ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಮಂಗಳವಾರ
13/ಹಸಿರು/ಮಂಗಳ
1ನೇ ವಾಚನ - ಧರ್ಮೋ 31: 1-8
ಕೀರ್ತನೆ - ಧರ್ಮೋ 32:3-4,7-9,12
ಶುಭಸಂದೇಶ - ಮತ್ತಾಯ 18:1-5,1೦,12-14
1ನೇ ವಾಚನ - ಧರ್ಮೋ 31: 1-8
13/ಹಸಿರು/ಮಂಗಳ
1ನೇ ವಾಚನ - ಧರ್ಮೋ 31: 1-8
ಕೀರ್ತನೆ - ಧರ್ಮೋ 32:3-4,7-9,12
ಶುಭಸಂದೇಶ - ಮತ್ತಾಯ 18:1-5,1೦,12-14
1ನೇ ವಾಚನ - ಧರ್ಮೋ 31: 1-8
ಮೋಶೆ ಹೋಗಿ ಇಸ್ರಯೇಲರೆಲ್ಲರಿಗೆ ಈ ಮಾತುಗಳನ್ನು ತಿಳಿಸಿದನು: “ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವುದು ಇನ್ನು ನನ್ನಿಂದಾಗದು; ಸರ್ವೇಶ್ವರ ನನಗೆ, ‘ನೀನು ಈ ಜೋರ್ಡನ್ ನದಿಯನ್ನು ದಾಟಕೂಡದು’ ಎಂದು ಆಜ್ಞಾಪಿಸಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ತಾವೇ ನಿಮ್ಮ ಸೇನಾ ನಾಯಕರಾಗಿ ನದಿಯನ್ನು ದಾಟಿಹೋಗುವರು; ಅವರು ಆ ಜನಾಂಗಗಳನ್ನು ನಿಮ್ಮ ಎದುರಿನಲ್ಲಿ ನಿಲ್ಲದಂತೆ ನಾಶಮಾಡುವರು. ಆಗ ನೀವು ಅವರ ನಾಡನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಸರ್ವೇಶ್ವರ ಆಜ್ಞಾಪಿಸಿದಂತೆ ಯೆಹೋಶುವನು ಕೂಡ ನಿಮ್ಮ ನಾಯಕನಾಗಿ ನದಿಯನ್ನು ದಾಟಿಹೋಗುವನು. ಸರ್ವೇಶ್ವರ, ಅಮೋರಿಯರ ಅರಸರಾದ ಸೀಹೋನ್ ಹಾಗು ಓಗರನ್ನು ನಾಶಮಾಡಿ ಅವರ ದೇಶವನ್ನು ನಿಮಗೆ ಸ್ವಾಧೀನಪಡಿಸಿದಂತೆ ಆ ಜನಾಂಗಗಳನ್ನೂ ನಾಶಮಾಡಿ ಅವರ ದೇಶವನ್ನು ನಿಮಗೆ ವಶಪಡಿಸುವರು. ಸರ್ವೇಶ್ವರ ಅವರನ್ನು ನಿಮ್ಮಿಂದ ಪರಾಜಯಪಡಿಸಿದಾಗ ನೀವು ಅವರ ವಿಷಯದಲ್ಲಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದುಕೊಳ್ಳಬೇಕು. ನೀವು ಶೂರರಾಗಿ ಧೈರ್ಯದಿಂದಿರಿ; ಅವರಿಗೆ ಅಂಜಬೇಡಿ, ಕಳವಳಪಡಬೇಡಿ. ನಿಮ್ಮ ದೇವರಾದ ಸರ್ವೇಶ್ವರನೇ ನಿಮ್ಮ ಸಂಗಡ ಇರುತ್ತಾರೆ; ಅವರು ನಿಮ್ಮನ್ನು ಕೈಬಿಡುವುದಿಲ್ಲ, ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ,” ಎಂದು ಹೇಳಿದನು. ಅನಂತರ ಮೋಶೆ ಯೆಹೋಶುವನನ್ನು ಕರೆದು ಇಸ್ರಯೇಲರೆಲ್ಲರ ಮುಂದೆ, “ಸರ್ವೇಶ್ವರ ಇವರ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ನಾಡಿಗೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿರು, ಧೈರ್ಯದಿಂದಿರು; ಸರ್ವೇಶ್ವರ ತಾವೇ ನಿನ್ನ ಮುಂದುಗಡೆ ಹೋಗುವರು; ಅವರೇ ನಿನ್ನ ಸಂಗಡ ಇರುವರು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ, ಅಂಜಬೇಡ; ಧೈರ್ಯದಿಂದಿರು,” ಎಂದು ಹೇಳಿದನು.
ಕೀರ್ತನೆ - ಧರ್ಮೋ 32:3-4,7-9,12
3 : ಪ್ರಕಟಿಸುವೆನು ನಾನು ಸರ್ವೇಶ್ವರನ ನಾಮಮಹತ್ವವನು ಕೊಂಡಾಡಿ ನೀವು ಆ ದೇವನ ಮಹಾಮಹಿಮೆಯನು.
4 : “ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ ಆತನ ಮಾರ್ಗ ನ್ಯಾಯಯುತ, ಆ ದೇವ ನಂಬಿಕಸ್ತ. ಆತ ನಿರ್ವಂಚಕ, ಯಥಾರ್ಥನು ಹಾಗು ನೀತಿವಂತ.”
7 : ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು. ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.
8 : ಪರಾತ್ಮರ ದೇವರು ಜನಾಂಗಗಳನು ಬೇರೆಬೇರೆ ಮಾಡಿದಾಗ, ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ, ದೇವಕುವರರ ಸಂಖ್ಯಾನುಸಾರ ಪ್ರದೇಶಗಳನು ಗೊತ್ತುಮಾಡಿದಾಗ.
9 : ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ, ಸ್ವಕೀಯ ಪ್ರಜೆಯಾದರು ಆ ಯಕೋಬ ವಂಶಜರು ಆತನಿಗೆ.
12 : ಅವರನು ನಡೆಸಿದವನು ಸರ್ವೇಶ್ವರನೇ, ಅನ್ಯದೇವರಾರೂ ಇಲ್ಲ, ಆತನೊರ್ವನೇ.
ಶುಭಸಂದೇಶ - ಮತ್ತಾಯ 18:1-5,1೦,12-14
ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ." "ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ. “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ.
ಚಿಂತನೆ :
ಮಗುವಾಗು-ಮಾನವನಾಗು-ಪಾವನನಾಗು
ಈ ಭೂಮಿಯಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ದೇವರು ಮಾನವನನ್ನು ಇನ್ನೂ ಪ್ರೀತಿಸುತ್ತಿದ್ದಾರೆ ಎಂಬ ಸಂದೇಶವನ್ನು ಹೊತ್ತು ತರುತ್ತದೆ. ರವೀಂದ್ರನಾಥ್ ಠಾಗೂರರ ಈ ನುಡಿಗಳು ಸ್ವರ್ಗಸಾಮ್ರಾಜ್ಯದ ಒಂದು ವಿಶೇಷ ಗುಣದ ಬಗ್ಗೆ ಸೂಚನೆ ನೀಡುತ್ತವೆ. ಅದು ಮುಗ್ಧತೆ. ಮಕ್ಕಳನ್ನು ಮಕ್ಕಳನ್ನಾಗಿಸುವ ಈ ಮುಗ್ಧತೆ ದೇವರನ್ನು ಭುವಿಯಲ್ಲಿ ತೋರುವ ಒಂದು ಭವ್ಯ ಗುಣ.
ಸಮಾಜ ಇಂದು ಹಲವಾರು ರೀತಿಗಳಲ್ಲಿ ಕಲುಷಿತ. ಜಾತಿ, ಮತ, ಭೇದಭಾವ, ಎಲ್ಲೆಲೂ ರಾಜಕೀಯ, ಎಲ್ಲರಲ್ಲೂ ರಾಜಕೀಯ. ಧರ್ಮ ಇಂದು ನಿರುದ್ಯೋಗಿಗಗಳ, ಮೂಢರ ಕೊನೆ ಆಸರೆಯಾಗಿದೆ. ಮೋಶೆ ಸಹ ಇಂತಹದೇ ವಾತಾವರಣದಲ್ಲಿ ಬೆಳೆದ ಸರಳ ವ್ಯಕ್ತಿ. ದೇವರೊಡನೆ ಘನಕಾರ್ಯ ಸಾಧಿಸಲು ಹೊರಟ ಈತ, ಈಜಿಪ್ಟಿನಿಂದ ಇಸ್ರಯೇಲರನ್ನು ವಿಮುಕ್ತಿಗೊಳಿಸಿದ ಅಂದಿನ ಹೀರೋ! ಕೊನೆಗೆ ಪ್ರಭು ಕ್ರಿಸ್ತ ಹೇಳುವಂತೆ ಬಿತ್ತುವರಾರೋ ಕೊಯ್ಯುವವರಾರೊ? ತನ್ನ ಗುರಿ, ಜೀವನದ ಮಧುರ ಕನಸು ಕಣ್ಮುಂದೆ ಇದ್ದರೂ ಈತ ಜೋಶುವನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿ, ತನ್ನೊಡನಿದ್ದ ಭಗವಂತ ನಿಮ್ಮೊಡನೂ ಇರುತ್ತಾನೆ. ಎಂದು ಸ್ಪೋರ್ತಿ ತುಂಬುವ ಮುಗ್ಧ. ಈತ ಮನಸ್ಸು ಮಾಡಿದ್ದಲ್ಲಿ ದೇವರ ಮಾತನ್ನು ಬದಿಗೊತ್ತಿ ತಾನು ಇಸ್ರಯೇಲಿನ ಜನಾಂಗದೊಂದಿಗೆ ಜೋರ್ಡನ್ ದಾಟಬಹುದಿತ್ತು. ಆದರೆ ಭಗವಂತನೊಡನೆ ನಿಷ್ಟೆ, ಮುಗ್ಧತೆ ಹೀಗಾಗಲಿಲ್ಲ.
ಪ್ರಭು ಯೇಸು ಸಹ ಇಂದು ಮಕ್ಕಳ ಹಾಗೂ ಅವರ ಮುಗ್ಧತೆಯ ಬಗ್ಗೆ ಹಿತ ನುಡಿಯುತ್ತಾರೆ. ಭಗವಂತ ಜ್ಞಾನಿಗಳಿಗಿಂತ ಮಕ್ಕಳಲ್ಲಿ, ಅವರ ಮುಗ್ಧತೆಯಲ್ಲಿ ತುಂಬಿರುತ್ತಾರೆ. ಈ ಭಗವಂತನ ಛಾಯೆ ಮುಗ್ಧರನ್ನು ದೀನ ಸೇವಕರನ್ನಾಗಿಯೂ, ಹಾಗೂ ಪ್ರೀತಿಭರಿತರನ್ನಾಗಿಯೂ ಮಾಡುತ್ತದೆ.
ಮಕ್ಕಳನ್ನು ಇಂದು-ಮುಂದಿನ ಪ್ರಜೆಗಳು, ದೇಶದ ಆಸ್ತಿ. ಇನ್ನೂ ಹಲವಾರು ಬಿರುದುಗಳಿಂದ ಮರುಳುಗೊಳಿಸಲಾಗಿದೆ. ತಂದೆ-ತಾಯಿಯರ, ಗೆಳೆಯರ, ಗುರು ಹಿರಿಯರ ಸ್ನೇಹದಲ್ಲಿ, ಶ್ವೇತ ಗುಲಾಬಿಗಳಾಗಿ ಬೆಳೆದ ಇವರು ಸಮಾಜದ ಹಲವು ದುಷ್ಕರ್ಮಿಗಳ ಮುಳ್ಳುಗಿಡದಲ್ಲಿ ಬಂಧಿತರಾಗಿದ್ದಾರೆ. ಸಂಪರ್ಕ ಮಾಧ್ಯಮಗಳಾದ ಟಿವಿ, ಸಿನೆಮಾ, ಇತರೇ ಈ ಕಾರ್ಯವನ್ನು ಭರವಾಗಿ ನಡೆಸಿವೆ.
ಈ ಮುಗ್ಧ ಕೋಮಲೆಯರನ್ನು ಅಲ್ಲಿಂದ ಬಿಡಿಸುವಿರಾ? ಈ ಕಿರಿಯ ಕಂದಮ್ಮಗಳನ್ನು ಈ ದುಷ್ಟ ಸಹವಾಸದಿಂದ ಕಳೆಯುವಿರಾ? ನಿಮ್ಮ ಒಂದು ಪ್ರಯತ್ನ ಕ್ರಿಸ್ತರ ಮಾತಿನ ಪರಿಪೂರ್ಣ `ಒಬ್ಬ ಒಂದು ಕುರಿಮರಿಯನ್ನು ಕಳೆದುಕೊಂಡರೆ, ಉಳಿದ ೯೯ನ್ನು ಬಿಟ್ಟು ಅದನ್ನು ಹುಡುಕಿಕೊಂಡು ಹೋಗುವಿದಿಲ್ಲವೋ?'

No comments:
Post a Comment