ಸಾಧಾರಣ ಕಾಲದ ಹದಿನೆಂಟನೇ ವಾರ ಬುಧವಾರ
7/ಹಸಿರು/ಬುಧ/
1ನೇ ವಾಚನ - ಸಂಖ್ಯಾ 13:1-2,25-14:1,26-29,34-35
ಕೀರ್ತನೆ - 1೦6: 6-7, 13-14, 21-23
ಶುಭಸಂದೇಶ - ಮತ್ತಾಯ 15: 21-28
1ನೇ ವಾಚನ - ಸಂಖ್ಯಾ 13:1-2,25-14:1,26-29,34-35
7/ಹಸಿರು/ಬುಧ/
1ನೇ ವಾಚನ - ಸಂಖ್ಯಾ 13:1-2,25-14:1,26-29,34-35
ಕೀರ್ತನೆ - 1೦6: 6-7, 13-14, 21-23
ಶುಭಸಂದೇಶ - ಮತ್ತಾಯ 15: 21-28
1ನೇ ವಾಚನ - ಸಂಖ್ಯಾ 13:1-2,25-14:1,26-29,34-35
ಸರ್ವೇಶ್ವರಸ್ವಾಮಿ ಮೋಶೆಗೆ, “ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ ನೋಡಿಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು,” ಎಂದು ಆಜ್ಞಾಪಿಸಿದರು. ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದಮೇಲೆ ಅವರು ಹಿಂದಿರುಗಿ ಬಂದರು. ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗು ಇಸ್ರಯೇಲ್ ಜನಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು. ಮೋಶೆಗೆ, “ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು-ಜೇನು ಹರಿಯುವಂಥ ನಾಡು. ಅಲ್ಲಿನ ಹಣ್ಣುಹಂಪಲುಗಳು ಇಂಥವು. ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ‘ಅನಕಿಮ್’ ವಂಶಸ್ಥರನ್ನು ಕಂಡೆವು. ದಕ್ಷಿಣ ಪ್ರಾಂತ್ಯದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು, ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರತೀರದಲ್ಲಿ ಹಾಗೂ ಜೋರ್ಡನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ,” ಎಂದು ವರದಿ ಮಾಡಿದರು. ಆಗ ಮೋಶೆಗೆ ವಿರುದ್ಧ ಗೊಣಗುಟ್ಟುತ್ತಿದ್ದ ಅವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, “ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಮ್ಮಿಂದ ಸಾಧ್ಯ,” ಎಂದನು. ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, “ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯಸಾಧಿಸಲು ನಮಗೆ ಶಕ್ತಿ ಸಾಲದು,” ಎಂದರು. ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. “ನಾವು ಸಂಚಾರಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು. ಅಲ್ಲಿ ‘ನೆಫೀಲಿಯರನ್ನು’ ಅಂದರೆ ನೆಫೀಲಿಯನ ವಂಶದವರಾದ ‘ಅನಕಿಮ್’ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆಯೆ ಕಾಣಿಸಿಕೊಂಡೆವು,” ಎಂದರು. ಜನರೆಲ್ಲರು, ಈ ವರದಿಯನ್ನು ಕೇಳಿ ಗಟ್ಟಿಯಾಗಿ ಗೋಳಿಟ್ಟರು. ರಾತ್ರಿಯೆಲ್ಲಾ ಅಳುತ್ತಿದ್ದರು. ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ: “ನನಗೆ ವಿರೋಧವಾಗಿ ಗೊಣಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ಕಾಲ ಸಹಿಸಲಿ! ಈ ಇಸ್ರಯೇಲರು ನನಗೆ ವಿರುದ್ಧ ಗೊಣಗುಟ್ಟುವ ಮಾತುಗಳು ನನಗೆ ಕೇಳಿಸಿವೆ. ನೀವು ಅವರಿಗೆ ಹೀಗೆ ಹೇಳಬೇಕು: ‘ಸರ್ವೇಶ್ವರ ಹೇಳುವುದೇನೆಂದರೆ - ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಆಡಿಕೊಂಡ ಪ್ರಕಾರವೇ ನಾನು ಮಾಡುತ್ತೇನೆ. ನಿಮ್ಮ ಶವಗಳು ಈ ಮರುಭೂಮಿಯಲ್ಲೇ ಬೀಳುವುವು. ನೀವು ನನಗೆ ವಿರೋಧವಾಗಿ ಗೊಣಗಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರೂ ಅಂದರೆ, ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ; ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳುವಿರಿ. ಇದು ಸರ್ವೇಶ್ವರನೆಂಬ ನಾನೇ ಹೇಳಿದ ಮಾತು. ನನಗೆ ವಿರೋಧವಾಗಿ ಒಟ್ಟು ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಮಾಡಿಯೇ ತೀರುವೆನು. ಮರುಭೂಮಿಯಲ್ಲೇ ಅವರೆಲ್ಲರು ಸಾಯಬೇಕು,” ಎಂದು ಹೇಳಿದರು.
