Thursday, 15 August 2019

ಸಾಧಾರಣ ಕಾಲದ ಹದಿನಾರನೆಯ ಭಾನುವಾರ


ಪ್ರವೇಶ ಶ್ಲೋಕ                                          ಕೀರ್ತ 53 : 6, 8
ನನಗಿದೋ ದೇವನೇ ಸಹಾಯಕನು, ಆತನೆನಗೆ ಜೀವಪೋಷಕನು. ಎಂತಲೇ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ. ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ ನಾಮಕೆ.

ಸಭಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಕೃಪಾವರಗಳನ್ನು
ನಿಮ್ಮ ಭಕ್ತಾದಿಗಳಾದ ನಮ್ಮ ಮೇಲೆ ಕರುಣೆಯಿಂದ
ಧಾರಾಳವಾಗಿ ಸುರಿಸಿರಿ.
ವಿಶ್ವಾಸ, ನಂಬಿಕೆ ಮತ್ತು ಪರಸ್ನೇಹದಲ್ಲಿ ನಿರತರಾಗಿ
ನಿಮ್ಮಾಜ್ಞೆಗಳನ್ನು ಶ್ರದ್ಧೆಯಿಂದ ನಾವು ಪಾಲಿಸುವಂತೆ ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ಹಳೇ ಒಡಂಬಡಿಕೆಯ ವಿವಿಧ ಬಲಿಯರ್ಪಣೆಗಳನ್ನು
ಒಂದೇ ಉತ್ಕೃಷ್ಠ ಬಲಿಯಲ್ಲಿ ಸಂಪೂರ್ಣಗೊಳಿಸಿದ್ದೀರಿ.
ಆಬೆಲನ ಕಾಣಿಕೆಗಳನ್ನು ಸ್ವೀಕರಿಸಿದಂತೆ
ನಿಮ್ಮ ಪ್ರಾಮಾಣಿಕ ಸೇವಕರ ಬಲಿಯರ್ಪಣೆಯನ್ನೂ ಸ್ವೀಕರಿಸಿ
ಅದನ್ನು ಪಾವನಗೊಳಿಸಿರಿ.
ಹೀಗೆ ನಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ದಿವ್ಯ ಸನ್ನಿಧಿಗೆ
ಅರ್ಪಿಸುವ ಕಾಣಿಕೆಗಳು ಸಕಲರಿಗೆ ರಕ್ಷಣೆ ತರಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                  ಕೀರ್ತ 110 : 4-5
ಆತನ ಅದ್ಭುತ ಕಾರ್ಯ ಸ್ಮರಣೀಯ, ಕರುಣಾವಂತ ಪ್ರಭು ಪ್ರೀತಿಮಯ, ಆಹಾರವನ್ನೀಯುವನು ಭಯಭಕ್ತಿಯುಳ್ಳವರಿಗೆ.

ಅಥವಾ                                               ಯೊ. ಪ್ರ3 :20
ಪ್ರಭು ಇಂತೆನ್ನುತ್ತಾರೆ : ಇಗೋ, ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿಕೊಂಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶಿಸುತ್ತೇನೆ, ಅನವ ಸಂಗಡ ಊಟ ಮಾಡುತ್ತೇನೆ ಮತ್ತು ಅವನು ನನ್ನ ಸಂಗಡ ಊಟ ಮಾಡುತ್ತಾನೆ.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಪ್ರಜೆಯ ಮಧ್ಯೆ ಪ್ರಸನ್ನರಾಗಿರಿ.
ನಿಮ್ಮ ಸ್ವರ್ಗೀಯ ರಹಸ್ಯಗಳಲ್ಲಿ ತಲ್ಲೀನರಾದ ನಾವು
ಹಳೇ ಜೀವನಶೈಲಿಯನ್ನು ತ್ಯಜಿಸಿ ಹೊಸ ಜೀವನಶೈಲಿಗೆ ಬರುವಂತೆ ಅನುಗ್ರಹಿಸಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment