ಸಾಧಾರಣ ಕಾಲದ ಹದಿನೆಂಟನೇ ವಾರ ಗುರುವಾರ
8/ಬಿಳಿ/ಗುರು/ಸಂತಡೊಮಿನಿಕ್, (ಯಾ) (ಸ್ಮರಣೆ)
1ನೇ ವಾಚನ - ಸಂಖ್ಯಾ 2೦: 1-13
ಕೀರ್ತನೆ - 95: 1-2, 6-9
ಶುಭಸಂದೇಶ - ಮತ್ತಾಯ 16: 13-23
8/ಬಿಳಿ/ಗುರು/ಸಂತಡೊಮಿನಿಕ್, (ಯಾ) (ಸ್ಮರಣೆ)
1ನೇ ವಾಚನ - ಸಂಖ್ಯಾ 2೦: 1-13
ಕೀರ್ತನೆ - 95: 1-2, 6-9
ಶುಭಸಂದೇಶ - ಮತ್ತಾಯ 16: 13-23
1ನೇ ವಾಚನ - ಸಂಖ್ಯಾ 2೦: 1-13
ಇಸ್ರಯೇಲ್ ಸಮಾಜದವರು ಮೊದಲನೆಯ ತಿಂಗಳಲ್ಲಿ ‘ಚಿನ್’ ಎಂಬ ಮರುಭೂಮಿಗೆ ಬಂದು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಮೃತಳಾದಳು; ಆಕೆಯನ್ನು ಅಲ್ಲೇ ಸಮಾಧಿ ಮಾಡಿದರು. ಜನರಿಗೆ ನೀರು ಇಲ್ಲದೆ ಹೋಯಿತು. ಅವರು ಮೋಶೆ ಮತ್ತು ಆರೋನರ ವಿರುದ್ಧ ಸಭೆ ಸೇರಿ ಮೋಶೆಯ ಸಂಗಡ ವಾದಿಸತೊಡಗಿದರು: “ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಬಂಧು ಬಳಗದವರು ಸತ್ತಂತೆ ನಾವೂ ಸತ್ತು ಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ನೀವು ಸರ್ವೇಶ್ವರನ ಪ್ರಜೆಯಾದ ನಮ್ಮನ್ನು ಈ ಮರಳುಗಾಡಿಗೆ ಕರೆದುಕೊಂಡು ಬಂದುದೇಕೆ? ನಾವೂ ನಮ್ಮ ಜಾನುವಾರಗಳೂ ಇಲ್ಲಿ ಸಾಯಬೇಕೆಂದೋ? ಈಜಿಪ್ಟ್ ದೇಶದಿಂದ ನಮ್ಮನ್ನು ಬರಮಾಡಿದ್ದು ಈ ಕೀಳು ಸ್ಥಳಕ್ಕೆ ಸೇರಿಸಲಿಕ್ಕೋ? ಈ ನೆಲದಲ್ಲಿ ದವಸಧಾನ್ಯ ಬೆಳೆಯುವಂತಿಲ್ಲ; ಅಂಜೂರವಿಲ್ಲ, ದ್ರಾಕ್ಷಿಯಿಲ್ಲ, ದಾಳಿಂಬೆಯಿಲ್ಲ, ಕುಡಿಯುವುದಕ್ಕೆ ನೀರು ಕೂಡ ಇಲ್ಲ,” ಎಂದು ದೂರಿದರು. ಮೋಶೆ ಮತ್ತು ಆರೋನರು ಆ ಜನಸಂದಣಿಯನ್ನು ಬಿಟ್ಟು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಬಂದು ಸಾಷ್ಟಾಂಗವೆರಗಿದರು. ಆಗ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು. ಆಗ ಸರ್ವೇಶ್ವರ ಮೋಶೆಗೆ, “ನೀನು ಆ ಕೋಲನ್ನು ಕೈಗೆ ತೆಗೆದುಕೋ. ನೀನು ಮತ್ತು ನಿನ್ನ ಸಹೋದರ ಆರೋನನು ಜನಸಮೂಹದವರನ್ನು ಸಭೆ ಸೇರಿಸಿರಿ. ಅವರೆಲ್ಲರ ಎದುರಿನಲ್ಲೇ ನೀರುಕೊಡಬೇಕೆಂದು ಆ ಕಡಿದಾದ ಬಂಡೆಗೆ ಆಜ್ಞೆಮಾಡು. ಅದರಿಂದ ನೀರು ಹೊರಟು ಬರುವುದು. ಅದನ್ನು ಜನಸಮೂಹದವರಿಗೂ ಅವರ ಜಾನುವಾರಗಳಿಗೂ ಕುಡಿಯಲು ಕೊಡಬಹುದು,” ಎಂದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆ ಕೋಲನ್ನು ಅವರ ಸನ್ನಿಧಿಯಿಂದ ತೆಗೆದು ಕೊಂಡನು. ಆರೋನನ ಜೊತೆಯಲ್ಲಿ ಜನ ಸಮೂಹದವರ ಬಳಿಗೆ ಹೋಗಿ ಕಡಿದಾದ ಆ ಬಂಡೆಗೆದುರಾಗಿ ಅವರನ್ನು ಸಭೆಸೇರಿಸಿದನು. ಅವರನ್ನು ಸಂಬೋಧಿಸುತ್ತಾ, “ದಂಗೆಕಾರರೇ ಕೇಳಿ: ಈ ಬಂಡೆಯಿಂದ ನಿಮಗೆ ನಾವು ನೀರನ್ನು ಬರಮಾಡಬೇಕೋ,” ಎಂದು ಹೇಳಿ ಕೈಯೆತ್ತಿ ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡುಸಾರಿ ಹೊಡೆದನು. ನೀರು ಪ್ರವಾಹವಾಗಿ ಹೊರಟಿತು. ಜನಸಮೂಹದವರೂ ಅವರ ಜಾನುವಾರಗಳೂ ಕುಡಿದರು. ಬಳಿಕ ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ, “ನೀವು ನನ್ನನ್ನು ನಂಬದೇ ಹೋದಿರಿ. ಇಸ್ರಯೇಲರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದಿರಿ. ಆದುದರಿಂದ ಈ ಸಮಾಜದವರನ್ನು ನಾನು ವಾಗ್ದಾನಮಾಡಿದ ನಾಡಿಗೆ ನೀವು ಕರೆದುಕೊಂಡು ಹೋಗಕೂಡದು,” ಎಂದು ಹೇಳಿದರು. ಇಸ್ರಯೇಲರು ಅಲ್ಲಿ ಸರ್ವೇಶ್ವರನ ಸಂಗಡ ವಾದಮಾಡಿದ್ದರಿಂದ ಆ ನೀರಿನ ಪ್ರವಾಹಕ್ಕೆ ‘ಮೆರಿಬಾ’ ಎಂದು ಹೆಸರಾಯಿತು. ಅಲ್ಲಿ ಸರ್ವೇಶ್ವರ ತಮ್ಮ ಪರಮ ಪಾವನತೆಯನ್ನು ವ್ಯಕ್ತಪಡಿಸಿದರು.
ಕೀರ್ತನೆ - 95: 1-2, 6-9
1:ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ / ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ //
2:ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ / ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ //
5:ಸಮುದ್ರವು ಆತನದೆ-ಅದ ನಿರ್ಮಿಸಿದವ ಆತನೆ | ಒಣನೆಲವು ಆತನದೆ-ಅದ ರೂಪಿಸಿದವ ಆತನೆ ||
6: ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ | ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ ||
7 :ಆತನೆಮ್ಮ ದೇವರು, ನಾವು ಆತನ ಕೈಮಂದೆ | ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ ||
8:ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ | ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ ||
9:ನೋಡಿದರಾದರೂ ನನ್ನ ಮಹತ್ಕಾರ್ಯಗಳನು | ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು ||
ಶುಭಸಂದೇಶ - ಮತ್ತಾಯ 16: 13-23
ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆವಿೂಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ.
ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು." ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ‘ಅಭಿಷಿಕ್ತರಾದ ಲೋಕೋದ್ಧಾರಕ’ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ," ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ," ಎಂದರು.
ಚಿಂತನೆ:
ಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ
ಮೆರಿಬಾದಲಿ, ಮಸ್ಸಾ ಮರುಭೂಮಿಯಲ್ಲಿ ಅವರು ಮಾಡಿದಂತೆ
ಒಬ್ಬ ವ್ಯಕ್ತಿಯು ಕನಸ್ಸನ್ನು ಕಂಡನು. ಆತನ ಹಳೇ ಜೀವನದ ನೆನಪುಗಳು ಒಂದೊಂದಾಗಿ ಸ್ಮೃತಿಪಟಲದಲ್ಲಿ ಹೊಳೆದವು. ಒಂದೊಂದು ದೃಶ್ಯದಲ್ಲೂ ಎರಡೆರಡು ಜೊತೆ ಹೆಜ್ಜೆ ಕಾಣಿಸಿದವು. ಒಂದು ಆತನದು; ಮತ್ತೊಂದು ದೇವರದು. ಕೊನೆಗೆ ಕೆಲವು ಚಿತ್ರಗಳಲ್ಲಿ ಒಂದೊಂದೇ ಹೆಜ್ಜೆ ಇತ್ತು. ಪುನಃ ಚಿತ್ರಗಳನ್ನು ನೋಡಿದ. ಅವೆಲ್ಲಾ ಆತನ ಬಾಳಿನ ಅತೀ ಕಷ್ಟದ ಕ್ಷಣಗಳು. ದೇವರ ಮೇಲೆ ಆತನಿಗೆ ಕೋಪ ಬಂತು. ಅಲ್ಲಾ ದೇವ್ರೆ, ನೀವು ಈ ರೀತಿ ಮೋಸ ಮಾಡ್ಬೋದಾ? ನಗ್‌ನಗ್ತಾ ಇದ್ದಾಗ ಜೊತೆಗಿದ್ದು ಕಷ್ಟ ಬಂದಾಗ ಓಡೋಗ್ಬಿಟ್ರಾ? ಆತನ ಕಣ್ಣು ಸಿಟ್ಟಿನಿಂದ ಕೆಂಪಾಗಿತ್ತು. ನೋವಿನಿಂದ ಕಣ್ಣಲ್ಲಿ ನೀರಿಳೀತಾ ಇತ್ತು.
ದೇವರು ಮುಗುಳ್ನಕ್ಕರು. ಕಂದಾ, ಕೇಳಿಲ್ಲಿ, ನಿನ್ನ ಅತೀ ಕಷ್ಟದ ದಿನಗಳಲ್ಲಿ, ನೋವಿನ ಕ್ಷಣಗಳಲ್ಲಿ, ನೀನು ನಡೀಲಿಲ್ಲ. ನಿನ್ನನ್ನು ನಡೆಯಕ್ಕೆ ನಾನು ಬಿಡ್ಲಿಲ್ಲ. ಬದ್ಲಾಗಿ ನಿನ್ನನ್ನು ನನ್ನ ಹೆಗ್ಲ ಮೇಲೆ ಹೊತ್ಕೊಂಡು ನಾನು ನಡೀತಿದ್ದೆ. ಆದ್ರಿಂದ ಅಲ್ಲಿರೋದು ಒಂದೇ ಜೊತೆ ಹೆಜ್ಜೆಗಳು. ಶಾಂತವಾಗಿ ದೇವರು ಹೇಳುತ್ತಾ ಇದ್ದಾಗ ಆ ವ್ಯಕ್ತಿಯು ಮನಸ್ಸು ನಾಚಿ ನೀರಾಗಿ ಹೋಯ್ತು. ದೇವರ ಪ್ರೀತಿಯ ಮುಂದೆ ಆತ ಕರಗಿ ಹೋದ.
ಇಂದಿನ ಮೊದಲನೆಯ ವಾಚನದಲ್ಲಿ ಇಸ್ರಯೇಲ್ ಸಮಾಜದವರು ಮರಳುಗಾಡಿನಲ್ಲಿ ನೀರಿನ ಅಭಾವವಾದಾಗ ಜಿಗುಪ್ಸೆಗೊಂಡು ದೇವರ ಹಾಗೂ ಮೋಶೆಯ ವಿರುದ್ಧ ಪ್ರತಿಭಟಿಸುತ್ತಾರೆ. ದೇವರ ಅಪಾರ ಶಕ್ತಿಯನ್ನು ವಿಶ್ವಾಸಿಸದೆ ದೇವರಿಗೆ ಅವಿಧೇಯರಾಗಿ ನಡೆಯುತ್ತಾರೆ. ಆದರೆ ದೇವರು ಕರುಣೆಯಿಂದ ತಮ್ಮ ಜನರಿಗೆ ಬಂಡೆಯಿಂದ ನೀರನ್ನು ಕೊಡುತ್ತಾರೆ. ಸಂತ ಪೌಲರು ಕೊರಿಂಥದವರಿಗೆ ಬರೆಯುತ್ತಾ ಹೇಳುತ್ತಾರೆ: ಎಲ್ಲರೂ ಒಂದೇ ದೈವಿಕ ಪಾನೀಯವನ್ನು ಕುಡಿದರು... ಕ್ರಿಸ್ತ ಯೇಸುವೇ ಆ ಬಂಡೆ (೧ ಕೊರಿಂಥ ೧೦: ೩-೪), ಕ್ರಿಸ್ತ ಯೇಸುವೇ ಜೀವಜಲದ ಬುಗ್ಗೆಯಾಗಿದ್ದಾರೆ. ದೇವರ ಜೀವದಾಯಕ ನುಡಿಯೇ ನೀರು. ಆ ನುಡಿ ಮಾತ್ರ ನಮ್ಮ ಆಧ್ಯಾತ್ಮಿಕ ದಾಹವನ್ನು ನೀಗಿಸಬಲ್ಲದು, ನಮ್ಮಲ್ಲಿ ಹೋಸಜೀವವನ್ನು ಹರಿಸಬಲ್ಲದು.
ಹಲವು ಸಲ ನಾವು ದೇವರ ವಿರುದ್ಧ ಗೊಣಗುತ್ತೇವೆ. ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾರೆ, ಆದರೆ ನನ್ನ ಪ್ರಾರ್ಥನೆಗೇಕೆ ಕಿವಿಗೊಡುವುದಿಲ್ಲ? ಎಲ್ಲರ ಜೀವನದಲ್ಲಿ ಪವಾಡಗಳಾಗುತ್ತವೆ, ಆದರೆ ನನ್ನ ಪ್ರಾರ್ಥನೆಯನ್ನೇಕೆ ದೇವರು ಕೇಳುವುದಿಲ್ಲ? ಎಂದು ನಾವು ಪ್ರಶ್ನಿಸುತ್ತೇವೆ. ಉಪವಾಸ ಮಾಡಿ, ಪ್ರಾರ್ಥನೆ ಮಾಡಿ, ಎಡೆಬಿಡದೆ ಪ್ರಾರ್ಥನಾಕೂಟಗಳಲ್ಲಿ ಭಾಗವಹಿಸುವವರು ತಮ್ಮ ಪ್ರಾರ್ಥನೆ ಕೈಗೂಡದಿದ್ದಾಗ, ನಿರಾಶರಾಗಿ ವಿಶ್ವಾಸವನ್ನೇ ಕಳೆದುಕೊಳ್ಳುವುದುಂಟು. ಹೀಗೆ ನಿರಾಶರಾಗಿ ಪ್ರಾರ್ಥನೆ, ಜಪತಪ, ಉಪವಾಸ ಎಲ್ಲವನ್ನೂ ನಿಲ್ಲಿಸುವವರೂ ಇದ್ದಾರೆ.
ಇಂದಿನ ಶುಭಸಂದೇಶದಲ್ಲಿ, ಪೇತ್ರನ ವಿಶ್ವಾಸ ಪ್ರಕಟನೆ, ನಮ್ಮೆಲ್ಲರಿಗೂ ಉಜ್ವಲ ನಿದರ್ಶನವಾಗಿದೆ. ಅಭಿಷಕ್ತರಾದ ಲೋಕೋದ್ಧಾರಕ ತಾವೆ, ಜೀವಸ್ವರೂಪರಾದ ದೇವರ ಪುತ್ರ ತಾವೇ ಎಂದ ಪೇತ್ರನ ಆದರ್ಶ ನಮಗೆಂತಹ ನಿದರ್ಶನವಲ್ಲವೇ ವಿಶ್ವಾಸದ ಹಾದಿಯಲ್ಲಿ ಮುನ್ನಡೆಯಲು? ಇಂತಹ ಅಚಲ ವಿಶ್ವಾಸಕ್ಕೆ ಪೇತ್ರನು ಶ್ರೇಷ್ಟವಾದ ಕೊಡುಗೆಯನ್ನು ಪ್ರಭುವಿನಿಂದ ಪಡೆಯುತ್ತಾನೆ. ಜೀವನದಲ್ಲಿ ಕಾರ್ಮುಗಿಲುಗಳು ಕವಿದು ದಾರಿ ಕಾಣದಾಗ, ಕರ್ತರನ್ನು ನಂಬಿ ಬಾಳುವ ವರಕ್ಕಾಗಿ ಈ ದಿವ್ಯ ಬಲಿಪೂಜೆಯಲ್ಲಿ ಪ್ರಾರ್ಥಿಸೋಣವೇ?
ಜೀವನವನ್ನು ದೂಷಿಸುವವನು ದೇವರನ್ನು ದೂಷಿಸಿದಂತೆ
-ವಿವೇಕಾನಂದ

No comments:
Post a Comment