28 ಜನವರಿ 2019 / ಮಂಗಳವಾರ
ಸೋಮವಾರ/ಬಿಳಿ /ಸಂತತೋಮಸ್ ಅಕ್ವಿನಾಸ್ (ಯಾ ಮತ್ತು ಧ.ಪಂ) (ಸ್ಮರಣೆ).
1ನೇ ವಾಚನ - 2 ಸಾಮುವೇಲ 6: 12-15, 17-19
ಕೀರ್ತನೆ - 24:7-8,9,10
ಶುಭಸಂದೇಶ: ಮಾರ್ಕ: 3:31-35
ಸೋಮವಾರ/ಬಿಳಿ /ಸಂತತೋಮಸ್ ಅಕ್ವಿನಾಸ್ (ಯಾ ಮತ್ತು ಧ.ಪಂ) (ಸ್ಮರಣೆ).
1ನೇ ವಾಚನ - 2 ಸಾಮುವೇಲ 6: 12-15, 17-19
ಕೀರ್ತನೆ - 24:7-8,9,10
ಶುಭಸಂದೇಶ: ಮಾರ್ಕ: 3:31-35
--------------------------
1ನೇ ವಾಚನ - 2 ಸಾಮುವೇಲ 6: 12-15, 17-19
12 : ಹೀಗೆ ಸರ್ವೇಶ್ವರ ತಮ್ಮ ಮಂಜೂಷದ ಕಾರಣ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾರೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದ ನಗರಕ್ಕೆ ತಂದನು.
13 : ಸರ್ವೇಶ್ವರನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ ದಾವೀದನು ಒಂದು ಎತ್ತನ್ನೂ ಒಂದು ಕೊಬ್ಬಿದ ಕರುವನ್ನೂ ಬಲಿದಾನ ಮಾಡಿದನು.
14 : ದಾವೀದನು ಏಫೋದೆಂಬ ನಾರುಮಡಿಯನ್ನು ಮಾತ್ರ ಉಟ್ಟುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ಪೂರ್ಣಾವೇಶದಿಂದ ಕುಣಿದಾಡಿದನು.
15 : ಹೀಗೆ ದಾವೀದನು ಹಾಗು ಎಲ್ಲ ಇಸ್ರಯೇಲರೂ ಜಯಕಾರಮಾಡುತ್ತಾ ತುತ್ತೂರಿ ಊದುತ್ತಾ ಸರ್ವೇಶ್ವರನ ಮಂಜೂಷವನ್ನು ತಂದನು.
16 : ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ವಿೂಕಲಳು ಕಿಟಕಿಯಿಂದ ಇಣಿಕಿ ನೋಡಿ ದಾವೀದನು ಸರ್ವೇಶ್ವರನ ಮುಂದೆ ನಲಿದಾಡುತ್ತಾ ಕುಣಿಯುತ್ತಾ ಇರುವುದನ್ನು ಕಂಡು ಮನಸ್ಸಿನಲ್ಲೇ ಅವನನ್ನು ತಿರಸ್ಕರಿಸಿದಳು.
17 : ಜನರು ಸರ್ವೇಶ್ವರನ ಮಂಜೂಷವನ್ನು ತಂದು ದಾವೀದನು ಕಟ್ಟಿಸಿದ್ದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿ ಇಟ್ಟರು; ಆಗ ದಾವೀದನು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದನು.
18 : ಇದಾದ ಮೇಲೆ ಅವನು ಸೇನಾಧೀಶ್ವರ ಸರ್ವೇಶ್ವರನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು.
19 : ನೆರೆದುಬಂದು ಸಭೆ ಸೇರಿದ್ದ ಇಸ್ರಯೇಲರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನು, ಒಂದು ತುಂಡು ಮಾಂಸವನ್ನು ಹಾಗು ದ್ರಾಕ್ಷಿ ಹಣ್ಣಿನಿಂದ ಮಾಡಿದ ಉಂಡೆಯನ್ನು ಕೊಡಿಸಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
-----------------------------------
ಕೀರ್ತನೆ - 24:7-8,9,10
7 : ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು / ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು //
8 : ಯಾರಿವನು ಮಹಿಮಾವಂತ ರಾಜಾಧಿರಾಜನು? / ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು!//
9 : ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು / ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು //
10 : ಯಾರಿವನು ಮಹಿಮಾವಂತ ರಾಜಾಧಿರಾಜನು? / ಇವನೇ ಸೇನಾಧೀಶ್ವರನು, ಮಹಿಮಾರಾಜನು //
-----------------------------------
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
29 ಮಾರ್ಕ 3: 31-35
31ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. 32ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ, ಎಂದು ಯೇಸುವಿಗೆ ತಿಳಿಸಿದರು. 33ಅದಕ್ಕೆ ಯೇಸು, ನನಗೆ ತಾಯಿ ಯಾರು?, ಸಹೋದರರು ಯಾರು? ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ,
34ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! 35ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ, ಎಂದರು.
31ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. 32ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ, ಎಂದು ಯೇಸುವಿಗೆ ತಿಳಿಸಿದರು. 33ಅದಕ್ಕೆ ಯೇಸು, ನನಗೆ ತಾಯಿ ಯಾರು?, ಸಹೋದರರು ಯಾರು? ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ,
34ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! 35ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ, ಎಂದರು.
-----------------------------------
ಚಿಂತನೆ
``ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ'' ಎಂದು ಯೇಸುವಿಗೆ ತಿಳಿಸಿದಾಗ ಯೇಸು, ``ನನಗೆ ತಾಯಿ ಯಾರು? ಸಹೋದರರು ಯಾರು?'' ಎಂದು ಪ್ರಶ್ನಿಸುತ್ತಾರೆ. ಯಾರು ಈ ಸಹೋದರರು? ಇವರು ಯೇಸುವಿನ ಸ್ವಂತ ಸಹೋದರರಲ್ಲ, ಮಾತೆ ಮರಿಯೆಳಿಗೆ ಯೇಸುವಿನ ಹೊರತು ಬೇರೆ ಮಕ್ಕಳಿರಲಿಲ್ಲ, ಯೇಸುವಿಗೆ ಸ್ವಂತ ಸಹೋದರರಿದ್ದರೆ ಅವರು ಶಿಲುಬೆಯ ಮೇಲೆ ಪ್ರಾಣ ನೀಗುವ ಸಂದರ್ಭದಲ್ಲಿ ತನ್ನ ತಾಯಿಯನ್ನು ಆಪ್ತ ಶಿಷ್ಯನಿಗೆ ಒಪ್ಪಿಸುತ್ತಿರಲಿಲ್ಲ.
ಇನ್ನೊಂದು ದೃಷ್ಟಿಯಲ್ಲಿ ನೋಡುವುದಾದರೆ ಯೇಸು ಏಕೆ ಈ ರೀತಿ ವರ್ತಿಸಿದರು? ಅವರ ತಾಯಿಯ ಮೇಲೆ ಗೌರವ ಇರಲಿಲ್ಲವೆ? ಖಂಡಿತ ಇಂತಹ ಭಾವನೆಗಳಿಗೆ ಆಸ್ಪದ ನೀಡಬಾರದು. ಯೇಸುವಿಗೆ ತನ್ನ ತಾಯಿಯ ಮೇಲೆ ಅಪಾರ ಪ್ರೀತಿ ಇತ್ತು. ಇಲ್ಲಿ ಯೇಸು ನಮಗೆ ತಿಳಿಸ ಬಯಸುವುದು ನಮ್ಮ ಮೊದಲ ಆದ್ಯತೆ ದೇವರು. ಜಗದ ಎಲ್ಲಾ ಸಂಬಂಧಗಳಿಗಿಂತ ಆ ಸೃಷ್ಟಿಕರ್ತ ದೇವನೊಂದಿಗಿನ ಸಂಬಂಧ ಉತ್ತಮವಾಗಿರಬೇಕು ಹಾಗಾಗಬೇಕಿದ್ದರೆ ನಮ್ಮ ಆದ್ಯತೆ ಆ ದೇವರಾಗಿರಬೇಕು ಎಂಬುದೇ ಯೇಸುವಿನ ಸಂದೇಶ.
-----------------------------------
ಯೇಸು ನಮ್ಮೆಲ್ಲರಿಗೆ ದೇವರ ಮಕ್ಕಳಾಗುವ ಹಾಗೂ ಕ್ರಿಸ್ತನ ಒಡನಾಡಿಗಳಾಗುವ ಭಾಗ್ಯವನ್ನು ದಯಪಾಲಿಸುತ್ತಾರೆ
ದೇವರು ನಮ್ಮನ್ನು ತಮ್ಮ ಸ್ವರೂಪದಲ್ಲಿ ಸೃಷ್ಟಿಸಿದರು. ಮಾತ್ರವಲ್ಲ ನಮ್ಮೆಲ್ಲರನ್ನು ಆರಿಸಿಕೊಂಡು ಅವರ ಮಕ್ಕಳಾಗುವ ವರವನ್ನು ನೀಡಿದರು. ಈ ದೈವ ಪ್ರೀತಿಯಲ್ಲಿ ಮಿಂದ ದಾವೀದ ಅರಸನು ದೇವರ ಸಾನ್ನಿಧ್ಯದಲ್ಲಿ ಸರ್ವವನ್ನು ಮರೆತು ಆನಂದಸಾಗರದಲ್ಲಿ ಮುಳುಗುತ್ತಾನೆ. ಈ ಲೋಕದ ರಾಜನು ದೈವಲೋಕದ ಅರಸನ ಸ್ಪರ್ಶದಿಂದ ತನ್ನ ಅಲ್ಪತನವನ್ನು ಮರೆತು ಮಕ್ಕಳಂತೆ ದೇವರ ಪ್ರೀತಿಯ ಚಿತ್ತದ ತಾಳಕ್ಕೆ ತಕ್ಕಂತೆ ಹರ್ಷದಿಂದ ಕುಣಿಯುತ್ತಾನೆ. ಯಾರು ದೇವರ ಚಿತ್ತಕ್ಕೆ ತಲೆಬಾಗಿ ನಡೆಯುತ್ತಾರೋ ಅವರೇ ನನ್ನ ತಂದೆ ತಾಯಿ, ಬಂಧು ಬಳಗ ಎಂಬ ದಿವ್ಯ ಸುವಾರ್ತೆಯ ಮೂಲಕ ಯೇಸು ನಮ್ಮೆಲ್ಲರಿಗೆ ದೇವರ ಮಕ್ಕಳಾಗುವ ಹಾಗೂ ಕ್ರಿಸ್ತನ ಒಡನಾಡಿಗಳಾಗುವ ಭಾಗ್ಯವನ್ನು ದಯಪಾಲಿಸುತ್ತಾರೆ. ಇಗೋ ದೇವರ ದಾಸಿ, ನಿಮ್ಮ ವಚನದ ಪ್ರಕಾರವೇ ನನಗಾಗಲಿ ಎಂದು ದೇವರ ಚಿತ್ತಕ್ಕೆ ತಲೆಬಾಗಿ ಬೆತ್ಲೆಹೇಮಿನ ತನ್ನ ಉದರದ ಗೋದಲಿಯಿಂದ ಕಲ್ವಾರಿ ಗಿರಿಯವರೆಗೆ ದೇವರ ಚಿತ್ತವನ್ನು ಕಾಯಾ-ವಾಚಾ- ಮನಸ್ಸಾ ಪರಿಪಾಲಿಸಿದ ಮಾತೆಮೇರಿ ನಾವೆಲ್ಲರೂ ದೇವರ ಕುಟುಂಬದ ಸದಸ್ಯತ್ವವನ್ನು ಪಡೆಯುವುದರ ಮಾರ್ಗವನ್ನು ತೋರಿಸುತ್ತಾರೆ.
-----------------------------------
ಸಂತ ಥಾಮಸ್ ಅಕ್ವಿನಾಸ್
ಅಕ್ವಿನೊ ನಗರದ ಶ್ರೀಮಂತ ಲಾಂಡಲ್ಫ್ ದಂಪತಿಗಳಿಗೆ ಕ್ರಿ.ಶ. 1226ರಲ್ಲಿ ಹುಟ್ಟಿದ ಕೊನೆಯ ಮಗ ಥಾಮಸ್. ಬಾಲಕ ಥಾಮಸ್ ಅಕ್ವಿನಾಸ್ ಪ್ರತಿಭಾವಂತ. ತನ್ನ ಜೀವನ ಭವಿಷ್ಯವನ್ನು ನಿರ್ಧರಿಸುವ ಪ್ರಾಯಸ್ಥನಾದಾಗ ಥಾಮಸ್ ಬೆನೆಡಿಕ್ಟೈನ್ ಆಶ್ರಮ ಬಿಟ್ಟು ಲೌಕಿಕವಾದ ಎಲ್ಲವನ್ನೂ ತ್ಯಜಿಸಿ ಡೊಮಿನಿಕನ್ ಸಭೆಯನ್ನು ಸೇರಲು ನಿರ್ಧರಿಸುತ್ತಾರೆ. ತನ್ನ ಹದಿನೇಳನೇ ವಯಸ್ಸಿ(1243)ನಲ್ಲಿ ನೇಪಲ್ಸಿನ ಡೊಮಿನಕನ್ ಸಭೆ ಸೇರುತ್ತಾರೆ. ಮನೆಯವರ ವಿರೋಧವನ್ನು ಎದುರಿಸಿ ಗುರುದೀಕ್ಷೆಯನ್ನು ಸ್ವೀಕರಿಸುತ್ತಾರೆ. 31ನೇ ವುಯಸ್ಸಿಗೆ ಡಾಕ್ಟರೇಟ್ ಪದವಿಯನ್ಮೂ ಪಡೆಯುತ್ತಾರೆ.
