Thursday, 15 August 2019

ಸಾಧಾರಣ ಕಾಲದ ಆರನೆಯ ಭಾನುವಾರ

ಪ್ರವೇಶ ಶ್ಲೋಕ                                          ಕೀರ್ತ 30 : 3-4
ದೇವಾ, ನನ್ನಾಶ್ರಯಗಿರಿ ದುರ್ಗಾಸ್ಥಾನವಾಗಿರು ನೀನೇ. ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ, ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲ.

ಸಭಾ ಪ್ರಾರ್ಥನೆ
ದೇವರೇ,
ನೀತಿಯುತ ಹಾಗೂ ಯಥಾರ್ಥ ಹೃದಯಗಳಲ್ಲಿ
ನೀವು ನೆಲೆಸುತ್ತೀರೆಂದು ನೀವೇ ಸಾರಿದ್ದೀರಿ.
ನಿಮ್ಮ ಕೃಪಾವರದಿಂದ ನೀವು ಮೆಚ್ಚುವ ಜನರು
ನಾವಾಗುವಂತೆ ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ,
ನಮ್ಮ ಕಾಣಿಕೆಯು ನಮ್ಮನ್ನು ಪರಿಶುದ್ಧಗೊಳಿಸಿ ನವೀಕರಿಸಲಿ.
ಹೀಗೆ ನಿಮ್ಮ ಚಿತ್ತವನ್ನು ನೆರವೇರಿಸುವವರಿಗೆ
ಅನಂತ ಸಂಭಾವನೆಯ ಸಂಪನ್ಮೂಲ
ನಾವಾಗುವಂತೆ ಕೃಪೆ ತೋರಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                ಕೀರ್ತ 77 : 29-30 ತೃಪ್ತರಾದರು ಅವರು ಹೊಟ್ಟೆ ತುಂಬ ತಿಂದು. ಅವರು ಬಯಸಿದ್ದನ್ನು ಪ್ರಭು ಒದಗಿಸಿದರು. ಅವರು ನಿರಾಶರಾಗಲಿಲ್ಲ,

ಅಥವಾ                                                 ಯೊವಾ 3 : 16
ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ, ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು. ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ.
                                
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಸ್ವರ್ಗೀಯ ಮೃಷ್ಟಾನ್ನದಿಂದ
ಸಂತೃಪ್ತರಾದ ನಾವು ನಮಗೆ
ನಿಜವಾದ ಜೀವವೀವ ಆಹಾರಕ್ಕಾಗಿ
ನಿತ್ಯವೂ ಹಸಿಯುವಂತೆ ಮಾಡಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment