ಫೆಬ್ರವರಿ 25, 2020 ಮಂಗಳವಾರ [ಹಸಿರು]
ಮೊದಲ ವಾಚನ: ಯಕೋಬ 4.1-10
ಕೀರ್ತನೆ 55:6-7, 8, 9, 11, 22. ಶ್ಲೋಕ.22
ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು
ಶುಭಸಂದೇಶ: ಮಾರ್ಕ 9.30-37
2 : ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ.
3 : ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ.
4 : ವಿಶ್ವಾಸದಲ್ಲಿ ವ್ಯಭಿಚಾರಿಗಳಂತೆ ಬಾಳುವವರೇ, ಲೋಕದೊಡನೆ ಗೆಳೆತನವೆಂದರೆ ದೇವರೊಡನೆ ಹಗೆತನವೆಂಬುದು ನಿಮಗೆ ತಿಳಿಯದೇ? ಲೋಕದೊಡನೆ ಗೆಳೆತನವನ್ನು ಬಯಸುವವನು ದೇವರೊಡನೆ ಹಗೆತನವನ್ನು ಬೆಳೆಸುತ್ತಾನೆ.
5 : “ದೇವರು ನಮ್ಮಲ್ಲಿ ಇರುವ ಆತ್ಮವನ್ನು ಅತ್ಯಾಸಕ್ತಿಯಿಂದ ಅಪೇಕ್ಷಿಸುತ್ತಾರೆ” ಎಂಬ ಪವಿತ್ರಗ್ರಂಥದ ವಾಕ್ಯವು ಹುರುಳಿಲ್ಲದ್ದೆಂದು ಭಾವಿಸುವಿರಾ?
6 : ದೇವರು ನಮಗೆ ದಯಪಾಲಿಸುವ ವರಪ್ರಸಾದ ಅತ್ಯಧಿಕವಾದುದು. ಎಂತಲೇ, “ದೇವರು ಗರ್ವಿಷ್ಠರನ್ನು ವಿರೋಧಿಸುತ್ತಾರೆ. ದೀನದಲಿತರಿಗೆ ಕೃಪಾವರವನ್ನು ಅನುಗ್ರಹಿಸುತ್ತಾರೆ,” ಎಂದು ಲಿಖಿತವಾಗಿದೆ.
7 : ಆದ್ದರಿಂದ ದೇವರಿಗೆ ಶರಣರಾಗಿ ಬಾಳಿ. ಸೈತಾನನನ್ನು ಎದುರಿಸಿ ನಿಲ್ಲಿ. ಅವನು ನಿಮ್ಮಿಂದ ಪಲಾಯನಗೈಯುವನು.
8 : ದೇವರ ಸವಿೂಪಕ್ಕೆ ಬನ್ನಿ, ಆಗ ಅವರು ನಿಮ್ಮ ಸವಿೂಪಕ್ಕೆ ಬರುವರು. ಪಾಪಾತ್ಮರೇ, ನಿಮ್ಮ ಕೈ ಶುದ್ಧವಾಗಿರಲಿ. ಎರಡು ಮನಸ್ಸಿನವರೇ, ನಿಮ್ಮ ಹೃದಯ ನಿರ್ಮಲವಾಗಿರಲಿ.
9 : ನಿಮ್ಮ ಹೀನಸ್ಥಿತಿಗಾಗಿ ವ್ಯಥೆಪಡಿರಿ, ಕಣ್ಣೀರಿಟ್ಟು ಗೋಳಾಡಿರಿ. ನಗುವುದನ್ನು ಬಿಟ್ಟು ದುಃಖಿಸಿರಿ; ಸಂತೋಷವನ್ನು ಬಿಟ್ಟು ಶೋಕಿಸಿರಿ.
10 : ಪ್ರಭುವಿನ ಮುಂದೆ ನಮ್ರರಾಗಿರಿ. ಆಗ ಅವರು ನಿಮ್ಮನ್ನು ಉದ್ಧರಿಸುವರು.
------------------------
ಕೀರ್ತನೆ 55:6-7, 8, 9, 11, 22. ಶ್ಲೋಕ.22
ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು
8 : ಹುಡುಕುತ್ತಿದ್ದೆ ನಾ ಗೂಡನು ತವಕದಿಂದ / ಪಾರಾಗುತ್ತಿದ್ದೆ ಬಿರುಗಾಳಿ ಮಳೆಯಿಂದ //
9 : ಭ್ರಾಂತಗೊಳಿಸು ಶತ್ರುವನು, ಗಲಿಬಿಲಿಗೊಳಿಸು ಅವರ ನುಡಿಯನು / ನಗರದಲಿ ನಾ ಕಾಣುತ್ತಿರುವೆ ಪ್ರಭೂ, ಹಿಂಸೆ ಕಲಹವನು //
10 : ಗೋಡೆ ಸುತ್ತಲೂ ತಿರುಗುತಿಹರವರು ಹಗಲಿರುಳು / ನಗರದೊಳಗೆ ತುಂಬಿವೆ ಅಕ್ರಮ ಅನಾಚಾರಗಳು //
11 : ಅದರ ಮಧ್ಯೆಯೇ ಇವೆ ವಿನಾಶಕರ ಶಕ್ತಿಗಳು / ಅದರ ಬೀದಿಬಿಟ್ಟು ತೊಲಗವು ಮೋಸ ವಂಚನೆಗಳು //
23 : ದುರ್ಜನರನು ದೇವಾ, ನೀ ದಬ್ಬಿಬಿಡುವೆ ಪಾತಾಳಕೆ / ಅರ್ಧಾಯುಷ್ಯವನೂ ಬಾಳಬಿಡೆ ವಂಚಕ ಕೊಲೆಗಾರರಿಗೆ / ನಾನಾದರೋ ಓ ದೇವಾ, ನೆಮ್ಮಿಗೊಂಡಿರುವೆ ನಿನಗೆ //
------------------------
ಶುಭಸಂದೇಶ: ಮಾರ್ಕ 9.30-37
30 : ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು.
31 : ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. “ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಯೇಸು ಅವರಿಗೆ ತಿಳಿಸಿದರು.
32 : ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಶ್ರೇಷ್ಠನು ಯಾರು? (ಮತ್ತಾ. 18.1-5; ಲೂಕ 9.46-48)
33 : ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, “ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು.
34 : ಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು.
35 : ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, ‘ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ,’ ಎಂದರು.
36 : ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ,
37 : “ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ,” ಎಂದರು.
-------------------
ಮೊದಲ ವಾಚನ: ಯಕೋಬ 4.1-10
ಕೀರ್ತನೆ 55:6-7, 8, 9, 11, 22. ಶ್ಲೋಕ.22
ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು
ಶುಭಸಂದೇಶ: ಮಾರ್ಕ 9.30-37
-------------------------
ಮೊದಲ ವಾಚನ: ಯಕೋಬ 4.1-10
1 : ನಿಮ್ಮಲ್ಲಿ ಕಲಹ ಕಾದಾಟಗಳು ಉಂಟಾಗುವುದು ಹೇಗೆ? ನಿಮ್ಮ ಇಂದ್ರಿಯಗಳಲ್ಲಿ ಗೊಂದಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೇ?2 : ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ.
3 : ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ.
4 : ವಿಶ್ವಾಸದಲ್ಲಿ ವ್ಯಭಿಚಾರಿಗಳಂತೆ ಬಾಳುವವರೇ, ಲೋಕದೊಡನೆ ಗೆಳೆತನವೆಂದರೆ ದೇವರೊಡನೆ ಹಗೆತನವೆಂಬುದು ನಿಮಗೆ ತಿಳಿಯದೇ? ಲೋಕದೊಡನೆ ಗೆಳೆತನವನ್ನು ಬಯಸುವವನು ದೇವರೊಡನೆ ಹಗೆತನವನ್ನು ಬೆಳೆಸುತ್ತಾನೆ.