`ಕಥೋಲಿಕ ಧರ್ಮಶಾಸ್ತ್ರದ ರಾಜಕುಮಾರ' ಎಂದೇ ಖ್ಯಾತರಾದ ಥಾಮಸ್ ಅಕ್ವಿನಾಸರು ಕ್ರಿಸ್ತನ ಬೋಧನೆಯ ಹಿನ್ನೆಲೆಯಲ್ಲಿ ಅರಿಸ್ಟಾಟಲ್‌ನ ವ್ಯವಸ್ಥೆಯನ್ನು ವಿಮರ್ಶಿಸಿದ ಮೊದಲ ಪಂಡಿತ. ಕ್ರೈಸ್ತ ದೈವ ಶಾಸ್ತ್ರ ಮತ್ತು ತತ್ವ ಶಾಸ್ತ್ರದ ಸಾರಾಂಶವಾದ `ಸುಮ್ಮ ಥಿಯೊಲಾಜಿಕಾ' ಎಂಬ ಮೇರು ಗ್ರಂಥ ಅವರ ಆಳವಾದ ಅಧ್ಯಯನದ ಫಲಶೃತಿ. ಪರಮಪ್ರಸಾದದ ಅಪ್ರತಿಮ ಭಕ್ತ. `ಓ ಎಂಥಾ ದಿವ್ಯ ಸಂಸ್ಕಾರ' ಗೀತೆಯ ರಚನಕಾರ. ಮಾರ್ಚ್ 7, 1274ರಲ್ಲಿ ಕೊನೆಯುಸಿರೆಳೆದ ಇವರನ್ನು 1323ರಲ್ಲಿ ಜಗದ್ಗುರು 5ನೇ ಭಕ್ತಿನಾಥರು ``ಧರ್ಮಸಭೆಯ ಪಂಡಿತ' ಎಂದು ಘೋಷಿಸಿ ಅವರನ್ನು ಸಂತ ಪದವಿಗೇರಿಸುತ್ತಾರೆ. ಸಂತ ಥಾಮಸ್ ಅಕ್ವಿನಾಸ್ ವಿಶ್ವವಿದ್ಯಾಲಯಗಳ ಶಿಕ್ಷಕರ ಹಾಗೂ ಅಧ್ಯಯನ ಶೀಲ ವಿದ್ಯಾರ್ಥಿಗಳ ಪಾಲಕ ಸಂತರಾಗಿದ್ದಾರೆ.
ಇಂದಿನ ಸಂತರು
ಅಕ್ವಿನಾಸ್ ಪಟ್ಟಣದ ನ್ಯಾಡ್೦ಡೊಲ್ಫ್೦ ಹಾಗೂ ತಿಯೋಡೋರಾ ದ೦ಪತಿಗಳ ಕೊನೆಪುತ್ರ ತೋಮಸ್ ತನ್ನ 5ನೇ ವಯಸ್ಸಿನಲ್ಲಿ ಬೆನೆಡಿಕ್ಟ್ ಮಠಕ್ಕೆ ಸೇರಿ ತನ್ನ ಎಲ್ಲಾ ವಿದ್ಯಾಭ್ಯಾಸ ಮುಗಿಸಿ 11 ನೇ ವಯಸ್ಸಿನಲ್ಲಿ ನೆಪಲ್ಸ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಕ್ತಾಯ ಮಾಡಿ, ತನ್ನ 18 ನೇ ವಯಸ್ಸಿನಲ್ಲಿ ಡೋಮಿನಿಕನ್ ಸಭೆಗೆ ಭರ್ತಿಯಾಗಲು ಆಪೇಕ್ಷಿಸಲು, ಆತನ ಸ೦ಬ೦ಧಿ ಚಕ್ರವರ್ತಿ 2 ನೇ ಫ್ರೆಡರಿಕ್ ಹಾಗೂ ಕುಟು೦ಬದವರು ಅದನ್ನು ವಿರೋಧಿಸಿ, ತೋಮಸ್ ನನ್ನು ಸುಮಾರು 2 ವರ್ಷ, ತಮ್ಮ ಅರಮನೆಯಲ್ಲಿ ಸೆರೆಮನೆಯಲ್ಲಿಟ್ಟಿದರು. ಈ ಸ೦ಧರ್ಭದಲ್ಲಿ ಆತನ ತ೦ಗಿ ಅನುಕ೦ಪದಿ೦ದ, ಆತನಿಗೆ ಒ೦ದು ಪವಿತ್ರಗ್ರ೦ಥವನ್ನು ಹಾಗೂ ತತ್ವಶಾಸ್ತ್ರದ ಕೆಲ ಪುಸ್ತಕವನ್ನು ನೀಡಿ ಸ೦ತೈಸಿದಳು.
ಕೆಲದಿನಗಳ ನ೦ತರ ಡೊಮಿನಿಕನ್ ಗುರುಗಳು, ಅ೦ತಸ್ತಿನ ಮೇಲಿದ್ದ ಸೆರೆಮನೆಯಿ೦ದ, ತೋಮಸನನ್ನು ಒ೦ದು ಬುಟ್ಟಿಯಲ್ಲಿರಿಸಿ, ತಪ್ಪಿಸಿಕೊಳ್ಳಲು ಸಹಕರಿಸಿದರು. ಅಲ್ಲಿ೦ದ ಆತ ಕೋಲೋನ್ ಹಾಗೂ ಪ್ಯಾರಿಸ್ ಪಟ್ಟಣಗಳಲ್ಲಿದ್ದ. ತನ್ನ ಉನ್ನತ ಶಿಕ್ಷಣ ಮುಗಿಸಿ, ಸ೦ತ ಆಲ್ಬರ್ಟ್ರ ಸಹಕಾರದಿ೦ದ, ಧರ್ಮಪಾ೦ಡಿತ್ಯವನ್ನು ಮುಕ್ತಾಯಗೊಳಿಸಿ, ಗುರು ದೀಕ್ಷೆಯನ್ನು ಸ್ವೀಕರಿಸಿದರು. ತದನ೦ತರ ಪ್ಯಾರಿಸ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಶಿಕ್ಷಣ ಪ್ರಾಧ್ಯಾಪಕರಾಗಿ ತನ್ನ ವೃತ್ತಿಯನ್ನು ಮು೦ದುವರಿಸಲು, ಸಾವಿರಾರು ವಿದ್ಯಾರ್ಥಿಗಳ ಆಕರ್ಷಣೆ, ಅಲ್ಲವೇ ಅವರ ಪ್ರೇರಕರಾಗಿ, ಅವರಲ್ಲಿ ವಿದ್ಯಾಭ್ಯಾಸದ ಮಹತ್ವವನ್ನು ಹಾಗೂ ಅಗತ್ಯತೆಯನ್ನು ಮೂಡಿಸಿದರು.
ತೋಮಸರನ್ನು ‘ಎ೦ಜೆಲಿಕ್ ಡಾಕ್ಟರ್’ ಎ೦ದೂ ‘ಕಥೋಲಿಕ್ ಸಭೆಯ ದೈವಶಾಸ್ತ್ರದ ಯುವಕುಮಾರ’ ಎ೦ದು ಹೆಸರಾದರು. ಗ್ರೀಕ್- ಅರಿಸ್ಟಾಟಲ್ ತತ್ವಶಾಸ್ತ್ರವನ್ನು ಕ್ರೈಸ್ತ ಭೋಧನಾನುಗುಣವಾಗಿ ವ್ಯಾಖ್ಯಾನಿಸಿದರು ಹಾಗೂ ಅರ್ಥವಿವರಣೆ ನೀಡಿದರು. ತನ್ನ 49ನೇ ವರ್ಷಗಳಲ್ಲಿ ಸುಮಾರು 60 ಪಾ೦ಡಿತ್ಯಪೂರ್ಣ ಪುಸ್ತಕಗಳನ್ನು ಬರೆದರು. ಅವುಗಳಲ್ಲಿ ಚಾರಿತ್ರಿಕ ‘ಸುಮ್ಮಾ ತಿಯಲೋಜಿಕ’(summa theologica) ಕ್ರೈಸ್ತ ಧರ್ಮದ ತಿರುಳನ್ನು, ತತ್ವಶಾಸ್ತ್ರ ಮತ್ತು ದೈವಶಾಸ್ತ್ರದೊ೦ದಿಗೆ ವರ್ಣಿಸಿರುವ, ಮಹಾಗ್ರ೦ಥ. ಕ್ರೈಸ್ತ ಧರ್ಮದ ರಸ-ರಹಸ್ಯಗಳನ್ನು, ಪಾ೦ಡಿತ್ಯದ ಮೂಲಕ ಎಲ್ಲಾ ವಿಷಯಗಳನ್ನು ಅರ್ಥೈಸಿಕೊಳ್ಳುವ೦ತೆ ಮ೦ಡಿಸಿದ ತೋಮಸ್, ದೈವ –ಸ೦ಬ೦ಧ-ಸ೦ಧರ್ಭ-ಜ್ಞಾನಾರ್ಜನೆ ವಿಜ್ಞಾನವನ್ನು ತಿಳಿಸಿದರು. ಧ್ಯಾನ-ಮೌನ-ಪ್ರಾರ್ಥನೆ-ದೈವಾನುಗ್ರಹ ಎಲ್ಲಾ ಜ್ಞಾನದ ಬುನಾದಿ, ದೈವ ಕೃಪೆಯು ಎಲ್ಲಾ ಜ್ಞಾನಗಳ ಉಗಮ ಎ೦ದು ತಿಳಿಸಿದರು. ತೋಮಸ್ ಗಿದ್ದ ಜ್ಞಾನ-ವಿದ್ಯಾ ಬಯಕೆ. ಕೆಲವೊಮ್ಮೆ ತಮ್ಮ ಊಟ-ಉಪಚಾರ-ವಿಶ್ರಾ೦ತಿಯನ್ನು ಮರೆಯುವಷ್ಟಿತ್ತು. ಪವಿತ್ರಗ್ರ೦ಥದ ವ್ಯಾಖ್ಯಾನವನ್ನು ಉಪವಾಸ, ಪ್ರಾರ್ಥನೆ, ಧ್ಯಾನದಲ್ಲಿ ಅರ್ಥೈಸಿಕೊಳ್ಳುತ್ತಿದ್ದರು. ಅವರಿಗಿದ್ದ ಪರಮ ಪ್ರಸಾದದ ಪ್ರೀತಿ-ವಿಶ್ವಾಸವನ್ನು ಕ್ರಿಸ್ತನ ಶರೀರ ಹಾಗೂ ಎ೦ಥ ದಿವ್ಯ ಸ೦ಸ್ಕಾರ (Tantum Ergo) ಎ೦ಬ ಕಾವ್ಯಗಳ ಮುಖಾ೦ತರ ವ್ಯಕ್ತಪಡಿಸಿದರು. ಇದು ಜಗದ್ಗುರುಗಳ ಅಪ್ಪಣೆಯಿ೦ದ ರಚಿಸಲಾಗಿತ್ತು. ಕೊನೆಗೆ ತೋಮಸ್ ಲೊಯೊನ್ಸ್ ಶೃಂಗಸಭೆಗೆ ತೆರಳುತ್ತಿರುವಾಗ ದೈವಾಧೀನರಾದರು. 22ನೇ ಪೋಪ್ ಜಾನ್ 1323 ರ 18 ನೇ ಜುಲೈ ಅವರನ್ನು ಸ೦ತ ಪದವಿಗೇರಿಸಿದರು ಹಾಗೂ 5 ನೇ ಭಕ್ತಿನಾಥರು ತೋಮಸರನ್ನು 11 ನೇ ಏಪ್ರಿಲ್ 1567ರಲ್ಲಿ ಧರ್ಮಸಭೆಯ ಪ೦ಡಿತ ಎ೦ದು ಘೋಷಿಸಿದರು. ಅ೦ತೆಯೇ ತೋಮಸ್ ಕಥೋಲಿಕ್ ಧರ್ಮ ವಿಶ್ವವಿದ್ಯಾನಿಲಯಗಳ ಪಾಲಕ ಎ೦ದು ಹೆಸರುಗಳಿಸಿದರು.
ಚಿತ್ರ: ಗೂಗಲ್ ಕೃಪೆ

No comments:
Post a Comment