19 ಫೆಬ್ರವರಿ 2020
ಬುಧವಾರ / ಹಸಿರು / ಸಾಧಾರಣ ಕಾಲದ ಆರನೇ ವಾರ
1ನೇ ವಾಚನ - ಯಕೋಬ 1:19-27
ಕೀರ್ತನೆ - 15:2-3,3-4,5
ಶುಭಸಂದೇಶ - ಮಾರ್ಕ 8: 22-26
-----------------------
1ನೇ ವಾಚನ - ಯಕೋಬ 1:19-27
-----------------------
ಕೀರ್ತನೆ - 15:2-3,3-4,5
1 : ಯೋಗ್ಯನಾರು ಪ್ರಭು ನಿನ್ನ ಗುಡಾರದಲಿ ಬಿಡಾರಮಾಡಲು? / ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು? //
--------------------------
ಶುಭಸಂದೇಶ - ಮಾರ್ಕ 8: 22-26
---------------------------
ಚಿಂತನೆ
ಸಂತ ಕೊನ್ರಾಡ್ (129೦-1351)
ಇವರು ಉತ್ತರ ಇಟಲಿಯ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಅಮಾಯಕ ವ್ಯಕ್ತಿಯ ಮೇಲೆ ತಾವು ಹೊರಿಸಿದ ಸುಳ್ಳು ಆರೋಪ ಹಾಗೂ ಆತನಿಗಾದ ಮರಣ ದಂಡನೆಯ ಶಿಕ್ಷೆಗಳು ಕೊನ್ರಾಡ್ ನವರನ್ನು ಪಶ್ಚಾತ್ತಾಪದ ಆಳವಾದ ಚಿಂತನೆಗೆ ತಳ್ಳಿದವು. ಇದಾದ ನಂತರ ಇವರು ಎಲ್ಲವನ್ನೂ ತ್ಯಜಿಸಿ ಸಂತ ಫ್ರಾನ್ಸಿಸ್ ಸಭೆ ಸೇರಿದರೆ ಇವರ ಪತ್ನಿ ಮಹಿಳಾ ಧಾರ್ಮಿಕ ಸಭೆಯನ್ನು ಸೇರಿದರು. ಶಿಲುಬೆಯ ಮುಂದೆ ನಿರಂತರ ಪ್ರಾರ್ಥನೆಯಲ್ಲಿ ತೊಡಗುತ್ತಿದ್ದ ಇವರು ಮೊಣಕಾಲಿನಲ್ಲಿ ಪ್ರಾರ್ಥಿಸುವ ಭಂಗಿಯಲ್ಲೇ ಪ್ರಾಣ ಬಿಟ್ಟರು.
ಬುಧವಾರ / ಹಸಿರು / ಸಾಧಾರಣ ಕಾಲದ ಆರನೇ ವಾರ
1ನೇ ವಾಚನ - ಯಕೋಬ 1:19-27
ಕೀರ್ತನೆ - 15:2-3,3-4,5
ಶುಭಸಂದೇಶ - ಮಾರ್ಕ 8: 22-26
-----------------------
1ನೇ ವಾಚನ - ಯಕೋಬ 1:19-27
19 : ಸಹೋದರರೇ, ಇದನ್ನು ನೆನಪಿನಲ್ಲಿಡಿ; ನಿಮ್ಮಲ್ಲಿ ಪ್ರತಿಯೊಬ್ಬನು ಆಲಿಸುವುದರಲ್ಲಿ ಚುರುಕಾಗಿ, ಮಾತನಾಡುವುದರಲ್ಲಿ ದುಡುಕದೆ, ಸಿಟ್ಟುಗೊಳ್ಳುವುದರಲ್ಲಿ ಸಾವಧಾನವಾಗಿ ಇರಲಿ.
20 : ಮಾನವನ ಕೋಪ ದೇವನೀತಿಗೆ ಧಕ್ಕೆ ! ಆದುದರಿಂದ ನಿಮ್ಮಲ್ಲಿರುವ ಎಲ್ಲಾ ನೀಚತನವನ್ನು ಮತ್ತು ಬೆಳೆಯುತ್ತಿರುವ ದುಷ್ಟತನವನ್ನು ಕಿತ್ತೊಗೆಯಿರಿ.
21 : ನಿಮ್ಮ ಹೃದಯದಲ್ಲಿ ದೇವರು ನೆಟ್ಟಿರುವ ವಾಕ್ಯವನ್ನು ನಮ್ರತೆಯಿಂದ ಪರಿಗ್ರಹಿಸಿರಿ. ಇದು ನಿಮ್ಮ ಜೀವೋದ್ಧಾರ ಮಾಡಬಲ್ಲುದು.
22 : ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ.
23 : ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿ,
24 : ಮರುಕ್ಷಣವೇ ತಾನು ಹೇಗಿದ್ದೇನೆಂದು ಮರೆತುಬಿಡುವವನಿಗೆ ಸಮಾನನು.
25 : ಆದರೆ ನಮಗೆ ವಿಮೋಚನೆಯನ್ನು ತರುವ ಸರ್ವೋತ್ತಮ ಧರ್ಮಶಾಸ್ತ್ರವನ್ನು ಲಕ್ಷ್ಯವಿಟ್ಟು ನೋಡಿ ಅದರಲ್ಲೇ ಧ್ಯಾನಾಸಕ್ತನಾಗಿರುವವನು ಅದನ್ನು ಮರೆಯುವುದಿಲ್ಲ. ಅವನು ಕೇಳುವವನು ಮಾತ್ರ ಆಗಿರದೆ, ವಾಕ್ಯದ ಪ್ರಕಾರ ನಡೆಯುವವನೂ ಆಗಿರುತ್ತಾನೆ. ಇಂಥವನು ಭಾಗ್ಯವಂತನು !
26 : ತಾನು ಸದ್ಭಕ್ತನೆಂದು ಭಾವಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣ ಹಾಕದಿದ್ದರೆ, ಅಂಥವನ ಭಕ್ತಿ ವ್ಯರ್ಥ. ಅವನು ತನ್ನನ್ನೇ ವಂಚಿಸಿಕೊಳ್ಳುತ್ತಾನಷ್ಟೆ.
27 : ಕಷ್ಟಸಂಕಟಗಳಲ್ಲಿರುವ ಅನಾಥರಿಗೂ ವಿಧವೆಯರಿಗೂ ನೆರವಾಗುವುದು ಹಾಗೂ ಪ್ರಾಪಂಚಿಕ ಮಲಿನತೆಯಿಂದ ದೂರವಿರುವುದು - ನಮ್ಮ ತಂದೆಯಾದ ದೇವರ ಮುಂದೆ ನಿಷ್ಕಳಂಕವಾದ ಮತ್ತು ನಿರ್ಮಲವಾದ ಧರ್ಮವೆನಿಸುತ್ತದೆ.-----------------------
ಕೀರ್ತನೆ - 15:2-3,3-4,5
1 : ಯೋಗ್ಯನಾರು ಪ್ರಭು ನಿನ್ನ ಗುಡಾರದಲಿ ಬಿಡಾರಮಾಡಲು? / ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು? //
2 : ಅಂಥವನಿರಬೇಕು ನಿರ್ದೋಷಿ, ಸನ್ಮಾರ್ಗಿ / ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ //
3 : ಚಾಡಿಯನು ಹೇಳನು, ಕೇಡನು ಮಾಡನನ್ಯರಿಗೆ / ಗುರಿಮಾಡನವನು ನೆರೆಹೊರೆಯವರನು ನಿಂದೆಗೆ //
4 : ಭ್ರಷ್ಟರನು ಧಿಕ್ಕರಿಸುವನು, ಭಕ್ತರನು ಗೌರವಿಸುವನು / ನಷ್ಟವಾದರೂ ಕೊಟ್ಟ ಮಾತನು ತಪ್ಪನವನು //
5 : ಕೊಡುವನು ಕಡವನು, ಬಯಸನು ಬಡ್ಡಿಯನು / ಎಡವರ ಕೇಡಿಗೆ ಪಡೆಯನು ಲಂಚವನು / ಕದಲನೆಂದಿಗೂ ಈಪರಿ ನಡೆವವನು //--------------------------
ಶುಭಸಂದೇಶ - ಮಾರ್ಕ 8: 22-26
22 : ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು.
23 : ಯೇಸು ಕುರುಡನ ಕೈಹಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, “ನಿನಗೆ ಏನಾದರೂ ಕಾಣುತ್ತಿದೆಯೇ?” ಎಂದು ಕೇಳಿದರು.
24 : ಆಗ ಅವನು ಕಣ್ಣೆತ್ತಿ ನೋಡಿ, “ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಆದರೂ ಅವರು ನಡೆದಾಡುತ್ತಿದ್ದಾರೆ,” ಎಂದನು.
25 : ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸಿತು.
26 : ಅನಂತರ ಯೇಸು, “ನೀನು ಊರೊಳಗೆ ಹೋಗುವುದೇ ಬೇಡ,” ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು.---------------------------
ಚಿಂತನೆ
ಯೇಸುಸ್ವಾಮಿ ಶಿಷ್ಯರೊಂದಿಗೆ ಬೆತ್ಸಾಯಿದಕ್ಕೆ ಬರುತ್ತಾರೆ. `ಬೆತ್ಸಾಯಿ’ದ ಅಂದರೆ `ಮೀನುಗಾರರ ಮನೆ’ ಎಂದರ್ಥ. ಈ ಪಟ್ಟಣವು ಜೋರ್ಡಾನ್ ನದಿಯ ಪೂರ್ವದಲ್ಲಿದ್ದು, ಮೀನು ವ್ಯಾಪಾರ ಮಾಡಲು ಯೋಗ್ಯ ಸ್ಥಳವಾಗಿತ್ತು. ಆಂದ್ರೆಯ, ಪೇತ್ರ ಮತ್ತು ಫಿಲಿಪ್ಪರು ಈ ಪಟ್ಟಣಕ್ಕೆ ಸೇರಿದವರಾಗಿದ್ದರು.
ಕುರುಡನ ಕರುಣಾಜನಕ ಸ್ಥಿತಿಯನ್ನು ಕಂಡು ಯೇಸು ಆತನನ್ನು ಗುಣಪಡಿಸುತ್ತಾರೆ. ಕುರುಡನ ಸ್ನೇಹಿತರು ಆತನನ್ನು ಕ್ರಿಸ್ತನ ಬಳಿ ಕರೆತಂದಂತ್ತೆ ನಾವು ಕೂಡ ಇತರರನ್ನು ಯೇಸುವಿನ ಬಳಿ ಕರೆತರಬೇಕು. ಅನೇಕ ಬಾರಿ ನಾವು ದೇವರ ಪ್ರಸನ್ನತೆಯನ್ನು ಗುರುತಿಸಲು ವಿಫಲರಾಗಿದ್ದೇವೆ. ಪರಮಪ್ರಸಾದದಲ್ಲಿ ಹಾಗೂ ಪವಿತ್ರ ಗ್ರಂಥದಲ್ಲಿ ದೇವರ ಪ್ರಸನ್ನತೆ ಗುರುತಿಸುವ ನಾವು ಪರರಲ್ಲಿ ಗುರುತಿಸಲು ವಿಫಲರಾಗುತ್ತೇವೆ. ಯೇಸು ನಮ್ಮ ಆಧ್ಯಾತ್ಮಿಕ ಕುರುಡತನವನ್ನು ಗುಣಪಡಿಸಲಿ ಎಂದು ಪ್ರಾರ್ಥಿಸುವ.
------------------------------
ಇಂದಿನ ಸಂತರು
ಸಂತ ಕೊನ್ರಾಡ್ (129೦-1351)
ಇವರು ಉತ್ತರ ಇಟಲಿಯ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಅಮಾಯಕ ವ್ಯಕ್ತಿಯ ಮೇಲೆ ತಾವು ಹೊರಿಸಿದ ಸುಳ್ಳು ಆರೋಪ ಹಾಗೂ ಆತನಿಗಾದ ಮರಣ ದಂಡನೆಯ ಶಿಕ್ಷೆಗಳು ಕೊನ್ರಾಡ್ ನವರನ್ನು ಪಶ್ಚಾತ್ತಾಪದ ಆಳವಾದ ಚಿಂತನೆಗೆ ತಳ್ಳಿದವು. ಇದಾದ ನಂತರ ಇವರು ಎಲ್ಲವನ್ನೂ ತ್ಯಜಿಸಿ ಸಂತ ಫ್ರಾನ್ಸಿಸ್ ಸಭೆ ಸೇರಿದರೆ ಇವರ ಪತ್ನಿ ಮಹಿಳಾ ಧಾರ್ಮಿಕ ಸಭೆಯನ್ನು ಸೇರಿದರು. ಶಿಲುಬೆಯ ಮುಂದೆ ನಿರಂತರ ಪ್ರಾರ್ಥನೆಯಲ್ಲಿ ತೊಡಗುತ್ತಿದ್ದ ಇವರು ಮೊಣಕಾಲಿನಲ್ಲಿ ಪ್ರಾರ್ಥಿಸುವ ಭಂಗಿಯಲ್ಲೇ ಪ್ರಾಣ ಬಿಟ್ಟರು.
ಚಿತ್ರ: ಗೂಗಲ್ ಕೃಪೆ


No comments:
Post a Comment