ಮಾರ್ಚ್ 2, 2020 ಸೋಮವಾರ [ನೇರಳೆ]
ಮೊದಲ ವಾಚನ: ಯಾಜಕ 19.1-2, 11-18
ಕೀರ್ತನೆ 19:7-9, 14. ಶ್ಲೋಕ.ಯೊವಾನ್ನ 6:53
ಸ್ವಾಮಿ ಸರ್ವೇಶ್ವರಾ,
ನಿಮ್ಮ ಮಾತುಗಳೇ ಆತ್ಮ ಮತ್ತು ಜೀವವಾಗಿವೆ
ಶುಭಸಂದೇಶ: ಮತ್ತಾಯ 25.31-46
-------------------------------
ಮೊದಲ ವಾಚನ: ಯಾಜಕ 19.1-2, 11-18
1 : ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು:
2 : “ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು.
11 : “ಕಳಬೇಡ; ಹುಸಿಯನುಡಿಯಲು ಬೇಡ; ಒಬ್ಬರನ್ನೊಬ್ಬರು ಮೋಸಗೊಳಿಸುವುದು ಬೇಡ.
12 : ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡ. ನಾನೇ ಸರ್ವೇಶ್ವರ.
13 : “ಮತ್ತೊಬ್ಬನನ್ನು ಬಲಾತ್ಕರಿಸಬೇಡ; ಅವನ ಸೊತ್ತನ್ನು ಅಪಹರಿಸಬೇಡ. ಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ.
14 : ಕಿವುಡರನ್ನು ದೂಷಿಸಬೇಡ; ಕುರುಡರು ನಡೆಯುವ ದಾರಿಯಲ್ಲಿ ಎಡರು ಕಲ್ಲನ್ನು ಇಡಬೇಡ. ನಿನ್ನ ದೇವರಲ್ಲಿ ಭಯಭಕ್ತಿಯಿರಲಿ. ನಾನೇ ಸರ್ವೇಶ್ವರ.
15 : “ವ್ಯಾಜ್ಯತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡ. ಬಡವನ ಬಡತನ ವನ್ನಾಗಲಿ, ದೊಡ್ಡವನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು.
16 : “ನಿನ್ನ ಜನರ ನಡುವೆ ಚಾಡಿಕೋರನಾಗಿ ತಿರುಗಾಡಬೇಡ; ಮತ್ತೊಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆಂದು ಛಲ ಹಿಡಿಯಬೇಡ. ನಾನೇ ಸರ್ವೇಶ್ವರ.
17 : “ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು.
18 : ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ, ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.
------------------
ಕೀರ್ತನೆ 19:7-9, 14. ಶ್ಲೋಕ.ಯೊವಾನ್ನ 6:53
ಸ್ವಾಮಿ ಸರ್ವೇಶ್ವರಾ,
ನಿಮ್ಮ ಮಾತುಗಳೇ ಆತ್ಮ ಮತ್ತು ಜೀವವಾಗಿವೆ
8 : ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ / ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ //
9 : ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ / ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ //
10 : ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ / ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ //
11 : ಜಾಗೃತಗೊಳ್ಳುವನು ನಿನ್ನ ದಾಸನು ಅವುಗಳಿಂದ / ಸಂಭಾವಿತನಾಗುವನು ಅವುಗಳ ಪಾಲನೆಯಿಂದ //
12 : ತನ್ನ ತಪ್ಪನು ತಾನರಿತುಕೊಳ್ಳುವವನಾರಯ್ಯಾ / ಗುಪ್ತವಾದ ಪಾಪಗಳಿಂದೆನ್ನ ಮುಕ್ತಗೊಳಿಸಯ್ಯಾ //
13 : ಕಾಪಾಡೆನ್ನನು, ಬೇಕು ಬೇಕೆಂದು ಪಾಪಮಾಡದಂತೆ / ಕಾದಿಡು, ಅಂಥ ಪಾಪಕೆ ನಾ ದಾಸನಾಗದಂತೆ / ನಿರ್ದೋಷಿಯಾಗುವೆನು, ಆ ದ್ರೋಹಕ್ಕೊಳಗಾಗದಂತೆ //
14 : ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, ಹೃದಯಧ್ಯಾನ ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯ ಧಾಮ//
---------------------------
ಶುಭಸಂದೇಶ: ಮತ್ತಾಯ 25.31-46
31 : “ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು.
32 : ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು.
33 : ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು.
34 : ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ.
35 : ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ.
36 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು.
37 : ಅದಕ್ಕೆ ಆ ಸಜ್ಜನರು, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು?
38 : ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು?
39 : ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು.
40 : ಆಗ ಅರಸನು ಪ್ರತ್ಯುತ್ತರವಾಗಿ, ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು.
41 : “ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ.
42 : ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ.
43 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು.
44 : ಅದಕ್ಕೆ ಅವರು ಕೂಡ, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ ಮತ್ತು ಬಂಧಿಯಾಗಿದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ಎಂದು ಪ್ರಶ್ನಿಸುವರು.
45 : ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವನು.
46 : “ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.
---------------------------------------
ಚಿಂತನೆ

ಒಬ್ಬ ಮನುಷ್ಯ ಎರಡು ರೀತಿಯಲ್ಲಿ ಒಳ್ಳೆಯವನಾಗಬಹುದು, ಮೊದಲನೆಯದು ಕೆಟ್ಟ ಕಾರ್ಯಗಳನ್ನು ಮಾಡದೆ ಇರುವುದು. ಎರಡನೆಯದು ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮೂಲಕ. ತಪಸ್ಸು ಕಾಲದಲ್ಲಿ ದೇವರು ನಮ್ಮಿಂದ ಏನು ನಿರೀಕ್ಷಿಸುತ್ತಾರೆ ಎಂಬುದನ್ನು ಈ ಶುಭಸಂದೇಶದಲ್ಲಿ ನೀಡಲಾಗಿದೆ. ಅನೇಕರು ತಪಸ್ಸು ಕಾಲದಲ್ಲಿ ಉಪವಾಸ ಮಾಡುವುದು, ಮಾಂಸಾಹಾರದಿಂದ, ಕುಡಿತ, ಸಿಗರೇಟ್‍ನಿಂದ ದೂರವಿರುವುದೇ ದೊಡ್ಡ ತ್ಯಾಗವೆಂದು ತಿಳಿಯುತ್ತಾರೆ. ಆದರೆ ದೇವರು ನಮ್ಮಿಂದ ಬಯಸುವುದು ಮಾನವೀಯ ಮೌಲ್ಯಗಳನ್ನು ಇಂದಿನ ಶುಭಸಂದೇಶ ನುಡಿಯುವಂತೆ ಹಸಿದವರಿಗೆ ಆಹಾರ ನೀಡುವುದು, ಬಾಯಾರಿದವರಿಗೆ ನೀರು ನೀಡುವುದು, ಆಶ್ರಯ ನೀಡುವುದು, ರೋಗಿಗಳ ಆರೈಕೆ ಮಾಡುವುದು, ಬಟ್ಟೆಬರೆ ಇಲ್ಲದವರಿಗೆ ಬಟ್ಟೆ ನೀಡುವುದು, ಬಂಧಿಗಳನ್ನು ಬೇಟಿ ಮಾಡುವುದು, ಸತ್ತವರ ಸಮಾಧಿ ಮಾಡುವುದು, ಈ ಮೇಲಿನ ಕಾರ್ಯಗಳನ್ನು ಮಾಡುತ್ತಾ ಈ ತಪಸ್ಸು ಕಾಲವನ್ನು ಪವಿತ್ರವಾಗಿಸೋಣ.
---------------------------
ಮದರ್ ತೆರೇಸ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದರು. ಅವರಲ್ಲಿ ಅನೇಕರು ಕ್ರಿಸ್ತನನ್ನೇ ಕಂಡರು. ಮಾನವರಾದ ನಾವು ಒಳ್ಳೆಯ ಕೆಲಸಗಳನ್ನು ಮಾಡಲು ನಮಗಿಂದಿನ ವಾಚನಗಳು ಕರೆಕೊಡುತ್ತವೆ. ಇಲ್ಲಿ ಮೂರು ವಿಷಯಗಳನ್ನು ಕುರಿತು ಆಲೋಚಿಸಬಹುದು. 1) ನಾವು ದೇವರನ್ನು ಕಾಣುವ ಪರಿ. ದೇವರು ಪರಿಶುದ್ದರು ಆ ಪರಿಶುದ್ದತೆ ನಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳಬೇಕು. 2) ನಾವು ಇತರರನ್ನು ಕಾಣುವ ಪರಿ. ನಾವೆಲ್ಲರು ಮಾನವರು, ದೇವರ ಸೃಷ್ಟಿಯಲ್ಲಿ ನಿರ್ಮಿತರಾದವರು. ಆದ್ದರಿಂದ ಇತರರನ್ನು ನಮ್ಮಂತೆ ಕಾಣಬೇಕು. ಯಾರೊಬ್ಬರಿಗೂ ಹಾನಿಕಾರಕರಾಗಬಾರದು. ದೀನ ದಲಿತರ, ಹಸಿದವರ, ಬಟ್ಟೆ ಇಲ್ಲದವರ ಆರೈಕೆ ನಮ್ಮದಾಗಬೇಕು. 3) ಇದನ್ನೆಲ್ಲ ಮಾಡಿದವರಿಗೆ ಸಿಗುವ ಪ್ರತಿಫಲವೇನು? ನಮಗೆ ಸಿಗುವ ಪ್ರತಿಫಲ ನಿತ್ಯಜೀವ. ನಾವು ಈ ಲೋಕದಲ್ಲಿ ಹೇಗೆ ಜೀವಿಸುತ್ತೇವೊ ಆ ಪ್ರಕಾರವೇ ಅದರ ಪ್ರತಿಫಲ ಮುಂದಿನ ಜೀವನದಲ್ಲಿ.
* ಸಾಧ್ಯವಾದರೆ ಇಂದು ಒಬ್ಬ ಭಿಕ್ಷುಕನನ್ನು ಕರೆದು ಒಂದೊತ್ತು ಊಟಬಡಿಸಿ.

© 'ದನಿ' ಮಾಧ್ಯಮ ಮನೆ

No comments:
Post a Comment