ಪ್ರತಿಷ್ಠಾ ಪ್ರಾರ್ಥನೆ II
99. Although it is provided with its own Preface, this
Eucharistic Prayer may also be used with other Prefaces, especially those that
present an overall view of the mystery of salvation, such as the Common
Prefaces.
V/. ಪ್ರಭು ನಿಮ್ಮೊಡನೆ ಇರಲಿ
R/. ನಿಮ್ಮಾತ್ಮದೊಡನೆಯೂ ಇರಲಿ.
V/.
ನಿಮ್ಮ ಹೃನ್ಮನಗಳನ್ನು ಮೇಲಕ್ಕೆತ್ತಿರಿ
R/. ಪ್ರಭುವಿನ ಕಡೆಗೆ ಎತ್ತಿದ್ದೇವೆ
V/. ನಮ್ಮ ಪ್ರಭು ದೇವರಿಗೆ ಕೃತಜ್ಞತೆ ಸಲ್ಲಿಸೋಣ
R/. ಅದು ಯೋಗ್ಯ ಮತ್ತು ನ್ಯಾಯವಾಗಿದೆ
ಪವಿತ್ರ ಪಿತನೇ, ನಾವು ಎಂದೆಂದೂ, ಎಲ್ಲೆಲ್ಲೂ,
ನಿಮ್ಮ ಪ್ರಿಯ ಪುತ್ರ ಯೇಸುಕ್ರಿಸ್ತರ ಮುಖಾಂತರ
ನಿಮಗೆ ಕೃತಜ್ಞತೆ ಸಲ್ಲಿಸುವುದು ನಿಜವಾಗಿ
ಯೋಗ್ಯವೂ, ನ್ಯಾಯವೂ ಆಗಿದೆ;
ನಮ್ಮ ಕರ್ತವ್ಯವೂ, ರಕ್ಷಣೆಯೂ ಆಗಿದೆ.
ಪ್ರಭುವೇ, ನಿಮ್ಮ ದಿವ್ಯವಾಣಿಯಾದ
ಕ್ರಿಸ್ತರ ಮುಖಾಂತರವೇ ನೀವು ಸಕಲವನ್ನು ಸೃಷ್ಟಿಸಿದಿರಿ.
ಪವಿತ್ರಾತ್ಮರ ಶಕ್ತಿಯಿಂದ ಕನ್ಯಾಮರಿಯಮ್ಮನವರಲ್ಲಿ
ಮನುಷ್ಯರಾಗಿ ಜನಿಸಿದ ಅವರನ್ನೇ
ನಮ್ಮ ರಕ್ಷಕರನ್ನಾಗಿಯೂ ವಿಮೋಚಕರನ್ನಾಗಿಯೂ ಕಳುಹಿಸಿದಿರಿ.
ನಿಮ್ಮ ಚಿತ್ತವನ್ನು ನೆರವೇರಿಸುತ್ತಾ ನಿಮಗಾಗಿ
ಪವಿತ್ರ ಪ್ರಜೆಯೊಂದನ್ನು ಗಳಿಸಿದ ಅವರು
ಯಾತನೆ ಪಡುತ್ತಾ, ಶಿಲುಬೆಯಲ್ಲಿ ತಮ್ಮ ಕರಗಳನ್ನು ಚಾಚಿ,
ಮೃತ್ಯುಪಾಶ ಮುರಿದುಹಾಕಿ,
ಪುನರುತ್ಥಾನದ ಮಹಿಮೆ ತೋರಿದರು.
ಆದುದರಿಂದ, ಸಕಲ ದೂತಸಂತರೊಂದಿಗೆ ಸೇರಿ
ನಿಮ್ಮ ಮಹಿಮಾಗೀತೆ ಹಾಡುತ್ತಾ
ಏಕ ಕಂಠದಿಂದ ನಿಮ್ಮ ಸ್ತುತಿಯನ್ನು ಘೋಷಿಸುತ್ತೇವೆ.
ಪರಿಶುದ್ಧರು, ಪರಿಶುದ್ಧರು,
ಸೇನಾಧೀಶ್ವರ ಪ್ರಭು ದೇವರು ಪರಿಶುದ್ಧರು.
ಇಹಪರಗಳು ನಿಮ್ಮ ಮಹಿಮೆಯಿಂದ ತುಂಬಿವೆ.
ಮಹೋನ್ನತದಲ್ಲಿ ಹೊಸಾನ್ನ.
ಪ್ರಭುವಿನ ನಾಮದಲ್ಲಿ ಬರುವವರು ಸ್ತುತಿಗೆ ಪಾತ್ರರು.
ಮಹೋನ್ನತದಲ್ಲಿ ಹೊಸಾನ್ನ.
100. The Priest, with hands extended, says:
ಪ್ರಭುವೇ, ನೀವು ನಿಜವಾಗಿಯೂ ಪರಿಶುದ್ಧರು.
ಸರ್ವ ಪರಿಶುದ್ಧತೆಯ ಬುಗ್ಗೆಯೂ ನೀವೇ.
101. He joins his hands
and, holding them extended over the offerings, says:
ಈ ಕಾಣಿಕೆಗಳನ್ನು
He joins his hands and makes the Sign of the
Cross once over the bread and the chalice together, saying:
ನಮ್ಮ ಪ್ರಭು ಯೇಸುಕ್ರಿಸ್ತರ
ಶರೀರ X ಮತ್ತು ರಕ್ತವಾಗುವಂತೆ
ಪವಿತ್ರಾತ್ಮರ ಶಕ್ತಿಯಿಂದ ಪಾವನಗೊಳಿಸಿರಿ.
He joins his hands.
102. In the formulas that follow, the words of the Lord should be
pronounced clearly and distinctly, as the nature of these words requires.
ಇವರು ಸ್ವ-ಇಚ್ಛೆಯಿಂದ ಯಾತನೆಗೆ ಒಳಪಡಿಸಿಕೊಂಡಾಗ
He takes the bread
and,
holding it slightly raised above the altar, continues:
ರೊಟ್ಟಿಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ,
ಅದನ್ನು ಮುರಿದು ತಮ್ಮ ಶಿಷ್ಯರಿಗೆ ಕೊಡುತ್ತಾ ಹೀಗೆಂದರು:
He bows slightly.
ತೆಗೆದುಕೊಳ್ಳಿ,
ಇದನ್ನು ನೀವೆಲ್ಲರೂ ಭುಜಿಸಿರಿ;
ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ.
He shows the consecrated host to the people, places it again
on the paten, and genuflects in adoration.
103. After this, he
continues:
ಅಂತೆಯೇ ಭೋಜನದ ಅಂತ್ಯದಲ್ಲಿ,
He takes the chalice
and,
holding it slightly raised above the altar, continues:
ಅವರು ಪಾನಪಾತ್ರೆಯನ್ನು ತೆಗೆದುಕೊಂಡು
ಪುನಃ ನಿಮಗೆ ಕೃತಜ್ಞತೆಯನ್ನು ಸಲ್ಲಿಸಿ,
ತಮ್ಮ ಶಿಷ್ಯರಿಗೆ ಕೊಡುತ್ತಾ ಹೀಗೆಂದರು:
He bows
slightly.
ತೆಗೆದುಕೊಳ್ಳಿ,
ಇದರಿಂದ ನೀವೆಲ್ಲರೂ ಪಾನಮಾಡಿರಿ.
ಇದು ಹೊಸ ಮತ್ತು ಅನಂತ ಒಡಂಬಡಿಕೆಯ ನನ್ನ ರಕ್ತದ ಪಾತ್ರೆ.
ಈ ರಕ್ತವನ್ನು ನಿಮ್ಮ ಹಾಗೂ ಅನೇಕರ
ಪಾಪ ಪರಿಹಾರಕ್ಕಾಗಿ ಸುರಿಸಲಾಗುವುದು.
ಇದನ್ನು ನನ್ನ ಸ್ಮರಣೆಗಾಗಿ ಮಾಡಿರಿ.
He shows the chalice to the people, places it on the
corporal, and genuflects in adoration.
104. Then he says:
ವಿಶ್ವಾಸದ ರಹಸ್ಯವಿದು
And the people
continue, acclaiming:
ಪ್ರಭುವೇ, ನೀವು ಮರಳಿ ಬರುವ ತನಕ
ನಿಮ್ಮ ಮರಣವನ್ನು ಸಾರುತ್ತೇವೆ;
ನಿಮ್ಮ ಪುನರುತ್ಥಾನವನ್ನು ನಿವೇದಿಸುತ್ತೇವೆ.
CxÀªÁ
ಪ್ರಭುವೇ, ನಾವು ಈ ರೊಟ್ಟಿಯನ್ನು ಭುಜಿಸಿ,
ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ
ನೀವು ಮರಳಿ ಬರುವ ತನಕ
ನಿಮ್ಮ ಮರಣವನ್ನು ಸಾರುತ್ತೇವೆ.
CxÀªÁ
ನಿಮ್ಮ ಶಿಲುಬೆ ಹಾಗೂ ಪುನರುತ್ಥಾನದ ಮೂಲಕ
ನಮ್ಮನ್ನು ವಿಮೋಚಿಸಿದ ಲೋಕರಕ್ಷಕರೇ,
ನಮ್ಮನ್ನು ರಕ್ಷಿಸಿರಿ.
105. Then the Priest, with
hands extended, says:
ಆದ್ದರಿಂದ ಪ್ರಭುವೇ, ನಿಮ್ಮ ಸಮ್ಮುಖದಲ್ಲಿ ನಿಂತು
ಸೇವೆ ಸಲ್ಲಿಸಲು ನಮ್ಮನ್ನು ಯೋಗ್ಯರೆಂದು ಪರಿಗಣಿಸಿದ್ದಕ್ಕಾಗಿ
ನಿಮಗೆ ಕೃತಜ್ಞತೆ ಸಲ್ಲಿಸುತ್ತೇವೆ.
ಕ್ರಿಸ್ತರ ಮರಣವನ್ನೂ ಪುನರುತ್ಥಾನವನ್ನೂ ಸ್ಮರಿಸಿಕೊಳ್ಳುತ್ತಾ
ಜೀವವೀವ ರೊಟ್ಟಿಯನ್ನೂ ರಕ್ಷಣೆಯನ್ನೀಯುವ ಪಾನವನ್ನೂ
ನಿಮಗೆ ಅರ್ಪಿಸುತ್ತೇವೆ.
ಕ್ರಿಸ್ತರ ಶರೀರ ಮತ್ತು ರಕ್ತದಲ್ಲಿ ಪಾಲುಗೊಳ್ಳುವ ನಮ್ಮನ್ನು
ಪವಿತ್ರಾತ್ಮರು ಒಂದುಗೂಡಿಸಬೇಕೆಂದು
ನಿಮ್ಮನ್ನು ವಿನಯದಿಂದ ಬಿನ್ನಯಿಸುತ್ತೇವೆ.
ಪ್ರಭುವೇ, ನಿಮ್ಮ ವಿಶ್ವವ್ಯಾಪಿ ಧರ್ಮಸಭೆಯನ್ನು ಸ್ಮರಿಸಿಕೊಳ್ಳುತ್ತಾ
ನಮ್ಮ ವಿಶ್ವಗುರು N. ಅವರೊಂದಿಗೂ,
ನಮ್ಮ ಧರ್ಮಾಧ್ಯಕ್ಷ* N ಅವರೊಂದಿಗೂ,
ಸಕಲ ಯಾಜಕರೊಂದಿಗೂ ಅದನ್ನು
ಪ್ರೀತಿಯ ಪರಿಪೂರ್ಣತೆಯೆಡೆಗೆ ಮುನ್ನಡೆಸಿರೆಂದು
ವಿನಯದಿಂದ ಬೇಡಿಕೊಳ್ಳುತ್ತೇವೆ.
_________________________________________
In Masses for
the Dead, the following may be added:
ಪ್ರಭುವೇ, (ಇಂದು) ಭೂಲೋಕದಿಂದ ನಿಮ್ಮಲ್ಲಿಗೆ ಕರೆದುಕೊಂಡಿರುವ
ನಿಮ್ಮ ಸೇವಕ (ಸೇವಕಿ) ಓ. ಇವರನ್ನು ಸ್ಮರಿಸಿಕೊಳ್ಳಿರಿ.
ನಿಮ್ಮ ಪುತ್ರ ಅನುಭವಿಸಿದಂತಹ ಮರಣದಲ್ಲಿ ಭಾಗಿಯಾದ ಇವರು,
ಅವರ ಪುನರುತ್ಥಾನದಲ್ಲಿಯೂ ಭಾಗಿಯಾಗುವಂತೆ ಅನುಗ್ರಹಿಸಿರಿ. ___________________________________________
ಪ್ರಭುವೇ, ಪುನರುತ್ಥಾನದ ನಿರೀಕ್ಷೆಯಲ್ಲಿ ವಿಶ್ರಮಿಸುತ್ತಿರುವ
ನಮ್ಮ ಸಹೋದರ ಸಹೋದರಿಯರನ್ನೂ,
ನಿಮ್ಮ ದಯೆಯಲ್ಲಿ ಮೃತರಾದ ಎಲ್ಲರನ್ನೂ ಸ್ಮರಿಸಿಕೊಳ್ಳಿರಿ.
ಅವರನ್ನು ನಿಮ್ಮ ಸಮ್ಮುಖದ ಪ್ರಭೆಗೆ ಬರಮಾಡಿರಿ.
ದೇವಮಾತೆ ಪೂಜ್ಯ ಕನ್ಯಾಮರಿಯಮ್ಮನವರೊಂದಿಗೂ,
ಪುನೀತ ಪ್ರೇಷಿತರೊಂದಿಗೂ,
ಎಲ್ಲಾ ಕಾಲಗಳಲ್ಲಿ ನಿಮ್ಮ ಮೆಚ್ಚುಗೆಗೆ ಪಾತ್ರರಾದ
ಸಕಲ ಸಂತರೊಂದಿಗೂ,
ನಾವು ನಿತ್ಯಜೀವದಲ್ಲಿ ಭಾಗಿಗಳಾಗಿ
ನಿಮ್ಮನ್ನು ಸ್ತುತಿಸಿ ಮಹಿಮೆಪಡಿಸುವಂತೆ
ನಮ್ಮ ಮೇಲೂ ದಯೆತೋರಿರೆಂದು
He joins his hands.
ನಿಮ್ಮ ಪುತ್ರ ಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ.
106. He takes the chalice and the paten with the host and raising both,
he says:
ಇವರ ಮುಖಾಂತರವೂ
ಇವರೊಂದಿಗೂ ಇವರಲ್ಲಿಯೂ
ಸರ್ವಶಕ್ತ ತಂದೆಯಾದ ದೇವರೇ,
ಪವಿತ್ರಾತ್ಮರ ಐಕ್ಯದಲ್ಲಿ
ಸರ್ವ ಗೌರವವೂ ಮಹಿಮೆಯೂ
ಯುಗಯುಗಾಂತರಕ್ಕೂ ನಿಮಗೆ ಸಲ್ಲಲಿ.
The people acclaim:
ಆಮೆನ್.
No comments:
Post a Comment