ಪ್ರವೇಶ ಶ್ಲೋಕ ಕೀರ್ತ 17 : 19-20
ಬಿಕ್ಕಟ್ಟಿನಿಂದ ಬಿಡಿಸಿತಂದನು ಬಯಲಿಗೆ, ಅಕ್ಕರೆಯಿಂದ ಮೆಚ್ಚಿ ರಕ್ಷಕನಾದ ನನಗೆ. ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ.
ಸಭಾ ಪ್ರಾರ್ಥನೆ
ಪ್ರಭುವೇ,
ನಿಮ್ಮ ಶಾಂತಿಯ ರಾಜ್ಯಭಾರವು
ನಮ್ಮ ಭೂಮಂಡಲವನ್ನು ನಡೆಸಲಿ.
ಧರ್ಮಸಭೆಯು ಶಾಂತಿ ಸಾಮರಸ್ಯದಲ್ಲಿ ಆನಂದಿಸಲಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ದೇವರೇ, ನಿಮ್ಮ ನಾಮಸ್ತುತಿಗೆ
ನಾವು ಒಪ್ಪಿಸಬೇಕಾದ ಕಾಣಿಕೆಗಳನ್ನು
ನಮಗೆ ಒದಗಿಸಿಕೊಡುತ್ತೀರಿ.
ನಾವರ್ಪಿಸಿದ ಕಾಣಿಕೆಗಳನ್ನು ನಮ್ಮ ಹೃತ್ಪೂರ್ವಕ ಸೇವೆಯ
ನಿಶಾನಿಯೆಂದೇ ಪರಿಗಣಿಸುತ್ತೀರಿ.
ಪುಣ್ಯಾರ್ಜನೆಗಾಗಿ ನೀವು ನಮಗೆ ನೀಡುವ ಮೂಲ ವಸ್ತುವು
ನಮ್ಮ ಸಂಭಾವನೆಯ ಸಾಧನವೂ ಆಗಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 12 : 6
ಪರಾತ್ಪರ ಪ್ರಭುವಿನ ನಾಮಕ್ಕೆ ಕೀರ್ತನೆಗಳನ್ನು ಹಾಡುವೆ, ಆತ ಮಾಡಿದ ಮಹೋಪಕಾರಗಳಿಗಾಗಿ ಹಾಡುವೆ ಗೀತವನು ಮನಃಪೂರ್ವಕವಾಗಿ.
ಅಥವಾ ಮತ್ತಾ 28 : 20
ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ. ಎನ್ನುತ್ತಾರೆ ಪ್ರಭು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ರಕ್ಷಣಾ ಪ್ರಸಾದದಿಂದ
ತುಂಬಿರುವ ನಾವು ನಮ್ಮನ್ನು ಬಲಪಡಿಸುವ
ಈ ಸಂಸ್ಕಾರದಿಂದ ಅನಂತ ಜೀವನದಲ್ಲಿ
ಪಾಲುಗೊಳ್ಳುವಂತೆ ಮಾಡಿರೆಂದು ನಿಮ್ಮಲ್ಲಿ ಯಾಚಿಸುತ್ತೇವೆ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment