3 ಜನವರಿ 2020
ಶುಕ್ರವಾರ/ಬಿಳಿ/ ಕ್ರಿಸ್ತಜಯಂತಿಯ ಕಾಲ
ಐಚ್ಛಿಕ ಸ್ಮರಣೆ: ಯೇಸುವಿನ ಅತಿ ಪವಿತ್ರನಾಮದ ಸ್ಮರಣೆ
1ನೇ ವಾಚನ: 1 ಯೊವಾನ್ನ 2: 29-3:6
ಕೀರ್ತನೆ: 98: 1, 3 - 6
ಶುಭಸಂದೇಶ: ಯೊವಾನ್ನ 1: 29 - 34
ವಾಚನಗಳು
ಮೊದಲನೇ ವಾಚನ
ಮೊದಲನೇ ವಾಚನ
ಕ್ರಿಸ್ತಯೇಸು ಸತ್ಯಸ್ವರೂಪಿ ಎಂಬುದನ್ನು ನೀವು ಬಲ್ಲಿರಿ. ಎಂದೇ, ಸತ್ಯಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬನೂ ಅವರಿಂದ ಜನಿಸಿದವನು ಎಂಬುದು ನಿಮಗೆ ವೇದ್ಯವಾಗಿರಬೇಕು. ನಾವು ದೇವರ ಮಕ್ಕಳುಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಎಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತಮ್ಮನ್ನು ಶುದ್ಧವಾಗಿಟ್ಟುಕೊಳ್ಳುತ್ತಾನೆ. ಪಾಪಮಾಡುವ ಪ್ರತಿಯೊಬ್ಬನೂ ದೇವರ ಆಜ್ಞೆಯನ್ನು ಮೀರುತ್ತಾನೆ. ದೇವರ ಆಜ್ಞೆಯನ್ನು ಉಲ್ಲಂಘಿಸುವುದೇ ಪಾಪ ಪಾಪರಹಿತರಾದ ಕ್ರಿಸ್ತಯೇಸು ಪಾಪಪರಿಹಾರ ಮಾಡಲೆಂದೇ ಕಾಣಿಸಿಕೊಂಡರೆಂದು ನೀವು ಬಲ್ಲಿರಿ. ಅವರಲ್ಲಿ ನೆಲಸಿರುವ ಪ್ರತಿಯೊಬ್ಬನೂ ಪಾಪಮಾಡನು. ಪಾಪ ಮಾಡುವವನು ಅವರನ್ನು ಕಂಡವನೂ ಅಲ್ಲ, ಅರಿತವನೂ ಅಲ್ಲ.
ಶ್ಲೋಕ: ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ| ನಮ್ಮ ದೇವ ಸಾಧಿಸಿದ ಜಯಗಳಿಕೆ||
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು|
ಎಸಗಿಹನಾತನು ಪವಾಡಕಾರ್ಯಗಳನು|
ಗಳಿಸಿತಾತನ ಕೈ ಪೂತಭುಜ ಗೆಲುವನು||
ಎಸಗಿಹನಾತನು ಪವಾಡಕಾರ್ಯಗಳನು|
ಗಳಿಸಿತಾತನ ಕೈ ಪೂತಭುಜ ಗೆಲುವನು||
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ|
ನಮ್ಮ ದೇವ ಸಾಧಿಸಿದ ಜಯಗಳಿಕೆ||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||
ನಮ್ಮ ದೇವ ಸಾಧಿಸಿದ ಜಯಗಳಿಕೆ||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
6 : ಊದಿರಿ ಕೊಂಬನು, ತುತೂರಿಯನು|
ಉದ್ಘೋಷಿಸಿರಿ ಪ್ರಭು ರಾಜನನು||
ಉದ್ಘೋಷಿಸಿರಿ ಪ್ರಭು ರಾಜನನು||
ಶುಭಸಂದೇಶ
29ಮರುದಿನ ಯೊವಾನ್ನನು, ತಾನಿದ್ದಲ್ಲಿಗೇ ಯೇಸು ಬರುತ್ತಿರುವುದನ್ನು ಕಂಡು, ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. 30ಇವರು 'ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಠರು,' ಎಂದು ನಾನು ಹೇಳಿದುದು ಇವರನ್ನು ಕುರಿತೇ. 31ಇಸ್ರಯೇಲರಿಗೆ ಇವರನ್ನು ತೋರ್ಪಡಿಸಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಾ ಬಂದೆನು; ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ, ಎಂದು ನುಡಿದನು. 32ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರಿಸುತ್ತಾ, ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದು ಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನು. 33ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ. ಆದರೆ ನೀರಿನಿಂದ ಸ್ನಾನದೀಕ್ಷೆ ಕೊಡುವಂತೆ ನನ್ನನ್ನು ಕಳುಹಿಸಿದ ದೇವರು, 'ಪವಿತ್ರಾತ್ಮ ಇಳಿದು ಬಂದು ಯಾವ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತ,' ಎಂದಿದ್ದರು. 34ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರ ಪುತ್ರನೆಂದು ಸಾಕ್ಷಿ ನೀಡುತ್ತಿದ್ದೇನೆ, ಎಂದು ಹೇಳಿದನು.
ಚಿಂತನೆ
ಯೇಸುವಿನ ಪವಿತ್ರನಾಮದ ಮಹೋತ್ಸವ
ಯೇಸುವಿನ ಪವಿತ್ರನಾಮದ ಮಹೋತ್ಸವ
ಯೇಸುಕ್ರಿಸ್ತ ಎಂಬ ಹೆಸರಿನ ಮೂಲ ಬೆಳೆದುಬಂದ ರೀತಿ ಇಂತಿದೆ. ಯಹೋಶು (Yahoshu) ಅಥವಾ ಯೆಶುವ (Yoshva) ಕಾಲಕ್ರಮೇಣ (Yeshva) ಯೆಶುವ ಆಗಿ ಮಾರ್ಪಾಡಾಯಿತು. ಯಹೂ (Yahu) ಎಂದರೆ `ದೇವರು' ಮತ್ತು ಶುವ (shva) ಎಂದರೆ `ರಕ್ಷಿಸುವರು' ಎಂದರ್ಥ. ಯಹೋಶುವ ಎಂಬ ಮೂಲಪದದಿಂದ `ಯೇಸು' (ಗ್ರೀಕ್ ಭಾಷೆಯಲ್ಲಿ ಎಸೂಸ್ - Iesous) ಎಂಬ ಹೆಸರು ಬಂದಿದೆ.
ದೇವರು ರಕ್ಷಿಸುವರು ಎಂಬುದು ಈ ನಾಮದ ಅರ್ಥ. ಗ್ರೀಕ್ ಭಾಷೆಯ ಕ್ರಿಸ್ತೋಸ್ (Christos) ಎಂಬ ಮೂಲಪದದಿಂದ ಕ್ರಿಸ್ತ ಎಂಬ ಹೆಸರು ಬಂದಿದೆ. ಇದರ ಅರ್ಥ ಅಭಿಷಕ್ತನು. ಯೇಸು ಎಂಬ ಹೆಸರನ್ನು ಮರಿಯಮ್ಮನವರಿಗೆ ಸೂಚಿಸಿದ್ದು ಗಬ್ರೀಯೇಲ್ ದೂತನು (ಲೂಕ 1:31). ಯೇಸುವಿನ ಹೆಸರಲ್ಲಿ ಶಕ್ತಿಯಿದೆ, ಸೌಖ್ಯವಿದೆ ಮತ್ತು ಅದು ಪವಿತ್ರ ನಾಮ, ಈ ನಾಮವನ್ನು ದುರ್ಬಳಕೆ ಮಾಡದೆ ಸದಾ ಗೌರವದಿಂದ ಭಕ್ತಿಯುತವಾಗಿ ಉಚ್ಚರಿಸೋಣ.
---------------------------------
ಸಂತೃಪ್ತಿ ನೀಡಿದ ಕುರಿಮರಿ
ಮಾನವರೆಲ್ಲರೂ ದೇವರ ಮಕ್ಕಳು. ದೇವರ ಮಕ್ಕಳೆಂದಮೇಲೆ ನಾವು ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವವರಾಗಬೇಕು. ಯಾರು ದೇವರ ಆಜ್ಞೆಗಳನ್ನು ಉಲ್ಲಂಘಿಸುತ್ತಾರೋ ಅವರು ಪಾಪ ಮಾಡುತ್ತಾರೆ. ಆದ್ದರಿಂದ ದೇವರ ಆಜ್ಞೆಗಳನ್ನು ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಬೇಕು. ಕ್ರಿಸ್ತನನ್ನು ಅರಿತವರು ಪಾಪರಹಿತ ಮಾರ್ಗದಲ್ಲಿ ಸಾಗುವರು.
ಹಳೆಯ ಒಡಂಬಡಿಕೆಯಲ್ಲಿ ಯೆಹೂದ್ಯರು ತಮ್ಮ ಪಾಪ ಪರಿಹಾರಕ್ಕಾಗಿ ಪ್ರತಿ ವರ್ಷ ಕುರಿಮರಿಯೊಂದನ್ನು ದೇವರಿಗೆ ಬಲಿಯಾಗಿ ಸಮರ್ಪಿಸುತ್ತಿದ್ದರು. ಇದಕ್ಕೆ ಬದಲಾಗಿ ತಂದೆ ದೇವರಿಗೆ ಸಂತೃಪ್ತಿ ತರುವ ಒಂದು ಪರಿಪೂರ್ಣ ಬಲಿಯ ಅವಶ್ಯಕತೆ ಇತ್ತು. ಆ ಯಜ್ಞದ ಕುರಿಮರಿಯಾಗಲು ಈ ಲೋಕದಲ್ಲಿ ಜನಿಸಿದವರೆ ಪ್ರಭು ಯೇಸುಕ್ರಿಸ್ತರು. ಇದನ್ನು ಗುರುತಿಸಿ ಜನತೆಗೆ ತೋರಿಸಿ ಕೊಟ್ಟವರು ಸ್ನಾನಿಕ ಯೊವಾನ್ನರು. ತಂದೆ ದೇವರಿಗೆ ಪರಿಪೂರ್ಣ ಬಲಿಯಾಗಿ ಸಮರ್ಪಣೆಗೊಳ್ಳಲಿರುವವರು ನಮ್ಮ ನಡುವೆಯೇ ಇದ್ದಾರೆ ಎಂದು ತಿಳಿಸಿದರು. ಇಮ್ಮಾನುವೇಲ್ ಪ್ರಭು ನಮ್ಮೊಡನೆ ಇದ್ದಾರೆ ಎಂಬ ಅರಿವು ನಮಗಿರುವುದಾದರೆ ನಾವು ರಕ್ಷಣೆಯ ಪಥದಲ್ಲಿ ಸಾಗುತ್ತಿದ್ದೇವೆ ಎಂದು ತಿಳಿದುಕೊಳ್ಳಬಹುದು.
----------------------
ಯೇಸುವಿನ ಪವಿತ್ರನಾಮ
ರೋಮನ್ ಕ್ಯಾಥೊಲಿಕ್ ಸಭೆಯಲ್ಲಿ ಯೇಸುವಿನ ಪವಿತ್ರನಾಮವನ್ನು ತುಂಬಾ ಗೌರವಿಸಿ ಪವಿತ್ರ ಹೃದಯದ ಜೊತೆಯಲ್ಲಿ ಪೂಜಿಸುತ್ತಾರೆ. ಆ ಪುಣ್ಯ ದಿನವನ್ನು (ಜನವರಿ 3 ) 1530ರಲ್ಲಿ ಪ್ರಾರಂಭಿಸಲಾಯಿತು. ಆ ದಿನವನ್ನು ಮಗು ಯೇಸುವಿನ ಸುನ್ನತಿಯ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ಶತಶತಮಾನಗಳಿಂದಲೂ ಯೇಸುವಿನ ಪವಿತ್ರನಾಮವನ್ನು ಕ್ರೈಸ್ತರು ಪ್ರಾರ್ಥಿಸುತ್ತಾ ಬಂದಿದ್ದಾರೆ. ಆ ಹೆಸರಿನಲ್ಲಿ ವಾಸ್ತವಿಕವಾದ ಶಕ್ತಿ ಇದೆಯೆಂದು ಅವರು ನಂಬುತ್ತಾರೆ. ಲೂಕ 1:31- ದೇವದೂತನು ಮರಿಯಮ್ಮನವರಿಗೆ ಪ್ರತ್ಯಕ್ಷನಾಗಿ, “ಆ ಮಗುವಿಗೆ ನೀನು ಯೇಸುವೆಂದು ಹೆಸರಿಡಬೇಕು” ಎಂದನು. ಮತ್ತಾ 1:21ರಲ್ಲಿ, “ಅವನಿಗೆ ‘ಯೇಸು’ ಎಂದು ಹೆಸರಿಡಬೇಕು. ಯಾಕೆಂದರೆ, ಆತನು, ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಬರೆದಿದೆ.
ಸಂತ ಮತ್ತಾಯರು, ಯೇಸುವಿನ ಹೆಸರಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. (ಆತನ ಜನನಕ್ಕಿಂತಲೂ ಹೆಚ್ಚಾಗಿ) ಈ ವಾಕ್ಯಭಾಗವನ್ನು ನೆನಪಿಸಿ, ಯೇಸುನಾಮದ ಕ್ರೈಸ್ತತ್ವಕ್ಕೆ ನಾಂದಿ ಹಾಡಿದ್ದಾರೆ. ಯೇಸು ರಕ್ಷಕರೆಂದೂ ಆ ಹೆಸರು, ಸ್ವರ್ಗದ ಆದೇಶದಿಂದ ಬಂದದ್ದೆಂದೂ ಇದು ಸಾರುತ್ತದೆ-ಅವರು, ಯೆಶಾಯ 7:14 ರ ಪ್ರವಾದನೆಯನ್ನು ಉಲ್ಲೇಖಿಸುತ್ತಾರೆ, “ಆತನ ಹೆಸರು ಇಮ್ಮಾನುವೇಲ್ ಎಂದಿಡಬೇಕು”; ದೇವರು ನಮ್ಮೊಂದಿಗಿದ್ದಾನೆ ಎಂದೇ ಅದರರ್ಥ.
ಯೇಸುನಾಮವನ್ನು ಗೌರವಿಸುವ ಬಗ್ಗೆ, ಸಂತ ಪೌಲರೂ ಹೀಗೆ ಹೇಳಿದ್ದಾರೆ, “ಸ್ವರ್ಗಮರ್ತ್ಯಪಾತಾಳದಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು, ಯೇಸುಕ್ರಿಸ್ತರನ್ನು ಒಡೆಯರೆಂದು ಪ್ರತಿಜ್ಞೆ ಮಾಡಿ, ತಂದೆ ದೇವರಿಗೆ ಗೌರವವನ್ನು ಸಲ್ಲಿಸುವರು”
ರೋಮಾ 10:13ರಲ್ಲಿ, ಪೌಲರು, ”ಯೇಸುವಿನ ಪವಿತ್ರನಾಮವನ್ನು ಪ್ರಾರ್ಥಿಸಿದರೆ, ರಕ್ಷಣೆ ದೊರೆಯುತ್ತದೆ “ಎನ್ನುತ್ತಾರೆ. ಯೊವಾನ್ನನ ಸುಸಂದೇಶ 16:23ರಲ್ಲಿ ಯೇಸುನಾಮದ ಶಕ್ತಿಯನ್ನು ಒತ್ತಿ ಹೇಳಿದೆ. - “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ, ಅದನ್ನು, ಅವರು, ನನ್ನ ಹೆಸರಿನ ಮೇಲೆ ನಿಮಗೆ ಕೊಡುವರು”
ಮಾರ್ಕ 9:38, 39ರಲ್ಲಿ, “ಯೇಸುವಿನ ಪವಿತ್ರನಾಮದ ಶಕ್ತಿಯಿಂದ ದೆವ್ವಗಳು ಓಡಿಹೋಗುತ್ತವೆ” ಎಂದಿದೆ. ಸ್ನಾನದೀಕ್ಷೆಗಳೂ ಯೇಸುವಿನ ಪವಿತ್ರನಾಮದಲ್ಲಿಯೇ ಜರುಗುತ್ತವೆ. (ಪ್ರೇ. ಕಾ 2:38) ಯೇಸುನಾಮದ ಬಲದಿಂದ ಪವಾಡಗಳೂ ಜರುಗುತ್ತವೆ-(ಪ್ರೇ ಕಾ. 3:6, 4:7-11, 9:34) ಪ್ರೇ. ಕಾ. 16:18ರಲ್ಲಿ’ಕೇಡಿಗೆ ವಿರುದ್ಧವಾಗಿ ನಮ್ಮನ್ನು ಯೇಸುನಾಮದ ಧ್ಯಾನವು ರಕ್ಷಿಸುತ್ತದೆ.”ಎಂದಿದೆ.
ಕ್ರೈಸ್ತತ್ವದ ಆದಿಯಿಂದಲೂ ಈ ನಂಬಿಕೆ ಇದೆ. ಕ್ಯಾಂಟರ್ಬೆರಿಯ ಆನ್ಸೆಲ್ಮ್, ಇದಕ್ಕೆ ಒತ್ತಾಸೆ ನೀಡಿದರು. ಕ್ಲೇರ್ಮಾದ ಬರ್ನಾರ್ಡ್ ನವರು, ಯೂರೋಪಿನಲ್ಲಿ ಈ ಪದ್ಧತಿಯನ್ನು ಸ್ಥಾಪಿಸಿದರು. ಅವರು, ಇದು ಆತ್ಮದ ಗಾಯಗಳನ್ನು ಗುಣಪಡಿಸುವ ತೈಲವೆಂದು ಹೇಳಿದ್ದಾರೆ. ರೋಲೆಯವರು, “ಇದು, ಆತ್ಮವನ್ನು ಶುದ್ಧೀಕರಿಸುತ್ತದೆ”ಎಂದು ಪ್ರಬೋಧಿಸಿದ್ದಾರೆ.
ಯೇಸುವಿನ ನಾಮವನ್ನು ಎಡೆಬಿಡದೆ ಉಚ್ಚರಿಸಿದರೆ, ನಿಮ್ಮ ಪಾಪಗಳು ಅಳಿದು, ಅದು ನಿಮ್ಮ ಹೃದಯವನ್ನು ಉಜ್ಜೀವಿಸುತ್ತದೆ, ಎಂದು ಸಹ ರೋಲೇಯವರು ಹೇಳಿದ್ದಾರೆ. ಅವರು ಇದೇ ವಿಷಯದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.
ಹತ್ತನೇ ಪೋಪ್ ಗ್ರಿಗೊರಿಯವರು, ಯೇಸುವಿನ ಪವಿತ್ರನಾಮವನ್ನು ಅಧಿಕೃತವಾಗಿ ಗುರುತಿಸಿದರು. ಈ ನಾಮದೊಂದಿಗೆ, ಮರಿಯಮ್ಮನವರ ಪವಿತ್ರನಾಮವೂ ಸೇರಿಕೊಂಡಿತು. I.H.S. ಸಾಂಕೇತಾಕ್ಷರದಲ್ಲಿಯೂ ಅಡಕವಾಯಿತು. ಯೇಸು ಸಭೆಯವರು, ಅದಕ್ಕೆ ಮೂರು ಮೊಳೆಗಳನ್ನು ಸೇರಿಸಿ, ತನ್ನ ಸಭೆಯ ಸಂಕೇತವನ್ನಾಗಿ ಮಾಡಿಕೊಂಡಿತು.
15ನೇ ಶತಮಾನದಲ್ಲಿ, ಫ್ರಾನ್ಸಿಸ್ಕರಾದ ಬೆರ್ನಡೀನ್ ನವರು ಈ ಪವಿತ್ರನಾಮದ ಪೂಜೆಗೆ ಉತ್ತೇಜನ ನೀಡಿದರು. ತಮ್ಮ ಪ್ರಬೋಧನೆಯ ನಂತರ, I.H.S. ಸಾಂಕೇತಾಕ್ಷರಗಳನ್ನು ಸಭೆಗೆ ಎತ್ತಿ ತೋರಿಸುತ್ತಿದ್ದರು. ಇದು, ಇಟಲಿಯಲ್ಲಿ ತುಂಬಾ ಜನಪ್ರಿಯವಾಯಿತು. ಮನೆಬಾಗಿಲುಗಳ ಮೇಲೂ ಬರೆಸುತ್ತಿದ್ದರು.
ಕ್ಯಾಥೊಲಿಕ್ಕರು, ಪವಿತ್ರನಾಮದ ಭರಣಿಗಳನ್ನೂ ಬಳಸುತ್ತಾರೆ. ಪ್ರಾಟೆಸ್ಟಂಟ್‍ರಾದ ಕ್ಯಾಲ್ವಿನ್ ಹಾಗೂ ಮಾರ್ಟಿನ್ ಲೂಥರ್‌ರವರುಗಳೂ ಪವಿತ್ರನಾಮಕ್ಕೆ ಗೌರವ ನೀಡುವುದನ್ನು ಪ್ರೋತ್ಸಾಹಿಸಿರುವುದೂ ವಿಶೇಷವೇ!
No comments:
Post a Comment