Sunday, 6 October 2019

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಬುಧವಾರ

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಬುಧವಾರ


9/ಹಸಿರು/ಬುಧ/ಐಚ್ಛಿಕ ಸ್ಮರಣೆ - ಸಂತ ಡೆನಿಸ್ ಮತ್ತು ಸಂಗಡಿಗರು 
1ನೇ ವಾಚನ - ಯೋನ 4: 1-11
ಕೀರ್ತನೆ - 86: 3-6, 9-1೦
ಶುಭಸಂದೇಶ - ಲೂಕ 11: 1-4


1ನೇ ವಾಚನ - ಯೋನ 4: 1-11
ಸರ್ವೇಶ್ವರಸ್ವಾಮಿಯ ವರ್ತನೆಯು ಯೋನನಿಗೆ ಹಿಡಿಸಲಿಲ್ಲ. ಅವನ ಕೋಪ ನೆತ್ತಿಗೇರಿತು. ಆಗ ಅವನು ಹೀಗೆಂದು ಮೊರೆಯಿಟ್ಟನು: “ಸ್ವಾಮೀ, ಈ ರೀತಿ ಸಂಭವಿಸುವುದೆಂದು ನಾನು ಸ್ವದೇಶವನ್ನು ಬಿಡುವ ಮುನ್ನವೇ ನಿಮಗೆ ಹೇಳಿದ್ದೆನಲ್ಲವೆ? ಈ ಕಾರಣದಿಂದಲೇ ಅಲ್ಲವೆ ನಾನು ತಾರ್ಷಿಷಿಗೆ ಓಡಿಹೋಗಲು ಪ್ರಯತ್ನಿಸಿದ್ದು? ನೀವು ಪ್ರೀತಿಸ್ವರೂಪಿ, ಕರುಣಾಮಯಿ, ಸಹನಾಶೀಲರಾದ ದೇವರು, ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ದೇವರು – ಎಂದು ಆಗಲೇ ನನಗೆ ತಿಳಿದಿತ್ತು. “ಆದುದರಿಂದ ಸರ್ವೇಶ್ವರಾ, ನನ್ನ ಪ್ರಾಣವನ್ನು ಹಿಂತೆಗೆದುಕೊಳ್ಳಿ. ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು,” ಎಂದು ಮೊರೆಯಿಟ್ಟನು. 4ಅದಕ್ಕೆ ಸರ್ವೇಶ್ವರ, “ನೀನು ಹೀಗೆ ಸಿಟ್ಟುಗೊಳ್ಳುವುದು ಸರಿಯೇ?” ಎಂದರು. “ಆದುದರಿಂದ ಸರ್ವೇಶ್ವರಾ, ನನ್ನ ಪ್ರಾಣವನ್ನು ಹಿಂತೆಗೆದುಕೊಳ್ಳಿ. ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು,” ಎಂದು ಮೊರೆಯಿಟ್ಟನು. 4ಅದಕ್ಕೆ ಸರ್ವೇಶ್ವರ, “ನೀನು ಹೀಗೆ ಸಿಟ್ಟುಗೊಳ್ಳುವುದು ಸರಿಯೇ?” ಎಂದರು. ಆಗ ಯೋನನು ನಗರವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋದನು. ಅಲ್ಲಿ ತನಗಾಗಿ ಒಂದು ಗುಡಿಸಲನ್ನು ಕಟ್ಟಿಕೊಂಡನು. ನಗರಕ್ಕೆ ಏನು ಸಂಭವಿಸುತ್ತದೋ ಎಂಬುದನ್ನು ನೋಡಲು ಅದರ ನೆರಳಿನಲ್ಲಿ ಕುಳಿತನು. ದೇವರಾದ ಸರ್ವೇಶ್ವರ ಆ ಸ್ಥಳದಲ್ಲಿ ಒಂದು ಸೋರೆಬಳ್ಳಿ ಮೊಳೆಯುವಂತೆ ಮಾಡಿದರು. ಅದು ಬೆಳೆದು ತಲೆಗೆ ನೆರಳನ್ನೂ ಮನಸ್ಸಿಗೆ ತಣಿವನ್ನೂ ನೀಡಿತು. ಯೋನನಿಗೆ ಬಹಳ ಸಂತೋಷವಾಯಿತು. ಆದರೆ ಮಾರನೆಯ ದಿನ ಮುಂಜಾನೆ ದೇವರ ಆಜ್ಞಾನುಸಾರ ಆ ಗಿಡಕ್ಕೆ ಹುಳುವೊಂದು ಹೊಡೆಯಿತು. ಆಗ ಗಿಡವು ಒಣಗಿಹೋಯಿತು. ಸೂರ್ಯನು ಏರುತ್ತಿರಲು, ಸರ್ವೇಶ್ವರನ ಚಿತ್ತಾನುಸಾರ ಬಿಸಿಯಾದ ಮೂಡಣ ಗಾಳಿ ಬೀಸಿತು. ಬಿಸಿಲಿನ ತಾಪದಿಂದ ಯೋನನು ಮೂರ್ಛೆಹೋಗುವಂತಾದನು; ಸಾವನ್ನು ಅಪೇಕ್ಷಿಸುತ್ತಾ: “ಬದುಕುವುದಕ್ಕಿಂತ ಸಾಯುವುದೇ ಲೇಸು,” ಎಂದು ಬೇಡಿಕೊಂಡನು. ಅದಕ್ಕೆ ದೇವರು: “ನೀನು ಸೋರೆಗಿಡದ ವಿಷಯದಲ್ಲಿ ಸಿಟ್ಟುಗೊಳ್ಳುವುದು ಸರಿಯೇ?” ಎಂದು ಕೇಳಲು, ಯೋನನು, “ಹೌದು, ಸಾವನ್ನು ಬಯಸುವಷ್ಟು ಸಿಟ್ಟುಗೊಳ್ಳುವುದು ಸರಿಯಲ್ಲವೇ?” ಎಂದು ಉತ್ತರವಿತ್ತನು. ಆಗ ಸರ್ವೇಶ್ವರ: “ನೀನು ಆ ಗಿಡಕ್ಕಾಗಿ ಶ್ರಮಿಸಲೂ ಇಲ್ಲ, ಅದನ್ನು ಬೆಳೆಸಲೂ ಇಲ್ಲ. ಅದು ತಾನಾಗಿಯೇ ಒಂದು ರಾತ್ರಿಯಲ್ಲಿ ಬೆಳೆಯಿತು. ಒಂದೇ ರಾತ್ರಿಯಲ್ಲಿ ಬಾಡಿಹೋಯಿತು. ಅದಕ್ಕಾಗಿ ಇಷ್ಟೊಂದು ಚಿಂತೆಯೇ? ಹೀಗಿರುವಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ನಿರಪರಾಧಿಗಳೂ ಅಪಾರ ಪಶುಪ್ರಾಣಿಗಳೂ ಇರುವ ನಿನೆವೆ ಮಹಾನಗರದ ಬಗ್ಗೆ ನಾನು ಇನ್ನೆಷ್ಟು ಚಿಂತೆಪಡಬೇಕು?” ಎಂದರು.

ಕೀರ್ತನೆ - 86: 3-6, 9-1೦
3 : ನೀನೆನಗೆ ದೇವನು, ಕರುಣಿಸೆನ್ನನು / ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು //
4 : ನಿನ್ನ ದಾಸನಿಗೆ ನೀಡು ಮನದಾನಂದವನು / ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು //
5 : ಪ್ರಭು, ನೀನು ದಯಾವಂತನು, ಕ್ಷಮಿಸುವವನು / ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು //
6 : ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ವಿಜ್ಞಾಪನೆಗಳ ಕೋರಿಕೆಗೆ //
9 : ಬರುವುವು ನೀನುಂಟುಮಾಡಿದ ಸಕಲ ಜನಾಂಗಗಳು / ನಿನ್ನ ನಾಮವನು ಘನಪಡಿಸಲು, ನಿನಗೆ ಅಡ್ಡಬೀಳಲು //
10 : ಪ್ರಭು, ನೀನೊಬ್ಬನೇ ದೇವನು / ಅದ್ಭುತಶಾಲಿ, ಮಹೋನ್ನತನು //

ಶುಭಸಂದೇಶ - ಲೂಕ 11: 1-4
ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು, “ಪ್ರಭುವೇ ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆಮಾಡಬೇಕು: ‘ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ. ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ’.”

ಚಿಂತನೆ

ಸಂತ ಡೆನಿಸ್ (ಧರ್ಮಾಧ್ಯಕ್ಷ) ಮತ್ತು ಸಂಗಡಿಗರು (ರಕ್ತ ಸಾಕ್ಷಿಗಳು)
ಸಂತ ಜಾನ್ ಲೆಯೊನಾರ್ಡ್ (ಯಾಜಕ)

ಯೋನನಿಗೆ ಸರ್ವೇಶ್ವರ ಸ್ವಾಮಿಯ ವರ್ತನೆಯು ಹಿಡಿಸಲಿಲ್ಲ. ಹಾಗಾಗಿ ಆತ ಕುಪಿತಗೊಂಡ ಯೋನನ ಕೋಪಕ್ಕೆ ಕಾರಣವೇನು? ಇಸ್ರಯೇಲರು ಅಸ್ಸೀರಿಯದವರನ್ನು ದ್ವೇಷಿಸುತ್ತಿದ್ದರು. ಅಸ್ಸೀರಿಯದವರು ಕ್ರಿ.ಪೂ ೭೨೨ರಲ್ಲಿ ಇಸ್ರೆಯೇಲರ ಮೇಲೆ ದಂಗೆ ಸಾರುತ್ತಾರೆ ಮತ್ತು ಇಸ್ರಯೇಲರನ್ನು ಹಿಂಸಿಸುತ್ತಾರೆ. ಮಕ್ಕಳು, ವೃದ್ಧರು ಎನ್ನದೆ ಎಲ್ಲರ ಸಂಹಾರ ಮಾಡುತ್ತಾರೆ, ಗರ್ಭಿಣಿ ಸ್ತ್ರೀಯರನ್ನು ಈಟಿ, ಭರ್ಜಿಗಳಿಂದ ಕೊಲೆಗೈಯುತ್ತಾರೆ.


ಪಾಪದಲ್ಲಿ ಮುಳುಗಿಹೋಗಿದ್ದ ನಿನೆವೆ ನಾಡನ್ನು ದೇವರು ಹಿಂಸಿಸಬೇಕು, ನಾಶಪಡಿಸಬೇಕೆಂದು ಯೋನನ ಚಿತ್ತವಾಗಿತ್ತು. ಹಾಗಾಗಿ ಆತ ಒಲ್ಲದ ಮನಸ್ಸಿನಿಂದ ನಿನೆವೆಗೆ ಹೊರಡುತ್ತಾನೆ. ಜನರು ಮನಪರಿವರ್ತನೆಗೊಂಡಿದ್ದನ್ನು ನೋಡಿದ ದೇವರು ಅವರನ್ನು ಶಿಕ್ಷಿಸದೆ ಕ್ಷಮಿಸುತ್ತಾರೆ. ಹಾಗಾಗಿ ಯೋನ ದೇವರ ಮೇಲೆ ಕೋಪಗೊಳ್ಳುತ್ತಾನೆ. ಸರ್ವವನ್ನು ಸೃಷ್ಠಿಸಿ, ಕಾಪಾಡುವವರು ದೇವರು. ಅವರ ಪ್ರೀತಿ, ಕರುಣೆಗೆ ಎಲ್ಲೆಯೇ ಇಲ್ಲ, ದುರ್ಜನರನ್ನು ನಾಶಪಡಿಸುವಂಥವರಲ್ಲ ಎಂಬುದನ್ನು ಅರಿಯಲು ಯೋನ ವಿಫಲನಾದ. 

No comments:

Post a Comment