Thursday, 15 August 2019

ಸಾಧಾರಣ ಕಾಲದ ಮೂವತ್ತಮೂರನೆಯ ಭಾನುವಾರ



ಪ್ರವೇಶ ಶ್ಲೋಕ                                    ಯೆರೆ 29 : 11, 12, 14
ಪ್ರಭು ಹೀಗೆಂದರು : ನನ್ನ ಆಲೋಚನೆಗಳು ಅಹಿತಕರವಲ್ಲ, ಅವು ಶಾಂತಿಯ ಯೋಜನೆಗಳು. ನೀವು ನನಗೆ ಮೊರೆಯಿಡುವಿರಿ, ನಾನು ಕಿವಿಗೊಡುವೆನು. ಸಮಸ್ತ ದೇಶಗಳಿಂದಲೂ ಒಟ್ಟುಗೂಡಿಸಿ, ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದ್ದೆನೋ ಅಲ್ಲಿಗೆ ಬರಮಾಡುವೆನು.

ಸಭಾ ಪ್ರಾರ್ಥನೆ
ನಮ್ಮ ಪ್ರಭು ದೇವರೇ, ಸರ್ವ ಒಳಿತಿನ ಕಾರಣಕರ್ತರಾದ ನಿಮಗೆ
ಸೇವೆ ಸಲ್ಲಿಸುವುದು ಮಹಾ ಹಾಗೂ
ಪರಿಪೂರ್ಣ ಸಂತೋಷವಾಗಿರುವುದರಿಂದ
ಸದಾ ನಿಮ್ಮ ಭಕ್ತಿಯಲ್ಲಿ ನಾವು ಆನಂದಿಸುವಂತೆ ಕರುಣಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸನ್ನಿಧಿಗೆ
ನಾವರ್ಪಿಸುವ ಕಾಣಿಕೆಯು ನಮಗೆ
ನಿಮ್ಮ ಭಕ್ತಿಯ ಕೃಪಾವರವನ್ನು ನೀಡಿ
ಅನಂತಾನಂತ ಸಂತಸವನ್ನು ತಂದುಕೊಡಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                   ಕೀರ್ತ 72 : 28
ನಿನ್ನ ಸಾನಿಧ್ಯ ಸ್ವಾಮಿ ದೇವಾ, ನನಗೆಂಥ ಸೌಭಾಗ್ಯ. ಪ್ರಭು ದೇವಾ, ನಿನ್ನಲ್ಲೇ ನನ್ನ ಭರವಸೆ.

ಅಥವಾ                                             ಮಾರ್ಕ 11 : 23-24
ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ, ಎನ್ನುತ್ತಾರೆ ಪ್ರಭು.              
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಪರಮ ಪಾವನ ಸಂಸ್ಕಾರವನ್ನು ಸ್ವೀಕರಿಸಿದ ನಾವು 
ನಿಮ್ಮ ಪುತ್ರರು ತಮ್ಮ ಸ್ಮರಣೆಗಾಗಿ
ನಾವೇನನ್ನು ಮಾಡಬೇಕೆಂದು ಆದೇಶಿಸಿದರೋ
ಪುಣ್ಯ ಸ್ಮರಣೆಯು
ನಮ್ಮಲ್ಲಿ ಪರಸ್ನೇಹವನ್ನು ಅಧಿಕರಿಸಲೆಂದು ಬೇಡುತ್ತೇವೆ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment