Thursday, 15 August 2019

ಸಾಧಾರಣ ಕಾಲದ ಇಪ್ಪತ್ತಾರನೆಯ ಭಾನುವಾರ


ಪ್ರವೇಶ ಶ್ಲೋಕ                      ದಾನಿ 3 : 31, 29, 30, 43, 42
ಪ್ರಭೂ, ನೀವು ಮಾಡಿರುವುದ್ದೆಲ್ಲವನ್ನೂ ಸರಿಯಾದ ನ್ಯಾಯನೀತಿಯಿಂದ ಮಾಡಿದ್ದೀರಿ. ನಾವು ನಿಮ್ಮ ವಿರುದ್ಧವಾಗಿ ಪಾಪ ಮಾಡಿದ್ದೇವೆ. ನಿಮ್ಮ ಆಜ್ಞೆಗಳಿಗೆ ಅವಿಧೇಯತೆ ತೋರಿದ್ದೇವೆ. ಆದರೆ ನಿಮ್ಮ ನಾಮದ ಮಹಿಮೆಯನ್ನು ಬೆಳಗಿಸಿ  ನಿಮ್ಮ ಅಪರಿಮಿತ ದಯೆಯಿಂದ ನಮ್ಮನ್ನು ಕಟಾಕ್ಷಿಸಿರಿ.

ಸಭಾ ಪ್ರಾರ್ಥನೆ
ಪ್ರಭು ದೇವರೇ, ನೀವು ತೋರುವ ಕ್ಷಮೆ ಹಾಗೂ
ಕರುಣೆಯಲ್ಲಿ ನಿಮ್ಮ ಸರ್ವ ಶಕ್ತಿಯನ್ನು ವ್ಯಕ್ತಪಡಿಸುತ್ತೀರಿ.
ನಿಮ್ಮ ಕೃಪಾವರವನ್ನು ನಮ್ಮಲ್ಲಿ ಹೆಚ್ಚಿಸಿ.
ನಿಮ್ಮ ವಾಗ್ದಾನಗಳ ಈಡೇರಿಕೆಯನ್ನು
ಕಾತರದಿಂದ ಕಾಯುತ್ತಿರುವ ನಾವು
ಸ್ವರ್ಗೀಯ ಸೌಭಾಗ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ದಯಾಮಯ ತಂದೆಯೇ,
ನಮ್ಮ ಕಾಣಿಕೆಯು ನಿಮ್ಮಿಂದ ಅಂಗೀಕೃತವಾಗಲಿ.
ಇದರ ಮೂಲಕ ನಿಮ್ಮ ಆಶೀರ್ವಾದಗಳ ಬುಗ್ಗೆಯು
ನಮಗೆ ತೆರೆಯಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                               ಕೀರ್ತ 118 : 49-50
ಪ್ರಭೂ, ಸ್ಮರಿಸಿಕೋ ದಾಸನೆನಗೆ ನೀನಿತ್ತ ಮಾತನು. ಹುಟ್ಟಿಸಿರುವೆ ನನ್ನೊಳು ನಂಬಿಕೆ, ನಿರೀಕ್ಷೆಗಳನು. ಆಪತ್ಕಾಲದಲಿ ನನಗದೇ ಸಾಂತ್ವನ.

ಅಥವಾ                                                1 ಯೊವಾ 3 : 16

ಕ್ರಿಸ್ತ ಯೇಸು ನಮಗೋಸ್ಕರ ತಮ್ಮ ಪ್ರಾಣವನ್ನೇ ತೆತ್ತರು. ಇದರಿಂದ ಪ್ರೀತಿ ಎಂಥಹುದೆಂದು ನಾವು ಅರಿತುಕೊಂಡೆವು. ನಾವೂ ಕೂಡ ಸಹೋದರರಿಗಾಗಿ ಪ್ರಾಣಾರ್ಪಣೆ ಮಾಡಲು ಬದ್ಧರಾಗಿದ್ದೇವೆ.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸ್ವರ್ಗೀಯ ರಹಸ್ಯವು
ನಮ್ಮ ತನುಮನಗಳಿಗೆ ನವ ಚೈತನ್ಯ ನೀಡಲಿ.
ಕ್ತಿಸ್ತರ ಮರಣವನ್ನು ಸಾರಿ
ಅವರ ಯಾತನೆಯಲ್ಲಿ ಭಾಗವಹಿಸುವ ನಾವು
ಅವರ ಮಹಿಮೆಯಲ್ಲೂ ಪಾಲ್ಗೊಳ್ಳುವಂತೆ ಅನುಗ್ರಹಿಸಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment