ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಶನಿವಾರ
28/ಹಸಿರು/ಶನಿ
1ನೇ ವಾಚನ - ಜೆಕ 2: 5-11
ಕೀರ್ತನೆ - ಯೆರೆ 31: 1೦-13
ಶುಭಸಂದೇಶ - ಲೂಕ 9: 43-45
28/ಹಸಿರು/ಶನಿ
1ನೇ ವಾಚನ - ಜೆಕ 2: 5-11
ಕೀರ್ತನೆ - ಯೆರೆ 31: 1೦-13
ಶುಭಸಂದೇಶ - ಲೂಕ 9: 43-45
1ನೇ ವಾಚನ - ಜೆಕ 2: 5-11
ನಾನೇ ಅದರ ಸುತ್ತಮುತ್ತಲು ಅಗ್ನಿ ಪ್ರಾಕಾರವಾಗಿ, ಅದರೊಳಗಿನ ವೈಭವವಾಗಿರುವೆನು. ಇದು ಸರ್ವೇಶ್ವರಸ್ವಾಮಿಯ ನುಡಿ,’ ಎಂದ.” ಸರ್ವೇಶ್ವರ ತಮ್ಮ ಜನರಿಗೆ ಇಂತೆನ್ನುತ್ತಾರೆ: “ಚತುರ್ದಿಕ್ಕುಗಳಿಗೆ ನಿಮ್ಮನ್ನು ಚದರಿಸಿದವನು ನಾನೇ. ಆದರೆ ಈಗ ಎಚ್ಚೆತ್ತುಕೊಳ್ಳಿ, ಹೊರನಾಡುಗಳಿಂದ ಓಡಿಬನ್ನಿ, ಇದು ಸರ್ವೇಶ್ವರನ ನುಡಿ. ಬಾಬಿಲೋನಿಗೆ ಸೆರೆಹೋದ ಸಿಯೋನಿನವರೇ, ಅಲ್ಲಿಂದ ತಪ್ಪಿಸಿಕೊಂಡು ಬನ್ನಿ. ಸರ್ವೇಶ್ವರ ತಮ್ಮ ಜನರಿಗೆ ಇಂತೆನ್ನುತ್ತಾರೆ: “ಚತುರ್ದಿಕ್ಕುಗಳಿಗೆ ನಿಮ್ಮನ್ನು ಚದರಿಸಿದವನು ನಾನೇ. ಆದರೆ ಈಗ ಎಚ್ಚೆತ್ತುಕೊಳ್ಳಿ, ಹೊರನಾಡುಗಳಿಂದ ಓಡಿಬನ್ನಿ, ಇದು ಸರ್ವೇಶ್ವರನ ನುಡಿ. ಬಾಬಿಲೋನಿಗೆ ಸೆರೆಹೋದ ಸಿಯೋನಿನವರೇ, ಅಲ್ಲಿಂದ ತಪ್ಪಿಸಿಕೊಂಡು ಬನ್ನಿ. ತಮ್ಮ ಮಹಿಮೆಯನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಸರ್ವೇಶ್ವರ ನಿಮ್ಮನ್ನು ಸೂರೆಮಾಡಿದ ರಾಷ್ಟ್ರಗಳಿಗೆ ಕೊಡುವ ಎಚ್ಚರಿಕೆ ಇದು: ‘ನಿಮ್ಮನ್ನು ಮುಟ್ಟುವವರು ನನ್ನ ಕಣ್ಮಣಿಯನ್ನೇ ಮುಟ್ಟಿದಂತೆ! ಇಗೋ, ನಾನು ಅವರ ಮೇಲೆ ಕೈಯೆತ್ತುವೆನು. ಅವರು ತಮ್ಮ ದಾಸರ ಕೈಯಿಂದಲೇ ಸೂರೆಯಾಗುವರು. ನನ್ನನ್ನು ಕಳುಹಿಸಿದವರು ಸೇನಾಧೀಶ್ವರ ಸರ್ವೇಶ್ವರ ಎಂಬುದು ಆಗ ನಿಮಗೆ ಗೊತ್ತಾಗುವುದು’.” ಸರ್ವೇಶ್ವರ ಇಂತೆನ್ನುತ್ತಾರೆ: “ಎಲೈ ಸಿಯೋನ್ ನಗರವೇ ಸಂತೋಷಪಡು, ಜಯಕಾರ ಮಾಡು; ಇಗೋ, ನಾನೇ ಬಂದು ನಿನ್ನ ಮಧ್ಯೆ ವಾಸಿಸುವೆನು!” ಆ ದಿನದಂದು ಹಲವಾರು ರಾಷ್ಟ್ರಗಳು ಸರ್ವೇಶ್ವರ ಸ್ವಾಮಿಯನ್ನು ಆಶ್ರಯಿಸಿಕೊಳ್ಳುವರು. ಅವರು ಆ ಸ್ವಾಮಿಯ ಜನರಾಗುವರು. ಸ್ವಾಮಿ ಅವರ ಮಧ್ಯೆ ವಾಸಿಸುವರು.
ಕೀರ್ತನೆ - ಯೆರೆ 31: 1೦-13
ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ: ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ: ಇಸ್ರಯೇಲರನ್ನು ಚದುರಿಸಿದಾತ ಕುರಿಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ. ಸರ್ವೇಶ್ವರ ಯಕೋಬರ ವಿಮೋಚಕ ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ ಬಿಡಿಸಿದಾತ. ಅವರು ಬಂದು ಹಾಡುವರು ಸಿಯೋನ್ ಶಿಖರದಲ್ಲಿ ಬರುವರು ಪ್ರವಾಹ ಪ್ರವಾಹವಾಗಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕುರಿ, ಕುರಿಮರಿ, ಸರ್ವೇಶ್ವರನ ಈ ವರದಾನಗಳನ್ನು ಅನುಭವಿಸಲಿಕ್ಕಾಗಿ. ಹದವಾಗಿ ನೀರುಹಾಯಿಸಿದ ಉದ್ಯಾನವನದಂತೆ ಅವರ ಜೀವನ ಇನ್ನು ಅವರಿಗಿರದು ವ್ಯಸನ. ಆಗ ನಾಟ್ಯವಾಡಿ ನಲಿವಳು ಯುವತಿ ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ. ಅವರ ದುಃಖವನ್ನು ಸಂತೋಷವಾಗಿಸುವೆನು ವ್ಯಸನ ತೊರೆದು ಆನಂದಿಸುವಂತೆ ಅವರನ್ನು ಸಂತೈಸುವೆನು.
ಶುಭಸಂದೇಶ - ಲೂಕ 9: 43-45
ದೇವರ ಮಹತ್ವವನ್ನು ಕಂಡ ಎಲ್ಲರೂ ಆಶ್ಚರ್ಯಚಕಿತರಾದರು. ಯೇಸುಸ್ವಾಮಿ ಮಾಡಿದ ಸಕಲ ಮಹತ್ಕಾರ್ಯಗಳನ್ನು ಕುರಿತು ಜನರೆಲ್ಲರೂ ಸೋಜಿಗಪಡುತ್ತಿರುವಲ್ಲಿ, ಶಿಷ್ಯರಿಗೆ, “ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ: “ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ,” ಎಂದರು. ಯೇಸು ಹೇಳಿದ ಈ ಮಾತನ್ನು ಶಿಷ್ಯರು ಗ್ರಹಿಸಿಕೊಳ್ಳಲಿಲ್ಲ; ಒಗಟಿನ ಹಾಗೆ ಇದ್ದುದರಿಂದ ಅರ್ಥಮಾಡಿಕೊಳ್ಳಲಿಲ್ಲ. ಅದನ್ನು ಕುರಿತು ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು.
ಚಿಂತನೆ
ಚಿಂತನೆ
ಸಂತ
ವೆನ್ಸೆಸ್ ಲಾವುಸ್ (ರಕ್ತಸಾಕ್ಷಿ)
ಯೇಸು ಇಂದಿನ
ಶುಭಸಂದೇಶದಲ್ಲಿ ತನ್ನ ಮರಣದ ಬಗ್ಗೆ ಮುನ್ಸೂಚನೆಯನ್ನು ನೀಡುತ್ತಾರೆ. ಪ್ರಭುಯೇಸುಕ್ರಿಸ್ತರು ಬಂದಿದ್ದು
ಪಾಪಿ ಮಾನವರಿಗಾಗಿ ಶಿಲುಬೆಯ ಮರಣವನ್ನು ಹೊಂದಿ ರಕ್ಷಣೆಯನ್ನು ಕೊಡಲು ಅವರ ಜೀವನದ ಗುರಿ ಅವರಿಗೆ ಸ್ಪಷ್ಟವಾಗಿತು.
ಅದನ್ನು ಶಿಷ್ಯರಿಗೆ ತಿಳಿಯಪಡಿಸುತ್ತಾರೆ. ಆದರೆ ಆ ಶಿಷ್ಯರು ಅವರ ಮಾತನ್ನು ಗ್ರಹಿಸಿಕೊಳ್ಳಲಾಗಲಿಲ್ಲ.
ಯೇಸುವನ್ನು ಕೇಳುವುದಕ್ಕೂ ಅಂಜಿದರು. ಆದರೆ ಶಿಲುಬೆಯ ಮರಣದ ಬಗ್ಗೆ ನಮಗೆ ತಿಳಿದಾಗ ನಮಗೆಷ್ಟು ನೋವಾಗುತ್ತದೆ.
ಆದರೆ ಕ್ರಿಸ್ತರಂತೆ ಎಲ್ಲವನ್ನು ಎದುರಿಸಬೇಕು.
No comments:
Post a Comment