Thursday, 15 August 2019

ಸಾಧಾರಣ ಕಾಲದ ಹತ್ತನೆಯ ಭಾನುವಾರ


ಪ್ರವೇಶ ಶ್ಲೋಕ                                         ಕೀರ್ತ 26 : 1-2
ನನಗೆ ಬೆಳಕೂ ನನಗೆ ರಕ್ಷೆ ಪ್ರಭುವೇ. ನಾನಾರಿಗೂ ಅಳುಕೆನು, ನನ್ನ ಬಾಳಿಗಾಧಾರ ಪ್ರಭುವೇ, ನಾನಾರಿಗೂ ಅಂಜೆನು. ಕೇಡುಮಾಡಬಂದರೆನಗೆ ಕೊಲೆಗಡುಕರು ಎಡವಿ ಬಿದ್ದರು ತಾವೇ ಅಳಿದುಹೋದರು.

ಸಭಾ ಪ್ರಾರ್ಥನೆ
ಸರ್ವ ಒಳಿತಿನ ಸಂಪನ್ಮೂಲರಾದ ದೇವರೇ,
ತಮ್ಮ ಅವಶ್ಯಕತೆಗಳಲ್ಲಿ ನಿಮ್ಮನ್ನು ಮೊರೆಯಿಡುವವರ
ಬಿನ್ನಹಗಳನ್ನು ಈಡೇರಿಸಿರಿ.
ನಿಮ್ಮ ಪ್ರೇರಣೆಯಿಂದಲೇ ಸರಿಯಾದುದನ್ನು ಯೋಚಿಸಿ
ನಿಮ್ಮ ಮಾರ್ಗದರ್ಶನದಲ್ಲಿ ಅವುಗಳನ್ನು
ನೆರವೇರಿಸುವಂತೆ ಕೃಪೆ ತೋರಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ,
ನಮ್ಮ ದೀನ ಸೇವೆಯನ್ನು ಲಕ್ಷಿಸಿರಿ.
ನಾವೀಗ ನಿಮಗರ್ಪಿಸುತ್ತಿರುವ ಕಾಣಿಕೆಗಳು
ನಿಮ್ಮ ಮೆಚ್ಚುಗೆ ಪಡೆದು
ನಮ್ಮಲ್ಲಿ ಪ್ರೀತಿವಾತ್ಸಲ್ಯವನ್ನು ಬೆಳೆಸಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                     ಕೀರ್ತ 17 : 3
ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ, ಆತನೇ ನನ್ನ ದೇವ, ನನ್ನಾಶ್ರಯದುರ್ಗ, ಆತನೆನಗೆ ರಕ್ಷಣಾಶೃಂಗ.

ಅಥವಾ                                                1 ಯೊವಾ 4 : 16
ದೇವರು ಪ್ರೀತಿ ಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರು ಅವನಲ್ಲಿ ನೆಲೆಸಿರುತ್ತಾರೆ.      
           
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಸೌಖ್ಯದಾಯಕ ನಿಮ್ಮ ಶಕ್ತಿಯು
ನಮ್ಮಲ್ಲಿರುವ ದುರ್ಗುಣಗಳನ್ನು ನೀಗಿಸಿ
ಸನ್ಮಾರ್ಗದಲ್ಲಿ ನಮ್ಮನ್ನು ನಡೆಸಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment