ಸಾಧಾರಣ ಕಾಲದ ಮೂವತ್ತನಾಲ್ಕನೆಯ ಭಾನುವಾರ
ಪ್ರವೇಶ ಶ್ಲೋಕ ಕೀರ್ತ 84 : 9
ತನ್ನ ಜನರಿಗೆ, ಅವರ ಪವಿತ್ರ ವ್ಯಕ್ತಿಗಳಿಗೆ ಹಾಗೂ ಅವರೆಡೆಗೆ ತಿರುಗುವ ಸರ್ವರಿಗೆ ಪ್ರಭು ನುಡಿಯುವುದು ಶಾಂತಿಯನು.
ಸಭಾ ಪ್ರಾರ್ಥನೆ
ಪ್ರಭುವೇ, ನಿಮ್ಮ ವಿಶ್ವಾಸಿಗಳ
ಚಿತ್ತವನ್ನು ಸಚೇತನಗೊಳಿಸಿರಿ.
ನಿಮ್ಮ ದೈವೀಕಾರ್ಯದ ಫಲವನ್ನು ಅವರು
ಉತ್ಸುಕತೆಯಿಂದ ಅರಸುತ್ತಾ
ನಿಮ್ಮ ಕರುಣೆಯ ಸ್ವಾಸ್ಥ್ಯ ನೀಡುವ
ಫಲಗಳನ್ನು ಪಡೆಯಲಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ನಿಮ್ಮ ನಾಮದ ಸ್ತುತಿಗಾಗಿ ನಾವರ್ಪಿಸಬೇಕೆಂದು
ನೀವು ಆದೇಶಿಸಿದ ಪವಿತ್ರ ಕಾಣಿಕೆಗಳನ್ನು ಸ್ವೀಕರಿಸಿ ಪ್ರಭುವೇ,
ಇವುಗಳ ಫಲದಿಂದ ನಿಮ್ಮಾಜ್ಞೆಗಳಿಗೆ ನಾವು ಸದಾ ವಿಧೇಯರಾಗಿ
ನಿಮ್ಮ ಪ್ರಾಮಾಣಿಕ ಪ್ರೀತಿಗೆ ಪಾತ್ರರಾಗುವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 116 : 1-2
ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ, ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ.
ಅಥವಾ ಮತ್ತಾ 28 : 20
ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ, ಎನ್ನುತ್ತಾರೆ ಪ್ರಭು.
ಕೃತಜ್ಞತಾ ಪ್ರಾರ್ಥನೆ
ಸರ್ವಶಕ್ತ ಪ್ರಭು ದೇವರೇ,
ನೀವೀವ ದೈವಿಕ ಭೋಜನದ ಸಂತಸದಲ್ಲಿ
ಪಾಲುಗೊಳ್ಳುವ ನಮ್ಮನ್ನು ಎಂದೆಂದಿಗೂ
ನಿಮ್ಮಿಂದ ಅಗಲಿ ಹೋಗಲು ಬಿಡದಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment