Thursday, 15 August 2019

ಸಾಧಾರಣ ಕಾಲದ ಹನ್ನೊಂದನೆಯ ಭಾನುವಾರ

ಪ್ರವೇಶ ಶ್ಲೋಕ                                         ಕೀರ್ತ 26 : 7, 9
ಪ್ರಭೂ, ನಿನಗೆ ಮೊರೆಯಿಡುವೆನು ಕರುಣಿಸೆನಗೆ ಸದುತ್ತರವನು, ವಿಮುಖನಾಗಬೇಡ ಪ್ರಭೂ, ಕೋಪದಿಂದೆನ್ನ ತಳ್ಳಬೇಡಯ್ಯಾ, ರಕ್ಷಕ ದೇವಾ, ಎನಗೆ ಸಹಾಯಕ, ದಾಸನ ಕೈಬಿಡಬೇಡಯ್ಯಾ.

ಸಭಾ ಪ್ರಾರ್ಥನೆ
ದೇವರೇ, ನಿಮ್ಮಲ್ಲಿ ನಂಬಿಕೆಯಿಡುವವರಿಗೆ ನೀವೇ ಶಕ್ತಿ.
ಕರುಣೆಯಿಂದ ನಮ್ಮ ಪ್ರಾರ್ಥನೆಯನ್ನಾಲಿಸಿರಿ.
ಮರ್ತ್ಯರಾದ ನಮ್ಮ ಬಲಹೀನತೆಯ ನಿಮಿತ್ತ
ನಿಮ್ಮನ್ನು ಬಿಟ್ಟು ಏನು ಮಾಡಲೂ ನಾವು ಸಮರ್ಥರಲ್ಲ.
ಆದ್ದರಿಂದ ಸದಾ ನಿಮ್ಮ ಕೃಪಾವರದ ಸಹಾಯ ನೀಡಿರಿ.
ಮುಲಕ ನಿಮ್ಮ ಆಜ್ಞೆಗಳನ್ನು ಪಾಲಿಸುತ್ತಾ
ನಿಮಗೆ ಮೆಚ್ಚುಗೆಯಾಗಿ ಬಾಳುವಂತೆ ಕರುಣಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ದೇವರೇ, ನಾವರ್ಪಿಸುವ ಕಾಣಿಕೆಗಳಿಂದ
ಮಾನವಕುಲದ ಆತ್ಮಿಕ ಹಾಗೂ ಶಾರೀರಿಕ ಸ್ವಭಾವಗಳನ್ನು
ಪೋಷಿಸಿ ನವೀಕರಿಸುತ್ತೀರಿ.
ಆಹಾರವು ನಮ್ಮ ತನುಮನಗಳನ್ನು
ಸತತವೂ ಚೇತನಗೊಳಿಸಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                    ಕೀರ್ತ 26 : 4
ನಾನೊಂದನು ಕೋರಿದೆ ಪ್ರಭುವಿನಿಂದ, ನಾನದನ್ನೇ ನಿರೀಕ್ಷಿಸಿದೆ ಆತನಿಂದ. ವಾಸಿಸಬೇಕು ಜೀವಮಾನವೆಲ್ಲಾ ನಾನಾತನ ಮಂದಿರದಲ್ಲಿ.

ಅಥವಾ                                                   ಯೊವಾ 17 : 11

ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಾವು ಸ್ವೀಕರಿಸಿದ ಪರಮ ಪ್ರಸಾದವು
ನಿಮ್ಮ ವಿಶ್ವಾಸಿಗಳಿಗೆ ನಿಮ್ಮೊಡನಿರುವ ಐಕ್ಯತೆಯನ್ನು ಸೂಚಿಸುವಂತೆ
ನಿಮ್ಮ ಧರ್ಮಸಭೆಯಲ್ಲೂ ಐಕ್ಯತೆಯನ್ನು ತರಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment