Thursday, 15 August 2019

ಸಾಧಾರಣ ಕಾಲದ ಇಪ್ಪತ್ತೈದನೆಯ ಭಾನುವಾರ

ಪ್ರವೇಶ ಶ್ಲೋಕ                                           
ಪ್ರಭು ಇಂತೆನ್ನುತ್ತಾರೆ : ನಾನೇ ಮನುಜರ ರಕ್ಷಣೆ. ಸಂಕಟದಲ್ಲಿ ಮೊರೆಯಿಟ್ಟರೆ ನಾನು ಆಲಿಸುವೆನು ಮತ್ತು ನಾನೇ ಸದಾ ಅವರಿಗೆ ಪ್ರಭುವಾಗಿರುವೆನು.

ಸಭಾ ಪ್ರಾರ್ಥನೆ
ಪ್ರಭು ದೇವರೇ, ಪವಿತ್ರ ನಿಯಮ ಶಾಸ್ತ್ರದಲ್ಲಿರುವ
ನಿಮ್ಮೆಲ್ಲಾ ಆಜ್ಞೆಗಳನ್ನು
ದೈವ ಪ್ರೀತಿ ಹಾಗೂ ಪರಪ್ರೀತಿಯ
ಬುನಾದಿಯ ಮೇಲೆ ಸ್ಥಾಪಿಸಿದ್ದೀರಿ.
ಅವುಗಳನ್ನು ಪಾಲಿಸುತ್ತಾ ನಾವು
ಅನಂತ ಜೀವನಕ್ಕೆ ಪಾತ್ರರಾಗುವಂತೆ ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಪ್ರಜೆ ಅರ್ಪಿಸುತ್ತಿರುವ ಕಾಣಿಕೆಗಳನ್ನು
ಒಲುಮೆಯಿಂದ ಸ್ವೀಕರಿಸಿರಿ.
ಅವರು ಭಯಭಕ್ತಿಯಿಂದ ವಿಶ್ವಾಸಿಸುವುದನ್ನು
ಅವರು ಸ್ವರ್ಗೀಯ ಸಂಸ್ಕಾರಗಳ ಮೂಲಕ ಪಡೆಯಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                 ಕೀರ್ತ 118 : 4-5
ನಿನ್ನ ನೇಮಗಳನ್ನು ಪ್ರಭೂ ನೀನೇ ವ್ಯಕ್ತಪಡಿಸಿರುವೆಯಯ್ಯಾ. ಜಾಗರೂಕತೆಯಿಂದ ಪಾಲಿಸಬೇಕೆಂದು ನೀ ವಿಧಿಸಿರುವೆಯಯ್ಯಾ. ನಿನ್ನ ನಿಬಂಧನೆಗಳ ಪಾಲನೆಯಲ್ಲಿ ಸ್ಥಿರತೆಯಿದ್ದರೆ ಒಳಿತು ನನ್ನ ಮನದಲಿ.

ಅಥವಾ                                                 ಯೊವಾ 10 : 14

ಪ್ರಭು ಇಂತೆನ್ನುತ್ತಾರೆ : ನಾನಾದರೋ ಉತ್ತಮ ಕುರಿಗಾಹಿ. ನಾನು ನನ್ನ ಕುರಿಗಳನ್ನು ಬಲ್ಲೆನು, ಅವು ನನ್ನನ್ನು ಬಲ್ಲವು.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸಂಸ್ಕಾರಗಳ ಮೂಲಕ
ನವಚೈತನ್ಯದಿಂದ ತುಂಬಿದ ನಾವು
ನಿಮ್ಮ ನಿರಂತರ ಸಹಾಯದಿಂದ
ಪವಿತ್ರ ರಹಸ್ಯಗಳಲ್ಲೂ ನಮ್ಮ ಜೀವನ ಪರಿಯಲ್ಲೂ
ರಕ್ಷಣೆಯ ಫಲಗಳನ್ನು ಸವಿಯುವಂತೆ ಅನುಗ್ರಹಿಸಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment