ಮಾರ್ಚ್ 3, 2020 ಮಂಗಳವಾರ [ನೇರಳೆ]
ಮೊದಲ ವಾಚನ: ಯೆಶಾಯ 55.10-11
ಕೀರ್ತನೆ 34:3-4, 5-6, 16, 15, 17-18 ಶ್ಲೋಕ.19
ಸಜ್ಜನನಿಗೊದಗುವ ಸಂಕಟಗಳು ವಿಪರೀತ,
ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ
ಶುಭಸಂದೇಶ: ಮತ್ತಾಯ 6.7-15
-----------------------------------
ಮೊದಲ ವಾಚನ: ಯೆಶಾಯ 55.10-11
10 : ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ.
11 : ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.
12 : ಹೊರಡುವಿರಿ ನೀವು ಆನಂದಭರಿತರಾಗಿ ಬರುವಿರಿ ನೆಮ್ಮದಿಯಿಂದ ಸಾಲಾಗಿ. ನಿಮ್ಮ ಮುಂದೆ ತಟ್ಟಾಡುವುವು ಬೆಟ್ಟಗುಡ್ಡಗಳು ಚಪ್ಪಾಳೆ ಹೊಡೆಯುವುವು ಅಡವಿಯ ಗಿಡಮರಗಳು.
13 : ಬೆಳೆಯುವುದು ಮುಳ್ಳಿಗೆ ಬದಲಾಗಿ ದೇವದಾರು, ದತ್ತೂರಿಗೆ ಪ್ರತಿಯಾಗಿ ಸುಗಂಧದ ಮರವು. ಉಳಿದಿರುತ್ತದೆ ಆ ವನವು ಶಾಶ್ವತ ಗುರುತಾಗಿ ಸರ್ವೇಶ್ವರಸ್ವಾಮಿಯ ನಾಮಸ್ಮರಣೆಗಾಗಿ.
------------------------

4 : ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //
7 : ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು / ಕಾಯುವನು ಪ್ರಭುವಿನ ದೂತನೆ ಬಂದಿಳಿದು //16 : ದುರ್ಜನರಿಗಾದರೋ ಪ್ರಭು ವಿಮುಖನು / ಅವರ ಹೆಸರನು ಧರೆಯಿಂದ ಅಳಿಸುವನು //
17 : ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ / ನೆರವೀವನವರ ಕಷ್ಟನಿವಾರಣೆಗೆ //
18 : ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ / ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19 : ಸಜ್ಜನನಿಗೊದಗುವ ಸಂಕಟಗಳು ವಿಪರೀತ / ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
-------------------------
ಶುಭಸಂದೇಶ: ಮತ್ತಾಯ 6.7-15
7 : "ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ.
8 : ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ.
9 : ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ:
10 : "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ.
11 : ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ.
12 : ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ.
13 : ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.
14 : "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು.
15 : ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು."
------------------------------
ಚಿಂತನೆ

ಪ್ರಾರ್ಥನೆಯ ನಿಜವಾದ ಅರ್ಥವನ್ನು ಯೇಸು ಇಂದು ತಿಳಿಸುತ್ತಾರೆ. ಸಾಮಾನ್ಯವಾಗಿ ಯೆಹೂದ್ಯರು ದಿನಕ್ಕೆ ಮೂರು ಬಾರಿ ಪ್ರಾರ್ಥಿಸುತ್ತಿದ್ದರು. ಫರಿಸಾಯರು ತಾವು ಮಾಡುವ ಪ್ರಾರ್ಥನೆ ಜನರು ಗಮನಿಸಲೆಂದೇ ಮಾಡುತ್ತಿದ್ದರು. ಪ್ರಾರ್ಥನೆಯನ್ನು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಅಥವಾ ಬೀದಿಗಳಲ್ಲಿ ತೋರ್ಪಡಿಸುತ್ತಿದ್ದರು. ಯೇಸು ಪ್ರಾರ್ಥನೆಯ ದುರುದ್ದೇಶವನ್ನು ಖಂಡಿಸುತ್ತಾರೆ.
ಯೇಸು ತುಂಬಾ ಸರಳವಾದ, ಅರ್ಥಗರ್ಭಿತವಾದ ಪ್ರಾರ್ಥನೆಯನ್ನು ಇಂದು ಕಲಿಸುತ್ತಾರೆ. ದೇವರನ್ನು ನಂಬಿಕೆಯಿಂದಲೂ, ಭರವಸೆಯಿಂದಲೂ ಮತ್ತು ಆಪ್ತ ಪ್ರೀತಿಯಿಂದಲೂ ಸಂಬೋಧಿಸಲು ತಿಳಿಸುತ್ತಾರೆ. ದಿನನಿತ್ಯ ಅವಶ್ಯಕತೆಗಳಿಗಾಗಿ ಪ್ರಾರ್ಥಿಸಿ ಎನ್ನುತ್ತಾರೆ. ಈ ಪ್ರಾರ್ಥನೆಯು ಒಂದು ಪರಿಪೂರ್ಣ ಪ್ರಾರ್ಥನೆಯಾಗಿದೆ. ಇದರಲ್ಲಿ ನಮ್ಮ ಭೂತ, ವರ್ತಮಾನ, ಭವಿಷ್ಯದ ಅಗತ್ಯಗಳು ಅಡಗಿವೆ. ನಮ್ಮ ತಪ್ಪನ್ನು ರಕ್ಷಿಸಿರಿ ಇದು ನಮ್ಮ ಭೂತಕಾಲಕ್ಕೆ ಸಂಬಂಧಿಸಿದರೆ, ಇಂದಿನ ಆಹಾರ ನೀಡಿರಿ ನಮ್ಮ ವರ್ತಮಾನ, ನಮ್ಮನ್ನು ಕೇಡುಗಳಿಂದ ರಕ್ಷಿಸಿರಿ ಎಂಬುದರಲ್ಲಿ ನಮ್ಮ ಭವಿಷ್ಯದ ಅಗತ್ಯಗಳಿವೆ.
-----------------------------ಚಿಂತನೆ
ಒಮ್ಮೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಹಡಗಿನ ಕ್ಯಾಪ್ಟನ್ ಹತ್ತಿರ ಬಂದು ಹಡಗನ್ನು ತಾನು ನಡೆಸುವುದಾಗಿ ಕೇಳಿದ. ಆಗ ಕ್ಯಾಪ್ಟನ್ 335 ಡಿಗ್ರಿ ಸ್ಟೀಯರಿಂಗ್ ಹಿಡಿದಿರಬೇಕು ಎಂದ. ಎರಡು ಗಂಟೆಯ ನಂತರ ಹಡಗು ಸುರಕ್ಷಿತವಾಗಿ ದಡಸೇರಿತು. ಹುಡುಗ ನಾವಿಕನ ಮಾತನ್ನು ಕೇಳಿ ಅದರಂತೆ ನಡೆದ. ದೇವರು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಜೀವನದಲ್ಲಿ ಬರುತ್ತಾರೆ. ನಮ್ಮೊಡನೆ ಮಾತನಾಡುತ್ತಾರೆ. ಮಾರ್ಗದರ್ಶನ ನೀಡುತ್ತಾರೆ. ಅವರ ಮಾತುಗಳಂತೆ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಅವರ ಮಾರ್ಗ ಅರಿಯಬೇಕಾದರೆ ಪ್ರಾರ್ಥನೆ ನಮ್ಮ ಕ್ರಿಸ್ತೀಯ ಜೀವನದಲ್ಲಿ ಅತಿ ಪ್ರಮುಖವಾದುದು. ಇಂದು ಕ್ರಿಸ್ತ ಯಾವ ರೀತಿಯಲ್ಲಿ ಪ್ರಾರ್ಥನೆ ಮಾಡಬೇಕೆಂದು ತಿಳಿಸುತ್ತಾರೆ. ಕ್ರಿಸ್ತ ಕಲಿಸುವ ಪ್ರಾರ್ಥನೆಯಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ದೇವರು ಮತ್ತು ನಮ್ಮ ನಡುವಿರುವ ಸಂಬಂಧ, ಎರಡನೇ ಭಾಗದಲ್ಲಿ ನಮ್ಮ ಮತ್ತು ಇತರರ ನಡುವೆ ಇರುವ ಸಂಬಂಧದ ಬಗ್ಗೆ ತಿಳಿಸುತ್ತಾರೆ. ದೇವರಲ್ಲಿ ನಾವು ಯಾವಾಗಲೂ ಸತ್ಸ್‍ಂಬಂಧವನ್ನು ಹೊಂದಿ ಅವರ ಮಕ್ಕಳಾಗಿ ಜೀವಿಸೋಣ. ಅದರಂತೆ ಇತರರನ್ನೂ ಕೂಡ ಪ್ರೀತಿಯಿಂದ ಕಾಣೋಣ.
* ನಿಮ್ಮ ಶತ್ರುವನ್ನು ನೆನೆದು 5 ನಿಮಿಷ ಅವರಿಗಾಗಿ ಪ್ರಾರ್ಥಿಸಿರಿ.
-----------------------------------------
© 'ದನಿ' ಮಾಧ್ಯಮ ಮನೆ

No comments:
Post a Comment