05 ಫೆಬ್ರವರಿ 2020
ಬುಧವಾರ /ಹಸಿರು/ಸಾಧಾರಣ ಕಾಲದ ನಾಲ್ಕನೆಯ ಬುಧವಾರ
1ನೇ ವಾಚನ - ೨ ಸಮುವೇಲ 24:2, 9-17
ಕೀರ್ತನೆ - 32: 1-2, 5, 6-7
ಶುಭಸಂದೇಶ - ಮಾರ್ಕ 6: 1-6
------------------------
1ನೇ ವಾಚನ - ೨ ಸಮುವೇಲ 24:2, 9-17
2 : ಅರಸನು ತನ್ನ ಹತ್ತಿರದಲ್ಲಿದ್ದ ಸೇನಾಪತಿಯಾದ ಯೋವಾಬನಿಗೆ, “ಜನಸಂಖ್ಯೆ ಗೊತ್ತಾಗುವ ಹಾಗೆ ನೀನು ದಾನ್ ಊರಿನಿಂದ ಬೇರ್ಷೆಬದವರೆಗೆ ಸಂಚರಿಸಿ ಇಸ್ರಯೇಲ್ ಕುಲಗಳ ಎಲ್ಲ ಜನರನ್ನು ಲೆಕ್ಕಮಾಡಿಕೊಂಡು ಬಾ,” ಎಂದು ಆಜ್ಞಾಪಿಸಿದನು.
9 : ಯೋವಾಬನು ಅರಸನಿಗೆ ಒಪ್ಪಿಸಿದ ಜನಗಣತಿಯ ಅಂಕೆಸಂಖ್ಯೆಗಳಲ್ಲಿ ಇಸ್ರಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಎಂಟು ಲಕ್ಷ ಹಾಗು ಯೆಹೂದ್ಯರಲ್ಲಿ ಐದು ಲಕ್ಷ ಇದ್ದರು.
10 : ಜನರ ಎಣಿಕೆ ಮಾಡಿಸಿದನಂತರ ದಾವೀದನನ್ನು ಮನಸ್ಸಾಕ್ಷಿ ಕಾಡತೊಡಗಿತು. ಆದುದರಿಂದ ಅವನು, “ಸರ್ವೇಶ್ವರಾ, ನಾನು ಬುದ್ಧಿಹೀನ ಕಾರ್ಯವನ್ನು ಮಡಿ ಪಾಪಿಯಾದೆ; ದಯವಿಟ್ಟು ನಿಮ್ಮ ದಾಸನ ಅಪರಾಧವನ್ನು ಕ್ಷಮಿಸಿ,” ಎಂದು ಪ್ರಾರ್ಥಿಸಿದನು.
11 : ಅವನು ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ ಅವನ ದರ್ಶಿಯಾದ ಗಾದ್‍ಪ್ರವಾದಿಗೆ ಸರ್ವೇಶ್ವರ ದರ್ಶನವಿತ್ತು,
12 : “ನೀನು ದಾವೀದನ ಹತ್ತಿರ ಹೋಗಿ ಅವನಿಗೆ, ‘ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ; ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಅದನ್ನು ಆರಿಸಿಕೋ,’ ಎಂದು ಸರ್ವೇಶ್ವರ ನುಡಿಯುತ್ತಾರೆ ಎಂದು ಹೇಳು,” ಎಂದು ಆಜ್ಞಾಪಿಸಿದರು.
13 : ಆಗ ಗಾದನು ದಾವೀದನ ಬಳಿಗೆ ಬಂದು, “ನಿಮ್ಮ ನಾಡಿನಲ್ಲಿ ಏಳು ವರ್ಷಗಳ ಬರಗಾಲ ಉಂಟಾಗಬೇಕೋ, ಇಲ್ಲವೇ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳ ತನಕ ನಿನ್ನನ್ನು ಓಡಿಸಿ ಬಿಡಬೇಕೋ, ಇಲ್ಲವೆ ನಿನ್ನ ನಾಡಿನಲ್ಲಿ ಮೂರು ದಿನಗಳವೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದನು.
14 : ಅದಕ್ಕೆ ದಾವೀದನು, “ನಾನು ಬಲು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೆ ಬೀಳುತ್ತೇನೆ; ಅವರು ಕೃಪಾಪೂರ್ಣರು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ,” ಎಂದು ಹೇಳಿ ವ್ಯಾಧಿಯನ್ನು ಆಯ್ದುಕೊಂಡನು.
15 : ಆಗ ಸರ್ವೇಶ್ವರ ಇಸ್ರಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದರು. ಅದು ಹೊತ್ತಾರೆಯಿಂದ ನೇಮಕವಾದ ಹೊತ್ತಿನವರೆಗೂ ಇತ್ತು. ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿದ್ದ ಇಸ್ರಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು.
16 : ದೇವದೂತನು ಜೆರುಸಲೇಮನ್ನೂ ಸಂಹರಿಸುವುದಕ್ಕೆ ಕೈಚಾಚಿದಾಗ ಸರ್ವೇಶ್ವರ ಆ ಕೇಡಿನ ವಿಷಯದಲ್ಲಿ ನೊಂದುಕೊಂಡು, ಸಂಹಾರಕ ದೂತನಿಗೆ, “ಈಗ ಸಾಕು, ನಿನ್ನ ಕೈಯನ್ನು ಹಿಂತೆಗೆ,” ಎಂದು ಆಜ್ಞಾಪಿಸಿದರು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.
17 : ದಾವೀದನು ಜನಸಂಹಾರಕ ದೂತನನ್ನು ಕಂಡಾಗ ಸರ್ವೇಶ್ವರನಿಗೆ, “ಮೂರ್ಖತನದಿಂದ ಪಾಪಮಾಡಿದವನು ನಾನು; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ನಿಮ್ಮ ಕೈ ನನ್ನನ್ನೂ ನನ್ನ ಮನೆಯವರನ್ನೂ ಶಿಕ್ಷಿಸಲಿ,” ಎಂದು ಬೇಡಿಕೊಂಡನು.
------------------------------
ಕೀರ್ತನೆ - 32: 1-2, 5, 6-7
1 : ಯಾರ ಪಾಪ ಪರಿಹಾರವಾಗಿದೆಯೋ / ಯಾರ ದ್ರೋಹ ವಿಮೋಚನೆಯಾಗಿದೆಯೋ - ಅವರೇ ಧನ್ಯರು //
2 : ಯಾರಪರಾಧವನು ಪ್ರಭು ಎಣಿಸಿಲ್ಲವೋ / ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು //
3 : ಪಾಪ ನಿವೇದನೆ ಮಾಡದೆ ನಾ ಮೌನದಿಂದಿರಲು ದಿನವೆಲ್ಲ ನರಳಿ ಸವೆದು ಹೋದವು ನನ್ನೆಲುಬುಗಳು //
4 : ಪ್ರಭುವಿನ ಶಿಕ್ಷಾಹಸ್ತ ನನ್ನ ಮೇಲೆ ಭಾರವಾಗಿತ್ತು ಹಗಲಿರುಳು / ಬೇಸಿಗೆಯ ನೀರಿನಂತೆ ಬತ್ತಿ ಹೋಗಿತ್ತು ನನ್ನ ಶರೀರದ ತಿರುಳು //
5 : ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು / ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು // “ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ” ಎಂದೆನು / ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು //
6 : ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ / ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ //
7 : ನೀನೆ ನನಗೆ ಮರೆಯು, ಆಪತ್ತಿನಲಾಸರೆಯು / ನನ್ನನು ಆವರಿಸುವ ಉದ್ದಾರಕ ನಾದವು //
------------------
ಶುಭಸಂದೇಶ - ಮಾರ್ಕ 6: 1-6
1 : ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು.
2 : ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ?
3 : ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು.
4 : ಆಗ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,” ಎಂದರು.
5 : ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ.
6 : ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.
----------------------

ಚಿಂತನೆ
“ ದೇವರಲ್ಲಿ ಸಾಮಾನ್ಯರು ಅಸಾಮಾನ್ಯರಾಗುತ್ತಾರೆ ”
ದಾವೀದನು ಮನುಷ್ಯನ ಮೇಲೆ ಅವಲಂಭಿತನಾಗಿ, ಕೊನೆಗೆ ತನ್ನ ತಪ್ಪನ್ನು ಅರಿತು ದೇವರಲ್ಲಿ ಕ್ಷಮೆಬೇಡಿ, ಶಿಕ್ಷೆಯನ್ನು ಅನುಭವಿಸುವುದನ್ನು ಮೊದಲನೆಯ ವಾಚನದಲ್ಲಿ ಕೇಳುತ್ತೇವೆ. ಹೌದು ನಮ್ಮ ಭರವಸೆ ದೇವರ ಮೇಲಿರಬೇಕೇ ಹೊರತು ಮನುಷ್ಯನ ಮೇಲಲ್ಲ. ಶುಭಸಂದೇಶವು ತನ್ನ ಸ್ವಂತ ಜನರಿಂದಲ್ಲೇ ಯೇಸು ತಿರಸ್ಕೃತಕೊಳ್ಳುವುದನ್ನು ತಿಳಿಸುತ್ತದೆ. ಯೇಸುವಿನ ಸಾಮಾನ್ಯ ಹಾಗು ಸಾಧಾರಣ ಹಿನ್ನೆಲೆಯನ್ನು ಪ್ರಸ್ತಾಪಿಸಿ ಜನರು ಮೂದಲಿಸುತ್ತಾರೆ. ಯೇಸುವಿನ ಲೌಕಿಕ ಹಿನ್ನೆಲೆ ಸಾಧಾರಣವಾದರೂ ಅವರು ಮಾಡಿದ ಮಹ್ಕಾರ್ಯಗಳು, ನುಡಿದ ಮಾತುಗಳು ಅಸಾಧಾರಣವಾದುದ್ದು. ಅವು ಮೊಜುಗೊಡುವಂತಹವಲ್ಲ, ಹೃದಯವನ್ನು ಮಿಡಿಸುವಂತಹವು. ಅಂತಹ ಯೇಸುವಿನ ಅಸಾಧಾರಣತೆಯನ್ನು ಕಾಣಲು ನಮಗೆ ವಿಶ್ವಾಸದ ಕಣ್ಣುಗಳು ಬೇಕಷ್ಟೆ. ದೇವರಲ್ಲಿ ಸಾಮಾನ್ಯರು ಅಸಾಮಾನ್ಯರಾಗುತ್ತಾರೆ, ನಿಶಕ್ತರು ಶಕ್ತರಾಗುತ್ತಾರೆಂಬುವುದು ಆಧ್ಯಾತ್ಮಿಕ ಜ್ಞಾನ. ದೇವರ ವಾಕ್ಯ ಪ್ರೀತಿಯ ವಾಕ್ಯ, ಅದು ಯಾರ ಮೂಲಕವಾದರೂ ನಮಗೆ ತಲುಪಬಹುದು, ಅದನ್ನು ನಾವು ನಂಬಬೇಕು. ಪ್ರಕಟಣಾ ಗ್ರಂಥದ 3 :20 ವಾಕ್ಯ ಹೇಳುತ್ತದೆ: ಇಗೋ ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿಕೊಂಡು ಬಾಗಿಲನ್ನು ತೆಗೆದರೆ ನಾನು ಮನೆಯೊಳಗೆ ಪ್ರವೇಶಿಸುತ್ತೇನೆ. ಅವನ ಸಂಗಡ ಊಟ ಮಾಡುತ್ತೇನೆ”. ಜನರು ತಮ್ಮ ಹೃದಯದ ಬಾಗಿಲನ್ನು ತೆರೆಯಲಿಲ್ಲ ಬದಲಿಗೆ ತಾತ್ಸರ ಮಾಡಿದರು. ನಾವು ಆ ಜನರಂತೆ ಆಗದೆ ನಮ್ಮ ತನು ಮನ ಧನಗಳನ್ನು ದೇವರ ವಾಕ್ಯಕ್ಕೆ ತೆರೆದಿಡಬೇಕು. ದೇವರ ವಾಕ್ಯ ಯಾರಿಂದಲಾದರೂ ಬರಬಹುದು. ಅದನ್ನು ಸ್ವೀಕರಿಸಲು ತಾಳ್ಮೆ, ಸಹನೆ, ಪ್ರೀತಿ ಮತ್ತು ಸೌಜನ್ಯಬೇಕು. ಜಾತಿ ಹಿನ್ನೆಲೆಯಿಂದ ಎಲ್ಲವನ್ನೂ ಎಲ್ಲರನ್ನೂ ಅಳೆಯುವ ನಮ್ಮ ಸಮಾಜ ಅದೇಷ್ಟೋ ಕೋಟಿ ಸಾಮರ್ಥ್ಯ ತಳಸಮುದಾಯದವರನ್ನು ತುಳಿದುಬಿಡಲಿಲ್ಲವೇ !!
ಸಂತ ಆಗತ
ಇಟಲಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸಂತ ಆಗತ, ಕ್ರಿ.ಶ. 251ರಲ್ಲಿ ಸಿಸಿಲಿಯ ದೇಶದ ದೊರೆಯ ಕ್ರೈಸ್ತ ದಮನದಲ್ಲಿ ಹುತಾತ್ಮಳಾಗುತ್ತಾಳೆ. ಆಸ್ಥಾನದ ದೊರೆಯಾಗಿದ್ದ ಕ್ವಿಂಬೇನ್ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಅವಳನ್ನು ವಿವಾಹವಾಗಲು ಬಯಸಿರುತ್ತಾನೆ. ಆಗತಳಿಗೆ ಮದುವೆಗಿಂತ ಕ್ರಿಸ್ತನ ಸೇವೆ ಮಾಡುವುದು ಮುಖ್ಯವೆನಿಸುತ್ತದೆ. ಹಾಗಾಗಿ ಅತನೊಂದಿಗೆ ಮದುವೆಗೆ ಒಪ್ಪದಿದ್ದಾಗ, ಕ್ರೈಸ್ತ ವಿರೋಧಿ ಕಾನೂನು ಪ್ರಯೋಗಿಸಿ ಆಕೆಯನ್ನು ಹಿಂಸಿಸಲಾಗುತ್ತದೆ. ಸೌಂದರ್ಯವತಿಯಾದ ಆಗತಳನ್ನು ವೇಶ್ಯಾಗೃಹಕ್ಕೆ ತಳ್ಳುವಂತೆ ರಾಜ ಆದೇಶಿಸುತ್ತಾನೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ಆಕ್ರಮಣವಾಗುತ್ತದೆ. ಕಬ್ಬಿಣದ ಕೊಕ್ಕೆಗಳಿಂದ ಆಕೆಯ ದೇಹವನ್ನು ಮೀಟುತ್ತಾರೆ, ಲೋಹದ ಸಲಾಕೆಯಿಂದ ಬರೆ ಹಾಕುತ್ತಾರೆ. ಕೊನೆಗೆ ಅವಳನ್ನು ಬೆತ್ತಲೆಯಾಗಿಸಿ ಉರಿಯುವ ಕಲ್ಲಿದ್ದಲಿನ ಮೇಲೆ ಎಳೆದಾಡುತ್ತಾರೆ. ಈ ಎಲ್ಲಾ ಹಿಂಸೆ, ಶೋಷಣೆಯ ನಡುವೆಯೂ `ಯೇಸುವೇ ನನ್ನ ಬಾಳಿಗೆ ಬೆಳಕು ಮತ್ತು ಮುಕ್ತಿ' ಎಂದು ಸಾರುತ್ತಾಳೆ.
ಇಂದಿನ ಸಂತರು
ಸಂತ ಅಗಾಥಾ(231-251)
ಇವರು ಸಿಸಿಲಿಯಾದ ಕತಾನಿಯಾದಲ್ಲಿ ಜನಿಸಿದರು. ಆಸ್ಥಾನದ ಕ್ವಿಂಬೇನ್ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಅನೇಕ ರೀತಿಯಲ್ಲಿ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟರೂ ’ಯೇಸುವೇ ನನ್ನ ಬಾಳಿಗೆ ಬೆಳಕು ಮತ್ತು ಮುಕ್ತಿ’ ಎಂದು ಸಾರುತ್ತಾ ಜೀವಿಸುತ್ತಾಳೆ. ಇದರಿಂದ ವೈರಿಗಳ ಕೋಪಕ್ಕೆ ಒಳಗಾಗಿ ಕಬ್ಬಿಣದ ಕೊಕ್ಕೆಯಿಂದ ಆಕೆಯ ದೇಹವನ್ನು ಮೀಟಿ ಸೀಳಲಾಗುತ್ತದೆ. ಅಂತಿಮವಾಗಿ ಆಕೆಯನ್ನು ಬೆತ್ತಲಾಗಿಸಿ ಉರಿಯುವ ಕಲ್ಲಿದ್ದಲಿನ ಮೇಲೆ ಎಳೆದಾಡಿದಾಗ ಆಕೆಯ ಪ್ರಾಣಪಕ್ಷಿ ಹಾರಿಹೋಯಿತು. ಪ್ರಭುಯೇಸುವಿನಲ್ಲಿ ಆಕೆಗಿದ್ದ ಅಪರಿಮಿತ ವಿಶ್ವಾಸ ಮತ್ತು ಅನುಪಮ ಪ್ರೀತಿಗಾಗಿ ಸಂತ ಆಗತಾ ಯಾವ ತ್ಯಾಗಕ್ಕೂ ಕೂಡಾ ಸಿದ್ಧರಿದ್ದರು. ’ನಾನು ಪ್ರಭುವಿಗಾಗಿಯೇ ಬದುಕುತ್ತೇನೆ’ ಎಂದು ಪಣ ತೊಡುವ ಪ್ರತಿಯೊಬ್ಬ ವ್ಯಕ್ತಿಗೆ ಅದೆಂದೂ ಸುಲಭವಾಗುವುದಿಲ್ಲ. ಆದರೂ ಅದೆಲ್ಲವನ್ನೂ ದಿಟ್ಟತನದಿಂದ ಎದುರಿಸುವಂಥವರು ವಿಶ್ವಾಸದ ಓಟದಲ್ಲಿ ಜಯಶೀಲರಾಗುತ್ತಾರೆ, ರಕ್ತಸಾಕ್ಷಿಯ ಕಿರೀಟವನ್ನು ಗೆದ್ದುಬಿಡುತ್ತಾರೆ. ಮಾನವಕುಲದ ಉದ್ಧಾರಕ್ಕಾಗಿ ಶಿಲುಬೆಯ ಕ್ರೂರ ಯಾತನೆಯನ್ನು ಅನುಭವಿಸಿದ ಪ್ರಭುಯೇಸು ಸಂತ ಆಗತಾರಿಗೆ ಸಾಂತ್ವನವಾದರು. ತಮ್ಮ ಯಾತನೆಯ ಕಿಂಚಿತ್ತನ್ನು ಅನುಭವಿಸಿದ ಸಂತ ಆಗತಾರ ಬದುಕು ಪಾವನವಾಯಿತು.
ಚಿತ್ರ: ಗೂಗಲ್ ಕೃಪೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿಡಿ

No comments:
Post a Comment