ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಶುಕ್ರವಾರ
11/ಹಸಿರು/ಶುಕ್ರ/ಐಚ್ಛಿಕ ಸ್ಮರಣೆ - ಸಂತ 23ನೇ ಜಾನ್
1ನೇ ವಾಚನ - ಯೊವೇ 1: 13-15; 2:1-2
ಕೀರ್ತನೆ - 9: 1-2, 5, 15, 7-8
ಶುಭಸಂದೇಶ - ಲೂಕ 11: 15-26
11/ಹಸಿರು/ಶುಕ್ರ/ಐಚ್ಛಿಕ ಸ್ಮರಣೆ - ಸಂತ 23ನೇ ಜಾನ್
1ನೇ ವಾಚನ - ಯೊವೇ 1: 13-15; 2:1-2
ಕೀರ್ತನೆ - 9: 1-2, 5, 15, 7-8
ಶುಭಸಂದೇಶ - ಲೂಕ 11: 15-26
1ನೇ ವಾಚನ - ಯೊವೇ 1: 13-15; 2:1-2
ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ. ಉಪವಾಸ ವ್ರತವನ್ನು ಕೈಗೊಂಡು ಮಹಾಸಭೆಯನ್ನು ಕರೆಯಿರಿ; ಹಿರಿಯರನ್ನೂ ನಾಡಿನ ಜನಸಾಮಾನ್ಯರನ್ನೂ ಸೇರಿಸಿರಿ; ದೇವರಾದ ಸರ್ವೇಶ್ವರಸ್ವಾಮಿಯ ಆಲಯಕ್ಕೆ ಬರಮಾಡಿರಿ; ಆ ಸ್ವಾಮಿಗೆ ಪ್ರಾರ್ಥನೆಮಾಡಿರಿ. ಸರ್ವೇಶ್ವರಸ್ವಾಮಿಯ ದಿನ ಸಮೀಪಿಸಿದೆ. ಆ ದಿನ ಸರ್ವಶಕ್ತನಿಂದ ವಿನಾಶವನ್ನು ತರಲಿದೆ; ಎಂಥಾ ಭಯಂಕರ ದಿನವದು ! ಸಿಯೋನಿನಲ್ಲಿ ಕೊಂಬೂದಿರಿ; ನನ್ನ ಪರಿಶುದ್ಧ ಪರ್ವತದಲ್ಲಿ ಎಚ್ಚರಿಕೆಯ ವಾಣಿ ಮೊಳಗಲಿ; ಸಮಸ್ತ ದೇಶನಿವಾಸಿಗಳು ಹೆದರಿ ನಡುಗಲಿ, ಸರ್ವೇಶ್ವರಸ್ವಾಮಿಯ ದಿನ ಬರಲಿದೆ, ಸನ್ನಿಹಿತವಾಗಿದೆ. ಅದು ಕಾರಿರುಳಿನ ಕರಾಳ ದಿನ, ಕಾರ್ಮುಗಿಲ ಕಾರ್ಗತ್ತಲ ದಿನ. ಮುಂಬೆಳಕು ಗುಡ್ಡದಿಂದ ಗುಡ್ಡಕ್ಕೆ ಹರಡುವಂತೆ ಪ್ರಬಲವಾದ ದೊಡ್ಡ ಸೈನ್ಯವೊಂದು ಬರುತ್ತಿದೆ; ಇಂಥ ಸೈನ್ಯ ಹಿಂದೆಂದೂ ಬಂದಿಲ್ಲ, ತಲತಲಾಂತರಕ್ಕೂ ಬರುವಂತಿಲ್ಲ.
ಕೀರ್ತನೆ - 9: 1-2, 5, 15, 7-8
1 : ಮನಃಪೂರ್ವಕವಾಗಿ ಪ್ರಭು, ನಿನ್ನ ಕೊಂಡಾಡುವೆನು / ನಿನ್ನದ್ಭುಕಾರ್ಯಗಳೆಲ್ಲವನು ನಾ ವರ್ಣಿಸುವೆನು //
2 : ಪರಾತ್ಪರನೇ, ಮಾಡುವೆನು ನಿನ್ನ ನಾಮಸ್ತುತಿ / ಹರ್ಷಾನಂದಗೊಳ್ವೆನು ದೇವಾ, ನಿನ್ನಲ್ಲತಿ //
3 : ನಿನ್ನ ಕಂಡು ನನ್ನ ವೈರಿಗಳು ಗೈದರು ಪಲಾಯನ / ಎದ್ದು ಬಿದ್ದು ಅವರೆಲ್ಲರೂ ಹೊಂದಿದರು ವಿನಾಶನ //
4 : ನ್ಯಾಯಪೀಠದಲಿ ಕುಳಿತೆನ್ನ ವ್ಯಾಜ್ಯತೀರಿಸಿದೆ / ನೀತಿಗನುಸಾರವಾಗಿ ನ್ಯಾಯ ಸ್ಥಾಪಿಸಿದೆ //
5 : ಭ್ರಷ್ಟರನು ದಂಡಿಸಿದೆ, ರಾಷ್ಟ್ರಗಳನು ಖಂಡಿಸಿದೆ / ಎಂದೆಂದೂ ಹೆಸರಿಲ್ಲದಂತೆ ಅವರನು ಅಳಿಸಿಹಾಕಿದೆ //
6 : ನಿಶ್ಯೇಷವಾಗಿ ಹೋದರು ವಿರೋಧಿಗಳು / ನಾಶವಾಗಿ ಹೋದವು ಅವರ ನಗರಗಳು / ಇಲ್ಲವಾದವು ಅವರ ಯಾವ ನೆನಪುಗಳು //
7 : ಪ್ರಭುವಿನ ರಾಜ್ಯಾಡಳಿತ ಶಾಶ್ವತ / ಆತನ ನ್ಯಾಯ ಪೀಠ ಸುಸ್ಥಾಪಿತ //
8 : ಜಗಕೆ ನ್ಯಾಯ ತೀರಿಸುವನು ನೀತಿಗನುಸಾರ / ಜನಾಂಗಕೆ ತೀರ್ಪುಕೊಡುವನು ಸತ್ಯಕ್ಕನುಸಾರ //
9 : ದಲಿತರಿಗೆ ಪ್ರಭು ದುರ್ಗಸ್ಥಾನ / ಆಪತ್ತಿನಲ್ಲಿ ಆಶ್ರಯ ಸ್ಥಾನ //
15 : ಬಿದ್ದರು ಹೊರನಾಡಿಗರು ತಾವು ತೋಡಿದ ಗುಣಿಯಲೆ / ಸಿಕ್ಕಿಕೊಂಡಿತವರ ಕಾಲು ಅವರೊಡ್ಡಿದ ಬಲೆಯಲೆ //
ಶುಭಸಂದೇಶ - ಲೂಕ 11: 15-26
ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,” ಎಂದರು. ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ’ ಎಂದುಕೊಳ್ಳುತ್ತದೆ. ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ. ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲೆಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ,” ಎಂದರು. ಮಾತೆಗಿಂತಲೂ ಮಿಗಿಲಾದವರು !
ಚಿಂತನೆ
ಸಂತ ಜಾನ್ 23ನೆಯವರು
ಜನರು ತಮ್ಮ ಪಾಪಗಳನ್ನು
ತೊರೆದು ಪಶ್ಚಾತ್ತಾಪ ಪಟ್ಟು, ದೇವರಾದ ಸರ್ವೇಶ್ವರ ಸ್ವಾಮಿಗೆ ಶರಣಾಗಲು ಯೊವೇಲ ಪ್ರವಾದಿ ಕರೆನೀಡುತ್ತಿದ್ದಾನೆ.
ಸರ್ವೇಶ್ವರ ಸ್ವಾಮಿಯ ದಿನ ಸಮೀಪಿಸುತ್ತಿದೆ ಅಂದರೆ ನ್ಯಾಯ ತೀರ್ಪಿನದಿನ. ಮಿಡತೆಗಳ ಭೀಕರ ಹಾವಳಿ ಮತ್ತು
ಘೋರಕ್ಷಾಮ ತಲೆದೋರಲಿವೆಯೆಂದು ಪ್ರವಾದಿ ಯೊವೇಲನು ಮುಂತಿಳಿಸುತ್ತಾನೆ. ಈ ಅನಾಹುತ ಸರ್ವೇಶ್ವರನ ಮಹಾದಿನದ
ಮುನ್ಸೂಚನೆಯಾಗಿದೆ. ಅನೀತಿವಂತರಿಗೆ, ಪಾಪಿಗಳಿಗೆ ಬರಲಿರುವ ದಂಡನೆಯನ್ನು ಮುಂತಿಳಿಸುವ ಮೂಲಕ ಪಾಪ
ಕ್ಷಮೆಗೆ, ಮನಪರಿವರ್ತನೆಗೆ ಯೊವೇಲನು ಕರೆನೀಡುತ್ತಿದ್ದಾನೆ. ಮನಪರಿವರ್ತನೆಯಿಂದ ರಕ್ಷಣೆ ಇಲ್ಲವಾದಲ್ಲಿ
ಸರ್ವನಾಶ ಎಂಬುದು ಈ ವಾಚನ ತಿಳಿಸುತ್ತಿದೆ.
No comments:
Post a Comment