ಕೀರ್ತನೆ - 1೦6: 6-7, 13-14, 21-23
6 : ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು / ಅಕ್ರಮಗೈದೆವು, ಅಪರಾಧಿಗಳಾದೆವು //
7 : ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ / ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ / ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು ಕೆಂಗಡಲಬಳಿ //
13 : ಆದರೆ ಮರೆತರು ಬೇಗನೆ ಆತನ ಸತ್ಕಾರ್ಯಗಳನು / ಕಾಯದೆ ಹೋದರು ಆತನಾ ಸಂಕಲ್ಪ ಸಾಧನೆಯನು //
14 : ಆಶಾಪಾಶಗಳಿಗೆ ಈಡಾದರು ಅಡವಿಯೊಳು / ದೇವನನೇ ಪರಿಶೋಧಿಸಿದರು ಅರಣ್ಯದೊಳು //
21 : ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು / ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು //
22 : ಹಾಮನಾಡಿನಲಿ ಮಾಡಿದ ಅದ್ಭುತಗಳನು / ಕೆಂಗಡಬಳಿ ನಡೆದ ಘೋರ ಕೃತ್ಯಗಳನು //
23 : ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು / ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು / ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು //
ಶುಭಸಂದೇಶ - ಮತ್ತಾಯ 15: 21-28
ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. "ಸ್ವಾವಿೂ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟ ಪಡುತ್ತಿದ್ದಾಳೆ," ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, "ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ," ಎಂದು ಕೇಳಿಕೊಂಡರು.
ಆಗ ಯೇಸು, "ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ," ಎಂದರು. ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, "ಸ್ವಾವಿೂ, ಸಹಾಯ ಮಾಡಿ," ಎಂದು ಯಾಚಿಸಿದಳು. ಅದಕ್ಕೆ ಯೇಸು, "ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ," ಎಂದರು. ಆಗ ಆಕೆ, "ಅದು ನಿಜ ಸ್ವಾವಿೂ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?" ಎಂದು ಮರುತ್ತರ ಕೊಟ್ಟಳು. ಆಗ ಯೇಸು, "ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ," ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.
ಚಿಂತನೆ:
ಇಂದಿನ ಮೊದಲನೆಯ ವಾಚನದಲ್ಲಿ ಇಸ್ರಾಯೇಲರು ಗೊಣಗುಟ್ಟುತ್ತಾರೆ. ಈಜಿಪ್ಟಿನಲ್ಲಿ ಗುಲಾಮರಾಗಿದ್ದ ಅವರನ್ನು ಮೋಶೆಯ ನಾಯಕತ್ವದಲ್ಲಿ ಸರ್ವೇಶ್ವರಸ್ವಾಮಿ ಅವರನ್ನು ಬಿಡುಗಡೆ ಗೊಳಿಸಿ ಹಾಲು-ಜೇನು ಹರಿಯುವ ನಾಡಾದ ಕಾನಾನನ್ನು ಸೇರಿಸಬೇಕೆಂದು ಬಯಸಿದರು. ಆದರೆ ಜನರು ದೇವರ ಮಹಾತ್ಕಾರ್ಯಗಳನ್ನು ಮರೆತರು, ದೇವರ ವಿರುದ್ಧ ಹಾಗು ಮೋಶೆಯ ವಿರುದ್ಧ ಗೊಣಗುಟ್ಟಿ ದೇವರ ಕೋಪಾಗ್ನಿಗೆ ಗುರಿಯಾದರು. ಹಾಗಾಗಿ 40 ವರ್ಷ ಮರುಭೂಮಿಯಲ್ಲಿ ಅಲೆದಾಡಿ ಸತ್ತರು. ಅವರ ಮುಂದಿನ ಜನಾಂಗ ಕಾನಾನ್ ನಾಡನ್ನು ಪ್ರವೇಶಿಸಿತು.
ಗೊಣಗುವ ಸ್ವಭಾವ ಇರುವ ಮನುಷ್ಯ ತನಗೂ ಒಳ್ಳೆಯದನ್ನು ಮಾಡಿಕೊಳ್ಳುವುದಿಲ್ಲ, ಯಾರೊಬ್ಬರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಗೊಣಗುವಿಕೆಯ ಮೂಲಕ ಎಲ್ಲರನ್ನು ನಿರುತ್ಸಾಹಿಗಳನ್ನಾಗಿ ಮಾಡುತ್ತಾನೆ. ಇರುವುದರಲ್ಲಿ ತೃಪ್ತನಾಗದೆ ಯಾವುದು ಸರಿಯಲ್ಲ, ಎಲ್ಲವೂ ಕೆಟ್ಟಿದೆಯೆಂದು ಗೊಣಗುವ ಮನುಷ್ಯನು ಯಾವುದನ್ನು ಸರಿಮಾಡದೆ, ತನ್ನ ಅನಾರೋಗ್ಯ ಸ್ವಭಾವವನ್ನು ತೋರ್ಪಡಿಸುತ್ತಾನೆ.
ಇಂದಿನ ಮೊದಲನೆಯ ವಾಚನದಲ್ಲಿ ಇಸ್ರಾಯೇಲರು ಗೊಣಗುಟ್ಟುತ್ತಾರೆ. ಈಜಿಪ್ಟಿನಲ್ಲಿ ಗುಲಾಮರಾಗಿದ್ದ ಅವರನ್ನು ಮೋಶೆಯ ನಾಯಕತ್ವದಲ್ಲಿ ಸರ್ವೇಶ್ವರಸ್ವಾಮಿ ಅವರನ್ನು ಬಿಡುಗಡೆ ಗೊಳಿಸಿ ಹಾಲು-ಜೇನು ಹರಿಯುವ ನಾಡಾದ ಕಾನಾನನ್ನು ಸೇರಿಸಬೇಕೆಂದು ಬಯಸಿದರು. ಆದರೆ ಜನರು ದೇವರ ಮಹಾತ್ಕಾರ್ಯಗಳನ್ನು ಮರೆತರು, ದೇವರ ವಿರುದ್ಧ ಹಾಗು ಮೋಶೆಯ ವಿರುದ್ಧ ಗೊಣಗುಟ್ಟಿ ದೇವರ ಕೋಪಾಗ್ನಿಗೆ ಗುರಿಯಾದರು. ಹಾಗಾಗಿ 40 ವರ್ಷ ಮರುಭೂಮಿಯಲ್ಲಿ ಅಲೆದಾಡಿ ಸತ್ತರು. ಅವರ ಮುಂದಿನ ಜನಾಂಗ ಕಾನಾನ್ ನಾಡನ್ನು ಪ್ರವೇಶಿಸಿತು.
ಗೊಣಗುವ ಸ್ವಭಾವ ಇರುವ ಮನುಷ್ಯ ತನಗೂ ಒಳ್ಳೆಯದನ್ನು ಮಾಡಿಕೊಳ್ಳುವುದಿಲ್ಲ, ಯಾರೊಬ್ಬರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಗೊಣಗುವಿಕೆಯ ಮೂಲಕ ಎಲ್ಲರನ್ನು ನಿರುತ್ಸಾಹಿಗಳನ್ನಾಗಿ ಮಾಡುತ್ತಾನೆ. ಇರುವುದರಲ್ಲಿ ತೃಪ್ತನಾಗದೆ ಯಾವುದು ಸರಿಯಲ್ಲ, ಎಲ್ಲವೂ ಕೆಟ್ಟಿದೆಯೆಂದು ಗೊಣಗುವ ಮನುಷ್ಯನು ಯಾವುದನ್ನು ಸರಿಮಾಡದೆ, ತನ್ನ ಅನಾರೋಗ್ಯ ಸ್ವಭಾವವನ್ನು ತೋರ್ಪಡಿಸುತ್ತಾನೆ.
No comments:
Post a Comment