5 : “ದೇವರು ನಮ್ಮಲ್ಲಿ ಇರುವ ಆತ್ಮವನ್ನು ಅತ್ಯಾಸಕ್ತಿಯಿಂದ ಅಪೇಕ್ಷಿಸುತ್ತಾರೆ” ಎಂಬ ಪವಿತ್ರಗ್ರಂಥದ ವಾಕ್ಯವು ಹುರುಳಿಲ್ಲದ್ದೆಂದು ಭಾವಿಸುವಿರಾ?
6 : ದೇವರು ನಮಗೆ ದಯಪಾಲಿಸುವ ವರಪ್ರಸಾದ ಅತ್ಯಧಿಕವಾದುದು. ಎಂತಲೇ, “ದೇವರು ಗರ್ವಿಷ್ಠರನ್ನು ವಿರೋಧಿಸುತ್ತಾರೆ. ದೀನದಲಿತರಿಗೆ ಕೃಪಾವರವನ್ನು ಅನುಗ್ರಹಿಸುತ್ತಾರೆ,” ಎಂದು ಲಿಖಿತವಾಗಿದೆ.
7 : ಆದ್ದರಿಂದ ದೇವರಿಗೆ ಶರಣರಾಗಿ ಬಾಳಿ. ಸೈತಾನನನ್ನು ಎದುರಿಸಿ ನಿಲ್ಲಿ. ಅವನು ನಿಮ್ಮಿಂದ ಪಲಾಯನಗೈಯುವನು.
8 : ದೇವರ ಸವಿೂಪಕ್ಕೆ ಬನ್ನಿ, ಆಗ ಅವರು ನಿಮ್ಮ ಸವಿೂಪಕ್ಕೆ ಬರುವರು. ಪಾಪಾತ್ಮರೇ, ನಿಮ್ಮ ಕೈ ಶುದ್ಧವಾಗಿರಲಿ. ಎರಡು ಮನಸ್ಸಿನವರೇ, ನಿಮ್ಮ ಹೃದಯ ನಿರ್ಮಲವಾಗಿರಲಿ.
9 : ನಿಮ್ಮ ಹೀನಸ್ಥಿತಿಗಾಗಿ ವ್ಯಥೆಪಡಿರಿ, ಕಣ್ಣೀರಿಟ್ಟು ಗೋಳಾಡಿರಿ. ನಗುವುದನ್ನು ಬಿಟ್ಟು ದುಃಖಿಸಿರಿ; ಸಂತೋಷವನ್ನು ಬಿಟ್ಟು ಶೋಕಿಸಿರಿ.
10 : ಪ್ರಭುವಿನ ಮುಂದೆ ನಮ್ರರಾಗಿರಿ. ಆಗ ಅವರು ನಿಮ್ಮನ್ನು ಉದ್ಧರಿಸುವರು.
------------------------
ಕೀರ್ತನೆ 55:6-7, 8, 9, 11, 22. ಶ್ಲೋಕ.22
ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು
8 : ಹುಡುಕುತ್ತಿದ್ದೆ ನಾ ಗೂಡನು ತವಕದಿಂದ / ಪಾರಾಗುತ್ತಿದ್ದೆ ಬಿರುಗಾಳಿ ಮಳೆಯಿಂದ //
9 : ಭ್ರಾಂತಗೊಳಿಸು ಶತ್ರುವನು, ಗಲಿಬಿಲಿಗೊಳಿಸು ಅವರ ನುಡಿಯನು / ನಗರದಲಿ ನಾ ಕಾಣುತ್ತಿರುವೆ ಪ್ರಭೂ, ಹಿಂಸೆ ಕಲಹವನು //
10 : ಗೋಡೆ ಸುತ್ತಲೂ ತಿರುಗುತಿಹರವರು ಹಗಲಿರುಳು / ನಗರದೊಳಗೆ ತುಂಬಿವೆ ಅಕ್ರಮ ಅನಾಚಾರಗಳು //
11 : ಅದರ ಮಧ್ಯೆಯೇ ಇವೆ ವಿನಾಶಕರ ಶಕ್ತಿಗಳು / ಅದರ ಬೀದಿಬಿಟ್ಟು ತೊಲಗವು ಮೋಸ ವಂಚನೆಗಳು //
23 : ದುರ್ಜನರನು ದೇವಾ, ನೀ ದಬ್ಬಿಬಿಡುವೆ ಪಾತಾಳಕೆ / ಅರ್ಧಾಯುಷ್ಯವನೂ ಬಾಳಬಿಡೆ ವಂಚಕ ಕೊಲೆಗಾರರಿಗೆ / ನಾನಾದರೋ ಓ ದೇವಾ, ನೆಮ್ಮಿಗೊಂಡಿರುವೆ ನಿನಗೆ //
------------------------
ಶುಭಸಂದೇಶ: ಮಾರ್ಕ 9.30-37
30 : ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು.
31 : ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. “ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಯೇಸು ಅವರಿಗೆ ತಿಳಿಸಿದರು.
32 : ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಶ್ರೇಷ್ಠನು ಯಾರು? (ಮತ್ತಾ. 18.1-5; ಲೂಕ 9.46-48)
33 : ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, “ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು.
34 : ಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು.
35 : ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, ‘ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ,’ ಎಂದರು.
36 : ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ,
37 : “ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ,” ಎಂದರು.
-------------------
ಚಿಂತನೆ
ತಪ್ಪು ಕಲ್ಪನೆ
ಯೇಸು ಎರಡನೆಯ ಬಾರಿ ಮಾರ್ಕನ ಶುಭಸಂದೇಶದಲ್ಲಿ ತಮ್ಮ ಮರಣ ಮತ್ತು ಪುನರುತ್ಥಾನದ ಬಗ್ಗೆ ತಿಳಿಸುತ್ತಾರೆ. ಆದರೆ ಶಿಷ್ಯರು ಗ್ರಹಿಸಿಲು ವಿಫಲರಾಗುತ್ತಾರೆ. ಯೇಸು ಈ ಲೋಕವನ್ನು ತೊರೆಯುವ ಮುನ್ನ ತಮ್ಮ ಶಿಷ್ಯರಿಗೆ ತಮ್ಮ ಆಗಮನದ ಗುರಿ, ಉದ್ದೇಶಗಳನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಶಿಷ್ಯರು ಯೇಸು ಸ್ಥಾಪಿಸಿದ್ದ ಸಾಮ್ರಾಜ್ಯವನ್ನು ತಪ್ಪಾಗಿ ಗ್ರಹಿಸಿದರು, ಅಧಿಕಾರದ ಕನಸು ಕಾಣುತ್ತಿದ್ದರು. ಯೇಸು ಅವರಲ್ಲಿ ಮನೆಮಾಡಿದ್ದ ತಪ್ಪು ಕಲ್ಪನೆಯನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಶಿಷ್ಯರು ತಮ್ಮ ಜೀವನದಲ್ಲಿ ಪ್ರಥಮ ಸ್ಥಾನವನ್ನು ದೇವರಿಗೆ ಮೀಸಲಾಗಿಡಬೇಕು. ರಾಜದಂಡ, ಅಧಿಕಾರ ಮತ್ತು ಸ್ವಾರ್ಥವನ್ನು ಬದಿಗೊತ್ತಿ ಸೇವೆ, ತ್ಯಾಗದ ಮೂಲಕ ದೇವರ ಸಾಮ್ರಾಜ್ಯ ಕಟ್ಟಲು ಕರೆ ನೀಡುತ್ತಾರೆ.
ಚಿತ್ರ: ಗೂಗಲ್ ಕೃಪೆ

No comments:
Post a Comment