ಪ್ರವೇಶ ಶ್ಲೋಕ ಕೀರ್ತ 104 : 3-4
ಹಿಗ್ಗಲಿ ಹೃದಯ, ಕೋರಿ ಪ್ರಭುವಿನ ದರ್ಶನ. ಅರಸಿರಿ ಪ್ರಭುವನು, ಆತನ ಶಕ್ತಿಯನು. ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು.
ಸಭಾ ಪ್ರಾರ್ಥನೆ
ಸರ್ವಶಕ್ತ ನಿತ್ಯ ದೇವರೇ, ವಿಶ್ವಾಸ, ನಂಬಿಕೆ
ಪರಸ್ನೇಹವನ್ನು ನಮ್ಮಲ್ಲಿ ಹೆಚ್ಚಿಸಿ
ನೀವು ವಾಗ್ದಾನ ಮಾಡಿದ್ದನ್ನು ನಾವು ಪಡೆಯುವಂತೆ
ನೀವು ಆಜ್ಞಾಪಿಸಿದ್ದನ್ನು ನಾವು ಪ್ರೀತಿಸುವಂತೆ ಮಾಡಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸನ್ನಿಧಿಗೆ ನಾವು ಒಪ್ಪಿಸಲು ತಂದಿರುವ
ಕಾಣಿಕೆಯೆಡೆಗೆ ನಿಮ್ಮ ದೃಷ್ಟಿಯನ್ನು ಹರಿಸಿರಿ.
ನಾವು ಸೇವೆಗೈದುದೆಲ್ಲವೂ
ನಿಮ್ಮ ಮಹಿಮೆಗಾಗಿಯೇ ಆಗುವಂತೆ ಮಾಡಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 19 : 6
ನಿಮ್ಮ ರಕ್ಷಣಾದಾಯಕ ನೆರವಿನಲಿ ಉತ್ಸಾಹಧ್ವನಿ ಮಾಡುವೆವು. ನಮ್ಮ ದೇವರ ನಾಮದಲ್ಲಿ ಹೆಮ್ಮೆಪಡುವೆವು.
ಅಥವಾ ಎಫೆ 5 : 2
ಕ್ರಿಸ್ತ ಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸಂಸ್ಕಾರದಲ್ಲಿ ಅಡಗಿರುವುದನ್ನೆಲ್ಲಾ
ನಮ್ಮಲ್ಲಿ ಸಂಪೂರ್ಣಗೊಳಿಸಿರಿ.
ಸಾಂಸ್ಕಾರಿಕವಾಗಿ ಆಚರಿಸುವುದೆಲ್ಲವನ್ನೂ
ನಾವು ಸಾಕ್ಷಾತ್ತಾಗಿ ಗ್ರಹಿಸುವಂತೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment