Thursday, 15 August 2019

ಸಾಧಾರಣ ಕಾಲದ ಇಪ್ಪತ್ತನಾಲ್ಕನೆಯ ಭಾನುವಾರ


ಪ್ರವೇಶ ಶ್ಲೋಕ                                             ಸಿರಾ 36 : 18
ಪ್ರಭೂ, ನಿನ್ನನು ನಿರೀಕ್ಷಿಸಿದವರಿಗೆ ಶಾಂತಿಯನ್ನು ಕರುಣಿಸು. ಜನರು ನಿನ್ನ ಪ್ರವಾದಿಗಳಲ್ಲಿ ಭರವಸೆಯಿಡಲಿ. ನಿನ್ನ ದಾಸನ ಹಾಗೂ ನಿನ್ನ ಪ್ರಜೆ ಇಸ್ರಾಯೇಲಿನ ಪ್ರಾರ್ಥನೆಗಳನ್ನು ಆಲಿಸು.

ಸಭಾ ಪ್ರಾರ್ಥನೆ
ಸರ್ವಕ್ಕೂ ಸೃಷ್ಟಿಕರ್ತರೂ ಪರಿಪಾಲಕರೂ
ಆಗಿರುವ ದೇವರೇ,
ನಿಮ್ಮ ಪರಿಹಾರಬಲಿಯಿಂದ ನೀವು ಸಾಧಿಸಿದ ಫಲವನ್ನು
ನಾವು ಗ್ರಹಿಸಿ ನಿಮಗೆ
ಹೃತ್ಪೂರ್ವಕ ಸೇವೆ ಸಲ್ಲಿಸುವಂತೆ ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ನಮ್ಮ ಸವಿನಯ ಕೋರಿಕೆಗಳನ್ನು
ಒಲವಿಂದ ಈಕ್ಷಿಸಿ ಪ್ರಭುವೇ,
ನಮ್ಮಲ್ಲಿ ಒಬ್ಬೊಬ್ಬರೂ ನಿಮ್ಮ ನಾಮದ ಮಹಿಮೆಗಾಗಿ
ಒಪ್ಪಿಸಿದ ಕಾಣಿಕೆಗಳನ್ನು ಅಂಗೀಕರಿಸಿ
ಅವು ಸರ್ವರಿಗೆ ರಕ್ಷಣೆ ತರುವಂತೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                     ಕೀರ್ತ 35 : 8
ನಿನ್ನಚಲ ಪ್ರೀತಿ ಹೇ ದೇವಾ, ಎಷ್ಟೋ ಅಮೂಲ್ಯ. ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿಗಾಶ್ರಯ.

ಅಥವಾ                                             1 ಕೊರಿಂಥ 10 : 16

ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವೆ. ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವೆ.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸ್ವರ್ಗೀಯ ವರದಾನಗಳು
ನಮ್ಮ ತನುಮನಗಳನ್ನು ಸ್ವಾಧೀನಪಡಿಸಿಕೊಳ್ಳಲಿ
ಹೀಗೆ ನಮ್ಮ ಇಚ್ಛೆಯಲ್ಲ, ಬದಲಾಗಿ ಅವುಗಳ ಶಕ್ತಿಯೇ
ನಮ್ಮಲ್ಲಿ ಮೇಲುಗೈ ಸಾಧಿಸಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment