ಪ್ರವೇಶ ಶ್ಲೋಕ ಕೀರ್ತ 87 : 3
ಪ್ರಭೂ, ನನ್ನ ಪ್ರಾರ್ಥನೆ ನಿನ್ನ ಬಳಿ ಸೇರಲಿ. ನನ್ನ ಕೂಗು ನಿನ್ನ ಕಿವಿಗೆ ಬೀಳಲಿ.
ಸಭಾ ಪ್ರಾರ್ಥನೆ
ಸರ್ವಶಕ್ತ ಕರುಣಾಳು ದೇವರೇ,
ನಮಗೆ ಹಾನಿಕರವಾದುದೆಲ್ಲವನ್ನೂ ನಮ್ಮಿಂದ ತೊಲಗಿಸಿರಿ.
ಹೀಗೆ ತನುಮನಗಳಲ್ಲಿ ನಿರಾತಂಕವಾಗಿ
ನಿಮ್ಮ ಚಿತ್ತವನ್ನೇ ನಾವು ನೆರವೇರಿಸುವಂತಾಗಲಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮಗೊಪ್ಪಿಸ ತಂದಿರುವ ಬಲಿವಸ್ತುಗಳನ್ನು
ಒಲುಮೆಯಿಂದ ಈಕ್ಷಿಸಿರಿ.
ನಿಮ್ಮ ಕುಮಾರರ ಯಾತನೆಗಳನ್ನು
ಸಾಂಸ್ಕಾರಿಕವಾಗಿ ಆಚರಿಸುವುದನ್ನು
ನಾವು ಭಕ್ತಿಯುತ ಹೃದಯದಿಂದ
ಗ್ರಹಿಸುವಂತೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 22 : 1-2
ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ? ಹಸಿರುಗಾವಲುಗಳಲೆನ್ನ ತಂಗಿಸುವನು, ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು.
ಅಥವಾ ಲೂಕ 24 : 35
ಪ್ರಭು ಯೇಸು ರೊಟ್ಟಿಯನ್ನು ಮುರಿದುಕೊಡುವಾಗ ಶಿಷ್ಯರು ಅವರನ್ನು ಗುರುತುಹಚ್ಚಿದರು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಪಾವನ ವರದಿಂದ
ಪೋಷಿತರಾದ ನಾವು
ನಿಮ್ಮ ದಯೆಯನ್ನು ಯಾಚಿಸುತ್ತಾ
ನಿಮಗೆ ಕೃತಜ್ಞತೆ ಸಲ್ಲಿಸುತ್ತೇವೆ.
ಪವಿತ್ರಾತ್ಮರಿಂದ ಸ್ವರ್ಗೀಯ ಬಲ ಪಡೆದ ನಾವು
ಪ್ರಾಮಾಣಿಕತೆ ಹಾಗೂ ಯಥಾರ್ಥತೆಯಿಂದ ನಡೆವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment