ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಮಂಗಳವಾರ
3/ಬಿಳಿ/ಮಂಗಳ/ಸಂತ ಮಹಾ ಗ್ರೆಗೋರಿ (ಜಗ ಮತ್ತು ಧ.ಪಂ (ಸ್ಮರಣೆ)
1ನೇ ವಾಚನ - 1 ಥೆಸ 5: 1-6, 9-11
ಕೀರ್ತನೆ - 27: 1, 4, 13-14
ಶುಭಸಂದೇಶ - ಲೂಕ 4: 31-37

ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ. ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು. ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ. ನಿದ್ರೆಯೂ ಕುಡುಕುತನವೂ ರಾತ್ರಿಗೆ ಸಂಬಂಧಿಸಿದವುಗಳು. ನಾವು ಹಗಲಿಗೆ ಸೇರಿದವರಾದುದರಿಂದ ಸ್ವಸ್ಥಚಿತ್ತದಿಂದ ಇರೋಣ. ವಿಶ್ವಾಸ ಹಾಗೂ ಪ್ರೀತಿ ನಮಗೆ ವಕ್ಷಕವಚವಾಗಬೇಕು, ಜೀವೋದ್ಧಾರದ ನಿರೀಕ್ಷೆ ನಮಗೆ ಶಿರಸ್ತ್ರಾಣವಾಗಿರಬೇಕು. ಕೋಪಾಗ್ನಿಗೆ ನಾವು ಗುರಿಯಾಗಬೇಕೆಂದಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಾವು ಜೀವೋದ್ಧಾರ ಹೊಂದಬೇಕೆಂಬುದೇ ದೈವೇಚ್ಛೆ. ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೆ ನಮಗಾಗಿ ಅವರು ಸಾವನ್ನಪ್ಪಿದರು. ಆದುದರಿಂದ ನೀವು ಈಗ ನಡೆದುಕೊಳ್ಳುತ್ತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.
ಕೀರ್ತನೆ - 27: 1, 4, 13-14
1 : ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ / ನಾನಾರಿಗೂ ಅಳುಕೆನು // ನನ್ನ ಬಾಳಿಗಾಧಾರ ಪ್ರಭುವೆ / ನಾನಾರಿಗೂ ಅಂಜೆನು //
4 : ನಾನೊಂದನು ಕೋರಿದೆ ಪ್ರಭುವಿನಿಂದ / ನಾನದನ್ನೇ ನಿರೀಕ್ಷಿಸಿದೆ ಆತನಿಂದ : / ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ / ನಾ ತಲ್ಲೀನನಾಗಬೇಕು ಅಲ್ಲಾತನ- ಪ್ರಸನ್ನತೆಯಲಿ //
13 : ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು / ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //
14 : ಪ್ರಭುವನು ಎದುರುನೋಡುತ್ತಿರು ಮನವೇ / ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //
ಶುಭಸಂದೇಶ - ಲೂಕ 4: 31-37
ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್‍ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು. ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು. ದುಷ್ಟದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾ ಮಂದಿರದಲ್ಲಿ ಇದ್ದನು. ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಗಟ್ಟಿಯಾಗಿ ಕಿರುಚಿದನು. ಆದರೆ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೆಡುಕನ್ನೂ ಮಾಡದೆ ಅವನನ್ನು ಬಿಟ್ಟುಹೋಯಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವಲ್ಲಾ!” ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.
ಚಿಂತನೆ
ಸದಾ ಸಿದ್ಧನಾಗಿರು
ಈ ಅತ್ಯಾಧುನಿಕ ಮತ್ತು ವೈಜ್ಞಾನಿಕ ಯುಗದಲ್ಲಿ ಪ್ರತಿ ಮಾನವನು ಒಂದಲ್ಲ ಒಂದು ರೀತಿಯಲ್ಲಿತನ್ನ ಶಕ್ತಿ, ಸಾಮರ್ಥ್ಯಗಳೆರಡನ್ನೂ ಮೀರಿ ಪ್ರಪಂಚದ ಏಳಿಗೆಯ ಜೊತೆಗೆ ತನ್ನ ವಿವೇಕಜ್ಞಾನವನ್ನು ಮತ್ತು ತಂತ್ರಜ್ಞಾನವನ್ನು ತೋರ್ಪಡಿಸುವುದೇ ಕರ್ತವ್ಯವಾಗಿ ಬಿಟ್ಟಿದೆ. ಆದರೆ ಆತನು ಅನ್ವೇಷಿಸಿದಂತಹ ಅಥವಾ ಆತನು ತೋರಿಸಿದಂತಹ ಸುಧಾರಣೆಗಳು ಸಕಾರಾತ್ಮಕಗಳ ಜೊತೆಗೆ ಹೆಚ್ಚಿನ ನಕಾರಾತ್ಮಗಳು ಉದ್ಭವಿಸಿಕೊಂಡಿವೆ. ಆದುದರಿಂದ ಆತನಿಗೆ ಒಂದು ಕಡೆಯಿಂದ ಒಬ್ಬ ಗೌರವಾನ್ವಿತ ವ್ಯಕ್ತಿ ಅಥವಾ ಮಹಾನ್ ವ್ಯಕ್ತಿ ಎನಿಸಿಕೊಂಡರೆ ಮತ್ತೊಂದು ಕಡೆಯಿಂದ ಕೆಲವರು ಆತನನ್ನು ದೂಷಿಸುವುದು ಸಹಜವಾಗಿದೆ.
(ಉದಾಹರಣೆಗೆ-ಜನಸಂಖ್ಯೆಯ ಹೆಚ್ಚಳವನ್ನು ತಡೆಗಟ್ಟಲು ಡಾ|| ಮಿಸ್‌ಚ್ಯೂ-ಚಾಂಗ್ ಗರ್ಭ ನಿರೋಧಕ ಮಾತ್ರೆಗಳನ್ನು ಕಂಡು ಹಿಡಿದು ಒಂದು ಹೊಸ ಸುಧಾರಣೆಯನ್ನು ತಂದರು. ಆದರೆ ಆ ಮಾತ್ರೆ ಯುವಜನರ ನೀತಿವಂತಿಕೆಯನ್ನು ಕೆಡಿಸುವುದರ ಜೊತೆಗೆ ಅವರು ಲೈಂಗಿಕವಾಗಿ ಸ್ವೇಚ್ಛಾಚಾರಿಗಳಾಗುವಂತೆ ಮಾಡಿದೆ ಎಂದು ಮಾತ್ರೆಯನ್ನು ಕಂಡು ಹಿಡಿದಂತಹ ವೈದ್ಯರೇ ಬಹಳ ವ್ಯಸನದಿಂದ ಹೇಳಿರುತ್ತಾರೆ) ಇದು ನಮಗೆ ಸೂಚಿಸುವುದೇನೆಂದರೆ ಮಾನವನು ಸೃಷ್ಟಿಸಿದಂತಹ ಯಾವುದೇ ಭೋಗವಸ್ತುಗಳಾಗಳಿ ಅಥವಾ ಔಷಧಿಗಳೇ ಆಗಲಿ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಹಾನಿ ಉಂಟುಮಾಡುತ್ತವೆ.
ಆದರೆ ನಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಪ್ರೀತಿ ಇರಬೇಕಾದರೆ ನಾವು ದೇವರಿಂದಲೇ ಹೊರತು ಮತ್ತ್ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮಾನವನ ಯೋಚನೆ, ಜ್ಞಾನ, ವಿವೇಕಗಳು ದೇವರ ಜ್ಞಾನಕ್ಕಿಂತ ದೊಡ್ಡದೇನಲ್ಲ. ದೇವರ ಮುಂದೆ ಎಲ್ಲರೂ ಸಮಾನರು. ನಾವು ಲೋಕದ ವಸ್ತುಗಳನ್ನು ಅವಲೋಕಿಸುವಂತೆ ದೇವರ ಶಕ್ತಿ ಮತ್ತು ಜ್ಞಾನವನ್ನು ಅವಲೋಕಿಸಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಶುಭಸಂದೇಶವು ನಮಗೆ ತಿಳಿಸುತ್ತದೆ. ಪ್ರಭುಯೇಸು-ಕಫೆರ್ನವುಮಿನಲ್ಲಿ ಅಧಿಕಾರವಾಣಿಯಿಂದ ಉಪದೇಶಿಸುವುದರ ಜೊತೆಗೆ ದೆವ್ವಗಳನ್ನು ಬಿಡಿಸುತ್ತಿದ್ದರು. ಆದರೆ ಇದನ್ನು ತಿಳಿದ ಕೆಲವರು ಮಾತ್ರ ನಿಬ್ಬೆರಗಾದರು. ಮತ್ತೆ ಕೆಲವರು ಅವರನ್ನು ಈತನು `ಬೆಲ್‌ಜೆಬೂಲ'ನ ಸಹಾಯದಿಂದ ದೆವ್ವವನ್ನು ಬಿಡಿಸುತ್ತಾನೆ ಎಂತಲೂ ಸಾರಿದರು. ಆದರೆ ಮಾನವರಿಗಿಂತ `ದೆವ್ವಗಳೇ' ಯೇಸುವನ್ನು ಬಹಳವಾಗಿ ಅರ್ಥಮಾಡಿಕೊಂಡಿದ್ದವು. ಅಲ್ಲದೇ ಪ್ರಭು ಯೇಸು ನಿಜವಾದ ದೇವರ ಪುತ್ರ ಎಂಬ ಗಾಢವಾದ ವಿಶ್ವಾಸವು ಆ ದೆವ್ವಗಳಲ್ಲಿತ್ತು. ಆದರೆ ಅಂತಹ ವಿಶ್ವಾಸ ಕ್ರೈಸ್ತರಾದ ನಮ್ಮಲ್ಲಿ ಇರುವುದೋ? ಪ್ರಭು ಯೇಸು ತಮ್ಮ ಗೌರವದ ಸ್ವಾರ್ಥಕ್ಕಾಗಿ ಅವರು ದೆವ್ವಗಳನ್ನು ಬಿಡಿಸಲಿಲ್ಲ. ಬದಲಿಗೆ ಅವರು ಎಲ್ಲರನ್ನು ದೇವರ ಮಕ್ಕಳನ್ನಾಗಿಸಲು ಮಾನವರೂಪ ಹೊತ್ತುಕೊಂಡು ಧರೆಗೆ ಆಗಮಿಸಿದರು. ಆದ್ದರಿಂದ ನಮ್ಮಲ್ಲೂ ಸಹಾ ಅನೇಕಾನೇಕ ಲೋಪದೋಷಗಳು ಕ್ರಿಯೆಯಿಂದಲೋ, ಕರ್ಮದಿಂದಲೋ, ಮಾತಿನಿಂದಲೋ ಅಥವಾ ಯೋಚನೆಯಿಂದಲೋ ನಾವು ಬೇರೆಯವರಿಗೆ `ದೆವ್ವಗಳಾಗಿ' ಕಂಡಿರುತ್ತೇವೆ. ಆದ್ದರಿಂದ ಅಂತಹ ಲೋಪದೋಷಗಳನ್ನು ಹೊಡೆದೋಡಿಸಲು ನಮ್ಮ ಬಾಳಲ್ಲಿ ಪ್ರಭು ಯೇಸುವನ್ನು ಸ್ವೀಕರಿಸಿ ಒಳ್ಳೆಯ ಜೀವನವನ್ನು ಪ್ರಾರಂಭಿಸಲು ಬೇಕಾದ ಅವರ ಪ್ರಸಾದಗಳಿಗೆ ಇಂದಿನ ದಿವ್ಯಬಲಿಯಲ್ಲಿ ಭಕ್ತಿಯಿಂದಲೂ, ಕಳಕಳಿಯಿಂದಲೂ ಕರುಣಾಮೂರ್ತಿ ಯೇಸುವಿನಲ್ಲಿ ಕೇಳಿಕೊಳ್ಳೋಣ.

No comments:
Post a Comment