ಸಾಧಾರಣ ಕಾಲದ ಇಪ್ಪತ್ತನೇ ಭಾನುವಾರ
18/ಹಸಿರು/ಭಾನು
1ನೇ ವಾಚನ- ಯೆರೆ 38: 4-6,8-1೦
ಕೀರ್ತನೆ - 4೦: 1-2, 3, 17
2ನೇ ವಾಚನ - ಹಿಬ್ರಿ 12:1-4
ಶುಭಸಂದೇಶ - ಲೂಕ 12:49-53
1ನೇ ವಾಚನ- ಯೆರೆ 38: 4-6,8-1೦
18/ಹಸಿರು/ಭಾನು
1ನೇ ವಾಚನ- ಯೆರೆ 38: 4-6,8-1೦
ಕೀರ್ತನೆ - 4೦: 1-2, 3, 17
2ನೇ ವಾಚನ - ಹಿಬ್ರಿ 12:1-4
ಶುಭಸಂದೇಶ - ಲೂಕ 12:49-53
1ನೇ ವಾಚನ- ಯೆರೆ 38: 4-6,8-1೦
ಪದಾಧಿಕಾರಿಗಳು ಅರಸನ ಬಳಿಗೆ ಬಂದು, “ಒಡೆಯಾ, ಈ ಯೆರೆಮೀಯನಿಗೆ ಮರಣ ದಂಡನೆಯಾಗಬೇಕು. ಇವನು ನಗರದಲ್ಲಿರುವ ಸೈನಿಕರಿಗೂ ಜನರೆಲ್ಲರಿಗೂ ಇಂಥ ಭವಿಷ್ಯವನ್ನು ನುಡಿಯುತ್ತಾ ಅವರು ಎದೆಗುಂದುವಂತೆ ಮಾಡುತ್ತಿದ್ದಾನೆ. ಅವನು ಹಾರೈಸುವುದು ಜನರ ಕ್ಷೇಮವನ್ನಲ್ಲ ಹಾನಿಯನ್ನೇ,” ಎಂದು ದೂರಿತ್ತರು. ಅದಕ್ಕೆ ಅರಸ ಚಿದ್ಕೀಯನು, “ಇಗೋ, ಯೆರೆಮೀಯನು ನಿಮ್ಮ ಕೈಯಲ್ಲಿದ್ದಾನೆ. ಅರಸನು ನಿಮಗೆ ಅಡ್ಡಬಂದು ಏನೂ ಮಾಡಬಲ್ಲವನಲ್ಲ,” ಎಂದನು. ಅವರು ಯೆರೆಮೀಯನನ್ನು ಹಿಡಿದು ಕಾರಾಗೃಹದ ಅಂಗಳದಲ್ಲಿದ್ದ ರಾಜ ವಂಶೀಯನಾದ ಮಲ್ಕೀಯನ ಬಾವಿಯೊಳಗೆ ಹಗ್ಗಗಳಿಂದ ಇಳಿಸಿ ಅಲ್ಲೇ ಬಿಟ್ಟುಬಿಟ್ಟರು. ಆ ಬಾವಿಯಲ್ಲಿ ನೀರಿರಲಿಲ್ಲ, ಕೆಸರಿತ್ತು. ಯೆರೆಮೀಯನು ಅದರೊಳಗೆ ಹೂತುಕೊಂಡನು. ಅವನು ಅರಮನೆಯಿಂದ ಹೊರಟು, ಬೆನ್ಯಾಮೀನಿನ ಬಾಗಿಲಿನಲ್ಲಿ ಕುಳಿತುಕೊಂಡಿದ್ದ ಅರಸನ ಬಳಿಗೆ ಬಂದು, “ನನ್ನೊಡೆಯಾ, ಅರಸರೇ, ಈ ಜನರು ಪ್ರವಾದಿ ಯೆರೆಮೀಯನಿಗೆ ಮಾಡಿರುವುದೆಲ್ಲ ದುಷ್ಟಕಾರ್ಯವೇ ಸರಿ. ಅವನನ್ನು ಬಾವಿಯಲ್ಲಿ ಹಾಕಿದ್ದಾರೆ. ಆಹಾರವಿಲ್ಲದೆ ಅವನು ಬಿದ್ದಲ್ಲೇ ಸಾಯುವುದು ಖಚಿತ. ಏಕೆಂದರೆ ನಗರದಲ್ಲಿ ರೊಟ್ಟಿಯೆಲ್ಲಾ ತೀರಿಹೋಗಿದೆ,” ಎಂದು ಅರಿಕೆ ಮಾಡಿದನು. ಇದನ್ನು ಕೇಳಿದ ಅರಸನು ಸುಡಾನಿನ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿ ಆಳುಗಳನ್ನು ಕರೆದುಕೊಂಡು ಹೋಗಿ ಪ್ರವಾದಿ ಯೆರೆಮೀಯನು ಸಾಯುವ ಮೊದಲೇ, ಅವನನ್ನು ಬಾವಿಯಿಂದ ಎತ್ತಿಸು,” ಎಂದು ಅಪ್ಪಣೆಕೊಟ್ಟನು.
ಕೀರ್ತನೆ - 4೦: 1-2, 3, 17
1 : ಕಾದಿದ್ದೆನು, ಪ್ರಭುವಿಗಾಗಿ ಕಾದಿದ್ದೆನು / ಕೊನೆಗಾತ ನನ್ನತ್ತ ಬಾಗಿ ಕಿವಿಗೊಟ್ಟನು //
2 : ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ | ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ ||
3 : ಬರಿಸಿದನು ನವಗೀತೆಯನು, ದೇವಸ್ತುತಿಯನು ನನ್ನ ಬಾಯಲಿ | ಇದ ಕಂಡವರು ಭಯಪಡುವರು, ಇಡುವರು ಭರವಸೆ ಪ್ರಭುವಿನಲಿ ||
17 : ಬಡವನು, ದುರ್ಬಲನು ಆದೆನಗೆ ಪ್ರಭೂ, ನೀ ಹಿತಚಿಂತಕನು / ತಡಮಾಡಬೇಡ ದೇವಾ, ನೀನೆನಗುದ್ಧಾರಕನು, ಸಹಾಯಕನು //
2ನೇ ವಾಚನ - ಹಿಬ್ರಿ 12:1-4
ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದು ಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು ಸ್ಥಿರಚಿತ್ತದಿಂದ ಭಾಗವಹಿಸೋಣ. ವಿಶ್ವಾಸವನ್ನು ಹುಟ್ಟಿಸುವ ಮತ್ತು ಅದನ್ನು ಪರಿಪೂರ್ಣಗೊಳಿಸುವ ಯೇಸುಸ್ವಾಮಿಯನ್ನು ಗುರಿಯಾಗಿಟ್ಟು ಓಡೋಣ. ಅವರು ತಮ್ಮ ಮುಂದಿಡಲಾದ ಸೌಭಾಗ್ಯವನ್ನು ಗಳಿಸಲು ನಿಂದೆ ಅವಮಾನಗಳನ್ನು ಲೆಕ್ಕಿಸದೆ ಶಿಲುಬೆಯ ಮರಣವನ್ನು ಸಹಿಸಿಕೊಂಡರು. ಈಗಲಾದರೋ ದೇವರ ಸಿಂಹಾಸನದ ಬಲಗಡೆ ಆಸೀನರಾಗಿದ್ದಾರೆ. ಪಾಪಿಗಳಿಂದ ತಮಗುಂಟಾದ ಕಠಿಣ ವಿರೋಧವನ್ನು ಯೇಸುಸ್ವಾಮಿ ಹೇಗೆ ಸಹಿಸಿಕೊಂಡರೆಂಬುದನ್ನು ಮನಸ್ಸಿನಲ್ಲಿಡಿ. ಆಗ ನೀವು ಬೇಸತ್ತು ಎದೆಗುಂದಲಾರಿರಿ. ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ.
ಶುಭಸಂದೇಶ - ಲೂಕ 12:49-53
“ನಾನು ಬಂದಿರುವುದು ಜಗತ್ತಿನಲ್ಲಿ ಬೆಂಕಿಯನ್ನು ಹೊತ್ತಿಸಲು. ಅದು ಈಗಾಗಲೇ ಉರಿಯುತ್ತಿರಬೇಕೆಂಬುದೇ ನನ್ನ ಬಯಕೆ. ಆದರೆ ನಾನು ಪಡೆಯಬೇಕಾದ ಶ್ರಮಾಸ್ನಾನ ಒಂದುಂಟು. ಅದು ಈಡೇರುವ ತನಕ ನನಗೆ ನೆಮ್ಮದಿಯಿಲ್ಲ. ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆ ಎಂದು ಭಾವಿಸುತ್ತೀರೋ? ಇಲ್ಲ. ಭಿನ್ನಭೇದಗಳನ್ನು ಉಂಟುಮಾಡಲು ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐವರಲ್ಲಿ, ಇಂದಿನಿಂದ ಇಬ್ಬರಿಗೆ ವಿರುದ್ಧ ಮೂವರು, ಮೂವರಿಗೆ ವಿರುದ್ಧ ಇಬ್ಬರು ವಿಭಾಗವಾಗುವರು. ಮಗನಿಗೆ ವಿರುದ್ದವಾಗಿ ತಂದೆ, ಮಗಳಿಗೆ ವಿರುದ್ಧವಾಗಿ ತಾಯಿ, ಸೊಸೆಗೆ ವಿರುದ್ಧವಾಗಿ ಅತ್ತೆ, ಪರಸ್ಪರ ವಿರೋಧವಾಗಿ ವಿಂಗಡಿಸಿ ಹೋಗುವರು,” ಎಂದರು.
ಚಿಂತನೆ
ಪ್ರವಾದಿ ಯೆರೆಮಿಯನ ಕಾಲ ಕ್ರಿಸ್ತಪೂರ್ವ ೬೫೦-೫೮೦. ತನ್ನ ಈ ದೀರ್ಘಕಾಲದ ಸೇವಾವಧಿಯಲ್ಲಿ ದೇವಜನರಿಗೂ ಅವರ ನಾಡಿಗೂ ಬಂದೊದಗಲಿದ್ದ ಗಂಡಾಂತರಗಳನ್ನು ಮುಂತಿಳಿಸಿ, ಜನರನ್ನು ಎಚ್ಚರಿಸುವುದು ಆತನ ಕೆಲಸವಾಗಿತ್ತು. ಯೆರೀಮಿಯನು ಜುದೇಯದಲ್ಲಿ ಪ್ರವಾದನೆ ಮಾಡಿದ ಸಂದರ್ಭದಲ್ಲಿಯೇ ಮೆಸಪಟೋಮಿಯದಲ್ಲಿ ಬ್ಯಾಬಿಲೋಮಿಯರು ತುಂಬ ಬಲಿಷ್ಠರಾಗಿ ಬೆಳೆದರು, ಚಿಕ್ಕ ರಾಜ್ಯಗಳಿಂದ ಕಪ್ಪಕಾಣಿಕೆಯನ್ನು ಬಯಸಿದರು. ತಮಗೆ ವಿಧೇಯರಾಗದವರ ಮೇಲೆ ದಂಡೆತ್ತಿ ಹೋದರು. ಈ ಸಂದರ್ಭದಲ್ಲಿ ಜುದೇಯವನ್ನು ಅರಸ ಚಿದ್ಕೀಯನು ಆಳುತ್ತಿದ್ದನು. ಆಸ್ಥಾನದ ಅನೇಕರು ಅರಸನಿಗೆ ಈಜಿಪ್ಪಿನವರ ಸಹಾಯ ಕೋರುವಂತೆ ಸೂಚಿಸಿದರು. ಆದರೆ ಯೆರೆಮಿಯನು ಬಾಬಿಲೋನಿಯರಿಗೆಅ ಅಧೀನರಾಗುವುದು ಉತ್ತಮವೆಂದು ಸಲಹೆ ನೀಡುತ್ತಾನೆ. ಇದನ್ನು ಸಹಿಸದ ಜುದೇಯದ ಅಧಿಕಾರಿಗಳು ಅರಸನನ್ನು ಯೆರೆಮೀಯನ ವಿರುದ್ಧ ಎತ್ತಿಕಟ್ಟುತ್ತಾರೆ. ಯೆರೆಮಿಯನನ್ನು ಬಾವಿಯಲ್ಲಿ ಹಾಕುತ್ತಾರೆ, ಸುಟಾನಿನ ಎಬೆದ್ಮೆಲೆಕನು ಯೆರೆಮಿಯನನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸುತ್ತಾರೆ. ಅರಸ ಚಿದ್ಕೀಯನು ಯೆರೆಮೀಯನ ಮಾತನು ಆಲಿಸದೆ ಜುದೇಯದ ನಾಶಕ್ಕೆ ಕಾರಣನಾಗುತ್ತಾನೆ. ಕ್ರಿ.ಪೂ ೫೮೭ರಲ್ಲಿ ಬ್ಯಾಬಿಲೋನಿಯವರು ಜುದೇಯವನ್ನು ಸಂಪೂರ್ಣವಾಗಿ ನಾಶಪಡಿಸುತ್ತಾರೆ. ಪ್ರವಾದಿಯ ಮಾತನ್ನು ಆಲಿಸದೆ ಅರಸ ತನ್ನ ಪ್ರಾಣವನ್ನು ಕಳೆದುಕೊಂಡ ಹಾಗೂ ರಾಜ್ಯದ ಪತನಕ್ಕೂ ಕಾರಣನಾದ.
ತಂದೆ ತಾಯಿಯರ ಗರುಹಿರಿಯರ ಹಿತವಚನಗಳು ಮಕ್ಕಳಿಗೆ ಮಧುರವಾಗಿ ಇರೋದಿಲ್ಲ. ಅವರ ಮಾತನ್ನು ಮಾರ್ಗದರ್ಶನವನ್ನು ಅನುಸರಿದೆ ಹಾಳಾಗಿರುವ ಮಕ್ಕಳು ಯಥೇಚ್ಛವಾಗಿ ನಮ್ಮ ಮಧ್ಯೆ ಜೀವಿಸುತ್ತಿದ್ದಾರೆ. ತಂದೆ ತಾಯಿಯರು, ಗುರುಗಳು ಯೆರೆಮೀಯನಂಟೆ ಮಕ್ಕಳು ಹಾದಿತಪ್ಪಿದಾಗ ಎಚ್ಚರಿಸಿ, ತಿದ್ದುವ ಜವಾಬ್ದಾರಿ ಹೊಂದಿದ್ದಾರೆ.

No comments:
Post a Comment