Thursday, 15 August 2019

ಸಾಧಾರಣ ಕಾಲದ ಏಳನೆಯ ಭಾನುವಾರ

ಪ್ರವೇಶ ಶ್ಲೋಕ                                           ಕೀರ್ತ 12 : 6
ನಿನ್ನಚಲ ಪ್ರೀತಿಯಲ್ಲಿ ನನಗಿದೆ ವಿಶ್ವಾಸ. ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ. ಪ್ರಭು ಮಾಡಿದ ಮಹೋಪಕಾರಗಳಿಗಾಗಿ ಹಾಡುವೆ ಗೀತವನು ಮನಃಪೂರ್ವಕವಾಗಿ.

ಸಭಾ ಪ್ರಾರ್ಥನೆ
ಸರ್ವಶಕ್ತ ದೇವರೇ,
ನಿಜ ಹಾಗೂ ಸರಿಯಾದುದನ್ನೇ ಸದಾ ಧ್ಯಾನಿಸುತ್ತಾ
ನಡೆಯಲ್ಲೂ ನುಡಿಯಲ್ಲೂ ನಿಮಗೆ ಮೆಚ್ಚುಗೆಯಾದುದನ್ನೇ
ನಾವು ಮಾಡುವಂತಾಗಲಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ,
ನಿಮಗೆ ಯೋಗ್ಯವಾದ ಆಚಾರ ವಿಚಾರದಿಂದಲೇ
ನಿಮ್ಮ ರಹಸ್ಯಗಳನ್ನು ಪ್ರವೇಶಿಸುವ ನಾವು
ನಿಮ್ಮ ದಿವ್ಯ ಸನ್ನಿಧಿಗೆ ಅರ್ಪಿಸುವುದೆಲ್ಲಾ
ನಮ್ಮ ರಕ್ಷಣೆಗೆ ಯುಕ್ತವಾಗಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                   ಕೀರ್ತ 9 : 2-3
ಮಹೋನ್ನತನೇ, ನಿನ್ನದ್ಭುತ ಕಾರ್ಯಗಳೆಲ್ಲವನ್ನು ನಾ ವರ್ಣಿಸುವೆನು. ಪರಾತ್ಪರನೇ ಮಾಡುವೆನು ನಿನ್ನ ನಾಮಸ್ತುತಿ, ಹರ್ಷಾನಂದಗೊಳ್ವೆನು ದೇವಾ ನಿನ್ನಲ್ಲತಿ.

ಅಥವಾ                                                ಯೊವಾ 11 : 27
ಪ್ರಭೂ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ, ದೇವರ ಪುತ್ರ, ಲೋಕಕ್ಕೆ ಬರಬೇಕಾದವರು ಎಂದು ನಾನು ವಿಶ್ವಾಸಿಸುತ್ತೇನೆ.   
     
ಕೃತಜ್ಞತಾ ಪ್ರಾರ್ಥನೆ
ಸರ್ವಶಕ್ತ ದೇವರೇ,
ನಾವು ಸ್ವೀಕರಿಸಿದ ಪರಮ ರಹಸ್ಯಗಳ ಮೂಲಕ
ನೀವು ವಾಗ್ದಾನಿಸಿದ ರಕ್ಷಣೆಯನ್ನು
ನಾವು ಅನುಭವಿಸುವಂತಾಗಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment