಬ್ರಿ 12: 18-19, 22-24
ಶುಭಸಂದೇಶ - ಲೂಕ 14: 1, 7-14
1ನೇ ವಾಚನ - ಸಿರಾ 3: 17-2೦, 28-29
4 : ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು / ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು / “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು //
5 : ದಿವ್ಯಧಾಮದಲ್ಲಿಹ ಆ ದೇವ / ತಬ್ಬಲಿಗೆ ತಂದೆ, ವಿಧವೆಗಾಶ್ರಯ //
6 : ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ / ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ / ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ //
9 : ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ / ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ //
10 : ವಸತಿಯಾಯಿತದು ನಿನ್ನ ಜನಮಂದೆಗೆ / ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ //
2ನೇ ವಾಚನ - ಹಿಬ್ರಿ 12: 18-19, 22-24
1/ಹಸಿರು/ಭಾನು
1ನೇ ವಾಚನ - ಸಿರಾ 3: 17-2೦, 28-29
ಕೀರ್ತನೆ - 68: 3-4, 5-6, 9-1೦
2ನೇ ವಾಚನ - ಹಿಬ್ರಿ 12: 18-19, 22-24
ಶುಭಸಂದೇಶ - ಲೂಕ 14: 1, 7-14
1ನೇ ವಾಚನ - ಸಿರಾ 3: 17-2೦, 28-29
ವಿನಮ್ರತೆ ಮಗನೇ, ಕರ್ತವ್ಯ ನಿರ್ವಹನೆಯಲ್ಲಿ ವಿನಯದಿಂದ ವರ್ತಿಸುವಿಯಾದರೆ, ದೇವರಿಗೆ ಯೋಗ್ಯರಾದವರ ಪ್ರೀತಿಗೆ ನೀನೂ ಪಾತ್ರನಾಗುವೆ. ನೀನು ದೊಡ್ಡವನಾಗಿರುವಷ್ಟು ನಿನ್ನನ್ನೇ ತಗ್ಗಿಸಿಕೊಂಡೆಯಾದರೆ ದೇವರ ಸನ್ನಿಧಿಯಲ್ಲಿ ನಿನಗೆ ಗಿಟ್ಟುವುದು ಕರುಣೆ. ಗಣ್ಯರೂ ಗರ್ವಿಗಳೂ ಅನೇಕರಿರುವರು ದೇವರು ತಮ್ಮ ಗುಟ್ಟನ್ನು ದೀನರಿಗೆ ಬಯಲು ಮಾಡುವರು. ಕಾರಣ, ಅಪೂರ್ವವಾದುದು ದೇವರ ಬಲ ದೀನರಿಂದ ಆತನಿಗೆ ಸಲ್ಲುವುದು ಘನಮಾನ. ಖಂಡನೆಯಿಂದ ಗುಣವಾಗದು ಗರ್ವಿಗೆ ದುಷ್ಟತನದ ಬಳ್ಳಿ ಬೇರೂರಿದೆ ಅವನಲ್ಲೇ. ವಿವೇಕ ಮನಸ್ಸುಳ್ಳವರು ಪಾಠ ಕಲಿಯುವರು ಸಾಮತಿಗಳಿಂದ ಲಕ್ಷ್ಯವಿಟ್ಟು ಕೇಳುವನು ಜ್ಞಾನಿ ಹೆಬ್ಬಯಕೆಯಿಂದ.
ಕೀರ್ತನೆ - 68: 3-4, 5-6, 9-1೦
3 : ಸಜ್ಜನರಾದರೊ ಸಂತೋಷಿಸಲಿ / ದೇವರ ಮುಂದೆ ಆನಂದಿಸಲಿ / ಅತುಳ ಹರ್ಷಾನಂದಗೊಳ್ಳಲಿ //4 : ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು / ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು / “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು //
5 : ದಿವ್ಯಧಾಮದಲ್ಲಿಹ ಆ ದೇವ / ತಬ್ಬಲಿಗೆ ತಂದೆ, ವಿಧವೆಗಾಶ್ರಯ //
6 : ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ / ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ / ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ //
9 : ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ / ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ //
10 : ವಸತಿಯಾಯಿತದು ನಿನ್ನ ಜನಮಂದೆಗೆ / ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ //
2ನೇ ವಾಚನ - ಹಿಬ್ರಿ 12: 18-19, 22-24
ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು. ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ; ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜ್ಯೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯ ಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾ ರಕ್ತದ ಬಳಿಗೆ ನೀವು ಬಂದಿದ್ದೀರಿ.
ಶುಭಸಂದೇಶ - ಲೂಕ 14: 1, 7-14
ಅಂದು ಸಬ್ಬತ್‍ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು ದೀನ ಸ್ಥಾನಮಾನ ಅಲ್ಲದೆ, ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿರೂಪದಲ್ಲಿ ಹೀಗೆಂದರು: “ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು. ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರ ಬಂದು, ‘ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು,’ ಎನ್ನಬಹುದು. ಆಗ ನೀನು ನಾಚಿಕೆಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು. ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಳದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, ‘ಗೆಳೆಯಾ, ಮೇಲೆ ಬಾ’ ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು. ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು. ಧನ್ಯವಾದ ದಾನ ಅನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, “ನೀನು ಊಟ ಅಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಿತರನ್ನಾಗಲಿ, ಸೋದರರನ್ನಾಗಲಿ, ಬಂಧು ಬಳಗದವರನ್ನಾಗಲಿ, ಧನಿಕರಾದ ನೆರೆಯವರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ಥಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು,” ಎಂದರು.
ಚಿಂತನೆ
ಚಿಂತನೆ
ದೀನ ಮನಸ್ಸು - ಕ್ರೈಸ್ತ್ ಜೀವನದ ಯಶಸ್ಸು
ಇದು ಕಲಿಯುಗ, ನಾನು ಉತ್ತಮವಾಗಿ ಓದಬೇಕು, ಒಳ್ಳೆ ಸ್ಥಾನವನ್ನು, ಅಧಿಕಾರವನ್ನು ಪಡೆಯಬೇಕೆಂದು ಆಶೀಸುತ್ತಾರೆ. ಎಲ್ಲರಿಗಿಂತ ಶ್ರೇಷ್ಟನಾಗಬೇಕು ಎಂದು ಬಯಸುವುದು ಸ್ವಾಭಾವಿಕ - ಅನೇಕ ಬಾರಿ ನಮ್ಮ ಅಂತಸ್ತು ಅಧಿಕಾರ ಆಹಂಕಾರವನ್ನು ತಂದುಕೊಡುತ್ತದೆ. ಅದು ತಪ್ಪು.
ಆಗಸ್ಟಿನ್‍ರವರು ನುಡಿಯುತ್ತಾರೆ. "ಆಹಂಕಾರವು ದಿವ್ಯ ಪುರುಷರನ್ನು ದುಷ್ಟನನ್ನಾಗಿ ಮಾಡುತ್ತದೆ. ಆದರೆ ದೀನತೆಯು ಮನುಷ್ಯರನ್ನು ದೇವದೂತರನ್ನಾಗಿ ಮಾಡುತ್ತದೆ."
ಇಂದಿನ ಎಲ್ಲಾ ವಾಚನಗಳು ದೀನತೆಯ ಶ್ರೇಷ್ಟತೆಯನ್ನು ವಿವರಿಸಿ ಹೇಳುತ್ತವೆ. ಸಿರಾಖನು ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿನಯತೆಯಿಂದ ವರ್ತಿಸಲು ಕರೆನೀಡುತ್ತಾನೆ. ಏಕೆಂದರೆ ಅಂತವರು ದೇವರಿಗೆ ಪ್ರೀತಿ ಪಾತ್ರರಾಗುತ್ತಾರೆ.
ದೀನರಾಗಿ ಧರಗೆ ಬಂದ ಯೇಸುಪ್ರಭು ದೀನಭಾವದ ಬಗ್ಗೆ ಒತ್ತಿ ಹೇಳುತ್ತಾರೆ. ಯೇಸು ಪ್ರಭವು ಫರಿಸಾಯರ ಮನೆಗೆ ಊಟಕ್ಕೆ ಹೋದಾಗ ಬಂದ ಅತಿಥಿಗಳು ಉನ್ನತ ಸ್ಥಾನಗಳನ್ನು ಆರಿಸಿಕೊಳ್ಳುವುದನ್ನು ಗಮನಿಸಿದರು. ತನ್ನನ್ನು ತಾನೇ ಮೇಲಕ್ಕೆರಿಸಿಕೊಳ್ಳುವವರನ್ನು ದೇವರು ಕೆಳಗಿಳಿಸುವರು. ತನ್ನನ್ನೇ ತಾನು ತಗ್ಗಿಸಿಕೊಳ್ಳುವವರನ್ನು ದೇವರು ಮೇಲಕ್ಕೆರಿಸುವರು ಎಂಬ ಸತ್ಯವನ್ನು ನುಡಿಯುತ್ತಾರೆ.
ಬೈಬಲ್ ಶ್ರೀಗ್ರಂಥದಲ್ಲಿ ತಮ್ಮನ್ನೇ ತಾವು ತಗ್ಗಿಸಿಕೊಂದು ದೇವರಿಂದ ಪರಮೊನ್ನೋತ ಸ್ಥಾನವನ್ನು ಪಡೆದ ಹಲವಾರು ವ್ಯಕ್ತಿಗಳನ್ನು ಕಾಣುತ್ತೇವೆ. ಅದರಲ್ಲೂ ವಿಶೇಷವಾಗಿ ಮಾತೆ ಮರಿಯ, ಸ್ನಾನಿಕ ಯೊವಾನ್ನ, ನಮಗೆ ಆದರ್ಶರಾಗಿದ್ದಾರೆ.
ಅವರಂತೆ ನಾವು ಸಹ ನಮ್ಮ ಜೀವನದಲ್ಲಿ ದೀನತೆಯಿಂದ ಬಾಳುತ್ತಾ ದೇವರಿಂದ ಶ್ರೇಷ್ಟ ಸ್ಥಾನವನ್ನು ಪಡೆಯೋಣ.

No comments:
Post a Comment